ಇದೆಂತಹ ಪ್ಯಾಕೇಜ್ ? ಹಸಿದಿರುವ ಜನಗಳಿಗೆ ಆದ್ಯತೆಯಿಲ್ಲ!

ಹೋರಾಟದ ಮುಂಚೂಣಿಯಲ್ಲಿರುವ ರಾಜ್ಯಗಳಿಗೂ ಇಲ್ಲ!- ಯೆಚುರಿ

ಪ್ರಧಾನ ಮಂತ್ರಿಗಳು ಮೇ 12ರಂದು ತಮ್ಮ  ರಾತ್ರಿ 8ರ ಭಾಷಣದಲ್ಲಿ ಪ್ರಕಟಿಸುವುದಾಗಿ ಹೇಳಿದ 20ಲಕ್ಷ ಕೋಟಿರೂ.ಗಳ ಪ್ಯಾಕೇಜಿನ ವಿವರಗಳನ್ನು ಮೇ 13ರಂದು ಹಣಕಾಸು ಮಂತ್ರಿಗಳು ಪ್ರಕಟಿಸಿದ್ದಾರೆ. ಆದರೆ ಇದರಲ್ಲಿ ಸರಕಾರದ ಕಡೆಯಿಂದ ಹೊಸ ವೆಚ್ಚಗಳ ಮಾತೇನೂ ಇಲ್ಲ. ಇದರಲ್ಲಿರುವುದು ಅರ್ಥ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದ ಹಣ ಓಡಾಡುವಂತೆ ಮಾಡುವ, ಹಾಗೂ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆ(ಎಂಎಸ್‍ಎಂಇ)ಗಳಿಗೆ , ಬ್ಯಾಂಕಿಂಗೇತರ ಹಣಕಾಸು ಕಂಪನಿ(ಎನ್‍ಬಿಎಫ್‍ಸಿ)ಗಳಿಗೆ  ಮತ್ತು ವಿದ್ಯುತ್  ವಿತರಣಾ ಕಂಪನಿಗಳಿಗ ಸಾಲ ಗ್ಯಾರಂಟಿಗಳು ಮಾತ್ರ. ಜನಸಾಮಾನ್ಯರಿಗೆ, ಅದರಲ್ಲೂ ಉದ್ಯೋಗ ಕಳಕೊಂಡು ಕಳೆದ ಒಂದೂವರೆ ತಿಂಗಳಿಂದ ಆದಾಯವಿಲ್ಲದೆ ಕಂಗಾಲಾಗಿರುವ ಕೋಟಿಗಟ್ಟಲೆ ಬಡಜನಗಳಿಗೆ ಇಂದು ಕೊಟ್ಟ ವಿವರಗಳಲ್ಲಿ ಯಾವುದೇ ಪರಿಹಾರದ ಚಕಾರವಿಲ್ಲ. ಇನ್ನೂ ಕೆಲವು ದಿನಗಳ ವರೆಗೆ ಹಣಕಾಸು ಮಂತ್ರಿಗಳು  ಈ ವಿವರಗಳನ್ನು ಕೊಡುತ್ತ ಹೋಗುತ್ತಾರೆ ಎನ್ನಲಾಗಿದೆ.

lockdown 1 to 4ಎಂಎಸ್‍ಎಂಇಗಳಿಗೆ ಉತ್ತೇಜನೆಯ ಕ್ರಮಗಳು ಅಗತ್ಯ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ  ಈ ಸರಕಾರದ ಆದ್ಯತೆಗಳೇನಾದರೂ ಏನು? ತುರ್ತಾಗಿ ಮತ್ತು ತಕ್ಷಣವೇ ನೆರವಿನ ಅಗತ್ಯವಿರುವ ಲಕ್ಷಾಂತರ ಜನಗಳು ಹೊಟ್ಟೆಗಿಲ್ಲದೆ ರಸ್ತೆಯಲ್ಲಿದ್ದಾರೆ, ಈ ಹೊತ್ತಿನ ಅನ್ನ ಎಲ್ಲಿಂದ ಬರುತ್ತದೆ ಎಂದು ನೋಡುತ್ತಿದ್ದಾರೆ. ಆದರೂ ಈ 20 ಲಕ್ಷ ಕೋಟಿ ಪ್ಯಾಕೇಜಿನಲ್ಲಿ ಅವರಿಗೇನಾದರೂ ಇದ್ದರೆ ಅದನ್ನೇ ಮೊದಲು ಏಕೆ ಪ್ರಕಟಿಸಿಲ್ಲ?

ಇದು ಕೋಟ್ಯಂತರ ಜನಗಳ  ಅಸ್ತಿತ್ವದ ಬಗ್ಗೆಯೇ ಸಂಪೂರ್ಣ ಸಂವೇದನಾಹೀನತೆ, ಈ ಪ್ಯಾಕೇಜ್ ‍ಎನ್ನು ವುದು ಒಂದು ಪ್ರಹಸನ ಎಂದು ಈ ಬಗ್ಗೆ ಟಿಪ್ಪಣಿ ಮಾಡುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾ ಯೆಚುರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಪ್ರಜಾಪ್ರಭುತ್ವ ಸರಕಾರದ ಧೋರಣೆಗಳಲ್ಲಿ ಜನತೆಗೇ ಆದ್ಯತ ಸಿಗಬೇಕು. ಅದೂ ಅವರು ಸಂಕಟಪಡುತ್ತಿರುವಾಗ. ಏಕೆಂದರೆ ಅವರು ಆರೋಗ್ಯವಂತರಾಗಿದ್ದರೇ ಅರ್ಥವ್ಯವಸ್ಥೆ ಉತ್ತಮಗೊಳ್ಳಲು ಸಾಧ್ಯ. ಮೊದಲು ನೆರವು ಬೇಕಾಗಿರುವುದು ಅವರಿಗೇ. ನಮ್ಮ ಅರ್ಥ ವ್ಯವಸ್ಥಯ ಬೆನ್ನೆಲುಬಾದ ಶ್ರಮಿಕರನ್ನು ಉಪವಾಸ ಬಿಡುವುದು, ಹತಾಶಗೊಳಸುವುದು ಸಲ್ಲದು ಎನ್ನುತ್ತ ಯೆಚುರಿ  ಈ ಪ್ಯಾಕೇಜ್ ಅತ್ಯಂತ ಅಗತ್ಯವಾಗಿರುವ ಉತ್ತೇಜನೆಯನ್ನೂ ಕೊಡುವುದಿಲ್ಲ, ಜೀವಗಳನ್ನು ಕಾಪಾಡುವುದೂ ಇಲ್ಲ  ಎಂದಿದ್ದಾರೆ. ಬೇಡಿಕೆಯೇ ಇಲ್ಲದಿದ್ದರೆ ಪೂರೈಕೆ ಯಾರಿಗಾಗಿ?

ನಾವೀಗ ಮೋದಿ ಸರಕಾರದಿಂದ  ರಾಜಕೀಯದ ಒಂದು ಅತ್ಯಂತ ಕ್ಷುದ್ರ ರೂಪವನ್ನು ಕಾಣುತ್ತಿದ್ದೇವೆ. ಈ ಮಹಾಮಾರಿಯ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಸರಕಾರಗಳು ಹಣದ ನೆರವು ಕೇಳುತ್ತಿದ್ದಾರೆ. ಅವರಿಗೂ ಇದುವರೆಗೆ ಏನೂ ಇಲ್ಲ. ಅವರಿಗೆ ನ್ಯಾಯಬದ್ಧವಾಗಿ ಕೊಡಬೇಕಾದ ಬಾಕಿ ಹಣದ ಬಗ್ಗೆಯೂ ಆದ್ಯತೆಯಿಲ್ಲ.

corona yatra -atmanirbhar ho
ನಿಮ್ಮ ‘ಯಾತ್ರೆ’ ಸ್ವಾವಲಂಬಿಯಾಗಿರಲಿ!

ಎಂತಹ ಪ್ಯಾಕೇಜನ್ನು ಮೋದಿ ಸರಕಾರ ಮುಂದಿಡುತ್ತಿದೆ! ಜನಗಳದ್ದೇ ಹಣವನ್ನು ಹೊಸ ಪೊಟ್ಟಣ ಕಟ್ಟಿ ಬಾಕಿ ಪಾವತಿ , ಉತ್ತೇಜನೆ ಎಂದು ಕೋಡುತ್ತಿದೆ. ಜನಗಳ ಉಳಿತಾಯಗಳು ಮತ್ತು ಆದಾಯ ತೆರಿಗೆ ಹೆಚ್ಚುವರಿ ಪಾವತಿಗಳನ್ನು ಹಿಂದಿರುಗಿಸುವುದೇ ಉತ್ತೇಜನೆ ಎಂದೆನಿಸಿಕೊಂಡಿದೆ.

ಇಂತಹ ಟೊಳ್ಳು ಮಾತುಗಳಿಂದ ಜನಗಳ ಹಸಿದ ಹೊಟ್ಟೆ ತುಂಬುವುದಿಲ್ಲ. ಇದು ಭಾರತದ ಜನತೆಯೊಂದಿಗೆ ಮಾಢುತ್ತಿರುವ ಮೋಸವೇ ಆಗಿದೆ. ಮೋದಿ ಸರಕಾರ ಬಡವರು, ರೈತರು ಮತ್ತು ಕಾರ್ಮಿಕರ ಬಗ್ಗೆ ಇಷ್ಟೊಂದು ನಿರ್ಮಮತೆಯಿಂದ ವರ್ತಿಸುತ್ತಿರುವುದು ಅತ್ಯಂತ ಅನಪೇಕ್ಷಿತ ಮತ್ತು ಅಸಹನೀಯ.  ಮಾತುಗಳು ಮತ್ತು ಅಂಕಿ-ಅಂಶಗಳ ಮಾಯಾಜಾಲವನ್ನು ಹೆಣೆದು ಜನಗಳನ್ನು ಮೂರ್ಖರಾಗಿಸುವ ಪ್ರಯತ್ನ ನಡೆದಿದೆ. ಇದೇ ಅವರ ನಿಜವಾದ ‘ಚಾಲ್‍, ಚೆಹರಾ, ಚರಿತ್ರ್‍, ಚಿಂತನ್‍’’ (ಮುಖ, ನಡೆ, ಚಾರಿತ್ರ್ಯ ಮತ್ತು ಚಿಂತನೆ) ಎಂದು ವ್ಯಂಗ್ಯವಾಡುತ್ತ ಯೆಚುರಿಯವರು ಸರಕಾರ ತಕ್ಷಣವೇ  ಎಲ್ಲ ಕುಟುಂಬಗಳಿಗೆ ತಿಂಗಳಿಗೆ 7500 ರೂ. ಕೊಡುವುದನ್ನು ಆರಂಭಿಸಬೇಕು ಎಂದು ಮತ್ತೊಮ್ಮೆ ಒತ್ತಾಯಿಸಿದ್ದಾರೆ.

corona speech-learn to live with
ಇಂತಹ ಭಾಷಣಗಳನ್ನು ಸಹಿಸುವುದನ್ನು ಕಲಿಯಬೇಕು!

Leave a Reply

Your email address will not be published. Required fields are marked *