ಬಿಲ್ಡರಗಳ ಹಿತಕ್ಕಾಗಿ ಕಾರ್ಮಿಕರನ್ನು ಬಲಿ ಕೊಡುತ್ತಿರುವ ರಾಜ್ಯ ಸರಕಾರ: ಸಿಪಿಐ(ಎಂ) ಖಂಡನೆ

ರಾಜ್ಯ ಸರಕಾರವು ಲಾಕ್ ಡೌನ್ ಆರಂಭದಿಂದಲೂ ದೊಡ್ಡ ಬಿಲ್ಡರಗಳ ಹಿತಕಾಯಲು ಹರಸಾಹಸ ಪಡುತ್ತಿದೆ. ಅವರ ಹಿತಕ್ಕಾಗಿ ಕಾರ್ಮಿಕರನ್ನು ಬಲಿಕೊಡುತ್ತಿದೆ. ರಾಜ್ಯ ಸರಕಾರದ ಈ ಯತ್ನಗಳು ಕಾರ್ಮಿಕರ ಜೀವಕ್ಕೆ ಕಂಟಕವಾಗಲಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.

ರಾಜ್ಯ ಸರಕಾರವು ಈ ಕಾರಣಕ್ಕಾಗಿಯೇ ಹೊರ ರಾಜ್ಯದ ವಲಸೆ ಕಾರ್ಮಿಕರಿಗೆ ತಡವಾಗಿ ರೈಲು ವ್ಯವಸ್ಥೆ ಮಾಡಿದೆ. ಅದನ್ನು ಸಹಾ ಗುಪ್ತವಾಗಿ ನಗರದಿಂದ ದೂರದ ಚಿಕ್ಕಬಾಣಾವರ ಮತ್ತು ಮಾಲೂರು ರೈಲು ನಿಲ್ದಾಣದಿಂದ ಮಾಡಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಬಾರದ ಹೊರ ರಾಜ್ಯದ ವಲಸೆ ಕಾರ್ಮಿಕರಿಗೆ ಸೇವಾ ಸಿಂಧು ಆಪ್ ಮೂಲಕವೇ ಊರಿಗೆ ಹೋಗಲು ಅರ್ಜಿ ಸಲ್ಲಿಸಲು ಕಡ್ಡಾಯಗೊಳಿಸಿದೆ. ಸ್ಥಳೀಯ ಪೋಲಿಸರಿಗೂ ರೈಲುಗಳು ಹೊರಡುವ ಮಾಹಿತಿ ನೀಡದೆ ಅವರನ್ನು ಕತ್ತಲಲ್ಲಿ ಇಟ್ಟು ತಮಗೆ ಬೇಕಾದ ಬಿಲ್ಡರಗಳ ಹಿತಕ್ಕಾಗಿ ಅವರ ಕಾರ್ಮಿಕರನ್ನು ಮಾತ್ರ ರೈಲಿನಲ್ಲಿ ಗುಪ್ತವಾಗಿ ಕಳುಹಿಸಲು ಮುಂದಾಗಿದೆ.

ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಹಿಂತಿರುಗಿ ಹೋಗದಂತೆ ತಡೆಯಲು ಅಧಿಕಾರಿಗಳಿಗೆ ತಾಕೀತು ಮಾಡುತ್ತಿದೆ. ಉತ್ತರಪ್ರದೇಶ ಮತ್ತು ಬಿಹಾರದ ಸಾವಿರಾರು ಯುವ ವಲಸೆ ಕಾರ್ಮಿಕರು ಬೆಂಗಳೂರಿನ ಹೊರವಲಯದಿಂದ ನಡೆದು ಬಂದು ನೆನ್ನೆ ಮಧ್ಯಾಹ್ನದಿಂದಲೂ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ನೆರೆವಿಗೆ ರಾಜ್ಯ ಸರಕಾರವು ಇಲ್ಲ ಕೇಂದ್ರದ ರೈಲ್ವೆ ಇಲಾಖೆಯು ಇಲ್ಲವಾಗಿದೆ. ವಾಪಸ್ಸು ಕೆಲಸದ ಸ್ಥಳಕ್ಕೆ ಹಿಂತಿರುಗಿ ಹೋಗಲು ಅವರಿಗೆ ಸ್ಥಳೀಯ ಅಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ.

ಇಂತಹ ಹಲವು ಪ್ರಕರಣಗಳಿವೆ ಒಟ್ಟಾರೆ ರಾಜ್ಯ ಸರ್ಕಾರವು ಬಿಲ್ಡರಗಳ ಹಿತಕಾಯಲು ವಲಸೆ ಕಾರ್ಮಿಕರನ್ನು ಬಲಿ ಕೊಡುತ್ತಿದೆ. ಮುಂದೊಂದು ದಿನ ಇತರೆ ರಾಜ್ಯಗಳ ದೃಷ್ಟಿಯಲ್ಲಿ ರಾಜ್ಯವು ಕೆಟ್ಟ ಆಡಳಿತದ ರಾಜ್ಯವೆಂಬ ಅಪಕೀತಿ೯ಗೆ ಬಿಜೆಪಿಯ ಬಿಲ್ಡರಗಳ ಪರ ಧೋರಣೆಯಿಂದಾಗಿ ಪಾತ್ರವಾಗಲಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಕೆ. ಎನ್. ಉಮೇಶ್ , ಕಾಯ೯ದಶಿ೯,ಸಿಪಿಐ(ಎಂ)  ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ

ಎನ್.ಪ್ರತಾಪ್ ಸಿಂಹ , ಕಾಯ೯ದಶಿ೯,ಸಿಪಿಐ(ಎಂ), ಬೆಂಗಳೂರು ಉತ್ತರ ಜಿಲ್ಲಾ ಸಮಿತಿ

Leave a Reply

Your email address will not be published. Required fields are marked *