ಬಾದಲ್ ಚೌಧುರಿ ಬಂಧನ ಸರ್ವಾಧಿಕಾರಶಾಹಿ ದಾಳಿ

ತ್ರಿಪುರಾದ ಸಿಪಿಐ(ಎಂ) ಮುಖಂಡರಾದ ಬಾದಲ್ ಚೌಧುರಿಯವರನ್ನು ಅವರು ಅಗರ್ತಲಾದ ಖಾಸಗಿ ಆಸ್ಪತೆಯೊಂದರಲ್ಲಿ ಐಸಿಯುನಲ್ಲಿ ಇರುವಾಗಲೇ ಬಂಧಿಸಲಾಗಿದೆ. ಇದನ್ನು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಬಲವಾಗಿ ಖಂಡಿಸಿದೆ.

ಬಾದಲ್ ಚೌಧುರಿ ಹಿಂದಿನ ಎಡರಂಗ ಸರಕಾರದಲ್ಲಿ ಪಿಡಬ್ಲ್ಯುಡಿ ಮಂತ್ರಿಯಾಗಿದ್ದರು. ಪ್ರಸಕ್ತ ಬಿಜೆಪಿ ರಾಜ್ಯಸರಕಾರ, ಚೌಧುರಿಯವರು ಮಂತ್ರಿಯಾಗಿದ್ದಾಗ ಕೆಲವು ಪ್ರಾಜೆಕ್ಟುಗಳ ನಿರ್ವಹಣೆಯಲ್ಲಿ ಅಕ್ರಮಗಳಾಗಿವೆ ಎಂದು ಅವರ ಮೇಲೆ ಸುಳ್ಳು ಆರೋಪಗಳನ್ನು ಹಾಕಿದೆ. ರಾಜ್ಯ ಸರಕಾರದ ಹಿಂದಿನ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವು ಹಿರಿಯ ಅಧಿಕಾರಗಳ ಹೆಸರುಗಳೂ ಎಫ್‌ಐಆರ್‌ನಲ್ಲಿವೆ.

ಇದು ಈ ಬಿಜೆಪಿ ಸರಕಾರ ಆಧಾರಹೀನ ಆರೋಪಗಳನ್ನು ಹೊರಿಸಲು ಮತ್ತು ಸಿಪಿಐ(ಎಂ) ಮುಖಂಡತ್ವದ ಮೇಲೆ ಗುರಿಯಿಡಲು ಯಾವ ಮಟ್ಟಕ್ಕೆ ಹೋಗಬಲ್ಲದು ಎಂಬುದನ್ನು ತೋರಿಸುತ್ತದೆ ಎಂದಿರುವ  ಪೊಲಿಟ್‌ಬ್ಯುರೊ, ಬಾದಲ್ ಚೌಧುರಿ ಆಸ್ಪತ್ರೆಯಲ್ಲಿರುವಾಗ ಮತ್ತು ತ್ರಿಪುರಾ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಶೀಲಿಸುತ್ತಿರುವಾಗಲೇ ಅವರನ್ನು ಬಂಧಿಸಿರುವುದು  ಹಗೆಸಾಧಿಸಿಕೊಳ್ಳುವ ಕ್ರಮ ಎಂಬುದನ್ನು ತೋರಿಸುತ್ತದೆ ಎಂದಿದೆ.

ಆದರೆ ಇಂತಹ ಕ್ರಮಗಳು ಸಿಪಿಐ(ಎಂ)ನ್ನು ಹತ್ತಿಕ್ಕಲಾರವು ಮತ್ತು ಅದರ ಪ್ರತಿಷ್ಠೆಗೆ ಮಸಿ ಬಳೆಯಲಾರವು, ಏಕೆಂದರೆ ತ್ರಿಪುರಾದ ಜನತೆಗೆ ಎಡರಂಗ ಸರಕಾರದ ಪ್ರಾಮಾಣಿಕ ಮತ್ತು ಮಾದರಿ ದಾಖಲೆಯ ಬಗ್ಗೆ ತಿಳಿದಿದೆ. ಬಾದಲ್ ಚೌಧುರಿಯವರ ಮೇಲೆ ಹಾಕಿರುವ ಸುಳ್ಳು ಆರೋಪಗಳ ವಿರುದ್ಧ ಸಿಪಿಐ(ಎಂ) ಕಾನೂನಾತ್ಮಕವಾಗಿಯೂ ಮತ್ತು ರಾಜಕೀಯವಾಗಿಊ ಹೋರಾಡುತ್ತದೆ ಎಂದು ಪೊಲಿಟ್‌ ಬ್ಯುರೊ ಹೇಳಿದೆ.

