1991ರ ಪೂಜಾಸ್ಥಳಗಳ ಕಾಯ್ದೆ ಹಾಗೆಯೇ ಉಳಿಯಬೇಕು

ಸುಪ್ರಿಂ ಕೋರ್ಟ್  ಪೂಜಾಸ್ಥಳಗಳು(ವಿಶೇಷ (ವಿಧಿ) ಕಾಯ್ದೆ, 1991 ರ ಮರು ಪರೀಕ್ಷಣೆಗೆ ದಾರಿ ಮಾಡಿಕೊಟ್ಟಿರುವುದು ದುರದೃಷ್ಟಕರ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ಈ ಕಾಯ್ದೆ ಎಲ್ಲ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಆಗಸ್ಟ್ 15, 1947 ರಂದು ಇದ್ದಂತೆ ಕಾಯ್ದುಕೊಳ್ಳಬೇಕು, ಪೂಜಾಸ್ಥಳಗಳ ಸ್ವರೂಪಕ್ಕೆ ಸಂಬಂಧಪಟ್ಟಂತೆ ಯಾವುದೇ ವ್ಯಾಜ್ಯ ಅಥವ ಕಲಾಪ ಒಂದು ನ್ಯಾಯಾಲಯದಲ್ಲಿ ಇರಬಾರದು ಎಂದು ವಿಧಿಸುತ್ತದೆ.

ಇದು ಆಗಸ್ಟ್ 15, 1947ರಂದು ಇದ್ದ ಪೂಜಾಸ್ಥಳಗಳ ಮೇಲೆ ವಿವಾದಗಳನ್ನು ಎಬ್ಬಿಸುವ ಯಾವುದೇ ಮೊಕದ್ದಮೆಯನ್ನು ನ್ಯಾಯಾಲಯಗಳು ಎತ್ತಿಕೊಳ್ಳದಂತೆ ನಿಷೇಧಿಸುತ್ತದೆ. ಅದಾಗಲೇ ನ್ಯಾಯಾಲಯಗಳಲ್ಲಿ ಇದ್ದ ಇಂತಹ ಮೊಕದ್ದಮೆಗಳು ವಜಾ ಆಗುತ್ತವೆ ಎಂದೂ ಅದು ವಿಧಿಸುತ್ತದೆ.

ಆದರೆ ಈ ಕಾಯ್ದೆ, ಆಗ ವಿವಾದದಲ್ಲಿ ಇದ್ದ ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿ/ರಾಮಜನ್ಮಭೂಮಿಯನ್ನು ಮಾತ್ರವೇ ಇದಕ್ಕೆ ಹೊರತುಪಡಿಸಿತ್ತು. ಈ ವಿನಾಯ್ತಿಯನ್ನು ಉಲ್ಲೇಖಿಸಿ ಸುಪ್ರಿಂ ಕೋರ್ಟ್ 2019ರ ಅಯೋಧ್ಯಾ ತೀರ್ಪಿನಲ್ಲಿ  ಈ ಕಾಯ್ದೆಯಿಂದಾಗಿ ಇದನ್ನು ಇಂತಹ ಬೇರೆ ಪ್ರಕರಣಗಳನ್ನು ಸ್ವೀಕರಿಸುವುದಿಲ್ಲ ಎಂದು ಮತ್ತೊಮ್ಮೆ ದೃಢಪಡಿಸಿತ್ತು ಎಂದು ನೆನಪಿಸಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಯಾವ ಆಧಾರಗಳಲ್ಲಿ ಈ ಶಾಸನವನ್ನು ತರಲಾಗಿತ್ತೋ ಅವುಗಳನ್ನು ಮರು ಪರೀಕ್ಷಣೆ ಮಾಡುವ ಅಗತ್ಯವೇನೂ ಇಲ್ಲ ಎಂದು ಮತ್ತೊಮ್ಮೆ ದೃಢೀಕರಿಸಿದೆ.

ಕೇಂದ್ರ ಸರಕಾರ  ಈ ಕುರಿತು ಸುಪ್ರಿಂ ಕೋರ್ಟ್ ಅಭಿಪ್ರಾಯವನ್ನು ತಿಳಿಸಬೇಕೆಂದು  ಕೇಳಿರುವುದಕ್ಕೆ ಉತ್ತರವಾಗಿ ಪೂಜಾ ಸ್ಥಳಗಳ ಕಾಯ್ದೆ, 1991ನ್ನು ಬಲವಾಗಿ ದೃಢೀಕರಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *