ಬಿಬಿಎಂಪಿ ಸಹಾಯವಾಣಿಗೆ ಸ್ವಾಗತ

ಬಿಬಿಎಂಪಿಯಿಂದ ದಕ್ಷಿಣ ವಲಯದಲ್ಲಿ ನಾಗರೀಕರಿಗೆ ೧೨.೪.೨೦೨೦ ರಿಂದ ಸಹಾಯವಾಣಿ ಪ್ರಾರಂಭಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ)  ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ಸ್ವಾಗತಿಸಿದೆ. ಅದನ್ನು ಸಮರ್ಪಕವಾಗಿ ಹಾಗು ಸಮರ್ಥವಾಗಿ ಜನಸ್ನೇಹಿಯಾಗಿ ಜಾರಿ ಮಾಡ ಬೇಕೆಂದು ಬಿಬಿಎಂಪಿಯನ್ನು ಸಿಪಿಐ(ಎಂ) ಒತ್ತಾಯಿಸಿದೆ.

ಈ ಹಿಂದೆಯೇ ಆರಂಭಿಸಬೇಕಿದ್ದ ಸಹಾಯವಾಣಿಯನ್ನು ಲಾಕ್ಡೌನ್ ಆರಂಭವಾಗಿ ೨೦ ದಿನಗಳ ನಂತರವಾದರೂ ಆರಂಭಿಸಿರುವುದು ತಡವಾಗಿಯಾದರು ಬಿಬಿಎಂಪಿಗೆ ಜ್ಞಾನೋದಯವಾಗಿರುವುದನ್ನು ತೋರುತ್ತದೆ. ಈ ಸಹಾಯವಾಣಿ ಹಣವಿದ್ದು ಖರಿದಿಸುವವರಿಗೆ ನೆರವಾಗಲಿದೆ. ಜನತೆ ಮನೆಯಲ್ಲೇ ಇರಲು ಅನುವಾಗಲಿದೆ.

ಇದೇ ರೀತಿ ಹಣವಿಲ್ಲದ ಬಡ ಅಸಂಘಟಿತರಿಗೆ ನೆರವಾಗಲು ಕಾರ್ಮಿಕ ಇಲಾಖೆ ಕಟ್ಟಡ ಕಾರ್ಮಿಕರಿಗೆ ಆರಂಭಿಸಿರುವ ರೀತಿ ಪ್ರತ್ಯೇಕ ಸಹಾಯವಾಣಿ ಪ್ರಾರಂಭಿಸ ಬೇಕೆಂದು ಬಿಬಿಎಂಪಿಯನ್ನು ಸಿಪಿಐ(ಎಂ) ಒತ್ತಾಯಿಸಿದೆ.

ಕಳೆದ ೨೦ ದಿನಗಳ ಲಾಕ್ಡೌನ್ ಅವಧಿಯಲ್ಲಿ ಮಾನ್ಯ ಮಹಾಪೌರರು ಎಲ್ಲಿ ಮಾಯವಾಗಿದ್ದಾರೆ ಎಂಬಂತೆ ಮಹಾನಗರದ ಜನತೆ ಭಾವಿಸುವಂತ ಪರಿಸ್ಥಿತಿ ಅವರ ನಿಷ್ಕ್ರೀಯತೆಯಿಂದಾಗಿ ಉಂಟಾಗಿದೆ. ಬಿಬಿಎಂಪಿಯ ಮೇಯರ್ ಬಿಬಿಎಂಪಿ ಹಣದಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯಗಳನ್ನು ಜನತೆಯ ಮುಂದಿರಿಸಬೇಕು.

ಎಲ್ಲಾ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಡಿ ಬೆಂಗಳೂರು ಒಂದಾಗಿ ಕೋವಿಡ್ ೧೯ ಲಾಕ್ಡೌನ್ ಯಶಸ್ಸಿಗೆ ಹಾಗು ಅದರಿಂದ ಭಾಧಿತರಾಗಿರುವ ಎಲ್ಲಾ ವಿಭಾಗದ ಜನತೆಗೆ ಅಗತ್ಯವಾದ ಪರಿಹಾರ ಕಾರ್ಯಕ್ಕೆ ಮುಂದಾಗಬೇಕೆಂದು ಸಿಪಿಐ(ಎಂ) ಮಹಾಪೌರರನ್ನು ಒತ್ತಾಯಿಸಿದೆ.

Leave a Reply

Your email address will not be published. Required fields are marked *