ಡಿ.ಜಿ.ಹಳ್ಳಿ ,ಕೆ.ಜಿ.ಹಳ್ಳಿ ಮತ್ತು ಕಾವಲ್ ಭೈರಸಂಧ್ರ ಗಲಭೆ ಪೀಡಿತ ಪ್ರದೇಶಗಳಿಗೆ ಸಿಪಿಐ ( ಎಂ) ನಿಯೋಗ ಬೇಟಿ

ಬೆಂಗಳೂರು, ಆಗಸ್ಟ್ 14: ಕಳೆದ ಮಂಗಳವಾರ (11ನೇ ಆಗಸ್ಟ್) ರಾತ್ರಿ ಉದ್ರಿಕ್ತ ಗುಂಪುಗಳು, ಅಂದರೆ, ಈಗಾಗಲೇ ಸುದ್ದಿಯಾಗಿರುವಂತೆ ಎಸ್ ಡಿ ಪಿ ಐ ಮತ್ತು ಪಿಎಪ್ಐ ಯ ಗುಂಪುಗಳು ಡಿ.ಜಿ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಬರುವ ಎರಡು ಪೊಲೀಸ್ ಠಾಣೆಗಳಿಗೆ ನುಗ್ಗಿ ಮಾರಮುರಿ ಹಲ್ಲೆ ಮಾಡಿದ್ದಾರೆ. ಬೆಂಕಿ ಹಚ್ಚಿ ಹಿಂಸಾತ್ಮಕ ಕೃತ್ಯಗಳನ್ನು ಎಸೆದಿದ್ದಾರೆ. ಠಾಣೆಯ ಒಳಗಿರುವ ಉಪಕರಣಗಳು ಬೆಂಕಿಯಿಂದ ಸುಟ್ಟು ಕರಕಲಾಗಿವೆ. ಪೊಲೀಸ್ ಠಾಣೆಯ ಅಕ್ಕ ಪಕ್ಕದ ರಸ್ತೆಗಳ ಬದಿಯಲ್ಲಿ ಪಾರ್ಕಿಂಗ್ ಮಾಡಿದ್ದ ಅನೇಕ ವಾಹನಗಳಿಗು ಬೆಂಕಿ ಹಚ್ಚಲಾಗಿ ನಾಶಗೊಳಿಸಲಾಗಿದೆ. ನಾಶಗೊಂಡಿರುವ ವಾಹನಗಳು ರಸ್ತೆಯ ಅಕ್ಕ ಪಕ್ಕದಲ್ಲಿ ಕರಕಲಾಗಿ ಬಿದ್ದಿರುವ ದೃಶ್ಯ ಗಳು ಹಿಂಸಾತ್ಮಕ ಹಲ್ಲೆಯ ಸ್ವರೂಪ ವನ್ನು ಬಹಿರಂಗ ಪಡಿಸುತ್ತದೆ. ಕಾರುಗಳು, ಬಸ್ಸುಗಳು ದ್ವಿಚಕ್ರ ವಾಹನ ಗಳು ಸುಟ್ಟು ನಾಶಹೊಂದಿವೆ.

ಈ  ಗಲಭೆಗೆ ತುತ್ತಾಗಿರುವ ಪ್ರದೇಶ ಗಳು ನಗರದ ಪೂರ್ವವಲಯದ ನಡು ಹೃದಯ ಭಾಗದಲ್ಲಿರುವ ‘ ಪುಲಕೇಶಿ ನಗರ’ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿವೆ. ಹಾಗಾಗಿ, ಆ ಕ್ಷೇತ್ರದ ಹಾಲಿ ಶಾಸಕರಾದ  ಮಾನ್ಯ ಅಖಂಡ ಶ್ರೀನಿವಾಸ ಮೂರ್ತಿಯವರ  ಕೆಜಿ ಹಳ್ಳಿ ಮತ್ತು ಕಾವಲ್ ಭೈರ ಸಂಧ್ರದಲ್ಲಿರುವ ಅವರ ಕಚೇರಿ ಮತ್ತು ಮನೆಯ ಮೇಲೆಯೂ, ಉದ್ರಿಕ್ತ ಗುಂಪು ದಾಳಿ ನಡೆಸಿದೆ. ಕಚೇರಿ ಮತ್ತು ಮನೆಗೆ ನುಗ್ಗಿ  ಬೆಂಕಿ ಹಚ್ಚಿ, ಮನೆಯೊಳಗಿರುವ ಉಪಕರಣಗಳನ್ನು ಧ್ವಂಶಗೊಳಿಸಲಾಗಿದೆ. ಭಾರಿ ಅನಾಹುತ ಉಂಟಾಗಿದೆ. ಶಾಸಕರ ಸಹೋದರ, ಸಹೋದರಿ ಮನೆಯ ಮೇಲೂ, ದಾಳಿ ನಡೆಸಲಾಗಿದೆ.

ಈ ಗಲಭೆ, ದೊಂಬಿ ಮತ್ತು ಪೊಲೀಸರ ಗುಂಡಿಗೆ ಈಗಾಗಲೇ, ಮೂರು ಜನರು ಕೊಲ್ಲಲ್ಪಟ್ಟಿದ್ದಾರೆ. ಗಲಬೆಗೆ ಕಾರಣಕರ್ತರು ಎಷ್ಟೇ ಪ್ರಭಾವಿತರಾಗಿ ದ್ದರು, ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನು ರೀತ್ಯಾ ಶಿಕ್ಷೆಗೆ ಒಳ ಪಡಿಸಬೇಕು ಎಂದು ಸಿಪಿಐ(ಎಂ), ಆಗ್ರಹ ಪಡಿಸುತ್ತದೆ.

ಸಿಪಿಐ(ಎಂ), ನಿಯೋಗದಲ್ಲಿ, ಪಕ್ಷದ ರಾಜ್ಯ ಸಮಿತಿಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ, ಸಂಗಾತಿ ಎಸ್.ವರಲಕ್ಷ್ಮಿ ಯವರ ನೇತೃತ್ವದಲ್ಲಿ, ಬೆಂಗಳೂರು ಎರಡು ಜಿಲ್ಲೆಯ ಕಾರ್ಯದರ್ಶಿ ಗಳಾದ, ಕೆ.ಎನ್.ಉಮೇಶ್, ಎನ್ ಪ್ರತಾಪ್‌ ಸಿಂಹ, ಪೂರ್ವ ವಲಯ ಸಮಿತಿಯ ಕಾರ್ಯದರ್ಶಿಯಾದ, ನಾಗರಾಜ ನಂಜುಂಡಯ್ಯ, ಸದಸ್ಯರಾದ ಸಿ.ರಮೇಶ್, ಎಂ.ನಂಜೇಗೌಡ, ಮುನಿಕೃಷ್ಣ, ಜಿ. ವೆಂಕಟೇಶ್ ಹಾಗೂ ಆರ್.ಟಿ.ನಗರ ಪಕ್ಷದ ಶಾಖೆಯ ಶಿವಕುಮಾರ್, ಉತ್ತರ ಜಿಲ್ಲಾ ಸಮಿತಿಯ ವತಿಯಿಂದ, ಕಾ. ಹವಲ್ದಾರ್, ಗೋಪಾಲ ಗೌಡ, ಗೌರಮ್ಮನವರು ನಿಯೋಗದಲ್ಲಿದ್ದರು.

Leave a Reply

Your email address will not be published. Required fields are marked *