ವಿಶೇಷ ಮಹಾಧಿವೇಶನ 1958: ಚುನಾವಣಾ ವಿಜಯಗಳು ಹಾಗೂ ತೀವ್ರ ವಾಗ್ವಾದಗಳ ಹಿನ್ನೆಲೆಯಲ್ಲಿ

೧೯೫೭ರಲ್ಲಿ, ಕಮ್ಯುಸ್ಟ್ ಪಕ್ಷವು ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗಳಿಸಿದ ಮತಗಳಿಗಿಂತ ಎರಡು ಪಟ್ಟು ಹೆಚ್ಚು ಮತಗಳನ್ನು ಗಳಿಸಿತು ಮತ್ತು ಗೆದ್ದ ಸ್ಥಾನಗಳು ಹಾಗೂ ಗಳಿಸಿದ ಮತಗಳು ಎರಡರಲ್ಲೂ ಪಕ್ಷವು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಹಲವಾರು ರಾಜಕೀಯ, ಸೈದ್ಧಾಂತಿಕ ಹಾಗೂ ಸಂಘಟನಾತ್ಮಕ ಸಮಸ್ಯೆಗಳನ್ನು ಚರ್ಚೆ ಮಾಡಲು ಪ್ಲೀನಂ ನಡೆಸಬೇಕೆಂದು ಕೇಂದ್ರ ಸಮಿತಿಯು ಮಾಡಿದ್ದ ತೀರ್ಮಾನವನ್ನು ಸಾರ್ವತ್ರಿಕ ಚುನಾವಣೆಗಳ ಕಾರಣದಿಂದಾಗಿ ನಡೆಸಲಾಗಲಿಲ್ಲ. ಪ್ಲೀನಂನ ಬದಲು ಚುನಾವಣೆಯಾದ ಕೂಡಲೇ ಪಕ್ಷದ ಒಂದು ವಿಶೇಷ ಮಹಾಧಿವೇಶನ, ಪಕ್ಷದ ಐದನೇ ಮಹಾಧಿವೇಶನವನ್ನು ೧೯೫೮ ಏಪ್ರಿಲ್ ೬ ರಿಂದ ೧೩ರವರೆಗೆ ಅಮೃತಸರದಲ್ಲಿ ನಡೆಸಲಾಯಿತು. ರಾಜಕೀಯ ನಿರ್ಣಯ ಹಾಗೂ ಸಂಘಟನಾತ್ಮಕ ವರದಿಗಳನ್ನು ಚರ್ಚೆ ಮಾಡಿ ಅಂಗೀಕರಿಸುವುದರ ಜತೆಯಲ್ಲೇ, ಆ ವಿಶೇಷ ಮಹಾಧಿವೇಶನವು ಪಕ್ಷದ ಸಂವಿಧಾನವನ್ನು ಚರ್ಚೆ ಮಾಡಿ ಅಂಗೀಕರಿಸಿತು. ಪರಿಷ್ಕರಣವಾದ ಮತ್ತು ಪಂಥವಾದದ ವಿರುದ್ಧ ಹೋರಾಡುವ ಆಶಯದ ಹೊರತಾಗಿಯೂ, ಈ ಸಂವಿಧಾನದಲ್ಲಿ ಪಕ್ಷದ ಕೆಲವು ವಿಭಾಗಗಳಲ್ಲಿ ಇದ್ದ ಇವೇ ಪ್ರವೃತ್ತಿಗಳ ಒಂದು ಪ್ರತಿಫಲನವಿತ್ತು. ಇದು ಪಕ್ಷದೊಳಕ್ಕೆ, ವಿಶೇಷವಾಗಿ ೧೯೫೭ರ ಚುನಾವಣಾ ಫಲಿತಾಂಶಗಳ ನಂತರ, ಸಂಸದೀಯ ಭ್ರಮೆ ಹರಿದು ಬಂದಿದ್ದನ್ನು ಪ್ರಕಟಪಡಿಸಿತು.

Communist100 File copy
ಶತಮಾನೋತ್ಸವ ಲೇಖನಮಾಲೆ-41

ಮೂಲಭೂತ ಸೈದ್ಧಾಂತಿಕ ಪ್ರಶ್ನೆಗಳ ಮೇಲೆ ಪಕ್ಷದ ಒಳಗಡೆ ಕ್ರಮೇಣ ತೀವ್ರವಾದ ವಾಗ್ವಾದಗಳು ನಡೆದ ಅವಧಿಗಳಲ್ಲಿ ೧೯೫೭ರ ನಂತರದ ಅವಧಿಯೂ ಒಂದಾಗಿತ್ತು. ಆದಾಗ್ಯೂ, ಪಕ್ಷವು ಆ ಎಲ್ಲಾ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನೂ ಬದಿಗೊತ್ತಿ ೧೯೫೭ರಲ್ಲಿ ನಡೆದ ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಹೋರಾಟದಲ್ಲಿ ಐಕ್ಯತೆಯಿಂದ ಒಟ್ಟುಗೂಡಿತು. ಕೇಂದ್ರದಲ್ಲಿ ಮತ್ತು ಕೇರಳವನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರವನ್ನು ಉಳಿಸಿಕೊಂಡರೂ, ದೇಶದ ರಾಜಕೀಯ ಭೂಪ್ರದೇಶದಲ್ಲಿ ಅಸಾಧಾರಣವಾದ ಬದಲಾವಣೆ ಆಯಿತು.

೧೯೫೭ರಲ್ಲಿ, ಕಮ್ಯುಸ್ಟ್ ಪಕ್ಷವು ಮೊದಲ ಸಾರ್ವತ್ರಿಕ ಚುನಾವಣೆ(೧೯೫೧-೫೨)ಯಲ್ಲಿ ಗಳಿಸಿದ ಮತಗಳಿಗಿಂತ ಎರಡು ಪಟ್ಟು ಹೆಚ್ಚು ಮತಗಳನ್ನು ಗಳಿಸಿತು ಮತ್ತು ಗೆದ್ದ ಸ್ಥಾನಗಳು ಹಾಗೂ ಗಳಿಸಿದ ಮತಗಳು ಎರಡರಲ್ಲೂ ಪಕ್ಷವು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕೇರಳದಲ್ಲಿ ಪಕ್ಷವು ಬಹುಮತ ಗಳಿಸಿದರೆ, ಆಂಧ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿತು. ದೇಶದ ಪ್ರತಿಯೊಂದು ವಿಧಾನಸಭೆಯಲ್ಲೂ ಪಕ್ಷವು ಸ್ಥಾನಗಳನ್ನು ಗೆದ್ದುಕೊಂಡಿತು, ಆದರೆ ಹಿಂದಿನ ಚುನಾವಣೆಯಲ್ಲಿ ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ರಾಜಾಸ್ತಾನದಂತಹ ರಾಜ್ಯಗಳಲ್ಲಿ ಒಂದು ಸ್ಥಾನವನ್ನೂ ಗಳಿಸಿರಲಿಲ್ಲ. ಬಹುತೇಕ ಕೈಗಾರಿಕಾ ಹಾಗೂ ಕಾರ್ಮಿಕ ವರ್ಗದ ಕೇಂದ್ರಗಳಲ್ಲಿ ಪಕ್ಷವು ಉತ್ತಮ ಪ್ರದರ್ಶನ ನೀಡಿತ್ತು. ಏನೇನೂ ಶಕ್ತಿಯಿಲ್ಲದ ರಾಜ್ಯಗಳಲ್ಲಿಯೂ ಕೂಡ ಪಕ್ಷವು ತನ್ನ ಮತವನ್ನು ಗಣಯವಾಗಿ ಹೆಚ್ಚಿಸಿಕೊಂಡಿತ್ತು. ಒಟ್ಟಾರೆಯಾಗಿ, ಒಟ್ಟು ಮತಗಳಲ್ಲಿ ಪಕ್ಷವು ೧೧% ಮತಗಳನ್ನು ಮತ್ತು ೧ ಕೋಟಿ ೨೦ ಲಕ್ಷ ಮತಗಳನ್ನು ಗಳಿಸಿತ್ತು. ಒಟ್ಟು ಮತದಾನವಾದ ಮತಗಳ ಸಂಖ್ಯೆಯ ಅನುಪಾತದಲ್ಲಿ ಲೆಕ್ಕ ಹಾಕಿದ್ದರೆ, ಪಕ್ಷವು ಇನ್ನೂ ಹೆಚ್ಚು ಸ್ಥಾನಗಳನ್ನು ಗಳಿಸಬಹುದಾಗಿತ್ತು.

ಈ ಚುನಾವಣೆಯ ಫಲಿತಾಂಶಗಳನ್ನು ಪುನರಾವಲೋಕನ ಮಾಡಿದ ನಂತರ, ಪಕ್ಷದ ಮೇಲೆ ಜನರು ತೋರಿದ ವಿಶ್ವಾಸಕ್ಕಾಗಿ ಪಕ್ಷವು ಅವರಿಗೆ ಧನ್ಯವಾದಗಳನ್ನು ಸಲ್ಲಿಸಿತು ಮತ್ತು ಅಗತ್ಯವಾಗಿ ಸರಿಪಡಿಸಲೇಬೇಕಾದ ದೌರ್ಬಲ್ಯಗಳನ್ನು ಗುರುತಿಸಿತು. ಪಾಳೇಗಾರಿ ಶಕ್ತಿಗಳು ಪ್ರಾಬಲ್ಯ ಹೊಂದಿರುವ ಮಧ್ಯಪ್ರದೇಶ ಮತ್ತು ರಾಜಾಸ್ತಾನ ರಾಜ್ಯಗಳಲ್ಲಿ ಜನಸಂಘದಂತಹ ಕೋಮುವಾದಿ ಪಕ್ಷಗಳು ತಮ್ಮ ಸ್ಥಾನಗಳನ್ನು ಮತ್ತು ಮತಗಳನ್ನು ಹೆಚ್ಚಿಸಿಕೊಂಡಿರುವುದನ್ನು ಪಕ್ಷವು ಗಮಸಿತು. ಕಮ್ಯುಸ್ಟ್ ಚಳುವಳಿ ಮತ್ತಿತರ ಪ್ರಗತಿಪರ ಹಾಗೂ ಪ್ರಜಾಸತ್ತಾತ್ಮಕ ಶಕ್ತಿಗಳು ದುರ್ಬಲವಾಗಿರುವ ಒರಿಸ್ಸಾದಂತಹ ರಾಜ್ಯಗಳಲ್ಲಿಯೂ ಅವರು ನೆಲೆ ಕಂಡುಕೊಂಡಿದ್ದರು. ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ನಾವು ಸ್ಥಾನ ಗಳಿಸುವಲ್ಲಿ ವಿಫಲರಾಗಿದ್ದೇವೆ ಎಂದು ಕೂಡ ಗಮಸಿದ ಪಕ್ಷವು ಅಂಥಲ್ಲಿ ರೈತರ ನಡುವೆ ಕಿಸಾನ್‌ಸಭಾ ಹಾಗೂ ಪಕ್ಷವನ್ನು ಇನ್ನೂ ಬಲಪಡಿಸಬೇಕೆಂದು ಸೂಚಿಸಿತು.

ಸಾರ್ವತ್ರಿಕ ಚುನಾವಣೆಗಳ ನಂತರದಲ್ಲಿ ಕೂಡಲೇ ಸೇರಿದ ಪಕ್ಷದ ಕೇಂದ್ರ ಸಮಿತಿಯು, ‘ಸಾಮೂಹಿಕ ಪಕ್ಷ’ ಕಟ್ಟುವ ಪ್ರಯತ್ನದೊಂದಿಗೆ ಪಕ್ಷದ ಸದಸ್ಯತ್ವವನ್ನು ಎರಡು ಪಟ್ಟು ಹೆಚ್ಚಿಸಬೇಕೆಂದು ಕರೆ ನೀಡಿತು. ಹಲವಾರು ರಾಜಕೀಯ, ಸೈದ್ಧಾಂತಿಕ ಹಾಗೂ ಸಂಘಟನಾತ್ಮಕ ಸಮಸ್ಯೆಗಳನ್ನು ಚರ್ಚೆ ಮಾಡಲು ಪ್ಲೀನಂ ನಡೆಸಬೇಕೆಂದು ಕೇಂದ್ರ ಸಮಿತಿಯು ಮಾಡಿದ್ದ ತೀರ್ಮಾನವನ್ನು ಸಾರ್ವತ್ರಿಕ ಚುನಾವಣೆಗಳ ಕಾರಣದಿಂದಾಗಿ ನಡೆಸಲಾಗಲಿಲ್ಲ. ಪ್ಲೀನಂನ ಬದಲು ಚುನಾವಣೆಯಾದ ಕೂಡಲೇ ಪಕ್ಷದ ಒಂದು ವಿಶೇಷ ಮಹಾಧಿವೇಶನವನ್ನು ನಡೆಸಬೇಕೆಂದು ತೀರ್ಮಾಸಲಾತು. ಆ ಪ್ರಕಾರವಾಗಿ ಒಂದು ವಿಶೇಷ ಮಹಾಧಿವೇಶನ, ಪಕ್ಷದ ಐದನೇ ಮಹಾಧಿವೇಶನವನ್ನು ೧೯೫೮ ಏಪ್ರಿಲ್ ೬ ರಿಂದ ೧೩ರವರೆಗೆ ಅಮೃತಸರದಲ್ಲಿ ನಡೆಸಲಾಯಿತು.

ರಾಜಕೀಯ ನಿರ್ಣಯ ಹಾಗೂ ಸಂಘಟನಾತ್ಮಕ ವರದಿಗಳನ್ನು ಚರ್ಚೆ ಮಾಡಿ ಅಂಗೀಕರಿಸುವುದರ ಜತೆಯಲ್ಲೇ, ಆ ವಿಶೇಷ ಮಹಾಧಿವೇಶನವು ಪಕ್ಷದ ಸಂವಿಧಾನವನ್ನು ಚರ್ಚೆ ಮಾಡಿ ಅಂಗೀಕರಿಸಿತು. ‘ಕಾರ್ಮಿಕ ವರ್ಗದ ನೇತೃತ್ವದಲ್ಲಿ, ಕಾರ್ಮಿಕ ವರ್ಗ ಮತ್ತು ರೈತಾಪಿಗಳ ಮೈತ್ರಿಯ ಆಧಾರದಲ್ಲಿ ಜನತಾ ಪ್ರಜಾಪ್ರಭುತ್ವವನ್ನು ಸ್ಥಾಪಿಸಬೇಕು, ಮತ್ತು ಸಮಾಜವಾದ ಹಾಗೂ ಸಮತಾವಾದವನ್ನು ಸಾಕಾರಗೊಳಿಸಬೇಕು’ ಎನ್ನುವುದು ಪಕ್ಷದ ಗುರಿಯಾಗಬೇಕು ಎಂದು ಪಕ್ಷದ ಸಂವಿಧಾನದ ಪ್ರಸ್ತಾವನೆಯು ಘೋಷಿಸಿತು. ಮುಂದುವರಿದು, ಕೋಮುವಾದ, ಜಾತಿ, ಅಸ್ಪೃಶ್ಯತೆ ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳ ನಿರಾಕರಣೆಗಳಂತಹ ಅಂಧಶ್ರದ್ಧೆಗಳು ಮತ್ತು ಆಚರಣೆಗಳ ವಿರುದ್ಧ ಪಕ್ಷವು ಹೋರಾಡುತ್ತದೆ ಎಂದೂ ವಿಶದಪಡಿಸಿತು. ಸಮಾಜವಾದಿ ಸಮಾಜದ ಸ್ಥಾಪನೆಗಾಗಿನ ಈ ಹೋರಾಟದಲ್ಲಿ ‘ಪರಿಷ್ಕರಣವಾದ, ಶಾಸ್ತ್ರಾಂಧತೆ ಮತ್ತು ಪಂಥವಾದಗಳ ಪ್ರವೃತ್ತಿಗಳ ಎಲ್ಲ ಪ್ರಕಟರೂಪಗಳ ವಿರುದ್ಧ ಕಾದಾಡುವುದಾಗಿ ಮತ್ತು ಭಾರತೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಮಾರ್ಕ್ಸ್‌ವಾದ-ಲೆನಿನ್‌ವಾದವನ್ನು ಅನ್ವಯಿಸುವ ಮೂಲಕ, ‘ಭಾರತದ ಇತಿಹಾಸ ಮತ್ತು ರಾಷ್ಟ್ರೀಯ ವೈಶಿಷ್ಟ್ಯತೆಗಳು ಹಾಗೂ ಭಾರತೀಯ ಜನರ ಅತ್ಯುತ್ತಮ ಪರಂಪರೆಗಳನ್ನು ಗಣನೆಗೆ ತೆಗೆದುಕೊಂಡು’ ನೀತಿಗಳನ್ನು ಕೂಲಂಕುಷವಾಗಿ ಯೋಜಿಸಲಾಗುವುದು ಎಂದು ಸಂವಿಧಾನವು ಘೋಷಿಸಿತು.

ಪರಿಷ್ಕರಣವಾದ ಮತ್ತು ಪಂಥವಾದದ ವಿರುದ್ಧ ಹೋರಾಡುವ ಆಶಯದ ಹೊರತಾಗಿಯೂ, ಪಕ್ಷದ ಸಂವಿಧಾನದಲ್ಲಿ ಪಕ್ಷದ ಕೆಲವು ವಿಭಾಗಗಳಲ್ಲಿ ಇದ್ದ ಇವೇ ಪ್ರವೃತ್ತಿಗಳ ಒಂದು ಪ್ರತಿಫಲನವಿತ್ತು. ಪಕ್ಷವು ‘ಸಂಸತ್ತಿನಲ್ಲಿ ಬಹುಮತ ಗಳಿಸುವ ಮೂಲಕ ಮತ್ತು ಅದಕ್ಕೆ ಬೆಂಬಲವಾಗಿ ಸಾಮೂಹೀಕ ಕಾರ್ಯಾಚರಣೆಗಳ ಮೂಲಕ .. ಪ್ರತಿಗಾಮಿ ಶಕ್ತಿಗಳ ಪ್ರತಿರೋಧವನ್ನು ಮೀರಿ ನಿಲ್ಲಬಲ್ಲದು, ಮತ್ತು ಸಂಸತ್ತು ಜನತೆಯ ಇಚ್ಛಾಶಕ್ತಿಯ ಒಂದು ಸಾಧನವಾಗುವಂತೆ ಖಾತ್ರಿಪಡಿಸಬಹುದು’ ಮತ್ತು ‘ಆರ್ಥಿಕ, ಸಾಮಾಜಿಕ ಮತ್ತು ಪ್ರಭುತ್ವ ಸಂರಚನೆಯಲ್ಲಿ ಒಂದು ಮೂಲಭೂತ ಬದಲಾವಣೆಯನ್ನು’ ತರಬಲ್ಲದು ಎಂದು ಘೋಷಿಸಿತು. ಇದು ಪಕ್ಷದೊಳಕ್ಕೆ, ವಿಶೇಷವಾಗಿ ೧೯೫೭ರ ಚುನಾವಣಾ ಫಲಿತಾಂಶಗಳ ನಂತರ, ಸಂಸದೀಯ ಭ್ರಮೆ ಹರಿದು ಬಂದಿದ್ದನ್ನು ಪ್ರಕಟಪಡಿಸಿತು.

ಪಕ್ಷದ ಸಂವಿಧಾನದಲ್ಲಿ ಅಳವಡಿಸಿದ ಇನ್ನೊಂದು ಪರಿಷ್ಕರಣವಾದಿ ಸಂಘಟನಾತ್ಮಕ ನೀತಿಗಳ ಪ್ರತಿಫಲನ ಎಂದರೆ, ಸಮಿತಿಗಳನ್ನು ರಚಿಸುವ ರೀತಿಯಲ್ಲಿ ತಂದ ಬದಲಾವಣೆಗಳು. ರಾಷ್ಟ್ರೀಯ ಮಂಡಳಿ, ಕೇಂದ್ರೀಯ ಕಾರ್ಯಕಾರಿ ಸಮಿತಿ ಮತ್ತು ಕಾರ್ಯದರ್ಶಿ ಮಂಡಳಿ ಎಂಬ ಮೂರು ಶ್ರೇಣಿಗಳ ಒಂದು ರಚನೆಯನ್ನು ಆರಂಭಿಸಲಾಯಿತು. ಇದು ಸದಸ್ಯರು ವಿವಿಧ ಹಂತಗಳ ವಿವಿಧ ಸಭೆಗಳ ನಿರ್ಧಾರಗಳ ಜಾರಿಗಿಂತ ಹೆಚ್ಚಾಗಿ ಈ ಸಭೆಗಳಲ್ಲಿ ಭಾಗವಹಿಸುವುದರಲ್ಲೇ ಸಮಯ ಕಳೆಯುವಂತಾಗುತ್ತಿತ್ತು. ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಹೆಸರಿನಲ್ಲಿ ಈ ಸಮಿತಿಗಳಲ್ಲಿ, ರಾಜಕೀಯ ಮತ್ತು ಸೈದ್ಧಾಂತಿಕ ಮಟ್ಟದ ಪರಿವೆಯೆ ಇಲ್ಲದೆ, ವಿವಿಧ ಸಮಿತಿಗಳಲ್ಲಿ ಸದಸ್ಯರ ಸಂಖ್ಯೆಯನ್ನೂ ಹೆಚ್ಚಿಸಲಾಯಿತು. ಕ್ರಾಂತಿಕಾರಿ ಆಂದೋಲನದ ಸ್ವರೂಪ, ಸ್ವಭಾವ ಮತ್ತು ಆಳವನ್ನು ಪರಿಗಣಿಸದೆ, ಪ್ರಾದೇಶಿಕ ಪ್ರತಿನಿಧಿತ್ವ ಮತ್ತು ಸದಸ್ಯತ್ವವನ್ನೇ ಗಮನಕ್ಕೆ ತಗೊಳ್ಳಲಾಯಿತು,  ಹೀಗೆ ಸಂಘಟನಾತ್ಮಕ ಆಚರಣೆಗಳಲ್ಲಿ ಒಂದು ಪರಿಷ್ಕರಣವಾದಿ ತಿಳುವಳಿಕೆ ವ್ಯಕ್ತಗೊಳ್ಳಲಾರಂಭಿಸಿತು.

