ತ್ರಿಪುರಾ ಪಶ್ಚಿಮ ಲೋಕಸಭೆ: ಮರು ಚುನಾವಣೆಯಿಂದ ಮಾತ್ರವೇ ಮತದಾರರ ಹಕ್ಕುಗಳ ರಕ್ಷಣೆ

ತ್ರಿಪುರಾ ಪಶ್ಚಿಮ ಲೋಕಸಭಾ ಕ್ಷೇತ್ರದ ಮತದಾನದಲ್ಲಿ 168 ಮತಗಟ್ಟೆಗಳಲ್ಲಿ ಮಾತ್ರವೇ ಮತದಾನವನ್ನು ರದ್ದುಗೊಳಿಸಿ ಅಲ್ಲಿ ಮರು ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ತೀವ್ರ ನಿರಾಶೆಯನ್ನು ವ್ಯಕ್ತಪಡಿಸಿದೆ.ಎಪ್ರಿಲ್‍ 11ರಂದು ನಡೆದ ಮತದಾನದಲ್ಲಿ ವ್ಯಾಪಕವಾಗಿ ಅಕ್ರಮಗಳು, ಮೋಸ ನಡೆದಿವೆ, ಆಳುವ ಬಿಜೆಪಿಯು ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸದಂತೆ ತಡೆದಿದೆ ಎಂದು ಅದು ನೆನಪಿಸಿದೆ.

ಈ ಆದೇಶ ಬುಡಮಟ್ಟದ ವಾಸ್ತವತೆಗೆ ಅನುಗುಣವಾಗಿಲ್ಲ, ಅರ್ಧಕ್ಕಿಂತ ಹೆಚ್ಚು ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸದಂತೆ ಮಾಡಿರುವಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಯುವಂತೆ ಮಾಡಲು ಬಹಳ ತಡವಾಗಿ ಕೈಗೊಂಡಿರುವ ಏನೇನೂ ಸಾಲದ ಆದೇಶವಿದು ಎಂಬುದು ತನ್ನ ದೃಢವಾದ ಅಭಿಪ್ರಾಯ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ರಾಜಕೀಯ ಪಕ್ಷಗಳು ಮತ್ತು ವ್ಯಕ್ತಿಗಳು ಇಲ್ಲಿ ವ್ಯಾಪಕ ಪ್ರಮಾಣದಲ್ಲಿ ಮೋಸ, ಅಕ್ರಮಗಳು ನಡೆದಿವೆ ಎಂದು ಹಲವಾರು ದೂರುಗಳನ್ನು ಕೊಟ್ಟ ಸುಮಾರು ಒಂದು ತಿಂಗಳ ನಂತರ ಬಂದಿರುವ  ಆದೇಶ ದೂರುಗಳನ್ನು ಭಾಗಶಃ ಮಾತ್ರ ಗಮನಕ್ಕೆ ತಗೊಂಡಿದೆ. ಈ ಆದೇಶ ಒಂದೆಡೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮೋಸ ನಡೆದಿದೆ ಎಂದು ಒಪ್ಪಿಕೊಂಡಿರುವುದರ ಸಂಕೇತವಾಗಿದೆ. ಆದರೂ ಭಾರತದ ಚುನಾವಣಾ ಆಯೋಗ ಮತದಾನ ಮಾಡಲಾಗದ  ಈ ಕ್ಷೇತ್ರದ ಮತದಾರರಿಗೆ ನ್ಯಾಯ ಒದಗಿಸುತ್ತದೆ ಎಂಬ ನಿರೀಕ್ಷೆಯನ್ನು ಈಡೇರಿಸಲಾರದಾಗಿದೆ.

ಇಡೀ ತ್ರಿಪುರಾ ಪಶ್ಚಿಮ ಲೋಕಸಭಾ ಕ್ಷೇತ್ರದಲ್ಲಿ ಮರುಮತದಾನ ಮಾತ್ರವೇ ಮುಕ್ತ ಮತ್ತು ನ್ಯಾಯಯುತ ಮತದಾನದ ಉದ್ದೇಶವನ್ನು ಈಡೇರಿಸಬಲ್ಲದು ಮತ್ತು ಮತದಾರರ ಹಕ್ಕುಗಳನ್ನು ರಕ್ಷಿಸ ಬಲ್ಲದು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *