ರಾಜಕೀಯ ಬೆಳವಣಿಗೆಗಳ ಕುರಿತು ಸಿಪಿಐ(ಎಂ) ಕೇಂದ್ರ ಸಮಿತಿ ವರದಿ-ಅಗಸ್ಟ್ 2021

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕೇಂದ್ರ ಸಮಿತಿ

ರಾಜಕೀಯ ಬೆಳವಣಿಗೆಗಳ ಕುರಿತು ವರದಿ
(ಆಗಸ್ಟ್ 06-08, 2021ರಂದು ನಡೆದ ಕೇಂದ್ರ ಸಮಿತಿಯ ಸಭೆಯಲ್ಲಿ ಅಂಗೀಕರಿಸಲಾಗಿದೆ)

ಪುಸ್ತಕ ಆವೃತ್ತಿಯಲ್ಲಿ ಓದಲು ಕ್ಲಿಕ್‌ ಮಾಡಿರಿ…..

ಕೇಂದ್ರ ಸಮಿತಿಯು ಸಭೆ ಸೇರಿ ಆರು ತಿಂಗಳುಗಳು ಮೀರಿವೆ.  ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪಾಂಡಿಚೇರಿಯ ವಿಧಾನಸಭೆಗಳ ಚುನಾವಣೆಗಳು ಮತ್ತು ಕೊವಿಡ್ ಮಹಾಸೋಂಕಿನ ಎರಡನೇ ಅಲೆಯು ಇಂತಹ ಪರಿಸ್ಥಿತಿಯನ್ನು ಸೃಷ್ಟಿಸಿತು.  ಈ ದೀರ್ಘ ಕಾಲಾವಧಿಯ ಅಂತರದಲ್ಲಿ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯವಾಗಿ ನಮ್ಮ ಗಮನಿಸಬೇಕಾದ ಮತ್ತು ತಿಳಿದುಕೊಳ್ಳಬೇಕಾದ ಅನೇಕ ಪ್ರಮುಖ ಬೆಳವಣಿಗೆಗಳು ನಡೆದಿವೆ.

ಅಂತರರಾಷ್ಟ್ರೀಯ

 ಕೋವಿಡ್ ಮಹಾಸೋಂಕು

ಕೋವಿಡ್ ಮಹಾಸೋಂಕು  ಜಾಗತಿಕವಾಗಿ ನಿರಂತರವಾಗಿ ಅನಾಹುತವುಂಟು ಮಾಡುತ್ತಿದೆ ಮತ್ತು  ಕೆಲವು ದೇಶಗಳು ಪ್ರಕರಣಗಳ ಸಂಖ್ಯೆಯಲ್ಲಿ ಹೊಸ ಏರಿಕೆಯನ್ನು ಕಾಣುತ್ತಿವೆ.  ಆಗಸ್ಟ್ 1, 2021 ರ ಹೊತ್ತಿಗೆ, ಸುಮಾರು 20 ಕೋಟಿ (19,90,25,424) ಜನರು ಸೋಂಕಿಗೆ ಒಳಗಾಗಿದ್ದರು ಮತ್ತು ಸಾವುಗಳು 40 ಲಕ್ಷಕ್ಕಿಂತ ಹೆಚ್ಚು (42,40,425). ಪ್ರತಿದಿನ ಸುಮಾರು ಐದು ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, 8,000 ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಈಗಾಗಲೇ ಹಲವು ಅಭಿವೃದ್ಧಿ ಹೊಂದಿದ ದೇಶಗಳ ಮೇಲೆ ಪರಿಣಾಮ ಬೀರಿರುವ ಡೆಲ್ಟಾ ರೂಪಾಂತರದ ಹೊಸ ಏರಿಕೆಯ ಆತಂಕ ಆವರಿಸಿದೆ.  ಚೀನಾದಲ್ಲಿ ಡೆಲ್ಟಾ ರೂಪಾಂತರದ ಏರಿಕೆ ಚೀನಾದ 33 ಪ್ರಾಂತ್ಯಗಳಲ್ಲಿ 17 ರಲ್ಲಿ 35 ನಗರಗಳನ್ನು ತಲುಪಿದೆ. ಚೀನಾದ ವಿವಿಧ ಭಾಗಗಳಲ್ಲಿ ಹೊಸದಾಗಿ ಲಾಕ್‌ಡೌನ್‌ಗಳನ್ನು ಜಾರಿಗೊಳಿಸಲಾಗಿದೆ.  ಚೀನಾ ದೇಶದಾದ್ಯಂತ ಮತ್ತೊಮ್ಮೆ ಎಲ್ಲರನ್ನು ಪರೀಕ್ಷಿಸಲಾಗುತ್ತಿದೆ.

ಜಾಗತಿಕ ಲಸಿಕೆ ಅಸಮಾನತೆಗಳು

ಲಸಿಕೆ ಹಾಕುವುದು (ವ್ಯಾಕ್ಸಿನೇಷನ್) ತ್ವರಿತ ಗತಿಯಲ್ಲಿ ಸಾಗದಿದ್ದರೆ ಮತ್ತು ಅದು ಸಾರ್ವತ್ರಿಕವಾಗದ ಹೊರತು, ಮಹಾಸೋಂಕನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ.  ಜಾಗತಿಕ ಲಸಿಕೆ ಅಸಮಾನತೆಯ ಅತಿ ಹೆಚ್ಚಿನ ಮಟ್ಟದಿಂದಾಗಿ ಇದರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.  ಕಡಿಮೆ ಆದಾಯದ ದೇಶಗಳಿಗೆ ಹೋಲಿಸಿದರೆ ಹೆಚ್ಚಿನ ಆದಾಯದ ದೇಶಗಳ ತಲಾ ಲಸಿಕೀಕರಣದ ಪ್ರಮಾಣ (ಅಂದರೆ ಡೋಸುಗಳ ಸಂಖ್ಯೆಯನ್ನು ಜನಸಂಖ್ಯೆಯಿಂದ ಭಾಗಿಸಿದರೆ ಬರುವ ಸಂಖ್ಯೆ) ಸುಮಾರು 70 ಪಟ್ಟು ಹೆಚ್ಚು  ವಿಶ್ವ ಜನಸಂಖ್ಯೆಯ ಶೇಕಡಾ 16 ರಷ್ಟಿರುವ ದೇಶಗಳು ಜಾಗತಿಕವಾಗಿ ಲಭ್ಯವಿರುವ ಡೋಸ್‌ಗಳಲ್ಲಿ ಶೇ. 50 ವನ್ನು ಮೊದಲೇ ಖರೀದಿಸಿವೆ. ಡಬ್ಲ್ಯುಎಚ್‌ಒ ಪ್ರಕಾರ 31.4 ಮಿಲಿಯನ್ ಡೋಸ್‌ಗಳನ್ನು 50 ಆಫ್ರಿಕನ್ ದೇಶಗಳಲ್ಲಿ ನೀಡಲಾಗಿದೆ ಅಂದರೆ ಕೇವಲ ಶೇ. 2 ರಷ್ಟು ಜನರು ಒಂದೇ ಡೋಸ್ ಪಡೆಯುತ್ತಿದ್ದಾರೆ. ಪ್ರಪಂಚದಾದ್ಯಂತದ 10 ದೇಶಗಳು ಜಾಗತಿಕವಾಗಿ ನೀಡಲಾಗುವ ಲಸಿಕೆಯ ಶೇ.77ನ್ನು ಹೊಂದಿವೆ.