ಪಕ್ಷದ ಸಂವಿಧಾನ ಸದಸ್ಯರಿಗೆ ೧೨ ಕರ್ತವ್ಯಗಳನ್ನು ವಿಧಿಸಿತು-ಪಕ್ಷದ ಚಟುವಟಿಕೆಗಳಲ್ಲಿ ನಿಯಮಿತವಾಗಿ ಭಾಗವಹಿಸುವುದು, ಮಾರ್ಕ್ಸ್‌ವಾದ-ಲೆನಿನ್‌ವಾದದ ಅಧ್ಯಯನ, ಪಕ್ಷದ ಪತ್ರಿಕೆಗಳನ್ನು ಓದುವುದು ಮತ್ತು ಬೆಂಬಲಿಸುವುದು, ಪಕ್ಷದ ಶಿಸ್ತನ್ನು ಪಾಲಿಸುವುದು, ಜನಸಮೂಹಗಳ ಸೇವೆ, ಪರಸ್ಪರ ಸಂಗಾತಿ ವರ್ತನೆ, ವಿಮರ್ಶೆ ಮತ್ತು ಸ್ವವಿಮರ್ಶೆಯನ್ನು ಪಾಲಿಸುವುದು, ಭಾರತೀಯ ಜನತೆಯ ಸಂಪ್ರದಾಯಗಳು ಮತ್ತು ಅವರ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ತಿಳಿವನ್ನು ಆಳಗೊಳಿಸುವುದು.

ಅದೇ ರೀತಿಯಲ್ಲಿ, ಅದು ಪಕ್ಷದ ಪ್ರತಿಯೊಬ್ಬ ಸದಸ್ಯಗೂ ಏಳು ಹಕ್ಕುಗಳನ್ನು ಖಾತರಿಪಡಿಸಿತು. ಪಕ್ಷದ ಘಟಕಗಳಿಗೆ ಮತ್ತು ಸಮಿತಿಗಳಿಗೆ ಆಯ್ಕೆಯಾಗುವ, ಚರ್ಚೆಗಳಲ್ಲಿ ಮುಕ್ತವಾಗಿ ಭಾಗವಹಿಸಿ ಪಕ್ಷದ ನೀತಿಗಳನ್ನು ರೂಪಿಸಲು ಕೊಡುಗೆ ನೀಡುವ, ಪಕ್ಷದ ಸಭೆಗಳಲ್ಲಿ ಪಕ್ಷದ ಸಮಿತಿಗಳನ್ನು ಮತ್ತು ಕಾರ್ಯನಿರ್ವಾಹಕರನ್ನು ಟೀಕೆ ಮಾಡುವ ಮತ್ತು ತಮ್ಮ ಅಭಿಪ್ರಾಯಗಳನ್ನು ಮೇಲಿನ ಸಮಿತಿಗಳಿಗೆ ಸಲ್ಲಿಸುವ ಹಕ್ಕುಗಳನ್ನು ಖಾತರಿಪಡಿಸಿತು. ಪ್ರಜಾಸತ್ತಾತ್ಮಕ ಕೇಂದ್ರವಾದದ ತತ್ವಗಳನ್ನು ಸವಿಸ್ತಾರವಾಗಿ ವಿವರಿಸಿದ ಸಂವಿಧಾನವು ಅದನ್ನು ಪಕ್ಷದಲ್ಲಿ ಅಳವಡಿಸುವುದು ಹೇಗೆ ಎಂಬುದನ್ನು ವಿಶದಪಡಿಸಿತು.

ತಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಲು ಜನರು ನಡೆಸುವ ಹೋರಾಟಗಳ ನಾಯಕರಾಗಿ ಪಕ್ಷದ ಮೂಲ ಘಟಕಗಳಾದ ಶಾಖೆಗಳು ಪರಿವರ್ತನೆಗೊಳ್ಳುವುದನ್ನು ಖಾತ್ರಿಪಡಿಸುವ ಮೂಲಕ ಸಾಮೂಹಿಕ ಚಟುವಟಿಕೆಗಳು ಮತ್ತು ಸಾಮೂಹಿಕ ಕಾರ್ಯವೈಖರಿಯಲ್ಲಿ ಆಮೂಲಾಗ್ರವಾಗಿ ಬದಲಾವಣೆ ತರಬೇಕೆಂದು ಮಹಾಧಿವೇಶನವು ತೀರ್ಮಾನ ಮಾಡಿತು. ‘ಪ್ರತಿಯೊಂದು ಕೆಲಸಕ್ಕೂ ಸಂಗಾತಿಗಳಿರಬೇಕು ಮತ್ತು ಪ್ರತಿಯೊಬ್ಬ ಸಂಗಾತಿಗೂ ಕೆಲಸಗಳಿರಬೇಕು’ ಎನ್ನುವ ರೀತಿಯಲ್ಲಿ ಪ್ರತಿಯೊಂದು ರಂಗದಲ್ಲೂ ನಿರಂತರ ಚಟುವಟಿಕೆಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದು ಪಕ್ಷ ನಿರ್ಧರಿಸಿತು.

ಪೂರ್ಣಾವಧಿ ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸಬೇಕು, ಕಾಲಕಾಲಕ್ಕೆ ಅವರ ಕಾರ್ಯವನ್ನು ಪರಿಶೀಲಿಸಬೇಕು, ಅವರಿಗೆ ಸಾಕಷ್ಟು ಸಂಬಳ ನೀಡುವ ಹಾಗೂ ಅವರ ವೈದ್ಯಕೀಯ ವೆಚ್ಚಗಳನ್ನು ಭರಿಸುವ ಮೂಲಕ ಅವರ ಕಷ್ಠ ಅಗತ್ಯಗಳನ್ನು ಖಾತರಿಪಡಿಸಬೇಕೆಂದು ಮಹಾಧಿವೇಶನ ತೀರ್ಮಾನ ಮಾಡಿತು. ಪೂರ್ಣಾವಧಿ ಕಾರ್ಯಕರ್ತರ ಜತೆಯಲ್ಲೇ, ಆ ಕಾಲದ ವಿಶೇಷ ಲಕ್ಷಣವಾಗಿದ್ದ ದೊಡ್ಡ ಸಂಖ್ಯೆಯ ಪಕ್ಷದ ಸದಸ್ಯರು ನಿಷ್ಕ್ರಿಯರಾಗದಿರುವಂತೆ ಗಮಸಬೇಕು ಎಂದು ಪಕ್ಷ ನಿರ್ಣಯ ಮಾಡಿತು. ಪಕ್ಷದ ಕಾರ್ಯಕರ್ತರಲ್ಲಿ ಅಖಿಲ ಭಾರತ ಮಟ್ಟದ ತಿಳುವಳಿಕೆಯನ್ನು ಹೆಚ್ಚಿಸುವ ಸಲುವಾಗಿ ಪಕ್ಷದ ಶಿಕ್ಷಣವನ್ನು ಉತ್ತಮಪಡಿಸಬೇಕು, ಜನಪ್ರಿಯ ಸಾಹಿತ್ಯವನ್ನು ಸಿದ್ಧಪಡಿಸಬೇಕು ಮತ್ತು ರಾಜಕೀಯ ಶಾಲೆಗಳನ್ನು ನಡೆಸಬೇಕು ಎಂದು ಯೋಜಿಸಿತು. ಪಕ್ಷವು ನಡೆಸುವ ಹೋರಾಟಗಳ ವಿಧಾನವನ್ನು ಉತ್ತಮಪಡಿಸಬೇಕೆಂದೂ ಹೇಳಿತು. ಪಕ್ಷವು ನಡೆಸುವ ಹಲವಾರು ಪತ್ರಿಕೆಗಳಲ್ಲಿನ ಲೇಖನಗಳು ಜೀವಂತವಾಗಿರದೆ ಪಾರಿಭಾಕ ಶಬ್ದಗಳ ಮೂಲಕ ಆಕರ್ಷಣೆ ಕಳೆದುಕೊಂಡಿರುತ್ತವೆ ಮತ್ತು ಅವುಗಳಲ್ಲಿ ಸಾಕಷ್ಟು ವಾಸ್ತವಾಂಶಗಳು ಇಲ್ಲದಿರುವುದು ವಿಷಾದಕರ ಎಂದು ಮಹಾಧಿವೇಶನ ಅಭಿಪ್ರಾಯಪಟ್ಟಿತು. ಪಕ್ಷವು ಅಂಗೀಕರಿಸಿರುವ ನಿರ್ಣಯಗಳು ಕೂಡ ಉದ್ದವಾಗಿದ್ದು ಕರಾರುವಾಕ್ಕಾಗಿರುವುದಿಲ್ಲ. ‘ಒಂದು ಸಾಮೂಹಿಕ ಪಕ್ಷವಾಗಿ ಬೆಳೆಯುತ್ತಿರುವಾಗ ಸಮೂಹದ ತಿಳುವಳಿಕೆಗೆ ಅನುಗುಣವಾಗಿ ನಾವು ಮಾತನಾಡಬೇಕು ಮತ್ತು ಬರೆಯಲು ಸಾಧ್ಯವಾಗಬೇಕು.’

ಎಲ್ಲಾ ಮಟ್ಟಗಳಲ್ಲಿನ ನಾಯಕತ್ವದ ಕಾರ್ಯನಿರ್ವಹಣೆಯ ಬಗ್ಗೆ ಪಕ್ಷವು ಸ್ವವಿಮರ್ಶಾತ್ಮಕವಾಗಿ ಚಿಂತನೆ ನಡೆಸಿತು. ಚಳುವಳಿಯ ಅಗತ್ಯಗಳನ್ನು ಎದುರಿಸಲು ಮತ್ತು ಎಲ್ಲಾ ಹಂತಗಳಲ್ಲೂ ಸಮಿತಿಗಳ ಸರಿಯಾದ ಕಾರ್ಯನಿರ್ವಹಣೆಯನ್ನು ಖಾತರಿಪಡಿಸಲು ನಾಯಕತ್ವವು ಪರಿಪಕ್ವತೆ ಮತ್ತು ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಂಘಟನಾತ್ಮಕ ವರದಿಯು ಒತ್ತಿಹೇಳಿತು. ಸಭ್ಯತೆ, ಸಹನೆ, ಸ್ನೇಹಮಯ ನಡವಳಿಕೆ, ವಿಮರ್ಶೆಗೆ ಗಮನ ನೀಡುವುದು, ತೀರ್ಮಾನ ಮತ್ತು ಅನುಷ್ಠಾನದ ನಡುವಿನ ಹಾಗೂ ಮಾತು ಮತ್ತು ಆಚರಣೆಗಳ ನಡುವಿನ ಕರ್ತವ್ಯಚ್ಯುತಿಗಳನ್ನು ಕಡಿಮೆ ಮಾಡುವುದು, ವ್ಯಕ್ತಿವಾದದ ವಿರುದ್ಧ ಹೋರಾಡುವುದು, ಶಿಸ್ತನ್ನು ಬಲಪಡಿಸುವುದು ಇವುಗಳನ್ನು ಆದ್ಯತೆಯ ಕೆಲಸಗಳು ಎಂದು ಪಕ್ಷವು ಗುರುತಿಸಿತು. ಕೆಳಗಿಂದ ಬರುವ ಟೀಕೆಗಳಿಗೆ ಮತ್ತು ಸಲಹೆಗಳಿಗೆ ಅಧಿಕಾರಿಶಾಹಿ ತಾತ್ಸಾರ ಮನೋಭಾವವು ಜತೆಯಲ್ಲೇ ‘ರಂಗವಾದ, ಒಕ್ಕೂಟವಾದ ಮತ್ತು ಸ್ಥಳೀಯವಾದ’ ಗಳಂತಹ ಪ್ರತ್ಯೇಕತಾವಾದಿ ಪ್ರವೃತ್ತಿಗಳು ಪಕ್ಷದೊಳಗಿನ “ಶಿಷ್ಟವಾದ ಲಕ್ಷಣವಾಗಿ ಪರಿಣಮಿಸಿದೆ ಎಂದು ಮಹಾಧಿವೇಶನವು ಗಮಸಿತು. ಈ ಎಲ್ಲಾ ಪ್ರವೃತ್ತಿಗಳ ವಿರುದ್ಧ ಹೋರಾಡಬೇಕೆಂದು ಮಹಾಧಿವೇಶನವು ನಿರ್ಣಯ ಮಾಡಿತು. ಪ್ರಜಾಸತ್ತಾತ್ಮಕ ಕೇಂದ್ರವಾದ ಮತ್ತು ಶ್ರಮಿಕರ ಸರ್ವಾಧಿಕಾರ ಎಂಬ ತಾತ್ವಿಕ ವಿಚಾರಗಳ ಬಗ್ಗೆ ಪ್ರಶ್ನೆ ಮಾಡುವವರನ್ನು ಮಹಾಧಿವೇಶನವು ಟೀಕಿಸಿತು ಮತ್ತು ಅದು ಪರಿಷ್ಕರಣವಾದದ ಅಭಿವ್ಯಕ್ತಿಯಾಗಿದ್ದು ಅದರ ವಿರುದ್ಧವೂ ಹೋರಾಡಬೇಕಾದ ಅಗತ್ಯತೆಯ ಕುರಿತು ಮಹಾಧಿವೇಶನವು ಒತ್ತಿಹೇಳಿತು.

ಆದರೆ, ವಿಧಿಸಿದ ಕಟ್ಟುಪಾಡುಗಳಲ್ಲಿ ಬಹಳಷ್ಟು ಜಾರಿಯಾಗಲಿಲ್ಲ. ಸಾಮೂಹಿಕ ಪಕ್ಷ ಕಟ್ಟುವ ಮತ್ತು ಪಡೆದ ಮತಗಳಿಗೆ ಅನುಸಾರವಾಗಿ ಸದಸ್ಯರನ್ನು ಸೇರಿಸಿಕೊಳ್ಳುವ ಹೆಸರಿನಲ್ಲಿ, ಸದಸ್ಯರನ್ನು ನೋಂದಾಸಿಕೊಳ್ಳುವ ನಿಯಮಗಳನ್ನು ಸಡಿಲಗೊಳಿಸಲಾಯಿತು. ಇವೆಲ್ಲವೂ ಪಕ್ಷದೊಳಗೆ ಕ್ರಮೇಣವಾಗಿ ಪರಿಷ್ಕರಣವಾದಿ ಪ್ರವೃತ್ತಿಗಳನ್ನು ಬಲಪಡಿಸಿತು.

ಈ ಅವಧಿಯಲ್ಲಿ ಬೆಳೆಯುತ್ತಿದ್ದ ಕಾರ್ಮಿಕ ವರ್ಗದ ಹೋರಾಟಗಳನ್ನು, ಬಹು ಮುಖ್ಯವಾಗಿ ಎರಡನೇ ವೇತನ ಆಯೋಗದ ಬೇಡಿಕೆಯನ್ನು ಗೆದ್ದ ಅಂಚೆ ಮತ್ತು ತಂತಿ ನೌಕರರ ಹೋರಾಟಗಳನ್ನು ಗುರುತಿಸಿತು. ಎಐಟಿಯುಸಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಕ್ಷದ ಸದಸ್ಯರು ಕಾರ್ಮಿಕ ಸಂಘಗಳ ಐಕ್ಯ ಹೋರಾಟವನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಪಕ್ಷವು ಪ್ರಮುಖ ಪಾತ್ರ ವಹಿಸಿದ್ದ ಅಸ್ಸಾಮಿನ ತೈಲ ಸಂಸ್ಕರಣಾಗಾರಕ್ಕಾಗಿ ನಡೆದ ಹೋರಾಟವನ್ನು ಅದು ಗುರುತಿಸಿತು.

ಭಾರತ ಸರ್ಕಾರವು ಅನುಸರಿಸುತ್ತಿದ್ದ ವಿದೇಶಾಂಗ ನೀತಿಯಲ್ಲಿನ ಪಲ್ಲಟವನ್ನು ಮತ್ತು ದೇಶದ ತ್ವರಿತ ಕೈಗಾರಿಕೀಕರಣದ ಬಗ್ಗೆ ಮಾತನಾಡಿದ ಎರಡನೇ ಪಂಚ ವಾರ್ಷಿಕ ಯೋಜನೆಯ ಕೆಲವು ‘ಪ್ರಗತಿಪರ ವಿಷಯ’ಗಳನ್ನು ರಾಜಕೀಯ ನಿರ್ಣಯವು ಬೆಂಬಲಿಸಿತು.

ಈ ಅವಧಿಯಲ್ಲಿ, ಮತ್ತೊಂದು ಬಂಡವಾಳಶಾಹಿ-ಭೂಮಾಲಕ ಪಕ್ಷವಾದ ಸ್ವತಂತ ಪಕ್ಷ ರಚನೆಯಾಯಿತು, ಆಗ ಅದು ನಿಕೃಷ್ಟ ಶಕ್ತಿಯಾಗಿತ್ತು. ಈ ಬೆಳವಣಿಗೆಯನ್ನು ಬಳಸಿಕೊಂಡ ಪಕ್ಷದ ಪರಿಷ್ಕರಣವಾದಿ ವಿಭಾಗವು ಸ್ವತಂತ್ರ ಪಕ್ಷದ ಉದಯವು ದೊಡ್ಡ ಅಪಾಯವೆಂದು ಬಗೆದು ಕಾಂಗ್ರೆಸ್ ಜತೆ ನಿಲ್ಲುವ ಧೋರಣೆ ತಳೆಯಿತು. ಅಮೃತಸರ ಮಹಾಧಿವೇಶನವು, ಈ ನಿಲುವಿನ ಮೇಲೆ ತಣ್ಣೀರೆರಚಿತು; ಕಾಂಗ್ರೆಸ್ ಸರ್ಕಾರದ ಪ್ರತಿಗಾಮಿ ಹಾಗೂ ಜನವಿರೋಧಿ ನೀತಿಯು ಆರ್ಥಿಕ ಹಾಗೂ ರಾಜಕೀಯ ಜೀವನದಲ್ಲಿ ರಾಷ್ಟ್ರ-ವಿರೋಧಿ, ತೀವ್ರ ಬಲಪಂಥೀಯ ಶಕ್ತಿಗಳಿಗೆ ಕಾರಣವಾಯಿತು; ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ದೃಢ ನಿಶ್ಚಯ ಹಾಗೂ ಚೈತನ್ಯದಿಂದ ಏಕಕಾಲದಲ್ಲಿ ಹೋರಾಟ ಮಾಡದೆ ಅವುಗಳನ್ನು ಸೋಲಿಸಲಾಗುವುದಿಲ್ಲ ಎಂದು ಪಕ್ಷವು ವಿವರಣೆ ನೀಡಿತು.

ಅಮೃತಸರ ಮಹಾಧಿವೇಶನದಲ್ಲಿ ರಾಜಕೀಯ ನಿರ್ಣಯವನ್ನು ಅಂಗೀಕರಿಸಿದ ನಂತರವೂ ಭಿನ್ನಾಭಿಪ್ರಾಯಗಳು ಹಾಗೆಯೇ ಉಳಿದವು. ಕಾಂಗ್ರೆಸ್‌ನೊಂದಿಗೆ ಮೃದು ಧೋರಣೆ ಅನುಸರಿಸಿದ ಪಕ್ಷದೊಳಗಿನ ಪರಿಷ್ಕರಣವಾದಿ ವಿಭಾಗವು ಕೇರಳದ ಕಮ್ಯುನಿಸ್ಟ್ ಸರ್ಕಾರ ವಜಾಗೊಂಡಿದ್ದರಿಂದ ಆಘಾತಕ್ಕೊಳಗಾತು. ಹೀಗಿದ್ದಾಗ್ಯೂ, ಅವರ ಆಘಾತ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಅವರು ತಮ್ಮ ಪರಿಷ್ಕರಣವಾದಿ ಪಥವನ್ನು ಮುಂದುವರಿಸಿದರು.

ಕನ್ನಡಕ್ಕೆ: ಟಿ.ಸುರೇಂದ್ರ ರಾವ್

Leave a Reply

Your email address will not be published. Required fields are marked *