ಕಾಶ್ಮೀರದ ಪರಿಸ್ಥಿತಿ: ಕೇಂದ್ರ ಸರಕಾರ ದುಸ್ಸಾಹಸಕ್ಕೆ ಕೈಹಾಕಬಾರದು

ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರಕಾರ ಕೈಗೊಂಡ ಕ್ರಮಗಳ ಪರಿಣಾಮವಾಗಿ ಒಂದು ಗಂಭೀರ ಪರಿಸ್ಥಿತಿ ಬೆಳೆದಿದೆ. 35,000 ಹೆಚ್ಚುವರಿ ಅರೆಮಿಲಿಟರಿ ಪಡೆಗಳ ತುಕಡಿಗಳನ್ನು ಅಲ್ಲಿಗೆ ಕಳಿಸಿರುವುದು ಯಾವ ಉದ್ದೇಶಕ್ಕಾಗಿ ಎಂಬ ಪ್ರಶ್ನೆಗಳನ್ನು ಎತ್ತಿದೆ.

ಅಮರನಾಥ ಯಾತ್ರೆಯನ್ನು ಮಧ್ಯದಲ್ಲೇ ರದ್ದು ಮಾಡುವ ಅಭೂತಪೂರ್ವ ಕ್ರಮ ಮತ್ತು ತಕ್ಷಣವೇ ಕಣಿವೆಯನ್ನು ಬಿಟ್ಟು ಹೋಗಬೇಕು ಎಂದು ಪ್ರವಾಸಿಗಳಿಗೆ ನಿರ್ದೇಶನಗಳನ್ನು ನೀಡಿರುವುದು ಬಿಗುವಿನ ಪರಿಸ್ಥಿತಿಯನ್ನು, ಜನಗಳ ನಡುವೆ ಆತಂಕಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಸಂಸತ್ತು ಅಧಿವೇಶನದಲ್ಲಿದ್ದರೂ ಈ ಕ್ರಮಗಳ ಬಗ್ಗೆ ಕೇಂದ್ರ ಸರಕಾರ ಯಾವುದೇ ಹೇಳಿಕೆಯನ್ನು ಕೊಟ್ಟಿಲ್ಲ, ರಾಜ್ಯದಲ್ಲಿನ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತಗೊಂಡಿಲ್ಲ.

ಇವೆಲ್ಲಾ   ಕಲಮು 35ಎ ಮತ್ತು 370 ನ್ನು ಕುರಿತಂತೆ ಜಮ್ಮು ಮತ್ತು ಕಾಶ್ಮೀರದ ಸಂವಿಧಾನಿಕ ಸ್ಥಾನಮಾನವನ್ನು ತಟ್ಟುವ ಕೆಲವು ತೀವ್ರ ಕ್ರಮಗಳ ಬಗ್ಗೆ ಸರಕಾರ ಯೋಚಿಸುತ್ತಿರಬೇಕು ಎಂಬ ಸಂದೇಹಗಳಿಗೆ ಉತ್ತೇಜನೆ ನೀಡಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕೈಗೊಳ್ಳಲಾಗುತ್ತಿರುವ ಈ ಕ್ರಮಗಳ ಬಗ್ಗೆ ಪೂರ್ಣ ಸ್ಪಷ್ಟನೆಯನ್ನು ಸರಕಾರ ಕೊಡಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ. ದೇಶಕ್ಕೆ ಗಂಭೀರ ದುಷ್ಪರಿಣಾವನ್ನುಂಟು ಮಾಡಬಹುದಾದ ಯಾವುದೇ ರಾಜಕೀಯ ದುಸ್ಸಾಹಸದ ಕೆಲಸಕ್ಕೆ ಸರಕಾರ ಕೈಹಾಕಬಾರದು ಎಂದು ಅದು ಹೇಳಿದೆ.

ರಾಜ್ಯದಲ್ಲಿನ ಎಲ್ಲ ಸಂಬಂಧಪಟ್ಟ ರಾಜಕೀಯ ಶಕ್ತಿಗಳೊಂದಿಗೆ ಸಂವಾದವನ್ನು ಆರಂಭಿಸಲಾಗುವುದು ಎಂಬ ತನ್ನ ಆಶ್ವಾಸನೆಯನ್ನು ಸರಕಾರ ಜಾರಿಗೆ ತರಬೇಕು ಎಂದೂ ಸಿಪಿಐ(ಎಂ) ಪುನರುಚ್ಚರಿಸಿದೆ.

Leave a Reply

Your email address will not be published. Required fields are marked *