ಈ ಅಸಮಾನತೆಗಳಿಗೆ ಒಂದು ಕಾರಣವೆಂದರೆ ಅಭಿವೃದ್ಧಿ ಹೊಂದಿದ ದೇಶಗಳು ಅವುಗಳ ಅಗತ್ಯಗಳಿಗಿಂತ ಹಲವು ಪಟ್ಟು ಹೆಚ್ಚು ಲಸಿಕೆಗಳನ್ನು ಸಂಗ್ರಹಿಸಿದ್ದಾರೆ.  ಈ ದೇಶಗಳು 100 ಕೋಟಿ ಡೋಸ್‌ಗಳನ್ನು ಹಂಚಿಕೊಂಡರೆ, ಅವರ 12 ವರ್ಷಗಳ ಮೇಲ್ಪಟ್ಟ ಜನಸಂಖ್ಯೆಯ ಶೇ.80 ರಷ್ಟು ಲಸಿಕೆ ಹಾಕಲು ಅವರು ಇನ್ನೂ ಸಾಕಷ್ಟು  ಡೋಸ್ ಗಳನ್ನು ಹೊಂದಿರುತ್ತಾರೆ.

ಇತರೆ ಅಂಶವೆಂದರೆ ಲಸಿಕೆಗಳ ಮೇಲೆ ಪೇಟೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸುವುದು, ಹೆಚ್ಚಿನ ಬಡ ದೇಶಗಳು ಹೆಚ್ಚಿನ ಬೆಲೆಗಳಿಂದಾಗಿ ಅಗತ್ಯ ಪ್ರಮಾಣದ ಲಸಿಕೆಗಳನ್ನು ಪಡೆಯುವುದನ್ನು ಪ್ರತಿಬಂಧಿಸುತ್ತದೆ.

ಬಂಡವಾಳಶಾಹಿ ಜಗತ್ತಿನಲ್ಲಿ ಅಸಮರ್ಪಕ ಸಾರ್ವಜನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಗಳನ್ನು ಈ ಮಹಾಸೋಂಕು ಬಹಿರಂಗಪಡಿಸಿದರೆ, ಅವುಗಳಲ್ಲಿ ಅತಿ ಕೆಟ್ಟ ಪರಿಸ್ಥಿತಿ ಬಡ ದೇಶಗಳದ್ದಾಗಿದೆ.  ಲಸಿಕೆ ಅಸಮಾನತೆ ಮತ್ತು ಕಳಪೆ ಸಾರ್ವಜನಿಕ ಆರೋಗ್ಯವು ಅಮಾನವೀಯ ಅನಾಹುತಕಾರಿ ಪರಿಣಾಮವನ್ನು ಉಂಟುಮಾಡಿದೆ.

ಜಾಗತಿಕವಾಗಿ ಇಡೀ ಜನಸಂಖ್ಯೆಯನ್ನು ರಕ್ಷಿಸದ ಹೊರತು, ಯಾರೂ ಸುರಕ್ಷಿತವಾಗಿರುವುದಿಲ್ಲ. ಮುಂದುವರೆದ ಮಹಾಸೋಂಕು,  ಹೊಸ ರೂಪಾಂತರಗಳ ಬೆಳವಣಿಗೆಗೆ ಪರಿಸ್ಥಿತಿಯನ್ನು ಸಿದ್ಧಪಡಿಸುತ್ತಾ ಹೋಗುತ್ತದೆ. ಮತ್ತು ಅದು ಪ್ರಸ್ತುತ ಲಸಿಕೆಗಳಿಂದ ಒದಗಿಸಲಾದ ರೋಗ ನಿರೋಧಕ ಶಕ್ತಿಯನ್ನೂ ವಿಫಲಗೊಳಿಸುತ್ತದೆ.  ಇದು ಜಾಗತಿಕವಾಗಿ ವಿಶೇಷವಾಗಿ ಬಡ ರಾಷ್ಟ್ರಗಳಲ್ಲಿ ಹೊಸ ಆರೋಗ್ಯ ದುರಂತಕ್ಕೆ ಕಾರಣವಾಗುತ್ತದೆ.

ಮತ್ತೊಂದೆಡೆ, ಚೀನಾ 100 ಕ್ಕೂ ಹೆಚ್ಚು ದೇಶಗಳಿಗೆ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ 50 ಕೋಟಿ ಲಸಿಕೆ ಡೋಸುಗಳನ್ನು ಪೂರೈಸಿದೆ.  ಇದು ಜಾಗತಿಕವಾಗಿ ಅತಿಹೆಚ್ಚು ಲಸಿಕೆಗಳನ್ನು ಒದಗಿಸಿರುವ ದೇಶವಾಗಿದೆ.  ಚೀನೀ ಲಸಿಕೆಗಳನ್ನು 100 ಕ್ಕೂ ಹೆಚ್ಚು ದೇಶಗಳಲ್ಲಿ ಬಳಸಲು ಅನುಮೋದಿಸಲಾಗಿದೆ.  ಈ ಮಹಾಸೋಂಕನ್ನು ತಡೆಗಟ್ಟಲು ಇಡೀ ಜಗತ್ತಿನ ಜನತೆಗೆ ಉಚಿತ ಸಾರ್ವತ್ರಿಕ ವ್ಯಾಕ್ಸಿನೇಷನ್ ಅತ್ಯಗತ್ಯವಿದೆ.

ಜಾಗತಿಕ ಆರ್ಥಿಕತೆ

ಐ.ಎಂ.ಎಫ್ ನ ವಿಶ್ವ ಆರ್ಥಿಕ ನೋಟ (ವರ್ಲ್ಡ್ ಎಕನಾಮಿಕ್ ಔಟ್ ಲುಕ್ – ಜುಲೈ 2021) ತನ್ನ ಜಾಗತಿಕ ಬೆಳವಣಿಗೆಯ ಮುನ್ನೋಟವನ್ನು ಶೇಕಡಾ 6 ರಲ್ಲಿ ಉಳಿಸಿ ಕೊಂಡಿದೆ.  ಜಾಗತಿಕ ಜಿಡಿಪಿ 2020 ರಲ್ಲಿ ಶೇ. 3.3 ರಷ್ಟು ಕುಗ್ಗಿದೆ ಎಂದು ಐಎಂಎಫ್ ಈ ಹಿಂದೆ ದಾಖಲಿಸಿತ್ತು.

ವಿಶ್ವ ಬ್ಯಾಂಕ್ (ಜುಲೈ 2021) ಶೇಕಡಾ 5.6 ರಷ್ಟು ಜಿಡಿಪಿ ಬೆಳವಣಿಗೆಯನ್ನು ಅಂದಾಜಿಸಿದೆ. ಇದು ಪ್ರಾಥಮಿಕವಾಗಿ ಹಿಂದಿನ ವರ್ಷದ ಜಿಡಿಪಿಯ ಕೆಳಮಟ್ಟದಿಂದಾಗಿದೆ. ಆದಾಗ್ಯೂ, ಜಾಗತಿಕ ಉತ್ಪಾದನೆಯು 2022 ರ ಕುರಿತು ಮಹಾಸೋಂಕಿನ ಪೂರ್ವದ ಅಂದಾಜುಗಳಿಗಿಂತ ಶೇ.2ರಷ್ಟು ಕಡಿಮೆಯಿರುತ್ತದೆ ಎಂಬ ಹೇಳಿಕೆಯನ್ನು ಪುನರಾವರ್ತಿಸಿದೆ.

ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಎರಡೂ  ನೀಡಿರುವ ಎಚ್ಚರಿಕೆಯ ಪ್ರಕಾರ, ಲಸಿಕೀಕರಣದ ವೇಗದ ಕೊರತೆಯಿಂದಾಗಿ ಬೆಳವಣಿಗೆಯ ದರಗಳು ಈ ಮುನ್ನೋಟಗಳ ಕೆಳಗೆ ಇರುತ್ತವೆ.

ಯುಎಸ್ ಮತ್ತು ಇಯು ಹೊಸ ಉತ್ತೇಜಕ ಪ್ಯಾಕೇಜುಗಳು

ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಗಳ ಈ ಆಶಾವಾದಿ ಮುನ್ನೋಟಗಳು ಯುಎಸ್ ಮತ್ತು ಇಯು ವಿನ  ಹೊಸ ಉತ್ತೇಜಕ ಪ್ಯಾಕೇಜ್‌ಗಳಿಂದ ಉಂಟಾಗುವ ಚೇತರಿಕೆಯ ನಿರೀಕ್ಷೆಗಳನ್ನು ಆಧರಿಸಿವೆ.

ಅಧ್ಯಕ್ಷ ಬಿಡೆನ್, ಹೊಸ $ 1.9 ಲಕ್ಷ ಕೋಟಿ (ಟ್ರಿಲಿಯನ್) ಡಾಲರ್‌ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ವರ್ಷಕ್ಕೆ 75,000 ಡಾಲರ್‌ ಕ್ಕಿಂತ ಕಡಿಮೆ ಆದಾಯ ಹೊಂದಿರುವ ಜನರಿಗೆ ನೇರ ನಗದು ಪಾವತಿಗಳು,  ವಾರಕ್ಕೆ 300 ಡಾಲರ್ ನಿರುದ್ಯೋಗ ವಿಮಾ ವರ್ಧಕ, ಮಕ್ಕಳ ತೆರಿಗೆ ಕ್ರೆಡಿಟ್ ವಿಸ್ತರಿಸುವುದು ಇತ್ಯಾದಿಗಳು ಈ ಪ್ಯಾಕೇಜ್ ನಲ್ಲಿ ಒಳಗೊಂಡಿವೆ. ಇತ್ತೀಚಿನ ದಿನಗಳಲ್ಲಿ ಇದು ಬಹುಶಃ ಅತಿದೊಡ್ಡ ಆರ್ಥಿಕ ಉತ್ತೇಜನವಾಗಿದೆ.  2008 ವಾಲ್‌ಸ್ಟ್ರೀಟ್ (ಯು.ಎಸ್ ಶೇರು ಮಾರುಕಟ್ಟೆ) ಕುಸಿತದ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಡಿದ್ದಕ್ಕಿಂತ ದೊಡ್ಡ  ಮೊತ್ತವಾಗಿದೆ.  ದುಡಿಯುವ ಜನರು ಮತ್ತು ಮಧ್ಯಮ ವರ್ಗದವರು ಈ ಉತ್ತೇಜಕದಿಂದ ಸ್ವಲ್ಪ ಲಾಭವನ್ನು ಪಡೆದರೆ, ನವ-ಉದಾರವಾದದ ಆಣತಿಗೆ ಬದ್ಧವಾಗಿ.  ದೊಡ್ಡ ಉದ್ದಿಮೆಗಳು ಮತ್ತು ಹಣಕಾಸು ಬಂಡವಾಳವು ಭಾರೀ ಲಾಭವನ್ನು ದೋಚಲಿವೆ. ಆಶ್ಚರ್ಯಕರವೆಂದರೆ, ಅತಿ ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಲು ಚುನಾವಣೆಯಲ್ಲಿ ಪ್ರಚಾರ ಮಾಡಿದ್ದ ಬಿಡೆನ್ ನಂತರ, ಇದನ್ನು ಕೈ ಬಿಟ್ಟಿದ್ದಾರೆ.

ಯುರೋಕೂಟ (ಯುರೋಪಿಯನ್ ಒಕ್ಕೂಟ–ಇ.ಯು) 1.8 ಲಕ್ಷ ಕೋಟಿ (ಟ್ರಿಲಿಯನ್) ಯುರೋ (2.2 ಟ್ರಿಲಿಯನ್ ಡಾಲರ್)  ಪ್ಯಾಕೇಜನ್ನು ಮಹಾಸೋಂಕಿನ ನಂತರದ ಉತ್ತೇಜನಕ್ಕೆ ತನ್ನ ಬಜೆಟ್‌ನಿಂದ ನೇರವಾಗಿ ಹಣಕಾಸು ಒದಗಿಸಿತು.  ಇದರಲ್ಲಿನ  ದೊಡ್ಡ ಭಾಗವನ್ನು ಸಾರ್ವಜನಿಕ ವೆಚ್ಚಕ್ಕಾಗಿ ಮೀಸಲಿಡಲಾಗಿದೆ.

ಈ ಬೃಹತ್ ಹಣಕಾಸಿನ ಪ್ಯಾಕೇಜ್‌ಗಳ ನೀಡುವಿಕೆಯೇ, ನವ-ಉದಾರವಾದವನ್ನು ಅಲ್ಲಗಳೆಯುತ್ತದೆ ಮತ್ತು ಪ್ರಸ್ತುತ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಪರಿಹಾರಗಳನ್ನು ಒದಗಿಸುವಲ್ಲಿ ಅದರ ದಿವಾಳಿತನವನ್ನು ಪ್ರದರ್ಶಿಸುತ್ತವೆ.

ಆದಾಗ್ಯೂ, ಸಾರ್ವಜನಿಕ ವೆಚ್ಚಗಳಲ್ಲಿ, ಕಲ್ಯಾಣ ಕಾರ್ಯಕ್ರಮಗಳಲ್ಲಿ ಕಡಿತ ಮತ್ತು ದುಡಿಯುವ ಜನರ ಮೇಲೆ ಹೆಚ್ಚಿನ ಶೋಷಣೆ – ಇವುಗಳನ್ನು ಒಳಗೊಂಡ  ‘ಮಿತವ್ಯಯ ಕ್ರಮಗಳು’ ಮತ್ತು ‘ಹಣಕಾಸು ಶಿಸ್ತನ್ನು’ ಜಾರಿಗೆ ತರಬೇಕೆಂದು ಬಡ ದೇಶಗಳನ್ನು ಒತ್ತಾಯಿಸುತ್ತವೆ.

ಜಾಗತಿಕ ಕನಿಷ್ಠ ತೆರಿಗೆ

ಯುಎಸ್, ಚೀನಾ ಮತ್ತು ಭಾರತ ಸೇರಿದಂತೆ ಸುಮಾರು 130 ರಾಷ್ಟ್ರಗಳು, ದೊಡ್ಡ ಜಾಗತಿಕ ಕಾರ್ಪೊರೇಟ್‌ಗಳ ಮೇಲೆ ಕನಿಷ್ಠ ಶೇ.15 ದಷ್ಟು ಜಾಗತಿಕ ಕನಿಷ್ಠ ತೆರಿಗೆ (ಗ್ಲೋಬಲ್ ಮಿನಿಮಮ್ ಟ್ಯಾಕ್ಸ್ – ಜಿ.ಎಂ.ಟಿ) ಯನ್ನು ಹಾಕಲು ಬೆಂಬಲಿಸಿವೆ.  ‘ತೆರಿಗೆ ಸ್ವರ್ಗ’ (ಶೂನ್ಯ ತೆರಿಗೆ ಇರುವ ಸಣ್ಣ ದೇಶ) ಗಳಲ್ಲಿ ಈ ಕಂಪನಿಗಳ ನೋಂದಣಿಯನ್ನು ತಡೆಯಲು, ಜಾಗತಿಕ ಕಾರ್ಪೊರೇಟ್‌ಗಳ ಮೇಲೆ (ಅವುಗಳ ಮುಖ್ಯ ಕಚೇರಿ ಇರುವಲ್ಲಿ ಅಲ್ಲ) ಅವು ತಮ್ಮ ವ್ಯಾಪಾರವನ್ನು  ನಡೆಸುವ  ಸ್ಥಳಗಳಲ್ಲಿ ಅವರ ಲಾಭಕ್ಕೆ ತೆರಿಗೆಯನ್ನು ಹಾಕಲಾಗುವುದು. ಅನೇಕ ದೇಶಗಳ ಆರ್ಥಿಕತೆಯನ್ನು ಪುನರುಜ್ಜೀವನ ಗೊಳಿಸುವುದು ಇದರ ಉದ್ದೇಶವಾಗಿದೆ. ಲಾಭಗಳನ್ನು ಗರಿಷ್ಠಗೊಳಿಸುವ ನವ-ಉದಾರವಾದಿ ಉದ್ದೇಶವನ್ನು ಮುಂದುವರಿಸಲು ಸಹ ಈ ಪುನರುಜ್ಜೀವನ ಅತ್ಯಗತ್ಯವಾಗಿದೆ ಎಂಬುದನ್ನು ಇಲ್ಲಿ ಅರ್ಥೈಸಿಕೊಳ್ಳಬೇಕು. ಇಂತಹ ತೆರಿಗೆಯ ಪ್ರಭಾವದ ಬಗ್ಗೆ ಅನೇಕ ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳಿವೆ. ಅದನ್ನು ಪರಿಹರಿಸಿಕೊಳ್ಳಬೇಕಾಗಿದೆ.

*ಸೂಪರ್‌ ಶ್ರೀಮಂತರಿಗೆ ತೆರಿಗೆ ವಿಧಿಸುವುದರೊಂದಿಗೆ, ಯಾವುದೇ ಅರ್ಥಪೂರ್ಣ ಆರ್ಥಿಕ ಚೇತರಿಕೆಗಾಗಿ ದುಡಿಯುವ ಜನರಿಗೆ ಖಾತರಿಪಡಿಸಿದ ಕನಿಷ್ಠ ವೇತನವನ್ನು ಹೆಚ್ಚಿಸಬೇಕು, ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಒದಗಿಸಬೇಕು ಮತ್ತು ಇತರ ಸಾಮಾಜಿಕ ಬೆಂಬಲ ಕ್ರಮಗಳನ್ನು ಕೈಗೊಳ್ಳಬೇಕು.

ಜನರ ಮೇಲೆ ಪರಿಣಾಮ

ಹೆಚ್ಚುತ್ತಿರುವ ಹಸಿವು: ಕಡಿಮೆ ಆದಾಯದ ದೇಶಗಳ ಹಿಂದಿನ ಬೆಳವಣಿಗೆಯು  ಹಿನ್ನಡೆಯನ್ನು ಕಂಡಿರುವುದು ಮತ್ತು ಜಾಗತಿಕ ಹಸಿವು ತೀವ್ರವಾಗಿರುವುದನ್ನು ವಿಶ್ವ ಬ್ಯಾಂಕ್ ಗಮನಿಸಿದೆ.  ಆಹಾರದ ಬೆಲೆಯಲ್ಲಿ ಜಾಗತಿಕ ಏರಿಕೆಯು ಭವಿಷ್ಯದಲ್ಲಿ ಜನರ ಸಂಕಷ್ಟಗಳನ್ನು ಹೆಚ್ಚಿಸುತ್ತದೆ.  ಜುಲೈ 2021 ರಲ್ಲಿ, ಕೃಷಿ ಸರಕು ಬೆಲೆ ಸೂಚ್ಯಂಕವು 2013 ರ ನಂತರದ ಅವಧಿಯ ಅತ್ಯುನ್ನತ ಮಟ್ಟದಲ್ಲಿ ಇದೆ.  ಬೆಲೆ ಏರಿಕೆ ಮತ್ತು ಆದಾಯದ ಇಳಿಕೆಯೊಂದಿಗೆ, ಕಳೆದ ವರ್ಷ ಜಾಗತಿಕ ಶೇ.10ರಷ್ಟು (ಸುಮಾರು 81.1 ಕೋಟಿಯಷ್ಟು)  ಜನಸಂಖ್ಯೆ ಪೌಷ್ಟಿಕತೆಯ ಕೊರತೆಯಿಂದ ನರಳುತ್ತಿದ್ದಾರೆ. ಸುಮಾರು 15 ಕೋಟಿಯಷ್ಟು ಮಕ್ಕಳ ಬೆಳವಣಿಗೆ  ಸ್ಥಗಿತಗೊಂಡಿದೆ. 2020 ರಲ್ಲಿ ಸುಮಾರು 4.5 ಕೋಟಿ ಮಕ್ಕಳು ಅಪೌಷ್ಟಿಕತೆಯ ಅಪಾಯಕಾರಿ ಮಟ್ಟ ಮುಟ್ಟಿದ್ದಾರೆ ಎಂದು ಯುನಿಸೆಫ್ ಅಂದಾಜಿಸಿದೆ. 2020 ಮತ್ತು 2030 ರ ನಡುವೆ, 2.2 ಕೋಟಿ ಮತ್ತಷ್ಟು ಮಕ್ಕಳ ಬೆಳವಣಿಗೆ ಸ್ಥಗಿತ ಗೊಳ್ಳುತ್ತಾರೆ ಎಂದು ಅಂದಾಜಿಸಲಾಗಿದೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ 4 ಕೋಟಿ ಮಕ್ಕಳು ಅಪೌಷ್ಟಿಕತೆಯ ಅಪಾಯಕಾರಿ ಮಟ್ಟ ಮುಟ್ಟುತ್ತಾರೆ.  ಕಳೆದ ವರ್ಷಕ್ಕಿಂತ ಸುಮಾರು 18 ಕೋಟಿಗೂ ಹೆಚ್ಚು ಜನರು ದೀರ್ಘಕಾಲದ ಹಸಿವನ್ನು ಎದುರಿಸುತ್ತಿದ್ದಾರೆ.  ಜಾಗತಿಕ ಜನಸಂಖ್ಯೆಯ ಶೇ. 30 ರಷ್ಟು ಜನರಿಗೆ (237 ಕೋಟಿ) 2020 ರಲ್ಲಿ ಸಾಕಷ್ಟು ಆಹಾರ ದಕ್ಕುತ್ತಿಲ್ಲ ಎಂದು ಅಂದಾಜಿಸಲಾಗಿದೆ. ಒಂದು ವರ್ಷದಲ್ಲಿ ಹಸಿದವರ ಸಂಖ್ಯೆ 32 ಕೋಟಿ ಹೆಚ್ಚಳವಾಗಿದೆ.. ಕ್ಷಾಮದ ಪರಿಸ್ಥಿತಿಗಳಲ್ಲಿ ವಾಸಿಸುವ ಜನರಲ್ಲಿ ಆರು ಪಟ್ಟು ಏರಿಕೆಯನ್ನು ಆಕ್ಸ್‌ಫ್ಯಾಮ್ ಅಂದಾಜಿಸಿದೆ. ಜಾಗತಿಕವಾಗಿ, ತೀವ್ರ ಹಸಿವಿನಿಂದ ಪ್ರತಿ ನಿಮಿಷಕ್ಕೆ 11 ಜನರು ಸಾಯುತ್ತಿದ್ದಾರೆ. *ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ ವಿಶ್ವದ ಉದಯೋನ್ಮುಖ ಹಸಿವಿನ ತಾಣಗಳಾಗಿವೆ*

ಬಡತನ: ತೀವ್ರ ಬಡತನದಲ್ಲಿ ಬದುಕುತ್ತಿರುವ ಜನರು 2021 ರ ಅಂತ್ಯದ ವೇಳೆಗೆ 10 ಕೋಟಿಯ ಏರಿಕೆಯೊಂದಿಗೆ 74.5 ಕೋಟಿ ತಲುಪುವ ನಿರೀಕ್ಷೆಯಿದೆ.  ಉದ್ಯೋಗ ನಷ್ಟದಿಂದಾಗಿ ಪ್ರಪಂಚದಾದ್ಯಂತದ ಮಹಿಳೆಯರು 2020 ರಲ್ಲಿ ಕನಿಷ್ಠ 800 ಶತಕೋಟಿ ಡಾಲರ್ ಆದಾಯವನ್ನು ಕಳೆದುಕೊಂಡರು.  ವಿಶ್ವಾದ್ಯಂತ ಹೆಚ್ಚುವರಿ 4.7 ಕೋಟಿ‌ ಮಹಿಳೆಯರು 2021 ರಲ್ಲಿ ತೀವ್ರ ಬಡತನಕ್ಕೆ ಸಿಲುಕುವ ನಿರೀಕ್ಷೆಯಿದೆ.

ಹೆಚ್ಚುತ್ತಿರುವ ಅಸಮಾನತೆಗಳು: ಜೆಫ್ ಬೆಜೋಸ್ ಅವರ ಬಾಹ್ಯಾಕಾಶ ಹಾರಾಟಕ್ಕೆ ಪ್ರತಿಕ್ರಿಯೆಯಾಗಿ, ಆಕ್ಸ್‌ಫ್ಯಾಮ್ ಇಂಟರ್‌ನ್ಯಾಷನಲ್‌ನ ಅಸಮಾನತೆಯ ಅಭಿಯಾನದ ಜಾಗತಿಕ ಮುಖ್ಯಸ್ಥ ದೀಪಕ್ ಕ್ಸೇವಿಯರ್ ಹೀಗೆ ಹೇಳುತ್ತಾರೆ :-

*ನಾವು ಈಗ ವಾಯುಮಂಡಲದ ಅಸಮಾನತೆಯನ್ನು ತಲುಪಿದ್ದೇವೆ.  11 ಜನರು ಈಗ ಪ್ರತಿ ನಿಮಿಷವೂ ಹಸಿವಿನಿಂದ ಸಾಯುವ ಸಾಧ್ಯತೆ ಇದೆ. ಆದರೆ ಬೆಜೋಸ್ 11 ನಿಮಿಷಗಳ ವೈಯಕ್ತಿಕ ಬಾಹ್ಯಾಕಾಶ ಹಾರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.  ಇದು ಮಾನವ ಮೂರ್ಖತನ, ಮಾನವ ಸಾಧನೆಯಲ್ಲ*

ಅತಿದೊಡ್ಡ ಶ್ರೀಮಂತರನ್ನು ಅನ್ಯಾಯಯುತ ತೆರಿಗೆ ವ್ಯವಸ್ಥೆಗಳು ಮತ್ತು ಕರುಣಾಜನಕ ಕಾರ್ಮಿಕ ರಕ್ಷಣೆಗಳಿಂದ ಬೆಂಬಲಿಸಲಾಗುತ್ತದೆ. ಮಹಾಸೋಂಕಿನ ಪ್ರಾರಂಭದಿಂದಲೂ ಡಾಲರ್ ಶತಕೋಟ್ಯಾಧೀಶರು ಸುಮಾರು 1.8 ಲಕ್ಷ ಕೋಟಿ ಡಾಲರುಗಳಷ್ಟು ಹೆಚ್ಚುವರಿಯಾಗಿ ಶ್ರೀಮಂತರಾಗಿದ್ದಾರೆ ಮತ್ತು ಕೋವಿಡ್-19 ಲಸಿಕೆಗಳ ಮೇಲೆ ದೈತ್ಯ ಔಷಧಿ ಕಂಪನಿಗಳ ಏಕಸ್ವಾಮ್ಯದಿಂದ ಒಂಬತ್ತು ಹೊಸ ಶತಕೋಟ್ಯಾಧೀಶರನ್ನು ಸೃಷ್ಟಿಸಲಾಗಿದೆ.

ನಿರುದ್ಯೋಗ:  2020ರಲ್ಲಿ ಜಾಗತಿಕ ಕೆಲಸದ ಸಮಯವು ಶೇಕಡ 8.8 ರಷ್ಟು ಕಡಿಮೆಯಾಗಿದೆ, ಇದು 25.5 ಕೋಟಿ ಯಷ್ಟು ಪೂರ್ಣ ಸಮಯದ ಉದ್ಯೋಗಗಳ ನಷ್ಟಕ್ಕೆ ಸಮನಾಗಿದೆ.  ಜಾಗತಿಕ ಬಿಕ್ಕಟ್ಟಿನಿಂದ ಉಂಟಾದ ಉದ್ಯೋಗಗಳ  ನಷ್ಟದ ಅಂತರ 2021 ರಲ್ಲಿ 7.5 ಕೋಟಿಗೆ ತಲುಪುತ್ತದೆ ಎಂದು ಐ.ಎಲ್.ಒ ಅಂದಾಜಿಸಿದೆ. ಉದ್ಯೋಗ ಮತ್ತು ಕೆಲಸದ ಸಮಯದಲ್ಲಿ ಈ ಕುಸಿತವು ಬಿಕ್ಕಟ್ಟಿನ ಪೂರ್ವದ ನಿರುದ್ಯೋಗ, ಕಡಿಮೆ ಉದ್ಯೋಗ ಮತ್ತು ಕಳಪೆ ಕೆಲಸದ ಪರಿಸ್ಥಿತಿಗಳ ಮೇಲೆ ಬಂದಿದೆ.  ಜಾಗತಿಕ ನಿರುದ್ಯೋಗವು  2019 ರಲ್ಲಿನ 18.7 ಕೋಟಿಯಿಂದ 2022 ರಲ್ಲಿ 20.5 ಕೋಟಿ ಗೆ ಜಿಗಿಯುವ ನಿರೀಕ್ಷೆಯಿದೆ.  2019 ಕ್ಕೆ ಹೋಲಿಸಿದರೆ, ವಿಶ್ವಾದ್ಯಂತ ಹೆಚ್ಚುವರಿ 10.8 ಕೋಟಿ ಕಾರ್ಮಿಕರನ್ನು ಈಗ ಬಡವರು ಅಥವಾ ಅತ್ಯಂತ ಬಡವರು ಎಂದು ವರ್ಗೀಕರಿಸಲಾಗಿದೆ (ಅಂದರೆ ಅವರು ಮತ್ತು ಅವರ ಕುಟುಂಬಗಳು ಪ್ರತಿ ದಿನ ಪ್ರತಿ ವ್ಯಕ್ತಿಗೆ 3.20 ಡಾಲರ್ ನಷ್ಟು ಕಡಿಮೆ ಆದಾಯದಲ್ಲಿ ವಾಸಿಸುತ್ತಿದ್ದಾರೆ ).  2020 ರಲ್ಲಿ ಪುರುಷರ ಉದ್ಯೋಗದಲ್ಲಿ ಶೇಕಡಾ 3.9 ಕಡಿತಕ್ಕೆ ಹೋಲಿಸಿದರೆ, ಮಹಿಳೆಯರ ಉದ್ಯೋಗವು ಶೇಕಡಾ 5 ರಷ್ಟು ಕಡಿಮೆಯಾಗಿದೆ. ಬಿಕ್ಕಟ್ಟಿನ ಲಾಕ್‌ಡೌನ್‌ಗಳಿಂದ ಉಂಟಾಗುವ ಮನೆಯ ಜವಾಬ್ದಾರಿಗಳು ಲಿಂಗವಾರು ಪಾತ್ರಗಳ “ಮರು-ಸಾಂಪ್ರದಾಯೀಕರಣ”ದ ಅಪಾಯವನ್ನು ಸೃಷ್ಟಿಸುತ್ತಿವೆ.  ಜಾಗತಿಕವಾಗಿ, ಯುವಕರ ಉದ್ಯೋಗವು 2020 ರಲ್ಲಿ ಶೇಕಡಾ 8.7ರಷ್ಟು ಕುಸಿಯಿತು, ವಯಸ್ಕರಿಗೆ  ಹೋಲಿಸಿದರೆ ಇದು ಶೇಕಡಾ 3.7 ರಷ್ಟು ಕುಸಿದಿದೆ. ಡಿಜಿಟಲೀಕರಣ ಮತ್ತು ಯಾಂತ್ರೀಕರಣದಿಂದಾಗಿ ಕಳೆದುಹೋದ ಅನೇಕ ಉದ್ಯೋಗಗಳು ಮರಳುವ ಸಾಧ್ಯತೆಯಿಲ್ಲ.

ಶೈಕ್ಷಣಿಕ ಅಭಾವ: ಯುನೆಸ್ಕೋ ಪ್ರಕಾರ, ಮೇ 2021 ರ ಹೊತ್ತಿಗೆ, 26 ದೇಶಗಳಲ್ಲಿನ ಶಾಲೆಗಳನ್ನು ಮುಚ್ಚಲಾಗಿದೆ ಮತ್ತು 55 ದೇಶಗಳಲ್ಲಿ ಭಾಗಶಃ ತೆರೆಯಲಾಗಿದೆ.  ಮಹಾಸೋಂಕಿನಿಂದ ವಿಶ್ವದ ಶೇ.90 ಶಾಲಾ ವಯಸ್ಸಿನ ಮಕ್ಕಳ ಶಿಕ್ಷಣಕ್ಕೆ   ಅಡ್ಡಿಯುಂಟಾಗಿದೆ ಎಂದು ಅಂದಾಜಿಸಲಾಗಿದೆ.  ಶಾಲಾ ಮುಚ್ಚುವಿಕೆಗಳು ಮತ್ತು ಅದರ ಪರಿಣಾಮವಾಗಿ ಉಂಟಾಗುವ ಅಡೆತಡೆಗಳು ಬಾಧಿತ ಮಕ್ಕಳ ಭವಿಷ್ಯದ ಗಳಿಕೆಯ 10 ಲಕ್ಷ ಕೋಟಿ (ಟ್ರಿಲಿಯನ್) ಡಾಲರುಗಳಷ್ಟು ಮೌಲ್ಯದ ನಷ್ಟಕ್ಕೆ ಅಂದಾಜಿಸಲಾಗಿದೆ.  ಲಕ್ಷಾಂತರ ವಿದ್ಯಾರ್ಥಿಗಳಿಗೆ, ಶಾಲೆ ಮುಚ್ಚುವುದು ಅವರ ಶಿಕ್ಷಣದಲ್ಲಿ ಬರಿಯ ತಾತ್ಕಾಲಿಕ ಹಸ್ತಕ್ಷೇಪವಾಗಿಲ್ಲ, ಬದಲಿಗೆ ಶಿಕ್ಷಣವು ಹಠಾತ್ತಾಗಿ‌ ಕೊನೆಗೊಡಿದೆ. ಮಕ್ಕಳು ಇದೀಗ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ, ಮದುವೆಯಾಗಿದ್ದಾರೆ, ಪೋಷಕರಾಗಿದ್ದಾರೆ, ಶಿಕ್ಷಣದ ಬಗ್ಗೆ ಭ್ರಮನಿರಸನ ಗೊಂಡಿದ್ದಾರೆ.  ಅವರು ತಮ್ಮ ದೇಶದ ಕಾನೂನುಗಳ ಅಡಿಯಲ್ಲಿ ಖಾತರಿಪಡಿಸಿದಂತೆ ಉಚಿತ ಅಥವಾ ಕಡ್ಡಾಯ ಶಿಕ್ಷಣ ಎಂದೂ ಅಥವಾ ಕನಿಷ್ಠ ಅವರಿಗೆ ವಯಸ್ಸು ಮೀರುವರೆಗಂತೂ ಸಿಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.  ಶಾಲಾ ಮುಚ್ಚುವಿಕೆಯ ಸಮಯದಲ್ಲಿ, ಶಿಕ್ಷಣವು ಆನ್‌ಲೈನ್‌ಗೆ ಸ್ಥಳಾಂತರ ಗೊಂಡಿದೆ. ಇಂಟರ್ನೆಟ್ ಪ್ರವೇಶ, ನಿಲುಕುವಿಕೆ, ಸಂಪರ್ಕ, ಶಿಕ್ಷಣ ಸಾಮಗ್ರಿ ಸಿದ್ಧತೆ, ಶಿಕ್ಷಕರ ತರಬೇತಿ ಮತ್ತು ಮನೆಯ ಸಂಕಷ್ಟದ ಸನ್ನಿವೇಶಗಳು ಮುಂತಾದ ಗಂಭೀರ ಸಮಸ್ಯೆಗಳೊಂದಿಗೆ ಈಗಾಗಲೇ ಇರುವ ‘ಡಿಜಿಟಲ್ ತಾರತಮ್ಯ’ವನ್ನು ಆನ್‌ಲೈನ್‌ ಶಿಕ್ಷಣವು ಬಲಪಡಿಸುತ್ತದೆ.

ಚೀನಾ:  ಜಾಗತಿಕ ಏರುಗತಿಯ ಗಟ್ಟಿ ಪ್ರತಿಪಾದನೆ

ಚೀನಾದ ಕಮ್ಯುನಿಸ್ಟ್ ಪಕ್ಷವು ಅದರ ಸ್ಥಾಪನೆಯ ಶತಮಾನೋತ್ಸವವನ್ನು ಆಚರಿಸುತ್ತಿದೆ.  ಈ ಸಂದರ್ಭದಲ್ಲಿ ಅದು ತನ್ನ ಎರಡು ಶತಮಾನಗಳ ಗುರಿಗಳಲ್ಲಿ ಒಂದನ್ನು ತಲುಪಿದೆ ಎಂದು ಘೋಷಿಸಿದೆ. 2020 ರ ವೇಳೆಗೆ ಮಧ್ಯಮ ಸಮೃದ್ಧ ಸಮಾಜವನ್ನು ಸ್ಥಾಪಿಸುವುದು. ದೇಶದಾದ್ಯಂತ ಸಂಪೂರ್ಣ ಬಡತನವನ್ನು ತೊಡೆದು ಹಾಕುವ ಮೂಲಕ ಇದು ಸಾಧ್ಯವಾಯಿತು.  1949 ರಲ್ಲಿ ವಿಜಯದ ಕ್ರಾಂತಿ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸ್ಥಾಪನೆಯ ನಂತರ, ಆರಂಭಿಕ ವರ್ಷಗಳಲ್ಲಿ ಮಾಡಿದ ಕೃಷಿ ಮತ್ತು ಕೈಗಾರಿಕಾ ಪ್ರಗತಿಯನ್ನು ಆಧರಿಸಿ, ಇದು 1978 ರಿಂದ ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಿತು ಮತ್ತು ‘ಸುಧಾರಣೆ ಮತ್ತು ತೆರೆದುಕೊಳ್ಳುವ’ ಹಾದಿಯನ್ನು ಆರಂಭಿಸಿತು.

1978 ರಿಂದ, 85 ಕೋಟಿಗೂ ಹೆಚ್ಚು ಜನರನ್ನು ತೀವ್ರ ಬಡತನದಿಂದ ಹೊರತರಲಾಯಿತು.  ಅವರ ಆಹಾರ ಮತ್ತು ಬಟ್ಟೆ ಅಗತ್ಯಗಳನ್ನು, ಕಡ್ಡಾಯ ಶಿಕ್ಷಣ, ಮೂಲಭೂತ ವೈದ್ಯಕೀಯ ಸೇವೆಗಳು ಮತ್ತು ಸುರಕ್ಷಿತ ವಸತಿಗಳ ತಲುಪುವಿಕೆಯನ್ನು ಖಾತರಿ ಪಡಿಸಲಾಯಿತು.  ಚೀನಾದ ಪ್ರಸ್ತುತ ಬಡತನ ರೇಖೆಯು ಬಹು-ಆಯಾಮದ್ದು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಮತ್ತು ಚೀನಾದ ರಾಷ್ಟ್ರೀಯ ಪರಿಸ್ಥಿತಿಗಳನ್ನು ಪರಿಗಣಿಸಿ ರೂಪಿಸಲಾಗಿದೆ. ಆದಾಯದ ಹೊರತಾಗಿ, ಶಿಕ್ಷಣ, ಆರೋಗ್ಯ ಮತ್ತು ಜೀವನ ಮಟ್ಟಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.  2010 ರ ಸ್ಥಿರ ಮೌಲ್ಯಗಳಲ್ಲಿ 2,300 ಯುವಾನ್ ನಷ್ಟು ತಲಾ ವಾರ್ಷಿಕ ಆದಾಯವನ್ನು ತನ್ನ ಬಡತನ ರೇಖೆಯಾಗಿ ನಿಗದಿಪಡಿಸಿದೆ. ಸಮಾನಾರ್ಥಕ (ಸ್ಥಳೀಯ) ಕೊಳ್ಳುವ ಶಕ್ತಿಯ (ಪರ್ಚೇಸಿಂಗ್ ಪವರ ಪ್ಯಾರಿಟಿ – ಪಿಪಿಪಿ) ಆಧಾರದಲ್ಲಿ ಒಬ್ಬ ವ್ಯಕ್ತಿಗೆ ದಿನಕ್ಕೆ 2.3 ಡಾಲರ್ ಗೆ ಇದು ಸಮನಾಗಿರುತ್ತದೆ. ಇದನ್ನು 2020 ರಲ್ಲಿ ಪರಿಷ್ಕರಿಸಲಾಗಿದೆ. ಈಗ, ವರ್ಷಕ್ಕೆ 4,000 ಯುವಾನ್  ಕ್ಕಿಂತ ಕಡಿಮೆ ಆದಾಯದ ವ್ಯಕ್ತಿಯನ್ನು ಬಡವನಾಗಿ ಪಟ್ಟಿ ಮಾಡಲಾಗಿದೆ.

ಫೆಬ್ರವರಿ 2021ರಲ್ಲಿ, ದೇಶದಲ್ಲಿ ಸಂಪೂರ್ಣ ಬಡತನವನ್ನು ನಿರ್ಮೂಲನೆ ಮಾಡುವುದಾಗಿ ಅಧಿಕೃತವಾಗಿ ಚೀನಾ ಘೋಷಿಸಿತು. ವಿಶ್ವಬ್ಯಾಂಕ್‌ನ ಅಂತರರಾಷ್ಟ್ರೀಯ ಬಡತನ ರೇಖೆಯ ಪ್ರಕಾರ, 1970ರ ದಶಕದ ಅಂತ್ಯದ ನಂತರ ಜಾಗತಿಕ ಬಡತನ ಶೇಕಡಾ 70 ಕ್ಕಿಂತಲೂ ಕಡಿಮೆಯಾಗಲು ಚೀನಾ ಕಾರಣವಾಗಿದೆ.

