ಇರಾನಿ ತೈಲ ಖರೀದಿ ಮೇಲೆ ಅಮೆರಿಕನ್ ನಿರ್ಬಂಧ ತಿರಸ್ಕರಿಸಿ

ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸರಕಾರ ಇರಾನಿನಿಂದ ತೈಲ ಖರೀದಿಸುವ ದೇಶಗಳ ಮೇಲೆ ನಿರ್ಬಂಧಗಳನ್ನು ಹೇರಲು ನಿರ್ಧರಿಸಿರುವುದನ್ನು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಖಂಡಿಸಿದೆ. ಈ ವಿಷಯದಲ್ಲಿ ಇದುವರೆಗೆ ಟ್ರಂಪ್‍ ಸರಕಾರ ಭಾರತ ಮತ್ತು ಇತರ ಕೆಲವು ದೇಶಗಳಿಗೆ ವಿನಾಯ್ತಿಯನ್ನು ಕೊಟ್ಟಿತ್ತು. ಈಗ ಅದನ್ನು ವಿಸ್ತರಿಸದಿರಲು ನಿರ್ಧರಿಸಿದೆ.

ಇರಾನಿನಿಂದ ತೈಲ ಆಮದನ್ನು ನಿಲ್ಲಿಸುವ ಯಾವುದೇ ಕ್ರಮ ಭಾರತದ ಇಂಧನ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹಾನಿಯುಂಟು ಮಾಡುತ್ತದೆ. ಈ ಹಿಂದೆ ವಿದೇಶಾಂಗ ವ್ಯವಹಾರಗಳ ಮಂತ್ರಿ ಸುಷ್ಮಾ ಸ್ವರಾಜ್, ಭಾರತವು ವಿಶ್ವಸಂಸ್ಥೆ ಅಂಗೀಕರಿಸಿದ ನಿರ್ಬಂಧಗಳನ್ನು ಬಿಟ್ಟು ಬೇರೆ ಯಾವುದೇ ನಿರ್ಬಂಧಗಳಿಗೆ ಬದ್ಧವಾಗಿರುವುದಿಲ್ಲ ಎಂದು ಹೇಳಿದ್ದರು.

ಅಮೆರಿಕಾ ಸಂಯುಕ್ತ ಸಂಸ್ಥಾನ ಏಕಪಕ್ಷೀಯವಾಗಿ ಈ ಕಾನೂನುಬಾಹಿರ ನಿರ್ಬಂಧಗಳನ್ನು ಹೇರಿರುವುದರಿಂದಾಗಿ, ಬಿಜೆಪಿ ನೇತೃತ್ವದ ಸರಕಾರ  ಈ ನಿರ್ಬಂಧಗಳನ್ನು ತಿರಸ್ಕರಿಸಬೇಕು ಮತ್ತು ಇರಾನಿನಿಂದ ತೈಲ ಖರೀದಿಸುವುದನ್ನು ದೇಶದ ಹಿತದೃಷ್ಟಿಯಿಂದ ಮುಂದುವರೆಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹಿಸಿದೆ.

Leave a Reply

Your email address will not be published. Required fields are marked *