ಡಾ. ಅಮಿತ್ ಸೆನ್‌ಗುಪ್ತ :ಸಿಪಿಐ(ಎಂ) ಶ್ರದ್ಧಾಂಜಲಿ

ದೇಶದ ಜನವಿಜ್ಞಾನ ಮತ್ತು ಸಾರ್ವಜನಿಕ ಆರೋಗ್ಯ ಆಂದೋಲನಗಳಲ್ಲಿ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದ ಡಾ. ಅಮಿತ್ ಸೆನ್‌ಗುಪ್ತ ನವಂಬರ್ ೨೮ರಂದು ಗೋವಾದಲ್ಲಿ ದುರಂತಮಯ ಸಂದರ್ಭದಲ್ಲಿ ನಿಧನರಾಗಿದ್ದಾರೆ. ದೇಶದ ಪ್ರಗತಿಪರ ವಿಜ್ಞಾನ ಆಂದೋಲನಕ್ಕೆ  ಮತ್ತು ಪಕ್ಷಕ್ಕೆ ಇದರಿಂದ ದೊಡ್ಡ ನಷ್ಟವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಡಾ.ಅಮಿತ್ ಸೆನ್‌ಗುಪ್ತ ಅಖಿಲ ಭಾರತ ಜನ ವಿಜ್ಞಾನ ಜಾಲ(ಎಐಪಿಎಸ್‌ಎನ್)ದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದರು ಮತ್ತು ಜನ ಸ್ವಾಸ್ಥ್ಯ ಅಭಿಯಾನದ ಸಂಯೋಜಕರಾಗಿದ್ದರು.

ಅವರು  ೧೯೭೯ರಲ್ಲಿ ಒಬ್ಬ ವಿದ್ಯಾರ್ಥಿ ಕಾರ್ಯಕರ್ತನಾಗಿ ಸಿಪಿಐ(ಎಂ) ಸೇರಿದರು. ಜನವಿಜ್ಞಾನ ಪ್ರಚಾರಾಂದೋಲನ ಮತ್ತು ಸಾರ್ವಜನಿಕ ಆರೋಗ್ಯ  ಕುರಿತಂತೆ ಪಕ್ಷದ ಧೋರಣೆಗಳನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು, ಪಕ್ಷದ ಅಖಿಲ ಭಾರತ ಜನಪ್ರಿಯ ವಿಜ್ಞಾನ ಸಮಿತಿಯ ಸಂಯೋಜಕರಾಗಿದ್ದರು.

ಅಮಿತ್ ಸೆನ್‌ಗುಪ್ತ ಪಕ್ಷದ ಕೇಂದ್ರ ಪತ್ರಿಕೆಯಾದ ‘ಪೀಪಲ್ಸ್ ಡೆಮಾಕ್ರಸಿ’ ಯಲ್ಲಿ ‘ವಿಜ್ಞಾನ ಮತ್ತು ಅಭಿವೃದ್ಧಿ’ ಅಂಕಣದಲ್ಲಿ ನಿಯಮಿತವಾಗಿ ಬರೆಯುತ್ತಿದ್ದವರು. ಅಲಲ್ದೇ ಸಅರ್ವಜನಿಕ ಆರೋಗ್ಯ ಮತ್ತು ವಿಜ್ಞಾನ ವಿಷಯಗಳ ಮೇಲೆ ವಿಸ್ತಾರವಾಗಿ ಬರೆದಿದ್ದಾರೆ ಎಂದು ನೆನಪಿಸಿಕೊಂಡಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಅವರ ನೆನಪಿಗೆ ಶ್ರದ್ಧಾಂಜಲಿ ಅರ್ಪಿಸಿದೆ ಮತ್ತು ಅವರ ಪತ್ನಿ, ಪುತ್ರ ಹಾಗೂ ಕುಟುಂಬದ ಇತರ ಸದಸ್ಯರಿಗೆ ಹಾರ್ದಿಕ ಸಂತಾಪಗಳನ್ನು ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *