ಎಲ್ಲರನ್ನೂ ಒಳಗೊಳ್ಳುವ, ಯಾರನ್ನೂ ಬಿಟ್ಟುಕೊಡದ ಕಣ್ಣೋಟ

  • ಕೊವಿಡ್-19 ಎದುರಿಸುವ  ಕೇರಳ ಮಾದರಿ:
  • 20ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಎಲ್ಲರನ್ನೂ ಒಳಗೊಳ್ಳುವ, ಯಾರನ್ನೂ ಬಿಟ್ಟು ಹಾಕದ ಕಣ್ಣೋಟ

ಕೇರಳದ ಎಡ ಸರಕಾರ ವೈದ್ಯಕೀಯ ಬಿಕ್ಕಟ್ಟನ್ನು ಎದುರಿಸುವುದು ಹೇಗೆ ಎಂದು ತೋರಿಸಿಕೊಟ್ಟಿತ್ತು, ಈಗ ಇದರ ಸಾಮಾಜಿಕ ಆಯಾಮವನ್ನು, ಮುಖ್ಯವಾಗಿ ಸಮಾಜದ ಬಡವಿಭಾಗಗಳು ಇದರಿಂದಾಗಿ ಎದುರಿಸಬೇಕಾದ ಸಂಕಷ್ಟಗಳನ್ನು ಶಮನ ಮಾಡಲು ಕೂಡ ಪರಿಹಾರ ಕ್ರಮಗಳನ್ನು ಪ್ರಕಟಿಸಿ ಮಾದರಿ ಹಾಕಿಕೊಟ್ಟಿದೆ.

ಮಾರ್ಚ್ ೧೯ ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೊವಿಡ್-೧೯ನ್ನು ಮೀರಿ ನಿಲ್ಲಲು ೨೦,೦೦೦ ಕೋಟಿ ರೂ.ಗಳ ಒಂದು ವಿಶೇಷ ಪ್ಯಾಕೇಜನ್ನು ಪ್ರಕಟಿಸಿದರು. ಇದು ಎಲ್ಲರನ್ನೂ ಒಳಗೊಳ್ಳುವ ಕಣ್ಣೋಟವನ್ನು ಹೊಂದಿದ್ದು, ಯಾರೂ ಹಿಂದೆಯೇ ಉಳಿದು ಬಿಡಬಾರದು ಎಂಬುದನ್ನು ಖಾತ್ರಿಗೊಳಿಸುತ್ತದೆ ಎಂದು ಹೇಳಲಾಗಿದೆ.

ವಿಶೇಷ ಕ್ರಮಗಳ ವಿವರ ಹೀಗಿದೆ:

  1. ಕುಡುಂಬಶ್ರೀ ಮೂಲಕ ಕುಟುಂಬಗಳಿಗೆ 2000 ಕೋಟಿ ರೂ. ಮೌಲ್ಯದ ಸಾಲಗಳನ್ನು ಲಭ್ಯಗೊಳಿಸುವುದು.
  2. ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ತಲಾ 1000 ಕೋಟಿ ರೂ.ಗಳ, ಅಂದರೆ ಒಟ್ಟು 2000 ಕೋಟಿ ರೂ.ಗಳ  ಗ್ರಾಮೀಣ ಉದ್ಯೋಗ ಖಾತ್ರಿ ಸ್ಕೀಮ್.
  3. ಎಪ್ರಿಲ್ ತಿಂಗಳಲ್ಲಿ ಕೊಡಬೇಕಾದ ಸಾಮಾಜಿಕ ಭದ್ರತಾ ಪೆನ್ಶನ್‌ಗಳನ್ನು ಈ ತಿಂಗಳೇ ಕೊಡುವುದು. ಹೀಗೆ ಎರಡು ತಿಂಗಳ ಪೆನ್ಶನ್ ಮೊತ್ತವನ್ನು ಒಟ್ಟಿಗೇ ಕೊಡಲು 1320 ಕೋಟಿರೂ.ಗಳ ವೆಚ್ಚ ವಾಗುತ್ತದೆ.
  4. ಸಾಮಾಜಿಕ ಕಲ್ಯಾಣ ಪೆನ್ಶನ್‌ಗಳಿಲ್ಲದ ಬಿಪಿಎಲ್ ಮತ್ತು ಅಂತ್ಯೋದಯ ಕುಟುಂಬಗಳಿಗೆ ತಲಾ 1000ರೂ. ಇದಕ್ಕೆ ತಗಲುವ ಒಟ್ಟು ವೆಚ್ಚ ೧೦೦ ಕೋಟಿ ರೂ.
  5. ರಾಜ್ಯಾದ್ಯಂತ ಪ್ರತಿಯೊಬ್ಬರಿಗೂ, ಬಿಪಿಎಲ್-ಎಪಿಎಲ್ ಬೇಧವಿಲ್ಲದೆ, ಒಂದು ತಿಂಗಳ ಆಹಾರಧಾನ್ಯಗಳನ್ನು ಉಚಿತವಾಗಿ ಕೊಡಲಾಗುವುದು. ಬಿಪಿಎಲ್ಲೇತರ ಮತ್ತು ಅಂತ್ಯೋದಯೇತರ ಕುಟುಂಬಗಳಿಗೆ ೧೦ ಕೆ.ಜಿ. ಆಹಾರಧಾನ್ಯಗಳು. ಇದಕ್ಕೆ 100 ಕೋಟಿ ರೂ. ತೆಗೆದಿಡಲಾಗಿದೆ
  6. ಸಬ್ಸಿಡಿ ದರಗಳಲ್ಲಿ ಆಹಾರ ನೀಡುವ ರೆಸ್ಟೋರೆಂಟ್‌ಗಳನ್ನು ಮೂಲತಃ ಸಪ್ಟಂಬರ್ ವೇಳೆಗೆ  ಆರಂಭಿಸಬೇಕೆಂದಿತ್ತು. ಈಗಿನ ಸನ್ನಿವೇಶವನ್ನು ಪರಿಗಣಿಸಿ ಎಪ್ರಿಲ್‌ನಿಂದಲೇ ಅವುಗಳ ಕಾರ್ಯಾರಂಭ. ೧೦೦೦ ಇಂತಹ ರೆಸ್ಟೋರೆಂಟ್‌ಗಳು ೨೦ರೂ. ದರದಲ್ಲಿ ಊಟ ಒದಗಿಸುತ್ತವೆ. ಈ ಮೊದಲು ಇದಕ್ಕೆ ೨೫ರೂ. ನಿಗದಿ ಮಾಡಲಾಗಿತ್ತು.
  7. 500 ಕೋಟಿ ರೂ.ಗಳ ಒಂದು ಆರೋಗ್ಯ  ಪ್ಯಾಕೇಜ್.
  8. ಎಲ್ಲ ಸಂಸ್ಥೆಗಳ, ವ್ಯಕ್ತಿಗಳ ಬಾಕಿಗಳನ್ನು ಎಪ್ರಿಲ್‌ನಲ್ಲಿ ಚುಕ್ತಾ ಮಾಡಲಾಗುವುದು. ಇದಕ್ಕೆ 14,000 ಕೋಟಿ ರೂ. ಖರ್ಚು ಮಾಡಲಾಗುತ್ತದೆ.
  9. ಇವಲ್ಲದೆ, ಆಟೋರಿಕ್ಷಾ ಮತ್ತು ಟ್ಯಾಕ್ಸಿಗಳಿಗೆ ಫಿಟ್‌ನೆಸ್ ಶುಲ್ಕಗಳನ್ನು ಪಾವತಿ; ಬಸ್‌ಗಳಿಗೂ ತೆರಿಗೆ ಪಾವತಿ ಸಡಿಲಿಕೆ; ಚಿತ್ರ ಮಂದಿರಗಳಿಗೆ ಮನರಂಜನಾ ತೆರಿಗೆಯಲ್ಲಿ ರಿಯಾಯ್ತಿ.
  10. ನೀರು ಮತ್ತು ವಿದ್ಯುತ್ ಬಿಲ್ ಪಾವತಿಯ ಅವಧಿಯಲ್ಲೂ ರಿಯಾಯ್ತಿ.

Leave a Reply

Your email address will not be published. Required fields are marked *