ಜಾಮಿಯ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಾಟಕ್ಕೆ ಕೇಂದ್ರ ಮಂತ್ರಿಯ ಪ್ರಚೋದನೆ ನೇರ ಹೊಣೆ

ಬಿಜೆಪಿ ಮುಖಂಡರ ಮೇಲೆ ಎಫ್‌..ಆರ್ ಹಾಕಲು ದಿಲ್ಲಿ  ಪೋಲೀಸ್ ಕಮಿಶನರ್‌ಗೆ ಮತ್ತೆ ಆಗ್ರಹ

ಜನವರಿ 29ರಂದು ಅನುರಾಗ್ ಠಾಕುರ್ ಮತ್ತು ಪರ್ವೇಶ್ ವರ್ಮ ಮೇಲೆ ದ್ವೇಷ ಭಾಷಣ ಮಾಡಿರುವ ಬಗ್ಗೆ ಎಫ್‌..ಆರ್ ಹಾಕಬೇಕು, ಅದನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153/ 153 ಬಿ/295ಎ/298/ 504/505/506 ಅಡಿಯಲ್ಲಿ ಹಾಕಬೇಕಾಗುತ್ತದೆ ಎಂದು ನಿರ್ದಿಷ್ಟವಾಗಿ ಹೇಳಿದರೂ ದಿಲ್ಲಿ ಪೋಲೀಸ್ ಮತ್ತು ಪೋಲೀಸ್ ಕಮಿಶನರ್ ಏನೂ ಮಾಡದೇ ಇರಲು ಯೋಚಿಸಿರುವಂತೆ ಕಾಣುತ್ತದೆ ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಮತ್ತು ದಿಲ್ಲಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಎಂ.ತಿವಾರಿ ದಿಲ್ಲಿ ಪೋಲೀಸ್ ಕಮಿಶನರ್ ರವರಿಗೆ ಇನ್ನೊಂದು ದೂರು ಸಲ್ಲಿಸಿದ್ದಾರೆ.

ಈ ನಿಷ್ಕ್ರಿಯತೆಯ ನೇರ ಫಲಿತಾಂಶವಾಗಿ ದಿಲ್ಲಿ ಪೋಲಿಸ್ ಸಿಬ್ಬಂದಿಯ ಕಣ್ಣ ಮುಂದೆಯೇ ಒಬ್ಬ ಸಶಸ್ತ್ರ ವ್ಯಕ್ತಿ ಜಾಮಿಯ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದಾನೆ, ಪೋಲೀಸರು ಅದನ್ನು ನೋಡುತ್ತ ನಿಂತಿದ್ದಾರೆ. ತಾನು  ‘ರಾಮಭಕ್ತ ಗೋಪಾಲ’ ಎನ್ನುವ ಈ ವ್ಯಕ್ತಿ  ಆಳುವ ಪಕ್ಷದ ಮತ್ತು ಅದರ ಸಿದ್ಧಾಂತಗಳ ಬೆಂಬಲಿಗ.

ಅನುರಾಗ್ ಠಾಕುರ್ ತನ್ನ ಬೆಂಬಲಿಗರಿಗೆ ಬಹಿರಂಗವಾಗಿಯೇ ಕರೆ ಕೊಟ್ಟಂತೆ ಗುಂಡು ಹೊಡೆದಿದ್ದಾನೆ. ಈ ಭಯೋತ್ಪಾದಕ ಕೃತ್ಯಕ್ಕೆ ಈ ಮುಖಂಡರ ಹೇಳಿಕೆಗಳೇ ಹೋಣೆ, ಅವರ ಮೇಲೆ ಕಾನೂನಿನ ಅಡಿಯಲ್ಲಿ ಆರೋಪ ಪಟ್ಟಿ ಹಾಕಬೇಕು ಎಂದು ಅವರು ದಿಲ್ಲಿ ಪೋಲೀಸ್ ಕಮಿಶನರ್‌ಗೆ ಕೊಟ್ಟ ದೂರಿನಲ್ಲಿ ಆಗ್ರಹಿಸಿದ್ದಾರೆ.

ಇದಲ್ಲದೆ, ತನ್ನನ್ನು ಹಿಂದೂ ಸೇನೆ ಎಂದು ಹೇಳಿಕೊಳ್ಳುವ ಒಂದು ಸಂಘಟನೆ ಪೋಸ್ಟರುಗಳು ಇತ್ಯಾದಿಗಳ ಮೂಲಕ ಫೆಬ್ರುವರಿ 2 ರಂದು ಶಾಹೀನ್ ಬಾಗನ್ನು ಬಲವಂತವಾಗಿ ತೆರವುಗೊಳಿಸುವುದಾಗಿ ಬೆದರಿಕೆ ಹಾಕಿದೆ. ಈ ಭೀತಿ ಹುಟ್ಟಿಸುವ ಪ್ರಯತ್ನ ಕೂಡ ಈ ಮುಖಂಡರುಗಳ ದ್ವೇಷ ಭಾಷಣಗಳ ಪರಿಣಾಮ.

ಪೋಲೀಸರು ಈ ಇಬ್ಬರು ಮುಖಂಡರ ಮೇಲೆ ತಕ್ಷಣವೇ ಎಫ್‌ಐಆರ್ ಹಾಕಬೇಕುಈ ಸೇನಾದ ವಿರುದ್ಧ ಮುಂದಾಗಿ ಬಲವಾದ ತಡೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬೃಂದಾ ಕಾರಟ್ ಹಾಗೂ ಕೆ.ಎಂ.ತಿವಾರಿ ದಿಲ್ಲಿ ಪೋಲೀಸ್ ಕಮಿಶನರ್ ಅವರನ್ನು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *