ಫೆ.12-18: ಜನ ವಿರೋಧಿ ಬಜೆಟ್ ವಿರುದ್ಧ ಎಡಪಕ್ಷಗಳ ರಾಷ್ಟ್ರವ್ಯಾಪಿ ಪ್ರತಿಭಟನೆ

ಈ ವರ್ಷದ ಬಜೆಟ್ಟಿನಲ್ಲಿ ವ್ಯಾಪಕವಾಗಿ ತುಂಬಿರುವ ಜನ-ವಿರೋಧಿ ಧೋರಣೆಗಳ ವಿರುದ್ಧ ಎಡಪಕ್ಷಗಳು, ಅಂದರೆ ಸಿಪಿಐ(ಎಂ), ಸಿಪಿಐ, ಫಾರ್ವರ್ಡ್ ಬ್ಲಾಕ್, ಸಿಪಿಐ(ಎಂಎಲ್)-ಲಿನರೇಷನ್ ಮತ್ತು ಆರ್‌ಎಸ್‌ಪಿ,  ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿವೆ.

ಇವು ನಮ್ಮ ಬಹುಪಾಲು ಜನಗಳ ಜೀವನೋಪಾಯ ಪರಿಸ್ತಿತಿಗಳನ್ನು ಹಿಂಡಿ ಹಾಕುವ ಧೋರಣೆಗಳು. ಮೋದಿ ಸರಕಾರ ಭಾರತೀಯ ಅರ್ಥವ್ಯವಸ್ಥೆಯನ್ನು ಧ್ವಂಸ ಮಾಡಿ, ಜನಗಳ ಮೇಲೆ ಅಭೂತಪೂರ್ವ ಹೊರೆಗಳನ್ನು ಹೇರಿದೆ. ಅದೇ ವೇಳೆಗೆ, ಶ್ರೀಮಂತರಿಗೆ ಮತ್ತು ಕಾರ್ಪೊರೇಟ್‌ಗಳಿಗೆ ಒಂದಾದ ಮೇಲೊಂದರಂತೆ ರಿಯಾಯ್ತಿಗಳನ್ನು ಕೊಡುತ್ತಿದೆ. ಇವು ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಕಾಣದಷ್ಟು ರೀತಿಯಲ್ಲಿ ಆರ್ಥಿಕ ಸಮಾನತೆಗಳನ್ನು ಇನ್ನಷ್ಟು ಹೆಚ್ಚಿಸಿವೆ.

ಫೆಬ್ರುವರಿ 12ರಿಂದ 18ರ ವರೆಗೆ ನಡೆಯಲಿರುವ ಈ ಪ್ರತಿಭಟನೆಗಳಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ಮತ್ತು ಬೇಡಿಕೆಗಳನ್ನು ಎಡಪಕ್ಷಗಳು ಎತ್ತಲಿವೆ:

1. ಜನಗಳ ಜೀವನಪರ್ಯಂತದ ಉಳಿತಾಯಗಳು ಮತ್ತು ಭದ್ರತೆಯ ಭಂಡಾರವಾದ ಎಲ್‌ಐಸಿಯಲ್ಲಿನ ಶೇರು ಹಿಂಪಡಿಕೆ ಸೇರಿದಂತೆ ರಾಷ್ಟ್ರೀಯ ಆಸ್ತಿಗಳನ್ನು ದೊಡ್ಡ ಪ್ರಮಾಣದಲ್ಲಿ ಖಾಸಗೀಕರಿಸುವುದನ್ನು ಕೈಬಿಡಬೇಕು.

2. ಅಭೂತಪೂರ್ವ ಮಟ್ಟದ ನಿರುದ್ಯೋಗ ಮತ್ತು ಕಾರ್ಖಾನೆಗಳನ್ನು ಮುಚ್ಚುವುದರಿಂದ ಅಥವ ಅವುಗಳ    ಗಾತ್ರ ಕುಗ್ಗಿಸುತ್ತಿರುವುದರಿಂದ ಆಗುತ್ತಿರುವ ರಿಟ್ರೆಂಚ್‌ಮೆಂಟ್‌ಗಳ ವಿರುದ್ಧ

ರೂ.೨೧,೦೦೦ ಕನಿಷ್ಟ ಕೂಲಿ ಕೊಡಬೇಕು ಮತ್ತು ಸಾಕಷ್ಟು ಪ್ರಮಾಣದ ನಿರುದ್ಯೋಗ ಭತ್ತೆ ಕೊಡಬೇಕು ಎಂದು ಆಗ್ರಹ

3. ಕೃಷಿ ಸಂಕಟಗಳನ್ನು ಆಳಗೊಳಿಸುವುದರ ವಿರುದ್ಧ.

    ರೈತರಿಗೆ ಒಮ್ಮೆ ಸಾಲ ಮನ್ನಾಕ್ಕೆ ಆಗ್ರಹ

4. ಬಹುಮುಖ್ಯವಾದ ಕ್ಷೇತ್ರಗಳಲ್ಲಿ ಸರಕಾರದ ವೆಚ್ಚಗಳಲ್ಲಿ ದೊಡ್ಡ ಪ್ರಮಾಣದ ಕಡಿತಗಳ ವಿರುದ್ಧ-ಆಹಾರ ಸಬ್ಸಿಡಿ(೭೫,೫೩೨ ಕೋಟಿ ರೂ.)ಕೃಷಿ  ಮತ್ತು ಮೀನುಗಾರಿಕೆಯಂತಹ ಸಂಬಂಧಿತ ಕ್ಷೇತ್ರಗಳು(೩೦,೬೮೩ ಕೋಟಿ ರೂ.)ಮನರೇಗ(೯೫೦೦ ಕೋಟಿ ರೂ.)ಸಾಮಾಜಿಕ ಕಲ್ಯಾಣ(೨೬೪೦ ಕೋಟಿ ರೂ.)ನಗರಾಭಿವೃದ್ಧಿ(೫೭೬೫ ಕೋಟಿ ರೂ.)ಆರೋಗ್ಯ(೧೧೬೯ ಕೋಟಿ ರೂ.) ಇತ್ಯಾದಿ. ಕೋಟ್ಯಂತರ ಭಾರತೀಯರನ್ನು ಬಡತನಕ್ಕೆ ತಳ್ಳುವ ಕಡಿತಗಳ ವಿರುದ್ಧ

ಈ ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಸರಕಾರದ ವೆಚ್ಚಗಳನ್ನು ಈ ಹಿಂದಿನ ಮಟ್ಟಕ್ಕಿಂತ ಹೆಚ್ಚಿಸದಿದ್ದರೂ ಆ ಮಟ್ಟಕ್ಕಾದರೂ ತರಬೇಕು.

ಮೋದಿ ಸರಕಾರ ನಮ್ಮ ಸಂವಿಧಾನದ ಮೇಲೆ ಪ್ರಹಾರ ನಡೆಸುತ್ತಿರುವ, ಕಟ್ಟಾ ಹಿಂದುತ್ವ ಅಜೆಂಡಾವನ್ನು, ಸಿಎಎ-ಎನ್‌ಪಿಆರ್- ಎನ್‌ಆರ್‌ಸಿಯನ್ನು ಜಾರಿಗೊಳಿಸುತ್ತ ಜನಗಳನ್ನು ಒಡೆಯುತ್ತಿರುವ ಮತ್ತು ದೇಶಾದ್ಯಂತ ಜನಗಳ ನಡುವೆ ಹೆಚ್ಚೆಚ್ಚು ದ್ವೇಷ ಮತ್ತು ಹಿಂಸಾಚಾರವನ್ನು ಹುಟ್ಟಿಸುತ್ತಿರುವ ಸಮಯದಲ್ಲೇ ಜನಗಳ ಜೀವನೋಪಾಯಗಳ ಮೇಲೆ ಇಂತಹ ಕ್ರಿಮಿನಲ್ ದಾಳಿಗಳನ್ನು ನಡೆಸುತ್ತಿದೆ.

ಈ ಪ್ರತಿಭಟನೆಗಳನ್ನು ಆಯಾಯ ರಾಜ್ಯಗಳಲ್ಲಿರುವ ಪರಿಸ್ತಿತಿಗಳಿಗೆ ಅನುಗುಣವಾಗಿ ಈ ಪ್ರತಿಭಟನಾ ವಾರಾಚರಣೆಯನ್ನು ಸಂಘಟೆಇಸಬೇಕು ಎಂದು ಎಡಪಕ್ಷಗಳು ತಮ್ಮ ರಾಜ್ಯ ಘಟಕಗಳಿಗೆ ಕರೆ ನೀಡಿವೆ.

Leave a Reply

Your email address will not be published. Required fields are marked *