ನೇತಾಜಿಯವರಿಗೆ ಮೋದಿ ‘ಶ್ರದ್ಧಾಂಜಲಿ’: ಜನರನ್ನು ದಾರಿತಪ್ಪಿಸುವ ದುರುದ್ದೇಶಪೂರಿತ ಹುನ್ನಾರ

“ಚಾಲೀಸ್ ಕರೋಡೋಂ ಕೀ ಆವಾಝ್- ಸೆಹಗಲ್, ಢಿಲ್ಲೋಂ ಷಾನವಾಝ್”: ಇದು 1945ರ ನವಂಬರ್ ನಲ್ಲಿ ನೇತಾಜಿ ಸುಭಾಷ್‍ ಚಂದ್ರ ಬೋಸ್‍ ನೇತೃತ್ವದ ಆಝಾದ್‍ ಹಿಂದ್‍ ಸೇನೆ(ಐ ಎನ್‍ ಎ)ಯ ಈ ಮೂವರು ಹಿರಿಯ ಸೇನಾಧಿಕಾರಿಗಳ ವಿಚಾರಣೆಯನ್ನು ಬ್ರಿಟಿಶರು ಆರಂಭಿಸಿದಾಗ ಅದರ ವಿರುದ್ಧ ದೇಶಾದ್ಯಂತ ಮೊಳಗಿದ ಘೋಷಣೆ- ಇದು ನೇತಾಜಿಯವರ ಎಲ್ಲರನ್ನು ಒಳಗೊಳ್ಳುವ ರಾಜಕೀಯದ ಜ್ವಲಂತ ಸಾಕ್ಷಿ. ಮತ್ತು ಎಲ್ಲ ಧರ್ಮ, ಜಾತಿ, ಲಿಂಗ ಬೇಧವಿಲ್ಲದೆ ಎಲ್ಲ ಜನಗಳನ್ನು ಒಟ್ಟುಗೂಡಿಸಿದ ಸ್ವಾತಂತ್ರ್ಯ ಆಂದೋಲನದ ಹೋರಾಟಶೀಲ ಚೈತನ್ಯದ ಉದಾಹರಣೆಯಾಗಿತ್ತು.

ಇಂತಹ ನೇತಾಜಿ ಮತ್ತು ಐಎನ್‍ಎ ಗೆ, ಒಂದು ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದಕ್ಕೆ ಪೋಷಣೆ, ಆ ಮೂಲಕ ಮುಸ್ಲಿಮರು, ದಲಿತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಬರ್ಬರ ದಾಳಿಗಳಿಗೆ ಎಡೆ ಮಾಡಿಕೊಟ್ಟಿರುವ ದ್ವೇಷ ಮತ್ತು ಹಿಂಸಾಚಾರದ ಆತಂಕಕಾರಿ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿರುವ ಒಂದು ಸರಕಾರದ ನೇತೃತ್ವ ವಹಿಸಿರುವ ನರೇಂದ್ರ ಮೋದಿಯವರು ಇದೇ ಅಕ್ಟೋಬರ್ 21ರಂದು ಗೌರವಾರ್ಪಣೆಯ ಪ್ರದರ್ಶನ ನಡೆಸಿರುವುದು ಒಂದು ಕಪಟಾಚರಣೆಯೂ ಹೌದು, ಅದು ನಿರರ್ಥಕವೂ ಹೌದು ಎಂದು ಎಡಪಕ್ಷಗಳು ಹೇಳಿವೆ.

ಸಿಪಿಐ(ಎಂ), ಸಿಪಿಐ, ಫಾರ್ವರ್ಡ್‍ ಬ್ಲಾಕ್, ಅರ್. ಎಸ್‍.ಪಿ ಮತ್ತು ಸಿಪಿಐ(ಎಂಎಲ್)-ಲಿಬರೇಷನ್ ಈ ಕುರಿತು ಡಿಸೆಂಬರ್‍ 1 ರಂದು ಒಂದು ಜಂಟಿ ಹೇಳಿಕೆಯನ್ನು ನೀಡಿವೆ.

ನೇತಾಜಿ ಸುಭಾಷ್‍ ಚಂದ್ರ ಬೋಸ್‍ ಅವರು ಅಕ್ಟೋಬರ್ 21, 1943ರಂದು ದಕ್ಷಿಣ-ಪೂರ್ವ ಏಷ್ಯಾದ ನೆಲದಲ್ಲಿ ಗಡೀಪಾರಿನಲ್ಲಿ ತಾತ್ಕಾಲಿಕ ಆಝಾದ್‍ ಹಿಂದ್‍ ಸರಕಾರಕ್ಕೆ ನೇತೃತ್ವ ನೀಡಿದರು ಎಂಬುದು ಒಂದು ಐತಿಹಾಸಿಕ ಸತ್ಯ. ಈ ದಿನ ಭಾರತದ ಸ್ವಾತಂತ್ರ್ಯ ದೋಲನದ ಚರಿತ್ರೆಯಲ್ಲಿ ಅಚ್ಚೊತ್ತಿದ ದಿನ. ಬ್ರಿಟನ್‍ ಮತ್ತು ಅಮೆರಿಕಾದ ವಿರುದ್ಧ ಯುದ್ಧ ಸಾರಿದ ಈ ಸರಕಾರಕ್ಕೆ ಒಂಭತ್ತು ದೇಶಗಳು ಮಾನ್ಯತೆಯನ್ನು ನೀಡಿದವು. ಅವುಗಳಲ್ಲಿ ಡೆ ವಲೆರಾ ರವರ ಐರ್ಲೆಂಡ್‍ ಕೂಡ ಸೇರಿದೆ. ಈ ಸರಕಾರದ ಬಾವುಟದ ಅಡಿಯಲ್ಲಿ ನೇತಾಜಿಯವರು ತಮ್ಮ 30 ಲಕ್ಷ ಐ ಎನ್‍ ಎ ಸಿಬ್ಬಂದಿಯೊಂದಿಗೆ, ಭಾರತದ ನೆಲದಿಂದ ಬ್ರಿಟಿಶರು ಮತ್ತು ಅವರ ಮಿತ್ರರನ್ನು ಹೊಡೆದೋಡಿಸುವ ಅಂತಿಮ ಸ್ವಾತಂತ್ರ್ಯ ಸಮರವನ್ನು ಆರಂಭಿಸಿದರು.

ಐ.ಎನ್‍.ಎ, ಕರ್ನಲ್ ಎಸ್‍.ಎ. ಮಲಿಕ್ ನೇತೃತ್ವದಲ್ಲಿ ಎಪ್ರಿಲ್ 14, 1944ರಂದು ಭಾರತೀಯ ನೆಲವನ್ನು ಮಣಿಪುರದ ಮೊಯಿರಂಗ್‍ ನಲ್ಲಿ ಪ್ರವೇಶಿಸಿ ಭಾರತೀಯ ಬಾವುಟವನ್ನು ಹಾರಿಸಿತು. ಅಲ್ಲಿ ಐ ಎನ್‍ ಎ ಸರಕಾರ ಮೂರು ತಿಂಗಳು ಸಕ್ರಿಯವಾಗಿತ್ತು. ಅದು ತನ್ನದೇ ಬ್ಯಾಂಕ್‍, ಕರೆನ್ಸಿ, ಅಂಚೆ ಕಚೇರಿ ಮತ್ತು ಇತರ ಮೂಲ ಸೌಕರ್ಯಗಳನ್ನು ಹೊಂದಿತ್ತು. ಅಲ್ಲಿಂದ ಅದು ಇಂಫಾಲ್‍ ನತ್ತ ತನ್ನ ಅಂತಿಮ ಸಮರ ನಡೆಯನ್ನು ಆರಂಭಿಸಿತು.

Netajee-Bhose-Nehru-INAನೇತಾಜಿಯವರ ಐ.ಎನ್‍.ಎ ಹೋರಾಟದ ಪ್ರಭಾವದಿಂದಾಗಿ ಭಾರತದಲ್ಲಿ ನವಂಬರ್ 1945 ರಿಂದ ಜುಲೈ 1946 ರವರೆಗೆ ಎರಡನೇ ಮಹಾಯುದ್ಧಾನಂತರದಲ್ಲಿ ಒಂದು ಮಹಾನ್‍ ಉತ್ಕ್ರಾಂತಿ ಭುಗಿಲೆದ್ದಿತು. ಕೊನೆಗೂ ಬ್ರಿಟಿಶ್ ಸರಕಾರ ಆಗಸ್ಟ್ 1947 ರಲ್ಲಿ ಅಧಿಕಾರದ ಹಸ್ತಾಂತರ ಮಾಡುವ ಒತ್ತಡಕ್ಕೆ ಒಳಗಾಗುವಲ್ಲಿ ಇದೂ ಒಂದು ಪ್ರಮುಖ ಅಂಶವಾಯಿತು.

ಈ 2018ರ ಅಕ್ಟೋಬರ್‍ 21 ರಂದು, ನೇತಾಜಿಯವರ ನೇತೃತ್ವದ ತಾತ್ಕಾಲಿಕ ಆಝಾದ್‍ ಹಿಂದ್‍ ಸರಕಾರ ರಚನೆಗೆ 75 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಇಡೀ ದೇಶ ಈ ಮಹಾನ್‍ ಕ್ರಾಂತಿಕಾರಿ ನೇತಾರ ಮತ್ತು ಭಾರತದ ದೇಶಪ್ರೇಮಿ ಪುತ್ರನಿಗೆ ಗೌರವಪೂರ್ಣ ನಮನ ಸಲ್ಲಿಸಿತು. ಈ ಸಂದರ್ಭದ ಪ್ರಯೋಜನ ಪಡೆಯುತ್ತ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂದಿನ ದಿನ ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ರಾಷ್ಟ್ರೀಯ ಬಾವುಟವನ್ನು ಏರಿಸಿದರು. ಆ ಸಂದರ್ಭದಲ್ಲಿ ಒಂದು ದೀರ್ಘ ಭಾಷಣವನ್ನು ಮಾಡಿದರು. ಆದರೆ ಅದರಲ್ಲಿ ನೇತಾಜಿ ತಮ್ಮ ಆಝಾದ್‍ ಹಿಂದ್‍ ಸರಕಾರದಲ್ಲಿ ಮತ್ತು ಐ ಎನ್‍ ಎ ಯಲ್ಲಿ ಆದರ್ಶಪೂರ್ವಕವಾಗಿ ಜಾರಿಗೊಳಿಸಿದ ರಾಷ್ಟ್ರೀಯ ಸಮಗ್ರತೆ ಮತ್ತು ಕೋಮು ಸಾಮರಸ್ಯದ ಅತ್ಯಂತ ಪ್ರಸ್ತುತವಾದ ವಿಷಯದ ಬಗ್ಗೆ ಮಾತೇ ಆಡಲಿಲ್ಲ.

ಬ್ರಿಟಿಷರು ಆರಂಭಿಸಿದ ಐ ಎನ್‍ ಎ ವಿಚಾರಣೆ ಭಾರತೀಯ ಜನತೆಯನ್ನು ಬಡಿದೆಬ್ಬಿಸಿತು, ಬ್ರಿಟಿಶ್‍ ವಸಾಹತುಶಾಹೀ ಆಳ್ವಿಕೆಯ ಮೇಲೆ ಅಂತಿಮ ಪ್ರಹಾರಕ್ಕೆ ಸ್ಫೂರ್ತಿ ತುಂಬಿತು. ‘ಸೆಹಗಲ್-ಢಿಲ್ಲೋಂ- ಷಾನವಾಝ್’ ಎಂಬ ಘೋಷಣೆ ನೇತಾಜಿಯವರ ಎಲ್ಲರನ್ನು ಒಳಗೊಳ್ಳುವ ರಾಜಕೀಯದ ಜ್ವಲಂತ ಸಾಕ್ಷಿ. ಮತ್ತು ಎಲ್ಲ ಧರ್ಮ, ಜಾತಿ, ಲಿಂಗ ಬೇಧವಿಲ್ಲದೆ ಎಲ್ಲ ಜನಗಳನ್ನು ಒಟ್ಟುಗೂಡಿಸಿದ ಸ್ವಾತಂತ್ರ್ಯ ಆಂದೋಲನದ ಹೋರಾಟಶೀಲ ಚೈತನ್ಯದ ಉದಾಹರಣೆಯಾಗಿತ್ತು. ಇಂತಹ ನೇತಾಜಿ ಮತ್ತು ಐಎನ್‍ಎ ಗೆ, ಒಂದು ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದಕ್ಕೆ ಪೋಷಣೆ, ಆ ಮೂಲಕ ಮುಸ್ಲಿಮರು, ದಲಿತರು ಮತ್ತು ಧಾಮಿಕ ಅಲ್ಪಸಂಖ್ಯಾತರ ಮೇಲೆ ಬರ್ಬರ ದಾಳಿಗಳಿಗೆ ಎಡೆ ಮಾಡಿಕೊಟ್ಟಿರುವ ದ್ವೇಷ ಮತ್ತು ಹಿಂಸಾಚಾರದ ಆತಂಕಕಾರಿ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿರುವ ಒಂದು ಸರಕಾರದ ನೇತೃತ್ವ ವಹಿಸಿರುವ ನರೇಂದ್ರ ಮೋದಿಯವರು ಗೌರವಾರ್ಪಣೆಯ ಪ್ರದರ್ಶನ ನಡೆಸಿರುವುದು ಒಂದು ಕಪಟಾಚರಣೆಯೂ ಹೌದು, ಅದು ನಿರರ್ಥಕವೂ ಹೌದು ಎಂದಿರುವ ಎಡಪಕ್ಷಗಳು, ಭಾರತೀಯ ಜನತೆ ತನ್ನ ಅತ್ಯಂತ ಪ್ರೀತಿಪಾತ್ರ ರಾಷ್ಟ್ರೀಯ ನೇತಾರರಾದ ನೇತಾಜಿ ಸುಭಾಷ್‍ ಚಂದ್ರ ಬೋಸ್‍ ಕುರಿತಂತೆ ಹೊಂದಿರುವ ಹಲವು ಆಕಾಂಕ್ಷೆಗಳನ್ನು ಮತ್ತು ದೀರ್ಘಕಾಲೀನ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿವೆ. ತಕ್ಷಣದ ಈ ಎರಡು ಬೇಡಿಕೆಗಳನ್ನು ಎಡಪಕ್ಷಗಳು ಪುನರುಚ್ಚರಿಸಿವೆ:

  • ನೇತಾಜಿಯವರ ಜನ್ಮದಿನ(ಜನವರಿ23)ವನ್ನು ‘ದೇಶಪ್ರೇಮ ದಿನ’ ಎಂದು ಘೋಷಿಸಬೇಕು. ಇದು ಬಡತನ-ಪೀಡಿತ ನಿರುದ್ಯೋಗಿ ಮತ್ತು ಹತಾಶ ಯುವಜನರನ್ನು ಪುನಶ್ಚೇತನಗೊಳಿಸುವಲ್ಲಿ ಬಹಳ ಸಹಾಯಕವಾಗುತ್ತದೆ.
  • ನೇತಾಜಿಯವರ ತಾತ್ಕಾಲಿಕ ಆಝಾದ್‍ ಹಿಂದ್‍ ಸರಕಾರ ಮತ್ತು ಅವರ ಆಝಾದ್‍ ಹಿಂದ್‍ ಫೌಜ್‍ (ಐ ಎನ್‍ ಎ), ಮತ್ತು ಭಾರತದ ಸ್ವಾತಂತ್ರ್ಯ ಆಂದೋಲನಕ್ಕೆ ಅವರ ಕೊಡುಗೆಗಳ ಬಗ್ಗೆ ಒಂದು ಪ್ರಮಾಣಿತ ರಾಷ್ಟ್ರೀಯ ಚರಿತ್ರೆಯ ಸಂಕಲನಕ್ಕೆ ಸರ್ವ ಪ್ರಯತ್ನ ನಡೆಸಬೇಕು.

ಇವೆರಡನ್ನು ನಡೆಸದಿದ್ದರೆ, ಮೋದಿಯವರ ಗೌರವಾರ್ಪಣೆ ಎಂಬುದು ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ್ತೆ ಅಧಿಕಾರ ಗಿಟ್ಟಿಸುವುದಕ್ಕಾಗಿ ಜನಗಳನ್ನು ದಾರಿತಪ್ಪಿಸಲು ಮಾಡಿರುವ ದುರುದ್ದೇಶ ಪೂರಿತ ಸ್ಟಂಟ್‍ ಎಂಬುದು ಸಾಬೀತಾಗುತ್ತದೆ ಎಂದಿದೆ ಎಡಪಕ್ಷಗಳ ಈ ಜಂಟಿ ಹೇಳಿಕೆ.

Leave a Reply

Your email address will not be published. Required fields are marked *