ಸಿಪಿಐ(ಎಂ)ನ ಕೇಂದ್ರ ಸಮಿತಿ ಸದಸ್ಯರಾಗಿರುವ ಬಾದಲ್ ಚೌಧುರಿಯವರನ್ನು ಹುಡುಕುವ ಹೆಸರಲ್ಲಿ ಬಿಜೆಪಿ ರಾಜ್ಯ ಸರಕಾರ ಸಿಪಿಐ(ಎಂ) ರಾಜ್ಯ ಸಮಿತಿ ಕಚೇರಿಯೂ ಸೇರಿದಂತೆ ಪಕ್ಷದ ಕಚೇರಿಗಳು ಮತ್ತು ಮುಖಂಡರ ಮೇಲೆ ದಾಳಿಗಳನ್ನು ನಡೆಸಿತ್ತು.

ಚೌಧುರಿಯವರ ಮೇಲೆ ಹಾಕಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ, ಅವರನ್ನು ಸಿಗಿಸಿ ಹಾಕಲೆಂದೇ ಮಾಡಿರುವ ಪ್ರಯತ್ನ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ನ್ಯಾಯಾಂಗ ಪ್ರಕ್ರಿಯೆಯನ್ನು ಬುಡಮೇಲು ಮಾಡಲು ಅಲ್ಲವಾದರೂ, ಅದರ ವಿರುದ್ಧ ಭಾವನೆಗಳನ್ನು ಹುಟ್ಟಿಸಲು ಬಿಜೆಪಿ ಮತ್ತು ಅದರ ಆಡಳಿತ ಸಾಧ್ಯವಾದುದನ್ನೆಲ್ಲವನ್ನೂ ಮಾಡುತ್ತಿದೆ ಎಂಬುದನ್ನೂ ಕಳೆದ ಕೆಲವು ದಿನಗಳ ಘಟನಾವಳಿಗಳು ತೋರಿಸುತ್ತವೆ. ಯಾವುದೇ ಸ್ವತಂತ್ರ ನ್ಯಾಯಾಂಗ ಪರೀಕ್ಷಣೆ ಚೌಧುರಿಯವರನ್ನು ನಿರಪರಾಧಿ ಎಂದು ತೋರಿಸುತ್ತವೆ ಎಂಬುದು ಖಂಡಿತ ಎಂದು ಪೊಲಿಟ್‌ಬ್ಯುರೊ ಈ ಮೊದಲು ನೀಡಿದ ಹೇಳಿಕೆ ತಿಳಿಸಿತ್ತು.

ಬಿಜೆಪಿ ರಾಜ್ಯ ಸರಕಾರದ ವಿಫಲತೆಗಳಿಂದಾಗಿ ಜನಗಳಲ್ಲಿ ಅಸಂತೃಪ್ತಿ ಹೆಚ್ಚುತ್ತಿವುದರಿಂದಾಗಿ ಅದು ರಾಜ್ಯದಲ್ಲಿ ಸಿಪಿಐ(ಎಂ) ಮುಖಂಡರನ್ನು ಬೆನ್ನಟ್ಟುತ್ತಿದೆ. ಅಕ್ಟೋಬರ್ ೧೬ರಂದು ಬಾದಲ್ ಚೌಧುರಿಯವರನ್ನು ಹುಡುಕುವ ಹೆಸರಲ್ಲಿ ಸಿಪಿಐ(ಎಂ) ರಾಜ್ಯ ಸಮಿತಿ ಕಚೇರಿ, ದೇಶೇರ್ ಕಥಾ ದಿನಪ್ರತಿಕೆಯ ಕಚೇರಿಯ ಮತ್ತು ಸಿಐಟಿಯು ರಾಜ್ಯಸಮಿತಿ ಕಚೇರಿಯ ಮೇಲೂ ದಾಳಿಗಳು ನಡೆದವು.

ಪೋಲೀಸರಿಗೆ ಅಡ್ಡ ಪಡಿಸಿದರೆಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಲಿಯ ಸದಸ್ಯ ಮತ್ತು ಮಾಜಿ ಸಂಸತ್ ಸದಸ್ಯ ನಾರಾಯಣ ಕರ್ ರವರನ್ನು ಅವರ ಮನೆಯಿಂಲೇ ಬಂಧಿಸಲಾಯಿತು. ಮ್ಯಾಜಿಸ್ಟ್ರೇಟ್ ಕೋರ್ಟ್ ಅವರನ್ನು ಆ ದಿನವೇ ಜಾಮೀನಿನ ಮೇಲೆ ಬಿಡುಗಡೆ ಮಾಡಿತು.

ಪಕ್ಷ, ತ್ರಿಪುರಾ ಜನತೆಯೊಂದಿಗೆ ಬಿಜೆಪಿ ಸರಕಾರದ ಈ ಅಸಹ್ಯ ಸರ್ವಾಧಿಕಾರಶಾಹೀ ದಾಳಿಗಳ ವಿರುದ್ಧ ಹೋರಾಡುತ್ತದೆ ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *