ಭಾರತವನ್ನು ಮಾರಾಟ ಮಾಡುವುದನ್ನು ನಿಲ್ಲಿಸಿ

ಜನತೆಯ ಸಂಪತ್ತಿನ ಲೂಟಿಯನ್ನು ಪ್ರತಿರೋಧಿಸಲು ಜನತೆಗೆ ಕರೆ

ಕೇಂದ್ರ ಸರಕಾರ ಭಾರತವನ್ನು ಮಾರಾಟ ಮಾಡುವುದನ್ನು ಅಧಿಕೃತವಾಗಿ ಪ್ರಕಟಿಸಿದೆ. ಆಗಸ್ಟ್ 23ರಂದು ಬಿಡುಗಡೆ ಮಾಡಿರುವ ‘ರಾಷ್ಟ್ರೀಯ ನಗದೀಕರಣ ಕ್ರಮಸರಣಿ’(ನ್ಯಾಷನಲ್‍ ಮೊನಿಟೈಸೇಷನ್‍ ಪೈಪ್‍ ಲೈನ್-ಎನ್‍ಎಂಪಿ) ನಮ್ಮ ರಾಷ್ಟ್ರೀಯ ಆಸ್ತಿಗಳ ಮತ್ತು ಮೂಲರಚನೆಗಳ ಲೂಟಿಯ ವಿವರಗಳನ್ನು ಕೊಡುತ್ತದೆ. ಇದು ಜನಗಳ ಸಂಪತ್ತಿನ ನೇರ ಲೂಟಿ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ ಖಂಡಿಸಿದೆ.

ದೈನಂದಿನ ವೆಚ್ಚಗಳನ್ನು ಭರಿಸಲಿಕ್ಕೆ ಕುಟುಂಬದ ಬೆಲೆಬಾಳುವ ವಸ್ತುಗಳನ್ನು ಮಾರುವುದು ಆರ್ಥಿಕವಾಗಿಯೂ ಮತ್ತು ಸಾಮಾನ್ಯ ದೃಷ್ಟಿಯಲ್ಲೂ ಅರ್ಥಹೀನ. ನಮ್ಮ ರಾಷ್ಟ್ರೀಯ ಆಸ್ತಿಗಳನ್ನು, ಮಾರುಕಟ್ಟೆ ಮಂದಗೊಂಡಿರುವಾಗ ಬಹಳ ಅಗ್ಗದಲ್ಲಿ ಮಾರುವುದರಿಂದ ಬಂಟ ಕಾರ್ಪೊರೇಟ್‍ಗಳಿಗೆ ಮಾತ್ರವೇ ಪ್ರಯೋಜನ ಒದಗುತ್ತದೆ ಮತ್ತು ಇದು ಬಂಟ ಬಂಡವಾಳಶಾಹಿಯನ್ನು ಪ್ರೋತ್ಸಾಹಿಸುತ್ತದೆ ಎಂದು ಕಟುವಾಗಿ ಟೀಕಿಸಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಇದನ್ನು ಪ್ರತಿಭಟಿಸಬೇಕು ಮತ್ತು ನಮ್ಮ ರಾಷ್ಟ್ರೀಯ ಆಸ‍್ತಿಗಳ ಈ ಲೂಟಿಯನ್ನು ಪ್ರತಿರೋಧಿಸಬೇಕು ಎಂದು ಜನತೆಗೆ ಕರೆ ನೀಡಿದೆ.

Leave a Reply

Your email address will not be published. Required fields are marked *