ಉತ್ತರ ಪ್ರದೇಶ: ಅನಾಗರಿಕ ಪ್ರಪಾತಕ್ಕೆ ಇಳಿದಿದೆ

Prakash_karat
ಪ್ರಕಾಶ್ ಕಾರಟ್

ಹತ್ರಾಸ್ ನಲ್ಲಿ ೧೯ ವರ್ಷದ ದಲಿತ ಬಾಲಕಿಯ ಮೇಲೆ ನಡೆದ ಕ್ರೂರ ಸಾಮೂಹಿಕ ಅತ್ಯಾಚಾರ ಮತ್ತು  ಸಾವು, ಆ ನಂತರ ಉತ್ತರ ಪ್ರದೇಶ ಪೊಲೀಸರು ಮತ್ತು ಆಡಳಿತವು ಅದನ್ನು ನಿಭಾಸಿದ ರೀತಿ, ಇದರಿಂದಾಗಿ, ಉತ್ತರ ಪ್ರದೇಶದ ಆದಿತ್ಯನಾಥ್ ಯೋಗಿ ಆಡಳಿತದ ಸ್ವರೂಪವು ಭಯಾನಕ ಮತ್ತು ಬೋಧಪ್ರದ ಪಾಠಶಾಲೆ ಆಗಿ ವಿಜೃಂಭಿಸುತ್ತಿದೆ.

ಎಫ್‌ಐಆರ್ ದಾಖಲಿಸುವಲ್ಲಿ ಹುಡುಗಿಯ ಕುಟುಂಬವು ಆಡಳಿತದಿಂದ, ಅಸಡ್ಡೆ ಮತ್ತು ಹಗೆತನವನ್ನು ತೀವ್ರವಾಗಿ ಎದುರಿಸಿತು. ವೈದ್ಯಕೀಯ ಚಿಕಿತ್ಸೆ ವಿಳಂಬವಾಯಿತು. ಅಲಿಘರ್ ನ ಆಸ್ಪತ್ರೆಯಲ್ಲಿ ಸೂಕ್ತ ಚಿಕ್ಸಿತೆಯನ್ನು ನೀಡಲಿಲ್ಲ. ನಂತರ, ಹಲ್ಲೆ ನಡೆದ ೧೫ ದಿನಗಳ ನಂತರ ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಆಕೆಯ ಶವವನ್ನು ಪೊಲೀಸರು ಮತ್ತೆ ಹಳ್ಳಿಗೆ ಕೊಂಡೊಯ್ದರು ಮತ್ತು ಕುಟುಂಬದವರ ಮನವಿಯ ಹೊರತಾಗಿಯೂ, ಶವವನ್ನು ಅವಳ ಮನೆಗೆ ಕೊಂಡೊಯ್ಯಲಾಗಲಿಲ್ಲ ಅಥವಾ ಅವರ ಕುಟುಂಬಕ್ಕೆ ಅಂತಿಮ ವಿಧಿಗಳನ್ನು ನಡೆಸಲು ಅವಕಾಶ ನೀಡಲಿಲ್ಲ. ಕುಟುಂಬವನ್ನು ಅವರ ಮನೆಗೆ ಸೀಮಿತಗೊಳಿಸಿ ಶವವನ್ನು ದಹನ ಮಾಡಲಾಯಿತು.

ಅತ್ಯಾಚಾರದ ವೈದ್ಯಕೀಯ ಪರೀಕ್ಷೆಯನ್ನು ವಿಳಂಬಗೊಳಿಸಿ, ಎಲ್ಲಾ ಸಾಕ್ಷ್ಯಗಳು ಕಳೆದುಹೋಗಿವೆ ಎಂದು ಖಚಿತಪಡಿಸಿಕೊಂಡ ನಂತರ, ಅಲಿಘರ್ ನ ಪೊಲೀಸ್ ಇನ್ಸ್‌ಪೆಕ್ಟರ್ ಜನರೆಲ್, ಆರಂಭಿಕ ವೈದ್ಯಕೀಯ ವರದಿಗಳು ಯಾವುದೇ ಅತ್ಯಾಚಾರ ನಡೆದಿಲ್ಲ ಎಂದು ದೃಡಪಡಿಸುತ್ತದೆ ಎಂದು ಘೋಷಿಸಿದರು. ಈ ಹಳ್ಳಿಯನ್ನು ೪೮ ಗಂಟೆಗಳ ಕಾಲ ಬ್ಯಾರಿಕೇಡ್ ಮಾಡಲಾಗಿತ್ತು ಮತ್ತು ಅವರ ಕುಟುಂಬವನ್ನು ಭೇಟಿಯಾಗಲು- ರಾಜಕೀಯ ಮುಖಂಡರು, ವಕೀಲರು ಅಥವಾ ಮಾಧ್ಯಮಗಳಿಗೆ ಯಾರಿಗೂ ಅವಕಾಶವಿರಲಿಲ್ಲ.  ತರುವಾಯ ಮ್ಯಾಜಿಸ್ಟ್ರೇಟ್ ಸ್ವತಃ ಕುಟುಂಬವನ್ನು ಭೇಟಿಯಾಗಿ, ಬೆದರಿಕೆ ಒಡ್ಡಿದ್ದನ್ನು ಅವರು ಈ ಪ್ರಕರಣದ ಬಗ್ಗೆ ಹೇಳಿಕೆ ನೀಡುವಾಗ ಮರೆಮಾಚಿದರು.

ಹತ್ರಾಸ್ ನಲ್ಲಿ ೧೯ ವರ್ಷದ ದಲಿತ ಬಾಲಕಿಯ ಮೇಲೆ ನಡೆದ ಕ್ರೂರ ಸಾಮೂಹಿಕ ಅತ್ಯಾಚಾರ ಮತ್ತು  ಸಾವು, ಆ ನಂತರ ಉತ್ತರ ಪ್ರದೇಶ ಪೊಲೀಸರು ಮತ್ತು ಆಡಳಿತವು ಅದನ್ನು ನಿಭಾಸಿದ ರೀತಿ, ಇದರಿಂದಾಗಿ, ಉತ್ತರ ಪ್ರದೇಶದ ಆದಿತ್ಯನಾಥ್ ಯೋಗಿ ಆಡಳಿತದ ಸ್ವರೂಪವು ಭಯಾನಕ ಮತ್ತು ಬೋಧಪ್ರದ ಪಾಠ ಶಾಲೆ ಆಗಿ ವಿಜೃಂಭಿಸುತ್ತಿದೆ.
ಈ ಇಡೀ ಪ್ರಸಂಗದಿಂದ ಹೊರಹೊಮ್ಮುವ ವಿಷಯವೆಂದರೆ ಹಿಂದುತ್ವ ಕೋಮುವಾದ ಮತ್ತು ಮೇಲ್ಜಾತಿಯ ಕೋಮುವಾದದ ವಿಷಕಾರಿ ಮಿಶ್ರಣವನ್ನು ಜಾರಿಗೊಳಿಸುವ ಸರ್ವಾಧಿಕಾರಿ ಪೊಲೀಸ್ ರಾಜ್ ಉತ್ತರ ಪ್ರದೇಶ ರಾಜ್ಯವಾಗಿದೆ. ಸ್ವತಃ  ಮುಖ್ಯಮಂತ್ರಿ ಎಂಬ ವ್ಯಕ್ತಿಯೇ ಈ ಮಾರಕ ಕೃತ್ಯಗಳನ್ನು ಸಾಕಾರಗೊಳಿಸುತ್ತಾ ಬರುತ್ತಿದ್ದಾರೆ.
ಉತ್ತರ ಪ್ರದೇಶವು ಆಡಳಿತವು, ಇದೀಗ ಅನಾಗರಿಕತೆಗೆ ಇಳಿದಿದೆ. ಹಾಗೇನಾದರೂ ಹಿಂದೂ ರಾಷ್ಟ್ರ ಎಂದಾದರೂ ಅಸ್ತಿತ್ವಕ್ಕೆ ಬಂದಿದ್ದೆ ಆದರೆ, ಅದರಿಂದ  ಏನನ್ನು ನಿರೀಕ್ಷಿಸಬಹುದು? ಎಂಬುದರ ಬಗ್ಗೆ ಭಾರತದ ಉಳಿದ ಭಾಗಗಳಿಗೆ ಇದು ಅತಿ ಎಚ್ಚರಿಕೆಯ ಗಂಟೆಯಾಗಿದೆ.

ಕ್ರಮೇಣ, ವ್ಯಾಪಕ ಪ್ರತಿಭಟನೆಯ ನಂತರ, ಕುಟುಂಬದ ಬೇಟಿಗೆ ಅನುಮತಿಸಲಾಯಿತು. ಮುಖ್ಯಮಂತ್ರಿ ಆದಿತ್ಯನಾಥ್ ಅವರು “ಅರಾಜಕತಾವಾದಿಗಳು” ತೊಂದರೆಗಳನ್ನು ಸೃಷ್ಟಿಸಲು ಮತ್ತು ಸರ್ಕಾರವನ್ನು ಕೆಣಕಲು ಮತ್ತು ಕೋಮು ಮತ್ತು ಜಾತಿ ಘರ್ಷಣೆಯನ್ನು ಪ್ರಚೋದಿಸಲು “ಪಿತೂರಿ” ಗಳನ್ನು ನಿಯೋಜಿಸಲಾಗಿದೆ ಎಂದು ಘೋಷಿಸಿದರು. ಪ್ರತಿಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ವೆಬ್‌ಸೈಟ್‌ಗಳ ವಿರುದ್ಧ ಯುಪಿ ಪೊಲೀಸರು ಎಫ್‌ಐಆರ್ ದಾಖಲಿಸುವ ಮೂಲಕ ಜಾತಿ ಉದ್ವಿಗ್ನತೆ ಮತ್ತು ದೇಶದ್ರೋಹ ಚಟುವಟಿಕೆಗಳನ್ನು ಹುಟ್ಟುಹಾಕಿದ್ದಾರೆ ಎಂದು ಆರೋಪಿಸಿದರು. ದೌರ್ಜನ್ಯವನ್ನು ನಿಭಾಸುವ ಕುರಿತಂತೆ, ಯಾವುದೇ ಪ್ರತಿಭಟನೆ ಅಥವಾ ಟೀಕೆಗಳನ್ನು ಜಾತಿ ಮತ್ತು ಕೋಮು ಸಂಘರ್ಷಗಳನ್ನು ಸೃಷ್ಟಿಸಲು “ಸಂಚು” ನಡೆಸುತ್ತಿದ್ದಾರೆ ಎಂದು  ಸರ್ಕಾರವು ಲೇಬಲ್ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಕೇರಳ ಮೂಲದ ದೆಹಲಿಯ ಪತ್ರಕರ್ತನೊಬ್ಬ ಭಯೋತ್ಪಾದಕ ಎಂದು ಧನಸಹಾಯದ ಆರೋಪದ ಮೇಲೆ ಯುಎಪಿಎ ಅಡಿಯಲ್ಲಿ ಹತ್ರಾಸ್‌ಗೆ ತೆರಳುತ್ತಿದ್ದಾಗ ಬಂಧಿಸಲಾಯಿತು.

ಈ ಇಡೀ ಪ್ರಸಂಗದಿಂದ ಹೊರಹೊಮ್ಮುವ ವಿಷಯವೆಂದರೆ ಹಿಂದುತ್ವ ಕೋಮುವಾದ ಮತ್ತು ಮೇಲ್ಜಾತಿಯ ಕೋಮುವಾದದ ವಿಷಕಾರಿ ಮಿಶ್ರಣವನ್ನು ಜಾರಿಗೊಳಿಸುವ ಸರ್ವಾಧಿಕಾರಿ ಪೊಲೀಸ್ ರಾಜ್ ಉತ್ತರ ಪ್ರದೇಶ ರಾಜ್ಯವಾಗಿದೆ. ಸ್ವತಃ ಮುಖ್ಯಮಂತ್ರಿ ಎಂಬ ವ್ಯಕ್ತಿಯೇ ಈ ಮಾರಕ ಕೃತ್ಯಗಳನ್ನು ಸಾಕಾರಗೊಳಿಸುತ್ತಾ ಬರುತ್ತಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಆದಿತ್ಯನಾಥ್ ರನ್ನು ಏರಿಸಿದ್ದೇ ಸ್ವತಃ ಒಂದು ಕೆಟ್ಟ ದುರಂತ ಕಥೆಯಾಗಿದೆ. ಗೋರಖ್‌ಪುರದ ಗೋರಖನಾಥ ಮಠದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ, ಅಲ್ಲಿಂದ ೧೯೯೮ ರಲ್ಲಿ ಬಿಜೆಪಿ ಸಂಸದರಾದರು. ಮಠದ ಮುಖ್ಯಸ್ಥರಾಗಿ ಅವರ ಆಳ್ವಿಕೆಯನ್ನು ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಗುರುತಿಸಲಾಗಿದೆ.  ಅವರು ೨೦೦೨ ರಲ್ಲಿ ಹಿಂದೂ ಯುವಸೇನೆ ಸ್ಥಾಪಿಸಿದರು ಮತ್ತು ಮುಸ್ಲಿಮರ ಮೇಲಿನ ದಾಳಿಯಲ್ಲಿ, ಸ್ಮಶಾನಗಳನ್ನು ಅಪವಿತ್ರಗೊಳಿಸುವ ಮತ್ತು ಸಾಮಾನ್ಯವಾಗಿ ಅಪಾಯವನ್ನು ಉಂಟುಮಾಡುವಲ್ಲಿ ಈ ಸಶಸ್ತ್ರ ಪುರುಷರನ್ನು ವೈಯಕ್ತಿಕವಾಗಿ ಮುನ್ನಡೆಸಿದರು – ಇವೆಲ್ಲವೂ ” ಗೋ-ಸಂರಕ್ಷಣೆ” , “ಲವ್ ಜಿಹಾದ್ -ನಿಲ್ಲಿಸಿ”, ಮತ್ತುʻʻಘರ್ ವಾಪಸ್ಸಾತಿ”  ಹೆಸರಿನಲ್ಲಿ ಆಯೋಜಿಸಲ್ಪಟ್ಟಿದ್ದವು.  ಹಲವಾರು ವರ್ಷಗಳಿಂದ, ಯೋಗಿಯ ವಿರುದ್ಧ, ಕೊಲೆ, ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸುವುದು, ಮಾರಣಾಂತಿಕ ಆಯುಧಗಳಿಂದ ಗಲಭೆ ಮತ್ತು ಕ್ರಿಮಿನಲ್ ಬೆದರಿಕೆಗಳನ್ನು ಒಳಗೊಂಡಂತೆ ಸಾವಿರಾರು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಯಿತು. ಇಂತಹ ಫ್ಯಾಸಿಸ್ಟ್ ಧರ್ಮಾಂಧನನ್ನು, ಪ್ರಧಾನಿ ಮೋದಿ ಮತ್ತು ಅಮೀತ್ ಷಾ ಅವರು ೨೦೧೭ರ ವಿಧಾನಸಭಾ ಚುನಾವಣೆಯ ನಂತರ ಅವರು ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಸಹಾ, ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿಕೊಂಡರು.

ಮುಖ್ಯಮಂತ್ರಿಯಾದ ಕೂಡಲೇ ಆದಿತ್ಯನಾಥ್ ಅವರ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲಾಯಿತು. ಈಗ, “ಕ್ರೈಮ್‌ಫ್ರೀ” ಆಗಿದ್ದಾರೆ. ಸ್ವತಃ, ಅವರೇ ಇದೀಗ “ಜೋ ಅಪ್ರಾದ್ ಕರೆಂಗೆ, ಥೋ ಥೋಕ್ ದಿಯೆ ಜಯೆಂಗೆ” (ಯಾರು ಅಪರಾಧ ವೆಸಗುತ್ತಾರೋ, ಅಂತಹವರನ್ನು, ಹೊಡೆದುರುಳಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.)

ಶಂಕಿತ ಅಪರಾಧಿಗಳ ವಿರುದ್ಧ “ಎನ್‌ ಕೌಟರ್”ಗಳನ್ನು ಪ್ರಾರಂಭಿಸಲು ಇದು ಪೊಲೀಸರಿಗೆ ನೀಡಿದ  ಸಂಕೇತವಾಗಿದೆ.  ೨೦೧೭ ರಿಂದ ಆಗಸ್ಟ್ ೨೦೨೦ರವರೆಗೆ, ೬,೪೭೬ ಎನ್‌ಕೌಂಟರ್‌ಗಳಲ್ಲಿ ೧೨೫ ಜನರನ್ನು ಪೊಲೀಸರು ಹೊಡೆದುರುಳಿಸಿದ್ದಾರೆ ಮತ್ತು ಸಾವಿರಾರು ಮಂದಿ ಗಾಯಗೊಂಡಿದ್ದಾರೆ.  ಕೊಲ್ಲಲ್ಪಟ್ಟವರಲ್ಲಿ, ೪೫ ಅಂದರೆ, ಶೇಕಡಾ ೩೭ರಷ್ಟು.  ಇಂದೋರ್‌ನಿಂದ ಕಾನ್ಪುರಕ್ಕೆ ಪೊಲೀಸ್ ಕಸ್ಟಡಿಯಲ್ಲಿ ಸಾಗಿಸುವಾಗ ಆರೋಪಿ ದರೋಡೆಕೋರನಾಗಿದ್ದ ವಿಕಾಸ್ ದುಬೆ ಎಂಬಾತನನ್ನು ಗುಂಡಿಕ್ಕಿ ಕೊಂದರು. ಇಂತಹ  ಎನ್ ಕೌಂಟರ್ ಕೊಲೆಗಳು ಹೆಚ್ಚುವರಿ-ನ್ಯಾಯಾಂಗದ ಅಡಿಯಲ್ಲಿಯೇ ನಡೆದು ಹೋದವು.

೨೦೧೭ ರಲ್ಲಿ, ಠಾಕೂರ್ ನ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ರವರು, ೧೭ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ನಂತರ,  ಅವರನ್ನು ರಕ್ಷಿಸಲು ಆದಿತ್ಯನಾಥ್ ಆಡಳಿತ ಪ್ರಯತ್ತಿಸಿದಾಗ,  ಜಾತಿ ಪಕ್ಷಪಾತ ಸಾರ್ವತ್ರಿಕವಾಗಿ ಎದ್ದು ಬಂದಿತು. ಸೆಂಗಾರ್ ತಮ್ಮ ಗೂಂಡಾ ಪುರುಷರನ್ನು ಬಿಟ್ಟು ಬಾಲಕಿಯ ತಂದೆಯನ್ನು ಹೊಡೆದು ಕೊಂದು ಹಾಕಿದರು. ಒಂದು ವರ್ಷದ ನಂತರ ಹೈಕೋರ್ಟ್ ಮಧ್ಯಪ್ರವೇಶಿಸಿದ ನಂತರವೇ ಸೆಂಗಾರ್ ನನ್ನು ಬಂಧಿಸಲಾಯಿತು. ಆನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು.  ಸಿಬಿಐ ತನಿಖೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಮತ್ತು ಐಎಎಸ್ ಅಧಿಕಾರಿ ಅತ್ಯಾಚಾರಿಗಳನ್ನು ರಕ್ಷಿಸಲು ಯತ್ನಿಸಿದ್ದು ತಪ್ಪು ಎಂದು ತೀರ್ಪು ನೀಡಿತು. ಆದರೆ  ಯೋಗಿ  ಸರ್ಕಾರ ಅವರ ವಿರುದ್ಧ ಇಲ್ಲಿಯವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಧಾರ್ಮಿಕ ಹಬ್ಬಗಳನ್ನು ಆಚರಿಸಲು ಪೊಲೀಸ್ ಠಾಣೆಗಳಿಗೆ ಸೂಚನೆಗಳನ್ನು ಕಳುಹಿಸಿಕೊಟ್ಟು, ಆಡಳಿತ ಮತ್ತು ಪೊಲೀಸರನ್ನು ಕೋಮುವಾದಿ ಮಾಡಲಾಗಿದೆ. ೨೦೧೩ರ ಮುಜಫರ್ ನಗರ ಕೋಮು ಹಿಂಸಾಚಾರದಲ್ಲಿ ಆರೋಪಿಗಳಾಗಿದ್ದ ನೂರಕ್ಕೂ ಹೆಚ್ಚು ಜನರನ್ನು ಒಳಗೊಂಡ ೩೮ ಪ್ರಕರಣಗಳನ್ನು ಸರ್ಕಾರ ಹಿಂತೆಗೆದುಕೊಂಡಿತು. ಅವರಲ್ಲಿ ಬಿಜೆಪಿ ಶಾಸಕರು ಮತ್ತು ಸಂಸದರು ಒಳಗೊಂಡಿದ್ದರು.

ಆದಿತ್ಯನಾಥ್ ಆಡಳಿತವು ತಮ್ಮ ವಿರುದ್ದದ, ಯಾವುದೇ ರೀತಿಯ ಪ್ರತಿಭಟನೆಗಳನ್ನು ಅಥವಾ, ಭಿನ್ನಾಭಿಪ್ರಾಯಗಳನ್ನು ಸಹಿಸುವುದಿಲ್ಲ ಹಾಗೆಯೇ, ಪ್ರತಿಪಕ್ಷಗಳನ್ನು ಹತ್ತಿಕ್ಕಲು ಪೊಲೀಸರನ್ನು ನಿರ್ದಯವಾಗಿ ಬಳಸಲಾಗುತ್ತದೆ. ಸಿಎಎ ವಿರೋಧಿ ಪ್ರತಿಭಟನೆಗಳನ್ನು ಕ್ರೂರವಾಗಿ ನಡೆಸಿಕೊಳ್ಳಲಾಯಿತು.  ಪೊಲೀಸ್ ಗುಂಡಿನ ದಾಳಿಯಲ್ಲಿ ಕನಿಷ್ಠ ಇಪ್ಪತ್ತು ಜನರು ಸಾವನ್ನಪ್ಪಿದರು. ಮುಸ್ಲಿಂ ಅಂಗಡಿಗಳು ಮತ್ತು ಮನೆಗಳನ್ನು ಪೊಲೀಸರು ಗುರಿಯಾಗಿಸಿಕೊಂಡರು ಮತ್ತು ಸಾಮೂಹಿಕ ದಂಡ ವಿಧಿಸಿದರು.  ಪೊಲೀಸರು ಮತ್ತು ಹಿಂದುತ್ವ ಆಡಳಿತವನ್ನು ಜಾರಿಗೊಳಿಸುವವರ ನಡುವಿನ ವ್ಯತ್ಯಾಸವು ಮಸುಕಾಗಿ ಕಾಣುತ್ತಿದೆ.

ಜಾತಿ ಮತ್ತು ಕೋಮುವಾದಿ ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸಲು ಪೊಲೀಸರು ಮತ್ತು ಆಡಳಿತವು ಕಾರ್ಯನಿರ್ವಹಿಸುವ ನಿರ್ಭಯವನ್ನು ಹತ್ರಾಸ್ ದೌರ್ಜನ್ಯವು ಬಹಿರಂಗಪಡಿಸುತ್ತದೆ. ಈ ಕರುಣಾಜನಕ ಆಡಳಿತದಲ್ಲಿ ಬಡವರಿಗೆ ಮತ್ತು ತುಳಿತಕ್ಕೊಳಗಾದವರಿಗೆ ಯಾವುದೇ ಸಹಾಯ ಹಸ್ತವಿಲ್ಲ.

ಉತ್ತರ ಪ್ರದೇಶದ ಆಡಳಿತವು, ಇದೀಗ ಅನಾಗರಿಕತೆಗೆ ಇಳಿದಿದೆ. ಹಾಗೇನಾದರೂ ಹಿಂದೂ ರಾಷ್ಟ್ರ ಎಂದಾದರೂ ಅಸ್ತಿತ್ವಕ್ಕೆ ಬಂದಿದ್ದೆ ಆದರೆ, ಅದರಿಂದ  ಏನನ್ನು ನಿರೀಕ್ಷಿಸಬಹುದು? ಎಂಬುದರ ಬಗ್ಗೆ ಭಾರತದ ಉಳಿದ ಭಾಗಗಳಿಗೆ ಇದು ಅತಿ ಎಚ್ಚರಿಕೆಯ ಗಂಟೆಯಾಗಿದೆ.

ಅನು: ನಾಗರಾಜ ನಂಜುಂಡಯ್ಯ

Leave a Reply

Your email address will not be published. Required fields are marked *