ಬೊಲಿವಿಯಾದಲ್ಲಿ ಬಲಪಂಥೀಯ ಶಕ್ತಿಗಳಿಂದ ಚುನಾಯಿತ ಅಧ್ಯಕ್ಷರ ಪದಚ್ಯುತಿ: ಸಿಪಿಐ(ಎಂ) ಖಂಡನೆ

ಬೊಲಿವಿಯಾದಲ್ಲಿ ಇವೊ ಮೊರಲೆಸ್‍ ಅವರನ್ನು ರಾಷ್ಟ್ರಾಧ್ಯಕ್ಷ ಸ್ಥಾನದಿಂದ ಇಳಿಸಿರುವುದು ವಾಸ್ತವವಾಗಿ ಕಾನೂನು ಪ್ರಕಾರ ಚುನಾಯಿತರಾದ ಅಧ್ಯಕ್ಷರೊಬ್ಬರ ವಿರುದ್ಧ ನಡೆಸಿರುವ ಒಂದು ಕ್ಷಿಪ್ರಕ್ರಾಂತಿಯೇ ಆಗಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಖಂಡಿಸಿದೆ.

ಅಮೆರಿಕ ಸಂಯುಕ್ತ ಸಂಸ್ಥಾನಗಳ ಬೆಂಬಲ ಪಡೆದಿರುವ ಬಲಪಂಥೀಯ ಶಕ್ತಿಗಳು ಅಕ್ಟೋಬರ್ 20ರಂದು ನಡೆದ ಚುನಾವಣೆಗಳ ಫಲಿತಾಂಶವನ್ನು ಸ್ವೀಕರಿಸಲು ನಿರಾಕರಿಸಿವೆ ಮತ್ತು ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರವನ್ನು ಹರಿಯ ಬಿಟ್ಟಿವೆ. ಸಶಸ್ತ್ರ ಪೋಲೀಸರ ಕೆಲವು ವಿಭಾಗಗಳು ಪ್ರತಿಭಟನಾಕಾರರ ಪರ ವಹಿಸಿದವು, ಮತ್ತು ಅಂತಿಮವಾಗಿ ಸೇನೆ ಮೊರಲೆಸ್‍ ಅವರು ಅಧಿಕಾರದಿಂದ ಕೆಳಗಿಳಿಯುವಂತೆ ಬಲವಂತ ಮಾಡಿದೆ.

ಈ ಹಿಂದೆ ಬ್ರೆಝಿಲ್ ನಲ್ಲಿ, ನಂತರ ಇಕ್ವೆಡೋರ್ ಮತ್ತು ವೆನೆಝುವೆಲಾದಲ್ಲಿ ಪ್ರಗತಿಪರ ಆಳ್ವಿಕೆಗಳ ಮೇಲೆ ಗುರಿಯಿಟ್ಟ ಪ್ರಯತ್ನಗಳ ಹಿನ್ನೆಲೆಯಲ್ಲಿ ಬೊಲಿವಿಯಾದಲ್ಲಿ ಈ ಬಲಪಂಥೀಯ ಕ್ಷಿಪ್ರಕ್ರಾಂತಿ ನಡೆದಿದೆ.

ಎಂ.ಎ.ಎಸ್. (ಮೂವ್ಮೆಂಟ್ ಫಾರ್ ಸೋಶಿಯಲಿಸಂ) ಇವೊ ಮೊರಲೆಸ್‍ ಅವರ ಮೊತ್ತಮೊದಲ ಮೂಲನಿವಾಸಿ ಅಧ್ಯಕ್ಷರ ನೇತೃತ್ವತ್ವದಲ್ಲಿ ಬೊಲಿವಿಯ ಬಡತನ ನಿರ್ಮೂಲನೆಯತ್ತ ಮತ್ತು ದೇಶದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ರಾಷ್ಟ್ರೀಯ ಸಾರ್ವಭೌಮತ್ವವನ್ನು ಖಾತ್ರಿಗೊಳಿಸುವತ್ತ ದೊಡ್ಡ ದಾಪುಗಾಲು ಹಾಕಿತ್ತು ಎಂದು ಸಿಪಿ(ಐಎಂ) ಪೊಲಿಟ್‍ ಬ್ಯುರೊ  ಹೇಳಿದೆ.

Leave a Reply

Your email address will not be published. Required fields are marked *