ಭಾರತದ ವಿಜ್ಞಾನದಲ್ಲಿ ಮರೆಯಾದ ಎಡಪಂಥೀಯರ ಕತೆ

ಪ್ರಬೀರ್ ಪುರಕಾಯಸ್ಥ

indain science and left

ಮೇಘನಾದ ಸಾಹಾ, ಸಾಹಿಬ್ ಸಿಂಘ್ ಸೂಕಿ, ಸೈಯ್ಯದ್ ಹುಸ್ಸೇನ್ ಜಾಹೀರ್

Communist Part 100 copyಭಾರತದ ವಿಜ್ಞಾನದ ಕತೆ ದೇಶದ ಔದ್ಯಮೀಕರಣ ಸಾಧಿಸಲು ನೆಹರು ಮತ್ತು ವೈಜ್ಞಾನಿಕ ಸಂಸ್ಥೆಗಳನ್ನು ಕಟ್ಟುವುದರ ಸುತ್ತ ಕಟ್ಟಲಾಗಿದೆ. ಆದರೆ ಈ ಕಥೆ ಅಪೂರ್ಣ. ಯಾಕೆಂದರೆ ಅದು ಈ ಪ್ರಕ್ರಿಯೆಯಲ್ಲಿ ಭಾರತೀಯ ಎಡಪಂಥೀಯ ವಿಜ್ಞಾನಿಗಳಾದ ಮೇಘನಾದ ಸಾಹಾ, ಸಾಹಿಬ್ ಸಿಂಘ್ ಸೂಕಿ, ಸೈಯ್ಯದ್ ಹುಸ್ಸೇನ್ ಜಾಹೀರ್ ಮತ್ತು ಅಂತರ್‌ ರಾಷ್ಟ್ರೀಯವಾದಿಗಳಾದ ಜೆ.ಡಿ.ಬರ್ನಾಲ್ ಮತ್ತು ಜೆ.ಬಿ.ಎಸ್.ಹಾಲ್ಡೆನ್ ಅವರ ಪಾತ್ರವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ವಿಜ್ಞಾನಿಗಳು ಈ ಕತೆಯ ಕೇಂದ್ರದಲ್ಲಿದ್ದವರು.

ಆಧುನಿಕ ರಾಷ್ಟ್ರವೊಂದನ್ನು, ವೈಜ್ಞಾನಿಕ ದೃಷ್ಟಿಕೋನ (ನೆಹರು ಹೇಳಿದ ವೈಜ್ಞಾನಿಕ ಮನೋಭಾವ), ಯೋಜಿತ ವಿಜ್ಞಾನ, ತಂತ್ರಜ್ಞಾನ ಮತ್ತು ಆರ್ಥಿಕತೆ ಹಾಗೂ ಪ್ರಭುತ್ವದ ಗಮನಾರ್ಹ ಪಾತ್ರ ಇವೆಲ್ಲವುಗಳನ್ನು ಸಂಯೋಜಿಸುವ ಮೂಲಕ ಮಾತ್ರ ಕಟ್ಟಬಹುದೆಂಬ ವಿಜ್ಞಾನದ ದರ್ಶನದ ಮೇಲೆ ಭಾರತದ ವಿಜ್ಞಾನ ಆಧಾರಿತವಾಗಿತ್ತು. ಇವತ್ತಿಗೆ ಇದು ಸಾಮಾನ್ಯ ಎನಿಸಬಹುದಾದರೂ ವಿಜ್ಞಾನವನ್ನು ಯೋಜಿತ ತಳಹದಿಯ ಮೇಲೆ ಬೆಳೆಸಬಹುದೆಂಬುದೇ ಮಹಾ ಅಪಚಾರವೆಂದು ಎರಡನೇ ಮಹಾಯುದ್ಧದ ಮೊದಲು ವೈಜ್ಞಾನಿಕ ಸಮುದಾಯಗಳಲ್ಲಿ ಪ್ರಚಲಿತವಾಗಿತ್ತು. ಅಂದು ಸ್ಥಾಪಿತ ವೈಜ್ಞಾನಿಕ ಸಮುದಾಯಗಳ ದೃಷ್ಟಿಯಲ್ಲಿ 1917 ರ ಕ್ರಾಂತಿ ಮತ್ತು ನಂತರದಲ್ಲಿ ಔದ್ಯಮೀಕರಣ ಮತ್ತು ಆಧುನಿಕ ರಾಷ್ಟ್ರ ನಿರ್ಮಾಣದಲ್ಲಿ ಯೋಜಿತವಾಗಿ ಬಳಸಿಕೊಂಡಿದ್ದು ಅಪದ್ಧವಾಗಿತ್ತು.  ಲಂಡನ್ನಿನಲ್ಲಿ 1931 ರಲ್ಲಿ ನಡೆದ ಅಂತರ್‌ ರಾಷ್ಟ್ರೀಯ ವಿಜ್ಞಾನ ಇತಿಹಾಸದ ಸಮ್ಮೇಳನದಲ್ಲಿ ಬುಖಾರಿನ್ ನೇತೃತ್ವದ ನಿಯೋಗ, ವಿಜ್ಞಾನದ ಭಿನ್ನವಾದ ದರ್ಶನ ಎಂತಹದ್ದಿರಬಹುದೆಂಬುದರ ಒಂದು ನೋಟವನ್ನು ನೀಡಿತ್ತು.  ಜೆ ಡಿ ಬರ್ನಾಲ್, ಜೆ ಬಿ ಎಸ್ ಹಾಲ್ಡೆನ್, ಜೋಸೆಫ್ ನೀಢಾಮ್ ಮತ್ತು ಲಾನ್ಸೆಲೋಟ್ ಹಾಗ್ಬೆನ್ ಅವರನ್ನೊಳಗೊಂಡ ಅತ್ಯಂತ ಪ್ರಖರ ಯುವ ಬ್ರಿಟಿಷ್ ವಿಜ್ಞಾನಿಗಳ ತಂಡ ಸೋವಿಯತ್ ಪ್ರಬಂಧಗಳಿಂದ ಪ್ರಭಾವಿತವಾಯಿತು. ಇದು ಬರ್ನಾಲರ ಪ್ರಖ್ಯಾತ ಕೃತಿ “ವಿಜ್ಞಾನದ ಸಾಮಾಜಿಕ ಕಾರ್ಯ” ಕ್ಕೆ ಸ್ಪೂರ್ತಿಯಾಯಿತು. ‘ವಿಜ್ಞಾನ ಮತ್ತು ಸಮಾಜ’ ಚಳುವಳಿ ರೂಪುಗೊಳ್ಳಲು ಮತ್ತು ವಿಜ್ಞಾನಿಗಳನ್ನು ವೈಜ್ಞಾನಿಕ ಕೆಲಸಗಾರರನ್ನಾಗಿ ಸಂಘಟಿಸಲು ಸ್ಪೂರ್ತಿಯಾಯಿತು.

ಎರಡನೇ ಮಹಾಯುದ್ಧದ ನಂತರ ವಿಜ್ಞಾನದ ಚಳುವಳಿ, ವೈಜ್ಞಾನಿಕ ಕೆಲಸಗಾರರ ಜಾಗತಿಕ ಒಕ್ಕೂಟದ ಹುಟ್ಟಿಗೆ ಕಾರಣವಾಗಿ, ‘ಜಾಗತಿಕ ಶಾಂತಿ ಮಂಡಳಿ’ ಎಂಬ ಜಾಗತಿಕ ಶಾಂತಿ ಚಳಿವಳಿಯ ಬಹುಮುಖ್ಯ ಅಂಗವಾಯಿತು. ನಂತರದಲ್ಲಿ ಬರ್ನಾಲ್ ಮತ್ತು ಹಾಲ್ಡೆನ್ ಭಾರತದಲ್ಲಿನ ವಿಜ್ಞಾನದ ಜೊತೆಗೆ ನಿಕಟ ಸಂಬಂಧವಿಟ್ಟುಕೊಂಡರೆ, ನೀಢಾಮ್ ಅವರು ಚೀನಾದ ವಿಜ್ಞಾನದ ಜೊತೆಗೆ ಸಂಬಂಧವಿಟ್ಟುಕೊಂಡು ಚೀನಾದ ವಿಜ್ಞಾನ ಮತ್ತು ನಾಗರಿಕತೆಯ ಇತಿಹಾಸದ ಬಗೆಗಿನ ಹದಿನಾರು ಸಂಪುಟಗಳ ಬೃಹತ್ ಕೃತಿ ರಚಿಸುವಲ್ಲಿ ಚೀನಾದ ಸಹೋದ್ಯೋಗಿಗಳೊಡನೆ ಪಾಲ್ಗೊಂಡರು. ಈ ಮೂವರೂ ಗ್ರೇಟ್ ಬ್ರಿಟನ್ನಿನ  ಕಮ್ಯೂನಿಸ್ಟ್ ಪಾರ್ಟಿಯ ಸದಸ್ಯರಾಗಿದ್ದರು.

ಸುಭಾಷ್ ಚಂದ್ರ ಬೋಸ್ ಅವರು ಕಾಂಗ್ರೆಸ್ಸಿನ ಅಧ್ಯಕ್ಷರಾದಾಗ ಅವರ ಮೇಲೆ ಪ್ರಭಾವ ಬೀರಿದ ಮೇಘನಾದ ಸಾಹ ಅವರು ಯೋಜನಾ ಸಮಿತಿ ರಚನೆ ಮಾಡಲು  ಕಾರಣರಾದರು. ಬೋಸ್ ಅವರು ನೆಹರು ಅವರ ನೇತೃತ್ವದಲ್ಲಿ ಯೋಜನಾ ಸಮಿತಿಯನ್ನು ರಚಿಸಿ ಭಾರತದ ಔದ್ಯಮೀಕರಣ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಂಸ್ಥೆಗಳನ್ನು ಕಟ್ಟುವ ಯೋಜನೆಯ ಸ್ಥೂಲನಕ್ಷೆ ತಯಾರಿಸಿದರು… ಸ್ವಾತಂತ್ರ‍್ಯಾನಂತರ ಎಡಪಂಥೀಯರ ಕೊಡುಗೆ ವೈಜ್ಞಾನಿಕ ಮೂಲ ಸೌಕರ್ಯಗಳ ಸ್ಥಾಪನೆಗೆ ಮತ್ತು ವೈಜ್ಞಾನಿಕ ಹಾಗೂ ಸಂಶೋಧನಾ ಸಂಸ್ಥೆಗಳ ವಿಸ್ತರಣೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಸ್ವಾವಲಂಬನೆಗಾಗಿಯೂ ಅವರು ಅವಿರತ ಹೋರಾಡಿದರು. ಆಳಕ್ಕೆ ಬೇರು ಬಿಟ್ಟಿದ್ದ ಬಹುರಾಷ್ಟ್ರೀಯ ಕಂಪನಿಗಳ ಜೊತೆಗೆ ದೃಢ ಹೋರಾಟವಿಲ್ಲದೆ ಇದು ಸಾಧ್ಯವಾಗಲಿಲ್ಲ. ಹಲವು ವಿಜ್ಞಾನಿಗಳು ಮತ್ತು ರಾಜಕಾರಣಿಗಳ ವಸಾಹತುಶಾಹಿ-ಗ್ರಸ್ತ ಮನೋಭಾವದ ವಿರುದ್ಧವೂ ಈ ಹೋರಾಟ ನಡೆಸಬೇಕಾಯಿತು. ಅದು ಇಂದಿಗೂ ಮುಂದುವರೆದಿದೆ.

ಕಲ್ಕತ್ತದಲ್ಲಿ 1930ರ ದಶಕದಲ್ಲಿ ಇದೇ ರೀತಿ ವಿಜ್ಞಾನ, ಯೋಜನೆ ಮತ್ತು ಸೋವಿಯೆಟ್ ಯೂನಿಯನ್ನಿನ ಸಮಾಜವಾದಿ ಪ್ರಯೋಗಗಳಿಂದ ಮೇಘನಾದ ಸಾಹ ಅವರೊಂದಿಗಿನ ಒಂದು ಯುವ ವಿಜ್ಞಾನಿಗಳ ಗುಂಪು ಪ್ರಭಾವಿತವಾಗಿತ್ತು. ಸುಭಾಷ್ ಚಂದ್ರ ಬೋಸ್ ಅವರು ಕಾಂಗ್ರೆಸ್ಸಿನ ಅಧ್ಯಕ್ಷರಾದಾಗ ಅವರ ಮೇಲೆ ಪ್ರಭಾವ ಬೀರಿದ ಮೇಘನಾದ ಸಾಹ ಅವರು ಯೋಜನಾ ಸಮಿತಿ ರಚನೆ ಮಾಡಲು  ಕಾರಣರಾದರು. ಬೋಸ್ ಅವರು ನೆಹರು ಅವರ ನೇತೃತ್ವದಲ್ಲಿ ಯೋಜನಾ ಸಮಿತಿಯನ್ನು ರಚಿಸಿ ಭಾರತದ ಔದ್ಯಮೀಕರಣ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಂಸ್ಥೆಗಳನ್ನು ಕಟ್ಟುವ ಯೋಜನೆಯ ಸ್ಥೂಲನಕ್ಷೆ ತಯಾರಿಸಿದರು. ಸ್ವಾತಂತ್ರ‍್ಯದ ನಂತರ ಈ ಸಮಿತಿ ಯೋಜನಾ ಆಯೋಗವಾಗಿ ರೂಪುಗೊಂಡು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನಗಳ ಮೂಲಸೌಕರ್ಯಗಳ ರಚನೆಗೆ ಮತ್ತು ವಿಸ್ತರಣೆಗೆ ತಳಹದಿಯಾಯಿತು. ಸಿ.ಎಸ್.ಐ.ಆರ್ ಪ್ರಯೋಗಾಲಯಗಳ ವಿಸ್ತರಣೆ, ಅಣುಶಕ್ತಿ, ಬಾಹ್ಯಾಕಾಶ ಮತ್ತು ಐ.ಐ.ಟಿ. ಗಳನ್ನೊಳಗೊಂಡ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಯೋಜನೆ ಮತ್ತು ಸ್ವಾವಲಂಬಿ ಭಾರತ ಕಟ್ಟುವುದರಲ್ಲಿ ವಿಜ್ಞಾನದ ಪ್ರಾಮುಖ್ಯತೆ ಮೆರೆವ ದರ್ಶನದ ಫಲಗಳು.

ಭಾರತ ಔದ್ಯಮೀಕರಣಗೊಳ್ಳಲು ಸರ್ಕಾರ, ಆರ್ಥಿಕದಲ್ಲಿ ಮಾತ್ರವಲ್ಲ ಈ ಪಥಕ್ಕೆ ಬೆಂಬಲ ನೀಡಬಲ್ಲ ವೈಜ್ಞಾನಿಕ ಸಂಸ್ಥೆಗಳ ಕಟ್ಟುವುದರಲ್ಲೂ ಸಕ್ರಿಯ ಪಾತ್ರ ವಹಿಸುವ ಅವಶ್ಯಕತೆಯ ಅರಿವು ನೆಹರೂ ಅವರಿಗೆ ಇತ್ತು. ವೈಜ್ಞಾನಿಕ ಸಂಸ್ಥೆಗಳ ಕಟ್ಟುವ ಹುಡುಕಾಟದಲ್ಲಿ ನೆಹರೂ ಅವರು ಬರ್ನಾಲರನ್ನು ಹಲವು ಬಾರಿ ಭಾರತಕ್ಕೆ ಕರೆಸಿಕೊಂಡರು. ತಳಿ ಶಾಸ್ತ್ರಜ್ಞರಾದಂತಹ ಜೆ.ಬಿ.ಎಸ್ ಹಾಲ್ಡೆನ್ ಅವರು ಭಾರತದಲ್ಲಿ ನೆಲೆಸಿದರಲ್ಲದೆ ಭಾರತದ ಪೌರತ್ವ ಪಡೆದರು. ಭಾರತದ ಅಧಿಕಾರಶಾಹಿಯ ಜೊತೆಗೆ ಏಗಲಾರದೆ ಹಾಲ್ಡೆನ್ ಅವರು ನೆಹರೂ ಅವರಿಗೆ ಕೇಂದ್ರೀಯ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಸಂಸ್ಥೆಯನ್ನು (ಸಿ.ಎಸ್.ಐ.ಆರ್ ) ‘ಸ್ವತಂತ್ರ ಸಂಶೋಧನೆಯ ನಿಗ್ರಹ ಕೇಂದ್ರ’ ಎಂದು ಪುನರ್‌ ನಾಮಕರಣ ಮಾಡಿ ಎಂದು ಹೇಳಿದರಂತೆ.(ಇರ್ಫಾನ್ ಹಬೀಬ್ ಅವರ ‘ಸ್ವಾತಂತ್ರ‍್ಯ ಹೋರಾಟದ ಪರಂಪರೆ: ನೆಹರೂ ಅವರ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ನೋಟಗಳು’, ಸೋಷಿಯಲ್ ಸೈಂಟಿಸ್ಟ್, ಮಾರ್ಚ್-ಏಪ್ರಿಲ್, 2016).

ಭಾರತೀಯ ವಿಜ್ಞಾನಿಗಳಾದ ಮೇಘನಾದ ಸಾಹ, ಹುಸ್ಸೈನ್ ಜಾಹೀರ್, ಸಾಹಿಬ್ ಸಿಂಗ್ ಸೋಖೆ ಭಾರತದ ವಿಜ್ಞಾನದ ಮೂಲಪುರುಷರಷ್ಟೆ ಆಗಿರಲಿಲ್ಲ ಜೊತೆಗೆ ಅವರು ಭಾರತೀಯ ಕಮ್ಯುನಿಸ್ಟ್ ಪಕ್ಷದ ಆಪ್ತ ವಲಯದಲ್ಲೂ ಇದ್ದರು. ಅಮೇರಿಕಾದ ವಿದ್ವಾಂಸರ ಗೌರವಾನ್ವಿತರ ಪಟ್ಟಿಯಲ್ಲಿ ಇವರು ‘ಸಹಯಾನಿ’ಗಳು (ಕಮ್ಯುನಿಸ್ಟ್ ಒಲವು ಇರುವವರು) ಎಂದು ಗುರುತಿಸಲ್ಪಟ್ಟಿದ್ದರು. ಈ ಬಿರುದು ಕುಖ್ಯಾತ (ಚಾರ್ಲಿ ಚಾಪ್ಲಿನ್ ಸೇರಿದಂತೆ ಹಲವಾರು ಪ್ರಖ್ಯಾತ ಕಲಾವಿದರು ಮತ್ತು ವಿಜ್ಞಾನಿಗಳನ್ನು ‘ಸಹಯಾನಿʼಗಳೆಂದು ಬೇಟೆಯಾಡಿದ) ಮೇಖಾರ್ತಿ ಯುಗದ್ದು ಎಂದೇ ಜನಜನಿತವಾಗಿದೆ. ಮೇಘನಾದ ಸಾಹ ಅವರು ಹೋಮಿ ಜೆ ಬಾಬಾ ಅವರ ಜೊತೆ ಸೇರಿ ದೇಶದಲ್ಲಿ ಅಣು ಭೌತಶಾಸ್ತ್ರದ ಬುನಾದಿಯನ್ನು ಹಾಕಿದರು. ಹುಸೇನ್ ಜಾಹೀರ್ ಅವರು ಸಿ.ಎಸ್.ಐ.ಆರ್ ನ ಮಹಾ ನಿರ್ದೇಶಕರಾಗಿ ಅದನ್ನು ಗಮನಾರ್ಹವಾಗಿ ವಿಸ್ತರಿಸಿದರು.

ಸೋಖೆ ಅವರನ್ನು 1932ರಲ್ಲಿ ಹಾಫ್ಕಿನ್ ಇನ್ಸ್‌ಟಿಟ್ಯೂಟ್ ನ ಮೊದಲ ಭಾರತೀಯ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಅವರು ಭಾರತೀಯ ಬ್ರಿಟಿಷ್ ಸೇನೆಯಲ್ಲಿ ಕರ್ನಲ್ ಆಗಿದ್ದರೂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಯೋಜನಾ ಸಮಿತಿಯ ಆರೋಗ್ಯ ವಿಭಾಗದ ಮುಖ್ಯಸ್ಥರಾಗಿದ್ದರು. ಸ್ವಾತಂತ್ರ‍್ಯಾ ನಂತರ ಅವರು ಎರಡು ಸಾರ್ವಜನಿಕ ವಲಯದ ಉದ್ದಿಮೆಗಳಾದ ಐ.ಡಿ.ಪಿ.ಎಲ್(ಇಂಡಿಯನ್ ಡ್ರಗ್ಸ್ ಅಂಡ್ ಫಾರ್ಮುಸಿಟಿಕಲ್ಸ್ ಲಿಮಿಟೆಡ್) ಮತ್ತು ಎಚ್.ಎ.ಎಲ್ (ಹಿಂದುಸ್ತಾನ್ ಆಂಟಿಬಯೊಟಿಕ್ಸ್ ಲಿಮಿಟೆಡ್) ಗಳನ್ನು ಸ್ಥಾಪಿಸಿ ಭಾರತದ ಸ್ವಾವಲಂಬನೆಯ ಪಯಣ ಪ್ರಾರಂಭಿಸಿದರು. ಮುಂದೆ ಅವರು ಜಾಗತಿಕ ಶಾಂತಿ ಮಂಡಳಿಯ ಭಾಗವಾದ ಅಖಿಲ ಭಾರತ ಶಾಂತಿ ಮಂಡಳಿಯ ಅಧ್ಯಕ್ಷರಾದರು. ತದನಂತರ ಅವರು ಜಾಗತಿಕ ವೈಜ್ಞಾನಿಕ ಕೆಲಸಗಾರರ ಫೆಡರೇಷನ್ನಿನ ಭಾಗವಾದ ಭಾರತೀಯ ವೈಜ್ಞಾನಿಕ ಕೆಲಸಗಾರರ ಅಸೋಸಿಯೇಷನ್ ನ ಅಧ್ಯಕ್ಷರಾದರು. ಜವಹರಲಾಲ್ ನೆಹರೂ ಅವರು ಈ ಅಸೋಸಿಯೇಷನ್ನಿನ ಮೊದಲ ಅಧ್ಯಕ್ಷರಾಗಿದ್ದರು.

ಜೋಸೆಫ್ ನೀಢಾಮ್ ಅವರು ಅಂತರ್‌ ರಾಷ್ಟ್ರೀಯ ವೈಜ್ಞಾನಿಕ ಕಮಿಷನ್ನಿನ ಅಧ್ಯಕ್ಷತೆ ವಹಿಸಿ, ಕೊರಿಯ ಮತ್ತು ಚೀನಗಳ ವಿರುದ್ಧ ಬ್ಯಾಕ್ಟೀರಿಯಾ ಯುದ್ಧ ಮಾಡಿದ ಅಮೆರಿಕದ ಮೇಲೆ ಇದ್ದ ಆಪಾದನೆಯ ವಿಚಾರಣೆ ಮಾಡಿ ಅಮೇರಿಕವನ್ನು ತಪ್ಪಿತಸ್ಥ ದೇಶವೆಂದು 1952ರಲ್ಲಿ ತೀರ್ಪು ನೀಡಿದರು. ಸೋಖೆ ಅವರು ಈ ಕಮಿಷನ್ನಿನ ಭಾಗವಾಗಲು ಒಪ್ಪಿದ್ದರು. ಆದರೆ ಭಾರತ ಸರ್ಕಾರ ಕಮಿಷನ್ನಿನ ಭಾಗವಾಗಬೇಡಿ ಎಂದು ಹೇಳಿದ್ದರಿಂದ ಅವರು ಅದರ ಭಾಗವಾಗಲಿಲ್ಲ. ಅಮೇರಿಕ ಬಹುಕಾಲ ತಾನು ಕೊರಿಯಾ ಮತ್ತು ಚೀನಾಗಳ ವಿರುದ್ಧ ಜೈವಿಕ ಅಸ್ತ್ರ ಬಳಸಿದ್ದನ್ನು ಅಲ್ಲಗಳೆಯುತ್ತಲೇ ಇತ್ತು. ಅಮೆರಿಕಾದ ಇತ್ತೀಚಿಗೆ ಬಿಡುಗಡೆಗೊಂಡ ರಹಸ್ಯ ದಾಖಲೆಗಳು ನೀಢಾಮ್ ಕಮಿಷನ್ನಿನ ವರದಿಯ ಘಟನೆಗಳು ನಿಜವೆಂದು ಹೇಳುತ್ತವೆ. ಇವೆಲ್ಲಕ್ಕಿಂತ ಬರ್ಬರವೆನಿಸುವುದು ಜಪಾನಿನ 731ನೇ ಘಟಕ ಚೀನಿ ಮತ್ತು ಮೈತ್ರಿ ಕೈದಿಗಳ ವಿರುದ್ಧ ಜೈವಿಕ ಯುದ್ಧ ಪ್ರಯೋಗಗಳನ್ನು ಮಾಡಿ 3000 ಜನರನ್ನು ಕೊಂದಿದ್ದು. ಈ ಘಟಕದ ಸದಸ್ಯರಿಗೆ ಅಮೇರಿಕ ಯುದ್ಧ ಅಪರಾಧಗಳಿಂದ ಪೂರ್ತಿ ರಕ್ಷಣೆ ನೀಡಿತ್ತು. ಅದಕ್ಕೆ ಪ್ರತಿಯಾಗಿ ಅವರ ಎಲ್ಲ ಸಂಶೋಧನೆಗಳನ್ನು ಅಮೆರಿಕಾಕ್ಕೆ ಕೊಡಬೇಕೆಂಬ ಷರತ್ತು ವಿಧಿಸಲಾಗಿತ್ತು. ಅವರ ಈ “ಸಂಶೋಧನೆ” ಫೋರ್ಟ್ ಡೆಟ್ರಿಕ್ ನ ಕುಖ್ಯಾತ ಜೈವಿಕ ಅಸ್ತ್ರ ಸಂಶೋಧನಾ ಕೇಂದ್ರದ ಸ್ಥಾಪನೆಗೆ ಒತ್ತು ನೀಡಿತು.

ಸ್ವಾತಂತ್ರ‍್ಯಾನಂತರ ಎಡಪಂಥೀಯರ ಕೊಡುಗೆ ವೈಜ್ಞಾನಿಕ ಮೂಲ ಸೌಕರ್ಯಗಳ ಸ್ಥಾಪನೆಗೆ ಮತ್ತು ವೈಜ್ಞಾನಿಕ ಹಾಗೂ ಸಂಶೋಧನಾ ಸಂಸ್ಥೆಗಳ ವಿಸ್ತರಣೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಸ್ವಾವಲಂಬನೆಗಾಗಿಯೂ ಅವರು ಅವಿರತ ಹೋರಾಡಿದರು. ಆಳಕ್ಕೆ ಬೇರು ಬಿಟ್ಟಿದ್ದ ಬಹುರಾಷ್ಟ್ರೀಯ ಕಂಪನಿಗಳ ಜೊತೆಗೆ ದೃಢ ಹೋರಾಟವಿಲ್ಲದೆ ಇದು ಸಾಧ್ಯವಾಗಲಿಲ್ಲ. ಹಲವು ವಿಜ್ಞಾನಿಗಳು ಮತ್ತು ರಾಜಕಾರಣಿಗಳ ವಸಾಹತುಶಾಹಿ-ಗ್ರಸ್ತ ಮನೋಭಾವದ ವಿರುದ್ಧವೂ ಈ ಹೋರಾಟ ನಡೆಸಬೇಕಾಯಿತು. ಅದು ಇಂದಿಗೂ ಮುಂದುವರೆದಿದೆ.

ಒಂದೇ ಲೇಖನದಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಎಡಪಂಥೀಯರು ನೀಡಿದ ಕೊಡುಗೆಗಳೆಲ್ಲವನ್ನೂ ವಿವರಿಸುವುದು ಸಾಧ್ಯವಿಲ್ಲ. ನಾನು ಒಂದೇ ಕ್ಷೇತ್ರವನ್ನು ಎತ್ತಿಕೊಳ್ಳುತ್ತೇನೆ – ಅದು ಔಷಧಿಗಳ (ಫಾರ್ಮಸುಟಿಕಲ್ಸ್) ಉದ್ದಿಮೆ. ಕಥೆಯ ಕೆಲವು ಭಾಗಗಳನ್ನು ಅದು ಹೇಳುತ್ತದೆ. ಮೊದಲನೆಯದು ವೈಜ್ಞಾನಿಕ ಸಂಸ್ಥೆಗಳನ್ನು ಕಟ್ಟುವಲ್ಲಿ ಎಡಪಂಥೀಯರ ಪಾತ್ರ ಮತ್ತು ಈ ಸಂಸ್ಥೆಗಳನ್ನು ನಮ್ಮ ಸ್ವಾವಲಂಬನೆಯ ಪ್ರಯತ್ನದ ಭಾಗವಾಗಿಸಿ ವೈಜ್ಞಾನಿಕ ಮೇಲ್ನೋಟವನ್ನು ಬೆಳೆಸುವ ಬಹುಮುಖ್ಯ ಕಾರ್ಯ. ಎರಡನೆಯದು ವಿಜ್ಞಾನದ ಮುನ್ನಡೆಗೆ ಅವರು ನೀಡಿದ ಕೊಡುಗೆ. ಈ ಕಥೆಯನ್ನು ಇತ್ತೀಚೆಗೆ ಲೆಫ್ಟ್ ವರ್ಡ್ ಪ್ರಕಾಶನ ಹೊರತಂದಿರುವ ಅಮಿತ್ ಸೇನ್ ಗುಪ್ತ ಅವರ ಮತ್ತು ಅವರ ಗೌರವಾರ್ಥ ಪ್ರಬಂಧಗಳಿರುವ “ಆರೋಗ್ಯ ಕ್ಷೇತ್ರದಲ್ಲಿ ರಾಜಕೀಯ ಪಯಣಗಳು” ಎಂಬ ಪುಸ್ತಕದಲ್ಲಿನ ಪ್ರಬಂಧಗಳಲ್ಲಿ ವಿವರವಾಗಿ ನೀಡಲಾಗಿದೆ.

ಬ್ರಿಟಿಷರು ಭಾರತವನ್ನು ಬಿಟ್ಟು ಹೋದಾಗ ಔಷಧಗಳ ಉದ್ದಿಮೆ ಬ್ರಿಟಿಷ್ ಬಂಡವಾಳದ ಕೈಯಲ್ಲೇ ಇತ್ತು. ಔಷಧಗಳ ಸಕ್ರಿಯ ಪದಾರ್ಥಗಳನ್ನು ಯುನೈಟೆಡ್ ಕಿಂಗ್ಡಮ್‌ ನಲ್ಲಿ ಉತ್ಪಾದಿಸಿ ಇಲ್ಲಿ ಅದನ್ನು ಪ್ಯಾಕೇಜ್ ಮಾಡಿ ಮಾರಲಾಗುತ್ತಿತ್ತು. ಭಾರತದಲ್ಲಿ ಸಣ್ಣ ಔಷಧಿ ಕಂಪನಿಗಳಿದ್ದವು. ಅವುಗಳಲ್ಲಿ ವೈಜ್ಞಾನಿಕ ಸಂಶೋಧನೆಯ ಬಲವಿರಲಿಲ್ಲ. ಅಲ್ಲದೆ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಸೆಣಸುವ ಮತ್ತು  ಬ್ರಿಟಿಷರ ಕಾಲದ ಭಾರತೀಯ ಪೇಟೆಂಟ್ ಕಾಯಿದೆಯ ವಿರುದ್ಧ ಹೋರಾಡುವ ತಾಕತ್ತು ಇರಲಿಲ್ಲ.

ಇದು ಎರಡು ಮಜಲಿನ ಹೋರಾಟವಾಗಿತ್ತು. ಭಾರತೀಯ ಪೇಟೆಂಟ್ ಕಾಯಿದೆಗಳನ್ನು ಭಾರತೀಯರ ಹಿತಾಸಕ್ತಿಗಳಿಗೆ ತಕ್ಕಂತೆ ಬದಲಿಸುವುದು ಮತ್ತು ವೈಜ್ಞಾನಿಕ ಮೂಲ ಸೌಕರ್ಯಗಳನ್ನು ಹಾಗೂ ಅದರ ಅರಿವನ್ನು ಸ್ಥಳೀಯ  ಔಷಧಿ ಉದ್ದಿಮೆಯಲ್ಲಿ ಬೆಳೆಸುವುದು. ಪೇಟೆಂಟ್ ಕಾನೂನಿನ ಕಥೆ ಮತ್ತು ಅದರಲ್ಲಿ ಎಡಪಂಥೀಯರ ಪಾತ್ರದ ಕುರಿತು ಈ ಹಿಂದೆ ಈ ಪತ್ರಿಕೆಯಲ್ಲಿ ಬರೆಯಲಾಗಿದೆ. ಇಲ್ಲಿ ವೈಜ್ಞಾನಿಕ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ನೋಡಬಹುದು.

ಸಾಹಿಬ್ ಸಿಂಗ್ ಸೋಖೆ ಅವರು ಹಾಫ್ಕಿನ್ ಸಂಸ್ಥೆಯ ಮೊದಲ ಭಾರತೀಯ ನಿರ್ದೇಶಕರಾಗಿ ಗೃಹ ಕೈಗಾರಿಕೆಯಂತಿದ್ದ ಅದನ್ನು ಲಸಿಕೆ ಉತ್ಪಾದಿಸುವ ಅತ್ಯಂತ ಆಧುನಿಕ ಬೃಹತ್ ಸೌಲಭ್ಯವನ್ನಾಗಿ ಪರಿವರ್ತಿಸಿದರು. ಈ ಮೂಲ ತಂಡವೇ ಮುಂದೆ ಸೋವಿಯೆಟ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ನೆರವಿನಿಂದ ಭಾರತದ ಸಾರ್ವಜನಿಕ ವಲಯದ ಬಹುಮುಖ್ಯ ಔಷಧ ಉದ್ದಿಮೆಗಳಾದ ಎಚ್.ಎ.ಎಲ್ ಮತ್ತು ಐ.ಡಿ.ಪಿ.ಎಲ್ ಗಳ ಸಾಮರ್ಥ್ಯಕ್ಕೆ ಕಾರಣವಾಯಿತು.

ಹಾಗೆಯೇ ಹುಸೇನ್ ಜಹೀರ್ ಅವರ ನೇತೃತ್ವದ ಸಿ.ಎಸ್.ಐ.ಆರ್ ನ ಮೂಲಸೌಕರ್ಯಗಳು, ನಿತ್ಯಾನಂದ ಅವರ ನಿರ್ದೇಶನತ್ವದ ಲಕ್ನೌ ಕೇಂದ್ರೀಯ ಔಷಧಿ  ಸಂಶೋಧನಾ ಸಂಸ್ಥೆ  ಮತ್ತು ರಾಷ್ಟ್ರೀಯ ರಸಾಯನ ಪ್ರಯೋಗಾಲಯ ಪುಣೆ, ಇವೆಲ್ಲ  ಸೇರಿ ಭಾರತೀಯ ಔಷಧಿ ಉದ್ದಿಮೆಯನ್ನು ಬಹುರಾಷ್ಟ್ರೀಯ ಕಂಪನಿಗಳ ಕುಣಿಕೆಯಿಂದ ತಪ್ಪಿಸಲು ಸಾಧ್ಯವಾಯಿತು. ಪಿ.ಎಂ.ಭಾರ್ಗವ ಅವರ ಹೈದರಾಬಾದಿನ ಸಿ.ಸಿ.ಎಂ.ಬಿ (ಸೆಂಟರ್ ಫಾರ್ ಸೆಲ್ ಅಂಡ್ ಮೊಲೆಕ್ಯುಲರ್ ಬಯಾಲಜಿ) ಯ ಅನನ್ಯ ಕೊಡುಗೆಯಿಂದಾಗಿ ಭಾರತೀಯ ಔಷಧಿ ಕ್ಷೇತ್ರದಲ್ಲಿ ಜೈವಿಕ ಕ್ರಾಂತಿ ಸಾಧ್ಯವಾಯಿತು. ಇಂದು ಭಾರತ ಜಗತ್ತಿನಲ್ಲೇ ಜೆನೆರಿಕ್ ಔಷಧಿಗಳು ಮತ್ತು ಲಸಿಕೆಗಳನ್ನು ತಯಾರಿಸುವ ಬಹುಮುಖ್ಯ ದೇಶವಾಗಿ ಹೊರಹೊಮ್ಮಿದೆ. ಈ ವಿಜ್ಞಾನಿಗಳು ಹಾಕಿಕೊಟ್ಟ ಭದ್ರ ಅಡಿಪಾಯ ಇದನ್ನು ಸಾಧ್ಯಗೊಳಿಸಿತು. ನಾವಿಂದು ಈ ವಿಜ್ಞಾನಿಗಳ ಕೊಡುಗೆಗಳನ್ನು ನೆನೆಯಬೇಕು.

ನಾವಿಂದು ಜಾತಿ-ಪ್ರಣೀತ ಶ್ರೇಣೀಕೃತ, ಬ್ರಾಹ್ಮಣೀಕೃತ ವ್ಯವಸ್ಥೆಯ ಆಧಿಪತ್ಯ ಎದುರಿಸುತ್ತಿದ್ದೇವೆ. ಈ ವ್ಯವಸ್ಥೆಯಲ್ಲಿ  ಧರ್ಮಗ್ರಂಥಗಳ ಬಗ್ಗೆ ಪೂರ್ತಿ ವಿಧೇಯತೆಯಿಂದ ಇರುವುದನ್ನು ಬಯಸಲಾಗುತ್ತದೆ ಹೊರತು ಪ್ರಶ್ನಿಸುವ ಮನೋಭಾವವನ್ನಲ್ಲ. ಇಂತಹ ವ್ಯವಸ್ಥೆಯಲ್ಲಿ ವಸಾಹತುಶಾಹಿ ಧೋರಣೆಯ ಪ್ರಭುಗಳಿಗೆ ಅಥವಾ ಅಧಿಕಾರದಲ್ಲಿರುವ ರಾಜಕೀಯ ಪಕ್ಷಕ್ಕೆ ವಿಮರ್ಶಾತ್ಮಕ ಚಿಂತನೆ ಮತ್ತು ಪ್ರಶ್ನಿಸುವುದು ಎರಡೂ ರಾಜದ್ರೋಹವಾಗುತ್ತದೆ. ಜನ ವಿಜ್ಞಾನ  ಚಳುವಳಿಗಳಲ್ಲಿ ವಿಜ್ಞಾನ ಮತ್ತು ವಿಮರ್ಶಾತ್ಮಕ ಚಿಂತನೆಗಳನ್ನು ಜನ ಚಿಂತನೆಯ ಭಾಗವನ್ನಾಗಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಅವಿವೇಕ, ದ್ವೇಷ ಮತ್ತು ಸಾಮಾಜಿಕ ವಿಭಜಕ ಶಕ್ತಿಗಳೇ ಮೆರೆಯುತ್ತಿರುವ ಈ ಸಂದರ್ಭದಲ್ಲಿ ವಿಜ್ಞಾನ ಮತ್ತು ವಿವೇಕ ಹೋರಾಟದ ಅಸ್ತ್ರಗಳಾಗಬೇಕಾಗಿದೆ. ಆ ಕಥೆ ಮತ್ತು ಅದರ ಜೊತೆಗಿನ ಹಲವು ಇತರ ಕತೆಗಳನ್ನು ಇನ್ನೊಂದು ದಿನ ನೋಡೋಣ.

ಅನು: ಜಿ.ಎಸ್. ಮಣಿ

Leave a Reply

Your email address will not be published. Required fields are marked *