ಕೇರಳ ಮೂಲರಚನೆ ಹೂಡಿಕೆ ಮಂಡಳಿಯ ವಿರುದ್ಧ ಇ.ಡಿ. ಮೂಲಕ ಕ್ರಮ

ಎಲ್‍.ಡಿ.ಎಫ್‍. ಸರಕಾರದ ಹೆಸರುಗೆಡಿಸುವ ನಿರ್ಲಜ್ಜ ಕ್ರಮ

ಕೇಂದ್ರ ಸರಕಾರದ ಹಣಕಾಸು ಮಂತ್ರಾಲಯದ ಅಡಿಯಲ್ಲಿರುವ ಜಾರಿ ನಿರ್ದೇಶನಾಲಯ(ಇ.ಡಿ.) ಕೇರಳ ಮೂಲರಚನೆ ಹೂಡಿಕೆ ನಿಧಿ ಮಂಡಳಿ(ಕೆ.ಐ.ಐ.ಎಫ್‍.ಬಿ.) ವಿರುದ್ಧ ಒಂದು ಪ್ರಕರಣವನ್ನು ದಾಖಲಿಸಿಕೊಂಡಿರುವುದು ಕೇಂದ್ರ ಸರಕಾರ ಇ.ಡಿ.ಯನ್ನು ಒಂದು ರಾಜಕೀಯ ಉಪಕರಣವಾಗಿ ಬಳಸುವ ಒಂದು ನಾಚಿಕೆಗೆಟ್ಟ ದುರುಪಯೋಗವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಬಲವಾಗಿ ಖಂಡಿಸಿದೆ.

ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್  ಕೇರಳದಲ್ಲಿ ಬಿಜೆಪಿ ಚುನಾವಣಾ ಸಭೆಯಲ್ಲಿ ಮಾತಾಡುತ್ತ ಕೆ.ಐ.ಐ.ಎಫ್.ಬಿ. ವಿರುದ್ಧ ಮತ್ತು ಮತ್ತು ಎಲ್‍.ಡಿ.ಎಫ್‍. ಸರಕಾರದ ವಿರುದ್ಧ  ಆಧಾರರಹಿತ ಆಪಾದನೆಗಳನ್ನು ಮಾಡಿದರು. ಇದನ್ನು ಅನುಸಸರಿಸಿ ಇ.ಡಿ. ಈ ಸಂಪೂರ್ಣವಾಗಿ ಅಸಮರ್ಥನೀಯವಾದ ಕ್ರಮವನ್ನು ಕೈಗೊಂಡಿದೆ.

KIIFBಕೆ.ಐ.ಐ.ಎಫ್‍.ಬಿ  ವಿರುದ್ಧ ಇ.ಡಿ.  ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ(ಎಫ್‍.ಇ.ಎಂ.ಎ,) ನಿಯಮಗಳ ಉಲ್ಲಂಘನೆಯ ಕೇಸನ್ನು ದಾಖಲಿಸಿದೆ. ಮತ್ತು ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿ.ಇ.ಒ.) ಮತ್ತು ಡೆಪ್ಯುಟಿ ಮೆನೇಜಿಂಗ್‍ ಡೈರೆಕ್ಟರ್‍ ನ್ನು ವಿಚಾರಣೆಗೆ ಬರಲು ಆದೇಶ ನೀಡಿದೆ. ಇದು ಒಂದು ರಾಜ್ಯಸರಕಾರ ಪ್ರಾಯೋಜಿತ ಸಂಸ್ಥೆಯ ಮೇಲೆ ಒಂದು ಗಂಭೀರ ಪ್ರಹಾರ. ಕಾರ್ಪೊರೇಟ್‍ ಸಂಸ್ಥೆಯಾಗಿ ಕೆ.ಐ.ಐ.ಎಫ್‍.ಬಿ.ಗೆ ವಾಣಿಜ್ಯ ಸಾಲಗಳನ್ನು ಎತ್ತುವ ಹಕ್ಕಿದೆ. ರಿಝರ್ವ್‍ ಬ್ಯಾಂಕ್‍ ಆಫ್‍ ಇಂಡಿಯಾದ ಮಂಜೂರಾತಿಯಿಂದಲೇ ಅದು ವಿದೇಶಗಳಲ್ಲಿ ಮಸಾಲಾ ಬಾಂಡ್‍ಗಳನ್ನು ಕೊಟ್ಟಿದೆ ಎಂಬ ಸಂಗತಿಯತ್ತ ಪೊಲಿಟ್‍ ಬ್ಯುರೊ ಗಮನ ಸೆಳೆದಿದೆ.

ಈ ಇ.ಡಿ. ಕ್ರಮ ಚುನಾವಣೆಗಳ ಪ್ರಕಟಣೆಯ ನಂತರ ಬಂದಿರುವುದು ಇನ್ನಷ್ಟು ನಿಂದನೀಯ. ಏಕೆಂದರೆ ಎಲ್‍.ಡಿ.ಎಫ್‍. ಸರಕಾರದ ಮತ್ತು ಕೆ.ಐ.ಐ.ಎಫ್‍.ಬಿ. ಆಶ್ರಯದಲ್ಲಿ ಕೈಗೊಂಡಿರುವ ವಿಸ್ತಾರವಾದ ಅಭಿವೃದ್ಧಿ ಕೆಲಸಗಳ ಹೆಸರುಗೆಡಿಸುವ ಒಂದು ನಾಚಿಕೆಹೀನ ಪ್ರಯತ್ನವಿದು. ಅಲ್ಲದೆ ಇದು ಒಕ್ಕೂಟ ತತ್ವದ ಒಂದು ಗಂಭೀರ ಉಲ್ಲಂಘನೆ ಎಂದೂ ಖಂಡಿಸಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹಣಕಾಸು ಮಂತ್ರಿಗಳು ಮತ್ತು ಇ.ಡಿ. ತಕ್ಷಣವೇ ಕೆ.ಐ.ಐ.ಎಫ್‍.ಬಿ. ವಿರುದ್ಧ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *