ಫೊನಿ ಪೀಡಿತರಿಗೆ ತ್ವರಿತ ಪರಿಹಾರ ಕಾರ್ಯ ಚುರುಕುಗೊಳಿಸಿ

ಚಂಡಮಾರುತ ಫೊನಿ ಒಡಿಶಾದಲ್ಲಿ ಅನಾಹುತಗಳನ್ನು ಉಂಟುಮಾಡಿರುವ ಅತ್ಯಂತ ತೀವ್ರವಾದ ಚಂಡಮಾರುತಗಳಲ್ಲಿ ಒಂದು. ಸಾವಿರಾರು ಗುಡಿಸಲುಗಳು ಧ್ವಂಸವಾಗಿವೆ, ಮತ್ತು ಐವತ್ತಕ್ಕೂ ಹೆಚ್ಚು ಜನಗಳು ಪ್ರಾಣ ಕಳಕೊಂಡಿರುವ ವರದಿಗಳು ಬರುತ್ತಿವೆ. ವಿದ್ಯುತ್‍ ಪೂರೈಕೆ, ಸಂಪರ್ಕಗಳು ಮತ್ತು ಮೂಲರಚನೆಗಳಿಗೆ ವ್ಯಾಪಕ ಹಾನಿಯುಂಟಾಗಿದೆ.

ಈ ಗಂಭೀರ ಸನ್ನಿವೇಶವನ್ನು ಎದುರಿಸಲು ಕೇಂದ್ರ ಸರಕಾರ ತಾನಾಗಿಯೇ ರಾಜ್ಯಸರಕಾರದ ನೆರವಿಗೆ ಧಾವಿಸಬೇಕಾಗಿದೆ. ಪರಿಹಾರ ಕಾರ್ಯಾಚರಣೆಗಳನ್ನು ಬಲಪಡಿಸಬೇಕಾಗಿದೆ ಮತ್ತು ಸಂತ್ರಸ್ತರಿಗೆ ಆಗತ್ಯ ವಸ್ತುಗಳ ಪೂರೈಕೆಯಾಗುವಂತೆ,  ವೈದ್ಯಕೀಯ ಮತ್ತು ಆರೋಗ್ಯ ಆಗತ್ಯಗಳನ್ನು ನೋಡಿಕೊಳ್ಳಬೇಕಾಗಿದೆ ಹಾಗೂ ಪುನರ್ವಸತಿಯ ಪ್ರಕ್ರಿಯೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *