ಅನ್ಯ ರಾಜ್ಯಗಳಿಗೆ ವಲಸೆ ಹೋದ ರಾಜ್ಯದ ಕಾರ್ಮಿಕರನ್ನು ಕರೆತರಲು ಕ್ರಮವಹಿಸಿ

ಇತರೇ ರಾಜ್ಯಗಳಿಗೆ ದುಡಿಯಲು ವಲಸೆ ಹೋದ ಕರ್ನಾಟಕದ ಬಡ ಕಾರ್ಮಿಕರನ್ನು ಅವರ ಸ್ವ ಗ್ರಾಮಗಳಿಗೆ ಕರೆ ತರಲು ಅಗತ್ಯ ಕ್ರಮ ವಹಿಸಬೇಕೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ ವಾದಿ), ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದ ಮುಖ್ಯಮಂತ್ರಿಗಳ ಪತ್ರದ ಮೂಲಕ ಆಗ್ರಹಿಸಿದೆ ಮನವಿ ಸಲ್ಲಿಸಿದ ಪೂರ್ಣ ಪಾಠ ಈ ಕೆಳಗಿನಂತಿವೆ.

ಗೆ,

ಮಾನ್ಯ ಮುಖ್ಯಮಂತ್ರಿಗಳು

ಕರ್ನಾಟಕ ಸರ್ಕಾರ

ಮಾನ್ಯರೇ,

ಅದಾಗಲೇ ತಮಗೆ ತಿಳಿದಂತೆ ಕರ್ನಾಟಕ ರಾಜ್ಯದ ಲಕ್ಷಾಂತರ  ಬಡ ಜನತೆ ರಾಜ್ಯದಲ್ಲಿ ಉಪ ಜೀವನ ಕಂಡುಕೊಳ್ಳಲಾಗದುದರಿಂದ, ರಾಜ್ಯದಿಂದ ಪಕ್ಕದ ರಾಜ್ಯಗಳಾದ, ಮಹಾರಾಷ್ಟ್ರ, ಆಂದ್ರ ಪ್ರದೇಶ, ತೆಲಂಗಾಣಾ, ಗೋವಾ, ತಮಿಳ್ನಾಡು, ಕೇರಳ ಮತ್ತಿತರೆ ರಾಜ್ಯಗಳಿಗೆ ಉಪ ಜೀವನ ಕಂಡುಕೊಳ್ಳಲು ವಲಸೆ ಹೋಗಿರುತ್ತಾರೆ.  ತಮ್ಮ ಸ್ವ ಗ್ರಾಮದ ಮನೆಗಳಲ್ಲಿ ವಯೋವೃದ್ಧರು, ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ಈಗ ಅವರಲ್ಲಿ ಬಹುತೇಕರು ಆಯಾ ರಾಜ್ಯಗಳಲ್ಲಿಯೇ ಲಾಕ್ ಡೌನ್ ಗಳಲ್ಲಿ ಬಂದಿಯಾಗಿದ್ದಾರೆ.

ಅತ್ತ ಉದ್ಯೋಗಗಳಿಲ್ಲದೇ ಇತ್ತ ಸ್ವ ಗ್ರಾಮಗಳನ್ನು ತಲುಪಲಾಗದೇ, ಅಲ್ಲಿನ ಸರಕಾರಗಳು ಮತ್ತು ದಾನಿಗಳ ಕೃಪಕಟಾಕ್ಷದಲ್ಲಿ ಸಂಕಷ್ಠದ ಜೀವನ ಸಾಗಿಸುವಂತಾಗಿದೆ. ನಡೆದಾದರೂ ಅವರು ಸ್ವ ಗ್ರಾಮಗಳಿಗೆ ಬರಬೇಕೆಂದರೂ ಸಾಧ್ಯವಾಗುತ್ತಿಲ್ಲ. ಇವರಲ್ಲಿ ಬಹುತೇಕರು, ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡಕ್ಕೆ ಮತ್ತು ಹಿಂದುಳಿದ ಸಮುದಾಯಗಳ ಬಡವರಾಗಿದ್ದಾರೆ. ಮಾಹಿತಿಯಂತೆ ಮಹಾರಾಷ್ಟ್ರ ರಾಜ್ಯ ಒಂದರಲ್ಲಿಯೇ ಸುಮಾರು 50,000 ದಷ್ಠು ಉತ್ತರ ಕರ್ನಾಟಕದ ಜನರಿದ್ದಾರೆನ್ನಲಾಗಿದೆ. ಈಗ ಪುನಃ ಲಾಕ್ಡೌನ್ ಅವಧಿ ಮರಳಿ ವಿಸ್ಥರಿಸಲಾಗಿದೆ. ಮುಂದೆ ಮತ್ತಷ್ಠು ವಿಸ್ಥರಣೆಯಾಗುವ ಸಂಭವಿಸಿದೆ. ಆದ್ದರಿಂದ, ಸದರಿ ಬಡ ಕಾರ್ಮಿಕರು, ರಾಜ್ಯದ ಅವರ ಸ್ವ ಗ್ರಾಮಗಳಿಗೆ ತಲುಪಲು ಅಗತ್ಯ ಕ್ರಮವಹಿಸಲು ವಿನಂತಿ.

ಸಂಬಂಧಿತ ರಾಜ್ಯಗಳು ಮತ್ತು ಕೇಂದ್ರ ಸರಕಾರದ ನೆರವು ಪಡೆಯುವುದು, ವಿಶೇಷ ರೈಲುಗಳು, ರಸ್ತೆ ಸಾರಿಗೆ ವ್ಯವಸ್ಥೆಗೆ ಕ್ರಮ ವಹಿಸುವುದು ಮತ್ತು ಪ್ರಯಾಣ ಸಂದರ್ಭದ ಅಹಾರ, ಕುಡಿಯುವ ನೀರು ಮತ್ತಿತರೇ ವೆಚ್ಚ ಭರಿಸಲು ಕ್ರಮ ವಹಿಸುವುದು ಆಗ ಬೇಕಾಗಿದೆ. ಅದ್ದರಿಂದ ಸದರಿ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲು  ಸಿಪಿಐಎಂ ರಾಜ್ಯ ಸಮಿತಿಯಿಂದ ಮನವಿ ಮಾಡುವೆವು.

ಯು. ಬಸವರಾಜ, ಕಾರ್ಯದರ್ಶಿ

Leave a Reply

Your email address will not be published. Required fields are marked *