ಎಡಪಕ್ಷಗಳ ಪ್ರತಿಭಟನಾ ಸಪ್ತಾಹ-ಜನವರಿ 1 ರಿಂದ 7

  • ಸಿ ಎ ಎ/ಎನ್‌ ಆರ್‌ ಸಿ/ಎನ್‌ ಪಿ ಆರ್ ಮೂಲಕ ಸಂವಿಧಾನದ ಮೇಲೆ ಪ್ರಹಾರ ಮತ್ತು ಜನಗಳ ಮೇಲೆ ಹೆಚ್ಚುತ್ತಿರುವ ಸಂಕಟಗಳ ವಿರುದ್ಧ ಹಾಗೂ ಸಾರ್ವತ್ರಿಕ ಮುಷ್ಕರ ಮತ್ತು ಗ್ರಾಮೀಣ ಬಂದ್ ನೊಂದಿಗೆ ಸೌಹಾರ್ದತೆಗೆ

 ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಜನವರಿ ೮ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಮತ್ತು  ರೈತ ಮತ್ತು ಕೃಷಿ ಕಾರ್ಮಿಕರ ಸಂಘಟನೆಗಳು ಹಾಗೂ ನಾಗರಿಕ ಸಂಘಟನೆಗಳು ಕರೆ ನೀಡಿರುವ ಅದೇ ದಿನದ ‘ಗ್ರಾಮೀಣ ಬಂದ್  ಗೆ ಬೆಂಬಲವಾಗಿ ಜನವರಿ ೧ರಿಂದ ೭ ರ ವರೆಗೆ ಸೌಹಾರ್ದ ಪ್ರಚಾರಾಂದೋಲನ ನಡೆಸುವುದಾಗಿ ಐದು ಎಡಪಕ್ಷಗಳು ಹೇಳಿವೆ.

ಸಿ ಎ ಎ/ಎನ್ ಆರ್ ಸಿ/ಎನ್ ಆರ್ ಪಿ ಮೂಲಕ ಭಾರತೀಯ ಸಂವಿಧಾನದ ಮೇಲೆ ನಡೆಸಿರುವ ಪ್ರಹಾರದ ವಿರುದ್ಧ ಎಲ್ಲಾ ರಾಜ್ಯಗಳಲ್ಲಿ ಬಲಿಷ್ಟ ಪ್ರತಿಭಟನೆಗಳನ್ನು ಸಂಘಟಿಸಬೇಕು ಎಂದೂ ಎಡಪಕ್ಷಗಳು ತಮ್ಮ ಘಟಕಗಳಿಗೆ ಕರೆ ನೀಡಿವೆ.

ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ, ನಿರ್ದಿಷ್ಟವಾಗಿ ಉತ್ತರಪ್ರದೇಶ, ಕರ್ನಾಟಕ, ಗುಜರಾತ್, ತ್ರಿಪುರದಲ್ಲಿ ಹಾಗೂ ಪೋಲಿಸ್ ಇಲಾಖೆ ನೇರವಾಗಿ ಕೇಂದ್ರ ಗೃಹ ಮಂತ್ರಾಲಯದ ಅಡಿಯಲ್ಲಿರುವ ದಿಲ್ಲಿಯಲ್ಲಿ ನಾಗರಿಕರ ಶಾಂತಿಯುತ ಪ್ರತಿಭಟನೆಗಳ  ಮೇಲೆ ಪೋಲಿಸರು ನಡೆಸಿರುವ ಅತ್ಯಾಚಾರಗಳನ್ನು ಈ ಎಡಪಕ್ಷಗಳು ಖಂಡಿಸಿವೆ. ಈ ಪ್ರತಿಭಟನೆಗಳು ಶಾಂತಿಯುತವಾಗಿ ಮುಂದುವರೆಯುತ್ತವೆ ಎಂದೂ ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್)-ಲಿಬರೇಶನ್, ಆರ್ ಎಸ್ ಪಿ ಹಾಗೂ  ಫಾರ್ವರ್ಡ್ ಬ್ಲಾಕ್ ಪ್ರಧಾನ ಕಾರ್ಯದರ್ಶಿಗಳು ನೀಡಿರುವ ಜಂಟಿ ಹೇಳಿಕೆ ತಿಳಿಸಿದೆ.

Leave a Reply

Your email address will not be published. Required fields are marked *