ಬಿಬಿಎಂಪಿ ಬಜೆಟ್ ವಿವೇಚನ ನಿಧಿ ಅಸಂಘಟಿತರ ಆಥಿ೯ಕ ನೆರವಿಗೆ ಬಳಸಲು ಸಿಪಿಐ(ಎಂ) ಒತ್ತಾಯ

ಬಿಬಿಎಂಪಿ ಬಜೆಟ್ ನಲ್ಲಿ ಮೀಸಲಿಟ್ಟಿರುವ ಮೇಯರ್, ಉಪ ಮೇಯರ್, ಹಣಕಾಸು ಸ್ಥಾಯಿ ಸಮಿತಿ, ಹಾಗು ಆಡಳಿತ ಪಕ್ಷದ ಅಧ್ಯಕ್ಷರ ವಿವೇಚನ ನಿಧಿಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅಸಂಘಟಿತ ಕಾಮಿ೯ಕರಿಗೆ ಹಣಕಾಸು ನೆರವು ನೀಡಲು ಬಳಸ ಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಒತ್ತಾಯಿಸಿವೆ.
2020 -21 ರ ಸಾಲಿನ ಬಿಬಿಎಂಪಿ ಬಜೆಟ್ ನಲ್ಲಿ ಮೇಯರ್ ವಿವೇಚನ ನಿಧಿಯಾಗಿ 150 ಕೋಟಿ ರೂ, ಉಪ ಮೇಯರ್ ವಿವೇಚನ ನಿಧಿಯಾಗಿ 75 ಕೋಟಿ ರೂ, ಆಥಿ೯ಕ ಹಾಗು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರ ವಿವೇಚನ ನಿಧಿಯಾಗಿ 75 ಕೋಟಿ ರೂ, ಆಡಳಿತ ಪಕ್ಷದ ಅಧ್ಯಕ್ಷರ ವಿವೇಚನ ನಿಧಿಯಾಗಿ 75 ಕೋಟಿ ರೂ ಸೇರಿ ಒಟ್ಟು 375 ಕೋಟಿ ರೂಪಾಯಿಗಳನ್ನು ವಿವೇಚನ ನಿಧಿಯಾಗಿ ಮೀಸಲಿರಸಲಾಗಿದೆ. ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಸದರಿ ವಿವೇಚನ ನಿಧಿಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ಕಾಮಿ೯ಕರಾದ ಆಟೋ – ಟ್ಯಾಕ್ಸಿ ಚಾಲಕರು, ಮನೆ ಕೆಲಸಗಾರರು, ಬೀದಿ ಬದಿ ವ್ಯಾಪಾರಿಗಳು, ಮೆಕ್ಯಾನಿಕ್
ಗಳು, ಕ್ಷೌರಿಕರು, ಚಮ್ಮಾರರು, ಕಮ್ಮಾರರು, ನೇಕಾರರು, ಕುಂಬಾರರು, ದೋಬಿಗಳು, ಧಜಿ೯ಗಳು, ಮಂಗಳಕಲಾವಿದರು, ಅಂಗವಿಕಲರು, ಹಿರಿಯ ನಾಗರೀಕರು ಮುಂತಾದವರಿಗೆ ಕನಿಷ್ಠ 2000 ಸಾವಿರ ರೂಪಾಯಿಗಳ ಹಣಕಾಸು ನೆರೆವನ್ನು ನೀಡಲು ಬಳಸ ಬೇಕೆಂದು ಸಿಪಿಐ(ಎಂ) ಬಿಬಿಎಂಪಿಯನ್ನು ಒತ್ತಾಯಿಸಿದೆ.
375 ಕೋಟಿ ರೂಪಾಯಿಗಳನ್ನು ಪ್ರತಿ ಅಸಂಘಟಿತ ಕಾಮಿ೯ಕರಿಗೆ 2 ಸಾವಿರ ರೂಪಾಯಿಗಳಂತೆ ಒಟ್ಟು 18.75 ಲಕ್ಷ  ಅಸಂಘಟಿತ ಕಾಮಿ೯ಕರಿಗೆ ಆಥಿ೯ಕ ನೆರವು ನೀಡ ಬಹುದಾಗಿದೆ. ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತರ ನೆರೆವಿಗೆ ದಾವಿಸುವ ವಿವೇಚನೆಯನ್ನು ಬಿಬಿಎಂಪಿಯ ಮಹಾಪೌರರು, ಉಪ ಮಹಾಪೌರರು, ಸ್ಥಾಯಿ ಸಮಿತಿ ಅಧ್ಯಕ್ಷರು, ಆಡಳಿತ ಪಕ್ಷದ ಅಧ್ಯಕ್ಷರು ತೆಳೆಯಬೇಕೆಂದು ಸಿಪಿಐ(ಎಂ) ಮನವಿ ಮಾಡಿದೆ.
ಈ ವಿವೇಚನ ನಿಧಿಯೊಂದಿಗೆ ಬಿಬಿಎಂಪಿ ಬಜೆಟ್ ನ ಒಂದು ಶೇಕಡವನ್ನು ಅಸಂಘಟಿತರ ನೆರೆವಿಗೆ ಬಳಸಿದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಒಟ್ಟು 25 ಲಕ್ಷ ಕಾಮಿ೯ಕರಿಗೆ ನೆರವು ನೀಡ ಬುಹುದಾಗಿದೆ. ಇಂತಹ ಕ್ರಮಕ್ಕೆ ಬಿಬಿಎಂಪಿಯ ಆಡಳಿತಾರೂಢ ಬಿಜೆಪಿ ಮುಂದಾಗ ಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.
ಕೆ.ಎನ್.ಉಮೇಶ್
ಕಾಯ೯ದಶಿ೯, ಸಿಪಿಐ(ಎಂ)
ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ
ಎನ್.ಪ್ರತಾಪ್ ಸಿಂಹ
ಕಾಯ೯ದಶಿ೯,ಸಿಪಿಐ(ಎಂ)
ಬೆಂಗಳೂರು ಉತ್ತರ ಜಿಲ್ಲಾ ಸಮಿತಿ (5.5.2020)

Leave a Reply

Your email address will not be published. Required fields are marked *