ಪರಿಹಾರದ ಪ್ಯಾಕೇಜ್ ಗೆ ಮುಂದಾದ ಕ್ರಮ ಸ್ವಾಗತಾರ್ಹ ಆದರೇ, ಅದು ಕೆಲವರಿಗಷ್ಠೇ ! ಅದು ಕೂಡಾ ಅಸಮರ್ಪಕ !! – ಸಿಪಿಐಎಂ ಠೀಕೆ :

ಕರ್ನಾಟಕ ಸರಕಾರ ರಾಜ್ಯದ ಜನಗಳ ಒತ್ತಾಯಕ್ಕೆ ಮಣಿದು ಸ್ವಲ್ಪ ತಡವಾಗಿಯಾದರೂ ಮತ್ತು ಕೆಲವರಿಗಾದರೂ ಸುಮಾರು 1,600 ಕೋಟಿ ರೂ. ಗಳ ಪರಿಹಾರ ಘೋಷಿಸಿರುವುದನ್ನು ಸಿಪಿಐಎಂ ರಾಜ್ಯ ಸಮಿತಿ ಸ್ವಾಗತಿಸುತ್ತದೆ.

ಆದರೇ, ಕಳೆದ ಒಂದೂವರೆ ತಿಂಗಳ ಕಾಲ ಸಂಕಷ್ಟ ಅನುಭವಿಸಿದ ಈ ಕೆಲ ಜನರಿಗೆ ಘೋಷಿಸಿದ ಪರಿಹಾರ,ಬಹಳ ಕಡಿಮೆಯದಾಗಿದೆ. ಪ್ರತಿ ತಿಂಗಳ ಕೇರಳ ಮಾದರಿಯಲ್ಲಿ ಆಹಾರ ಸಾಮಗ್ರಿಗಳ ಕಿಟ್ ಮತ್ತು ಮಾಸಿಕ ಕನಿಷ್ಟ 7,500 ರೂಗಳ ನೆರವಾದರೂ ನೀಡಬೇಕೆಂಬುದು ಸಿಪಿಐಎಂ ನ ಒತ್ತಾಯವಾಗಿತ್ತು.

ಹಾಗಾಗಿ ಎರಡು ತಿಂಗಳ ಈ ಅವಧಿಗೆ ಸರಾಸರಿ, 15,000 ರೂ ಪರಿಹಾರ ಘೋಷಿಸಬೇಕಿತ್ತು. ಆದರೇ, ಈ ಘೋಷಣೆ ಸರಾಸರಿ ಕೇವಲ 5,000 ರೂ ಮಾತ್ರವೇ ಸೀಮಿತವಾಗಿದೆ. ಕೇರಳ ಮಾದರಿಯ ಆಹಾರ ಸಾಮಗ್ರಿಗಳ ಕುರಿತು ಸರಕಾರ ಈಗಲೂ ಮಾತನಾಡಿಲ್ಲ.

ಅದೇ ರೀತಿ, ಪರಿಹಾರ ನೀಡುತ್ತಿರುವುದು, ಪರಿಹಾರ ಕೊಡಬೇಕಾದ ಜನರಲ್ಲಿ ಕೆಲವರಿಗಷ್ಟೇ ಆಗಿದೆ. ಇನ್ನೂ ಪರಿಹಾರ ನೀಡಬೇಕಾದ ಜನರ ಪಟ್ಟಿ ಬಹಳ ದೊಡ್ಡದಿದೆ.

ಈ ಜನರಲ್ಲಿ ಬಹುತೇಕ ಕೃಷಿಕೂಲಿಕಾರರು, ಬಡ ರೈತರು, ಕಸುಬುದಾರರು, ಗುತ್ತಿಗೆ ಮತ್ತಿತರೇ ವಲಯದ ಅಸಂಘಟಿತರು, ವಿಕಲ ಚೇತನರು,ದೇವದಾಸಿ ಮಹಿಳೆಯರು, ಲೈಂಗಿಕ ಕಾರ್ಯಕರ್ತರು, ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದ ಸ್ವ ಸಹಾಯ ಸಂಘಗಳ ಮಹಿಳೆಯರು, ಮಂಗಳಮುಖಿಯರು, ಮಸಣ ಕಾರ್ಮಿಕರು, ಮಂಗಳ ವಾದ್ಯ ಕಲಾವಿದರು, ಸಣ್ಣ ವ್ಯಾಪಾರಿಗಳು, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳು, ಕೋವಿಡ್ – 19 ರಿಂದ ಬಾಧಿತರಾದ ಕುಟುಂಬಗಳು, ನಗರಗಳ ಬಡಜನರು, ಇವರುಗಳೆಲ್ಲಾ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಇವರೆಲ್ಲರಿಗೂ ಆಹಾರ ಸಾಮಾಗ್ರಿಗಳ ಕಿಟ್ ಜೊತೆ ಈ ಎರಡು ತಿಂಗಳಿಗೆ ಕನಿಷ್ಟ 15,000 ರೂ ಪರಿಹಾರ ಸಿಗಬೇಕು, ರೈತರಿಗೆ ಬೆಳೆನಷ್ಠ ಪರಿಹಾರವನ್ನು ತಲಾ ಎಕರೆಗೆ 20,000 ರೂಗಳಾದರೂ ದೊರೆಯುವಂತಾಗಬೇಕು. ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದ ಮಹಿಳೆಯರ ಸಾಲ ಮನ್ನಾ ಮಾಡಲು ಕ್ರಮವಹಿಸಬೇಕು. ಈಗಲೂ ವೇತನ ಸಹಿತ ರಜೆ ಎಂದಿದ್ದ ಕಾರ್ಮಿಕರಿಗೆ ಕಳೆದೆರಡು ತಿಂಗಳ ವೇತನ ಪಡೆದಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾರ್ಮಿಕರಿಗೆ ಸರಕಾರವೇ ವೇತನ ಬಾಕಿ ನೀಡಬೇಕಿದೆ. ಎಂಬುದು ಸಿಪಿಐಎಂ ರಾಜ್ಯ ಸಮಿತಿಯ ಬಲವಾದ ಆಗ್ರಹ.

ಇದಕ್ಕಾಗಿ, ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಗಣನೀಯ ನೆರವನ್ನು ಪಡೆಯಲು ಕ್ರಮ ವಹಿಸಬೇಕು. ರಾಜ್ಯದ ಸಂಸದರು ಈ ವಿಚಾರದಲ್ಲಿ ಮೌನ ವಹಿಸಿರುವುದು ತೀವ್ರ ಖಂಡನೀಯವಾಗಿದೆ. ರಾಜ್ಯ ಮತ್ತು ರಾಜ್ಯದ ಜನತೆ ಸಂಕಷ್ಟದಲ್ಲಿರುವಾಗ, ತಮ್ಮ ಕರ್ತವ್ಯದಿಂದ ವಿಮುಖರಾದ ಇವರ ಈ ಮೌನ ಅಸಹನೀಯವಾಗಿದೆ ಎಂದು ಸಿಪಿಐಎಂ ಖಂಡಿಸಿದೆ.

ಯು. ಬಸವರಾಜ ಕಾರ್ಯದರ್ಶಿಗಳು, (06.05.2020)

Leave a Reply

Your email address will not be published. Required fields are marked *