ಕೇಂದ್ರ ಸರಕಾರ ರಾಜ್ಯಗಳಿಗೆ ಜಿಎಸ್‍ಟಿ ಬಾಕಿಯನ್ನು ತೆರಲೇಬೇಕು

ನಿಮ್ಮ ಅಸಮರ್ಥತೆಗೆ “ದೈವಿಕ ಮಧ್ಯಪ್ರವೇಶ”ವನ್ನು ದೂಷಿಸಬೇಡಿ: ಸಿಪಿಐ(ಎಂ) ಪೊಲಿಟ್‍ಬ್ಯುರೊ

ಕೇಂದ್ರ ಹಣಕಾಸು ಮಂತ್ರಿಗಳು ಆಗಸ್ಟ್ 27ರಂದು ಜಿಎಸ್‍ಟಿ ಮಂಡಳಿ ಸಭೆಯಲ್ಲಿ ರಾಜ್ಯ ಸರಕಾರಗಳಿಗೆ ಹಣಕಾಸು ವರ್ಷ 2020-21ರಲ್ಲಿ ಸಲ್ಲಬೇಕಾದ ಜಿಎಸ್‍ಟಿ ಪಾಲನ್ನು ಕೊಡಲು ಕೇಂದ್ರ ಸರಕಾರ ಅಸಮರ್ಥವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಇದು ಕಡು ಕ್ರೌರ್ಯದ ಮಾತು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ರಾಜ್ಯಗಳಿಗೆ ಜಿಎಸ್‍ಟಿ ಆದಾಯದಲ್ಲಿನ ಕೊರತೆ 2.35 ಲಕ್ಷ ಕೋಟಿ ರೂ.ಗಳ ಒಂದು ಬೃಹತ್‍ ಮೊತ್ತ ಎಂದು ಅಂದಾಜು ಮಾಡಲಾಗಿದೆ. ಈ ಕಂದರವನ್ನು ಮುಚ್ಚಲು ರಿಝರ್ವ್ ಬ್ಯಾಂಕಿನಿಂದ ಸಾಲ ತಗೊಳ್ಳಿ ಎಂದು ರಾಜ್ಯಗಳಿಗೆ ಹೇಳುವುದು ಅಸಹ್ಯಕರ ಮಾತು. ಕೇಂದ್ರ ಸರಕಾರ ಕಾನೂನು ಪ್ರಕಾರ ಜಿಎಸ್‍ಟಿ ಬಾಕಿಗಳನ್ನು ತೆರಲು ಬಾಧ್ಯವಾಗಿದೆ. ಅಗತ್ಯ ಬಿದ್ದರೆ, ಕೇಂದ್ರ ಸರಕಾರ ಸಾಲ ತಂದು ರಾಜ್ಯಗಳಿಗೆ ಅವುಗಳ ಬಾಕಿಯನ್ನು ತೆರಬೇಕು, ರಾಜ್ಯ ಸರಕಾರಗಳು ಸಾಲ ಮಾಡಬೇಕು ಎಂದು ಅದು ಬಲವಂತ ಮಾಡಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

gst & god's actಕೊವಿಡ್‍ ಮೊದಲೇ ಭಾರತೀಯ ಅರ್ಥವ್ಯವಸ್ಥೆಯನ್ನು ಹಿಂಜರಿತದತ್ತ ಧುಮುಕಿಸಿರುವ  ಕೇಂದ್ರ ಸರಕಾರ ಈಗ ತನ್ನ ಬಾಧ್ಯತೆಯನ್ನು ಈಡೇರಿಸಲು ಅಸಮರ್ಥವಾಗಿರುವುದಕ್ಕೆ ಯಾವುದೋ ‘ದೈವಿಕ ಮಧ್ಯಪ್ರವೇಶ’ವನ್ನು ದೂಷಿಸುತ್ತಿದೆ. ಇದನ್ನು ಖಂಡಿತಾ ಒಪ್ಪಲಾಗದು. ಇದು ಸಂಪೂರ್ಣವಾಗಿ ಆಕ್ರೋಶಕಾರಿ ಮತ್ತು ದಾರಿ ತಪ್ಪಿಸುವ ಮಾತು. ಕೇಂದ್ರ ಸರಕಾರ ರಾಜ್ಯಗಳಿಗೆ ತನ್ನ ಕಾನೂನುಬದ್ಧ ಬಾಧ್ಯತೆಗಳನ್ನು ಈಡೇರಿಸಲೇಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ದೃಢವಾಗಿ ಹೇಳಿದೆ.

ದೈವವನ್ನು ದೂರಿದೆಂತೊಡೆ?

‘ಸಹಕಾರಿ ಒಕ್ಕೂಟ ತತ್ವ’ ಎಲ್ಲಿಗೆ ಹೋಯಿತು?’ ಎಂದು ಈ ಬಗ್ಗೆ ಟಿಪ್ಪಣಿ ಮಾಡುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಟಿಪ್ಪಣಿ ಹೇಳಿದ್ದಾರೆ. ಭಾರತೀಯ ಅರ್ಥವ್ಯವಸ್ಥೆಯನ್ನು ನಾಶಪಡಿಸಿದ ಮೇಲೆ ಈಗ ರಾಜ್ಯಗಳ ಲೂಟಿಗಿಳಿದಿದ್ದಾರೆ. ಇದೀಗ ‘ದೈವಿಕ ಮಧ್ಯಪವೇಶ’ ?

ಬಂಟ ಬಂಡವಾಳಿಗರಿಗೆ ಕೊಡುಗೆಗಳು, ಅಸಮರ್ಥತೆ ಮತ್ತು ನಿರ್ಲಕ್ಷ್ಯದ ಒಂದು  ಕಲಸುಮೇಲೋಗರ  ನಮ್ಮ ಜನಗಳಿಗೆ ಮೋಸ ಮಾಡಿತ್ತು. ಅವರ ಜೀವ-ಜೀವನವನ್ನು ಕೊವಿಡ್‍ ಮೊದಲೇ ನಾಶಗೊಳಿಸಿತ್ತು. ಈಗ ದೈವವನ್ನು ದೂರಿ ಫಲವಿಲ್ಲ ಎಂದು ಯೆಚುರಿ ಹೇಳಿದ್ದಾರೆ.

Leave a Reply

Your email address will not be published. Required fields are marked *