ಅತಿವೃಷ್ಠಿ-ನೆರೆ ಹಾವಳಿ: ಕೇಂದ್ರವು ತಕ್ಷಣ 1000 ಕೋಟಿ ರೂ ಬಿಡುಗಡೆ ಮಾಡಲು ಒತ್ತಾಯ

ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಕೃಷ್ಣ ನದಿಯ ನೆರೆ ಹಾವಳಿಯಿಂದ ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿ ಇದುವರೆಗೆ ರಾಜ್ಯದ 15 ಜಿಲ್ಲೆಗಳಲ್ಲಿ ಗಂಭೀರ ಆತಂಕದ ಪರಿಸ್ಥಿತಿ ಉಂಟಾಗಿದೆ. ಸುಮಾರು 36 ತಾಲೂಕುಗಳ 240 ಕ್ಕೂ ಅಧಿಕ ಗ್ರಾಮಗಳು ಜಲಾವೃತವಾಗಿವೆ.

ಪ್ರಾಥಮಿಕ ಮಾಹಿತಿಯಂತೆ ಲಕ್ಷಾಂತರ ಜನತೆ ಸಂಕಷ್ಠಕ್ಕೀಡಾಗಿದ್ದಾರೆ. ನದಿ ಪಾತ್ರಗಳಲ್ಲಿನ ಮತ್ತು ಇತರೆಡೆಯ 2.50 ಲಕ್ಷಕ್ಕೂ ಅಧಿಕ ಎಕರೆ ಪ್ರದೇಶದ ಬೆಳೆಯು ಹಾನಿಯಾಗಿದೆ. ನಿರಾಶ್ರಿತರ ಸಂಖ್ಯೆಯು ಬೆಳೆಯುತ್ತಲೇ ಇದೆ. ಇದುವರೆಗೆ ಸುಮಾರು 11 ಕ್ಕೂ ಹೆಚ್ಚು ನಾಗರೀಕರು ಸಾವಿಗೀಡಾಗಿದ್ದಾರೆ. ನೂರಾರು ಜಾನುವಾರುಗಳು ಪ್ರವಾಹಕ್ಕೆ ಸಿಲುಕಿ ಕಾಣೆಯಾಗಿವೆ.

ಲಕ್ಷಾಂತರ ನಿರಾಶ್ರಿತರಿಗೆ ಎಲ್ಲೆಡೆ ಗಂಜಿ ಕೇಂದ್ರಗಳನ್ನು ತೆರೆಯಬೇಕಿದೆ. ಸಾವಿರಾರು ವಾಸದ ಮನೆಗಳು, ನೂರಾರು ಸರಕಾರಿ ಕಟ್ಟಡಗಳು, ಸಾರ್ವಜನಿಕ ರಸ್ತೆ, ನೂರಾರು ಸೇತುವೆಗಳು ಹಾನಿಗೀಡಾಗಿವೆ.

ಇನ್ನೂ ಎರಡು ದಿನಗಳ ಕಾಲ ಮಳೆಯ ಆರ್ಭಟ ಮುಂದುವರೆಯಲಿರುವುದರಿಂದ ಪ್ರವಾಹವು ಮತ್ತಷ್ಠು ಹೆಚ್ಚಾಗುವ ಸಂಭವ ವಿರುವುದರಿಂದ ಇನ್ನಷ್ಠು ಹಾನಿ ಸಂಭವಿಸುವ ಸಾದ್ಯತೆ ಇದೆ.

ಆದ್ದರಿಂದ ತಕ್ಷಣ ಕೇಂದ್ರ ಸರಕಾರ ಕೂಡಲೇ ಒಂದು ಸಾವಿರ ಕೊಟಿ ರೂ.ಗಳ ನೆರವನ್ನು ನೀಡಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಮಂತ್ರಿಗಳನ್ನು ಒತ್ತಾಯಿಸುತ್ತದೆ.

ಪ್ರವಾಹಕ್ಕೆ ಸಿಲುಕಿದ ಸಾವಿರಾರು ಜನತೆ ಮತ್ತು ಜಾನುವಾರುಗಳನ್ನು ರಕ್ಷಿಸಿದ ರಕ್ಷಣ ಸಿಬ್ಬಂದಿ ಮತ್ತು ನಾಗರೀಕರನ್ನು ಸಿಪಿಐ(ಎಂ) ಅಭಿನಂದಿಸಿದೆ. ರಾಜ್ಯದ ಜನತೆ ಹಾನಿಗೀಡಾದ ಕುಟುಂಬಗಳ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದೆ.

ಮುಖ್ಯಮಂತ್ರಿಗಳು ಸಮರ್ಪಕ ಕಾರ್ಯ ನಿರ್ವಹಣೆಗೆ ಕ್ರಮವಹಿಸಲು ಒತ್ತಾಯ

ರಾಜ್ಯ ಸರ್ಕಾರದ ಇದುವರೆಗಿನ ಪರಿಹಾರದ ಕ್ರಮ ಅಸಮರ್ಪಕವಾಗಿದೆ. ತೆರೆದಿರುವ ಗಂಜಿ ಕೇಂದ್ರಗಳು ಸಾಲದಾಗಿವೆ. ಜಾನುವಾರುಗಳಿಗೆ ಮೇವು ಒದಗಿಸಬೇಕು ಮತ್ತು ನೆರೆ ಹಾವಳಿಗೀಡಾದ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದ್ದು ಅದರ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕು.

ಅದೇರೀತಿ ರಾಜ್ಯದಲ್ಲದ ಹಾನಿಯನ್ನು ಅಂದಾಜು ಮಾಡಲು ತುರ್ತು ಕ್ರಮ ವಹಿಸಬೇಕು ಮತ್ತು ಜಿಲ್ಲೆಗಳಿಗೆ ಕೂಡಲೇ ಅಗತ್ಯ ಹಣಕಾಸಿನ ನೆರವನ್ನು ಒದಗಿಸುವಂತೆ ಹಾಗೂ ಪ್ರವಾಹ ನಿರ್ವಹಣೆಯ ಕೆಲಸವನ್ನು ಆಧ್ಯತೆಯ ಮೇರೆಗೆ ನಿರ್ವಹಿಸುವಂತೆ ಅಧಿಕಾರಿ ವರ್ಗದ ಮೇಲೆ ರಾಜ್ಯ ಸರ್ಕಾರ ಒತ್ತಡ ಹಾಕಬೇಕೆಂದು ಸಿಪಿಐ(ಎಂ) ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತದೆ.

ಯು. ಬಸವರಾಜ, ಕಾರ್ಯದರ್ಶಿ

Leave a Reply

Your email address will not be published. Required fields are marked *