3 ರಾಜ್ಯಗಳಲ್ಲಿ ಬಿಜೆಪಿ ಸೋಲು-ಅಜೇಯತೆಯ ಮಿಥ್ಯೆಯನ್ನು ಪುಡಿಗುಟ್ಟಿದೆ

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‍ಗಡ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಸೋಲು ಮೋದಿ ಸರಕಾರ ಮತ್ತು ಬಿಜೆಪಿಯ ರಾಜ್ಯಸರಕಾರಗಳು ಅನುಸರಿಸುತ್ತಿರುವ ಧೋರಣೆಗಳ ಬಗ್ಗೆ ಜನಗಳ ಅಸಂತೃಪ್ತಿ ಮತ್ತು ಸಿಟ್ಟಿನ ಒಂದು ಸ್ಪಷ್ಟ ಸಂಕೇತವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ಈ ಧೋರಣೆಗಳು ಜನಸಾಮಾನ್ಯರ ಮೇಲೆ ಅಸಹನೀಯ ಹೊರೆಗಳನ್ನು ಹೇರಿವೆ.  ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಮಿಥ್ಯೆಯನ್ನು ಈ ಫಲಿತಾಂಶಗಳು ಪುಡಿಗುಟ್ಟಿವೆ ಎಂದು ಸಿಪಿಐ(ಎಂ) ಹೇಳಿದೆ.

ಜನಗಳ ಸಮಸ್ಯೆಗಳನ್ನು ಪರಿಹರಿಸುವ ಬದಲು ಬಿಜೆಪಿ ಸರಕಾರಗಳ ಧೋರಣೆಗಳು ಜನಗಳ ಸಂಕಟಗಳನ್ನು ಮತ್ತಷ್ಟು ಉಲ್ಬಣಗೊಳಿಸಿವೆ, ಮತ್ತು ಇವುಗಳಿಂದ ಜನಗಳ ಗಮನವನ್ನು ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಪ್ರಶ್ನೆಗಳತ್ತ ತಿರುಗಿಸಲು ಪ್ರಯತ್ನಿಸುತ್ತಿವೆ. ಆದರೆ ಮುಸ್ಲಿಮರು ಮತ್ತು ದಲಿತರ ಮೇಲೆ ಹಲ್ಲೆಗಳು ಮತ್ತು ಜನಗಳನ್ನು ವಿಭಜಿಸಲಿಕ್ಕಾಗಿ ಪೋಷಿಸಿರುವ ದ್ವೇಷ ಮತ್ತು ಹಿಂಸಾಚಾರದ ವಾತಾವರಣ ಕೂಡ ಯಶಸ್ವಿಯಾಗಿಲ್ಲ

ತೆಲಂಗಾಣದಲ್ಲಿ, ಟಿ ಆರ್‍ ಸ್ ಭಾರೀ ಜಯ ಗಳಿಸಿದೆ. ಬಿಜೆಪಿಯ ಸ್ಥಾನಗಳ ಸಂಖ್ಯೆ ಇಳಿದಿದೆ. ಮಿಝೋರಾಂ ನಲ್ಲಿ ಎಂ ಎನ್‍  ಎಫ್‍  ಕಾಂಗ್ರೆಸ್‍ ಸರಕಾರವನ್ನು ಪದಚ್ಯುತಗೊಳಿಸಿ ಒಂದು ನಿರ್ಣಾಯಕ ವಿಜಯ ಗಳಿಸಿದೆ.

ಹಿಂದಿನ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ರಚನೆಯಾಗಲಿರುವ ಸರಕಾರಗಳು ಜನಗಳ ತೀರ್ಪನ್ನು ಗೌರವಿಸಬೇಕು, ಮತ್ತು ಜನಗಳ ಜೀವನಾಧಾರಗಳನ್ನು ಉತ್ತಮಪಡಿಸುವ ಮತ್ತು ಅವರ ಸಂಕಟಗಳನ್ನು ಕಡಿಮೆ ಮಾಡುವ ಧೋರಣೆಗಳನ್ನು ಅಂಗೀಕರಿಸಬೇಕು., ಈ ಸರಕಾರಗಳು ಬಿಜೆಪಿಯ ಕೋಮುವಾದಿ ಧ್ರುವೀಕರಣದ ರಾಜಕೀಯದಿಂದಾಗಿ ಜನಗಳ ಐಕ್ಯತೆ ಮತ್ತು ದೇಶದ ಸಮಗ್ರತೆಗೆ ಮತ್ತಷ್ಟು ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್‍  ಬ್ಯುರೊ ಹೇಳಿದೆ.

ಈ ಚುನಾವಣೆಗಳಲ್ಲಿ ಸಿಪಿಐ(ಎಂ) ಗೆ ಮತನೀಡಿರುವವರಿಗೆ ಕೃತಜ್ಞತೆ ಸಲ್ಲಿಸಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ, ರಾಜಸ್ಥಾನದ ಶ್ರೀದುಂಗರ್‍ ಗಡ್‍ ಮತ್ತು ಭದ್ರಾದಲ್ಲಿ ಸಿಪಿಐ(ಎಂ) ಅಭ್ಯರ್ಥಿಗಳು ಗೆದ್ದಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *