ಕಾಮ್ರೇಡ್ ಕೆ.ವರದರಾಜನ್- ಸಿಪಿಐ(ಎಂ) ಪೊಲಿಟ್‍ ಬ್ಯುರೊ ಶ್ರದ್ಧಾಂಜಲಿ

k-varadarajan-photoಸಿಪಿಐ(ಎಂ) ಕೇಂದ್ರ ಸಮಿತಿಯ ವಿಶೇಷ ಆಹ್ವಾನಿತರು, ಮಾಜಿ ಪೊಲಿಟ್‍ ಬ್ಯುರೊ ಸದಸ್ಯರಾಗಿದ್ದ ಕಾಂ.ಕೆ.ವರದರಾಜನ್‍  ರವರ ನಿಧನಕ್ಕೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಳವಾದ ದುಃಖ ಮತ್ತು ಆಘಾತವನ್ನು ವ್ಯಕ್ತಪಡಿಸಿದೆ. ಅವರು ಮೇ16 ಅಪರಾಹ್ನ ತಮಿಳುನಾಡಿನ ಕರೂರಿನಲ್ಲಿ ಉಸಿರಾಟದ ಸಮಸ್ಯೆಯಿಂದಾಗಿ ನಿಧನರಾದರು. ಅವರು ಕರೂರಿನಲ್ಲಿದ್ದ ತಮ್ಮ ಮಗನ ಮನೆಗೆ ಹೋಗಿದ್ದರು, ಲಾಕ್‍ಡೌನಿನಿಂದಾಗಿ ಅಲ್ಲಿಯೇ ಉಳಿದಿದ್ದರು. ಅವರಿಗೆ 73 ವರ್ಷವಾಗಿತ್ತು.

ಮಧ್ಯಮ ವರ್ಗದಲ್ಲಿ ಜನಿಸಿದ, ಒಬ್ಬ ಸಿವಿಲ್‍ ಇಂಜಿನಿಯರ್‍ ಆಗಿ ತರಬೇತಿ ಪಡೆದ ಅವರು 1970ರಲ್ಲಿ ಸಿಪಿಐ(ಎಂ) ಸೇರಿದರು. 1978ರಲ್ಲಿ ಅವರು ತಮಿಳುನಾಡು ಸಿಪಿಐ(ಎಂ) ರಾಜ್ಯ ಸಮಿತಿಯ ಸದಸ್ಯರಾದರು ಮತ್ತು 1986ರಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯರಾದರು. 1998ರಲ್ಲಿ ಅವರು ಕೇಂದ್ರ ಸಮಿತಿಗೆ ಮತ್ತು 2002ರಲ್ಲಿ ಕೇಂದ್ರ ಕಾರ್ಯದರ್ಶಿ ಮಂಡಳಿಗೆ ಆಯ್ಕೆಯಾದರು. 2005ರಲ್ಲಿ ಪಕ್ಷದ 18ನೇ ಮಹಾಧಿವೇಶನದಲ್ಲಿ ಪೊಲಿಟ್‍ ಬ್ಯುರೊಗೆ ಚುನಾಯಿತರಾದರು. ಅವರು 2002ರಿಂದ 2015ರ ವರೆಗೆ ಪಕ್ಷದ ಕೇಂದ್ರದಲ್ಲಿ ಕೇಂದ್ರ ಕಾರ್ಯದರ್ಶಿ ಮಂಡಳಿಯ ಸದಸ್ಯರಾಗಿ ಮತ್ತು ಪೊಲಿಟ್‍ ಬ್ಯುರೊ ಸದಸ್ಯರಾಗಿ ಕಾರ್ಯನಿರ್ವಹಿಸಿದರು.

ಕಿಸಾನ್‍ ಸಭಾದಲ್ಲಿ ಕೆಲಸ ಮಾಡುತ್ತಿದ್ದ ಅವರು 1986ರಲ್ಲಿ ಅಖಿಲ ಭಾರತ ಕಿಸಾನ್‍ ಸಭಾದ ತಮಿಳುನಾಡು ಘಟಕದ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಮುಂದೆ ಅದರ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾದರು.  ಪ್ರಸಕ್ತ ಅವರು ಎಐಕೆಎಸ್‍ನ ನ ಉಪಾಧ್ಯಕ್ಷರಾಗಿದ್ದರು.

ಕಾಮ್ರೇಡ್‍ ವರದರಾಜನ್ ತುರ್ತು ಪರಿಸ್ಥಿತಿಯಲ್ಲಿ ಎರಡು ವರ್ಷ ಭೂಗತರಾಗಿದ್ದರು, ಬಂಧಿಸಲ್ಪಟ್ಟು ಜೈಲುವಾಸವನ್ನೂ ಅನುಭವಿಸಿದರು.

ಅವರೊಬ್ಬ ವಿನಯಶೀಲ ಸಂಗಾತಿಯಾಗಿದ್ದರು, ಸರಳ ಸ್ವಬಾವದವರು ಮತ್ತು ಅವರ ಆವಶ್ಯಕತೆಗಳು ಮಿತವಾಗಿದ್ದವು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಅವರ ನೆನಪಿಗೆ ಶ್ರದ್ಧಾಂಜಲಿ ಅರ್ಪಿಸಿದೆ, ಮತ್ತು ಅವರ ಮಗಳು, ಮಗ ಹಾಗೂ ಕುಟುಂಬಕ್ಕೆ ಹಾರ್ದಿಕ ಸಂತಾಪಗಳನ್ನು ಕಳಿಸಿದೆ.

Leave a Reply

Your email address will not be published. Required fields are marked *