ಜಿಡಿಪಿ: ಚೀನಾದ ತಲಾ ಒಟ್ಟು ರಾಷ್ಟ್ರೀಯ ಆದಾಯವು (1978ರಲ್ಲಿ) 200 ಡಾಲರ್ ನಿಂದ (2019ರಲ್ಲಿ) 10,410 ಡಾಲರ್‌ಗೆ  ಏರಿತು.  ಇದು ಪ್ರಸ್ತುತ ವಿಶ್ವಬ್ಯಾಂಕ್ ನ ಅಧಿಕ ಆದಾಯದ ದೇಶದ ಮಾನದಂಡವಾದ 12,536 ಡಾಲರನ್ನು 2023ರ ವೇಳೆಗೆ ಮೀರಲಿದೆ. ಅಷ್ಟು ಹೊತ್ತಿಗೆ ಚೀನಾ ಅಧಿಕ ಆದಾಯದ ದೇಶವಾಗಲಿದೆ. 1978ರಲ್ಲಿ ಚೀನಾದ ಜಿಡಿಪಿ ಸುಮಾರು 367.87 ಶತಕೋಟಿ ಯುವಾನ್ (57.38 ಶತಕೋಟಿ ಡಾಲರ್) ಆಗಿತ್ತು, ಇದು 2020 ರಲ್ಲಿ ಸುಮಾರು 101.6 ಲಕ್ಷ ಕೋಟಿ (ಟ್ರಿಲಿಯನ್) ($ 14.7 ಲಕ್ಷಕೋಟಿ ಡಾಲರ್) ಗೆ ಏರಿತು. ಇದು ವಿಶ್ವ ಆರ್ಥಿಕತೆಯ ಸರಿಸುಮಾರು ಶೇ.17 ಆಗಿದೆ.

ರಫ್ತಿನ ಕೊಡುಗೆಯ ಹೊರತಾಗಿಯೂ ಶೇಕಡಾ 33 ರಿಂದ ಶೇಕಡ 10 ಕ್ಕೆ ಇಳಿದಿದ್ದರೂ, 2020ರಲ್ಲಿ 3.2 ಲಕ್ಷಕೋಟಿ (ಟ್ರಿಲಿಯನ್) ಡಾಲರ್ ಗಳಷ್ಟು ಚೀನಾದ ವಿದೇಶಿ ವಿನಿಮಯ ಸಂಗ್ರಹವು ವಿಶ್ವದಲ್ಲಿಯೇ ಅತ್ಯಧಿಕವಾಗಿದೆ. ಜಿಡಿಪಿ ಬೆಳವಣಿಗೆಗೆ ಯುವಾನ್ ಈಗ ಅಂತರರಾಷ್ಟ್ರೀಯ ಕರೆನ್ಸಿಗಳಲ್ಲಿ 3ನೇ ಸ್ಥಾನದಲ್ಲಿದೆ.  ಯುವಾನ್ ಈಗ ಅಂತರರಾಷ್ಟ್ರೀಯ ಮೀಸಲು ಕರೆನ್ಸಿಯಾಗಿ ಹೊರ ಹೊಮ್ಮುತ್ತಿದೆ, 70 ಕ್ಕೂ ಹೆಚ್ಚು ದೇಶಗಳ ಕೇಂದ್ರೀಯ ಬ್ಯಾಂಕುಗಳು ತಮ್ಮ ಮೀಸಲು ಸ್ವತ್ತಿನಲ್ಲಿ ಅದನ್ನು ಹೊಂದಿವೆ

ಖರ್ಚು ಮಾಡಬಹುದಾದ ರಾಷ್ಟ್ರೀಯ ಆದಾಯವು 2010 ಕ್ಕಿಂತ ನೈಜ ಬೆಲೆಗಳಲ್ಲಿ 2020ರ ವೇಳೆಗೆ ಶೇ 100.8 ರಷ್ಟು ಹೆಚ್ಚಾಗಿದೆ

ಚೀನಾ ವಿಜ್ಞಾನ-ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಬೃಹತ್ ಹೂಡಿಕೆಗಳಿಂದ ತಾಂತ್ರಿಕ ಆವಿಷ್ಕಾರಗಳಲ್ಲಿ ದೊಡ್ಡ ಪ್ರಗತಿ ಸಾಧಿಸಿದೆ.

 ಯು.ಎಸ್-ಚೀನಾ ಸಂಬಂಧಗಳು 

ಆರ್ಥಿಕ ಶಕ್ತಿಯಾಗಿ ಚೀನಾದ ನಿರಂತರ ಸ್ಥಿರ ಬೆಳವಣಿಗೆಯಿಂದ ತನ್ನ ಜಾಗತಿಕ ಯಜಮಾನಿಕೆಗೆ ಧಕ್ಕೆ ಬರಬಹುದೆಂದು ಗಾಬರಿಗೊಂಡ ಯು.ಎಸ್, ಚೀನಾಕ್ಕೆ ಅಡೆತಡೆಗಳನ್ನು ಹಾಕುವ ಮತ್ತು ಪ್ರತ್ಯೇಕಿಸಿ ಒಂಟಿಯಾಗಿಸುವ ಕ್ರಮಗಳನ್ನು ಆರಂಭಿಸಿತು.

ಟ್ರಂಪ್ ಚೀನಾದ ಮೇಲೆ ನಿರ್ಬಂಧಗಳನ್ನು ಹೇರಿದ ನಂತರ ವಿಶೇಷವಾಗಿ, ಯುಎಸ್ ಮತ್ತು ಚೀನಾ ನಡುವಿನ ಸಂಬಂಧ ಗಳು ಹದಗೆಟ್ಟವು.  ಜೋ ಬಿಡೆನ್ ಅವರ ಆಡಳಿತವು ಹಿಂದಿನ ಆಡಳಿತ ಅನುಸರಿಸಿದ ನೀತಿಗಳನ್ನು ಮುಂದುವರಿಸುತ್ತಿದೆ. ಯು.ಎಸ್ ಚೀನಾವನ್ನು ತನ್ನ ಜಾಗತಿಕ ವ್ಯೂಹದಲ್ಲಿ ಪ್ರತಿಸ್ಪರ್ಧಿ ಎಂದು ಗುರುತಿಸಿದೆ. ಚೀನಾದಿಂದ ಯು.ಎಸ್ ಸರಕುಗಳ ಆಮದು 2018 ಮತ್ತು 2020 ರ ನಡುವೆ 103.8 ಶತಕೋಟಿ ಡಾಲರ್‌ ನಷ್ಟು ಮತ್ತು ದ್ವಿಪಕ್ಷೀಯ ಸೇವೆಗಳ ವ್ಯಾಪಾರವು  2018 ರ ಜನವರಿ ಮತ್ತು ಸೆಪ್ಟೆಂಬರ್ 2020 ರ ನಡುವೆ ಶೇಕಡಾ 35 ರಷ್ಟು ಕುಸಿದಿದೆ. ಆದಾಗ್ಯೂ, ವಾಸ್ತವವೆಂದರೆ, ಚೀನಾದೊಂದಿಗಿನ ವ್ಯಾಪಾರದಿಂದ ಯುಎಸ್ ದೂರವಿರಲು ಸಾಧ್ಯವಿಲ್ಲ.  2020 ರಲ್ಲಿ, ಚೀನಾ ಯುಎಸ್‌ನ ಅತಿದೊಡ್ಡ ವ್ಯಾಪಾರ ಪಾಲುದಾರ (659.5 ಶತಕೋಟಿ ಡಾಲರ್ ಗಳು).  ಡಿಸೆಂಬರ್ 2020 ರ ಹೊತ್ತಿಗೆ, ಯುಎಸ್ ಹೂಡಿಕೆದಾರರು  100 ಶತಕೋಟಿ ಡಾಲರುಗಳ ಚೀನೀ ಸಾಲ ಮತ್ತು 1.1 ಲಕ್ಷ ಕೋಟಿ (ಟ್ರಿಲಿಯನ್) ಡಾಲರ್ ಚೀನೀ ಷೇರುಗಳನ್ನು ಹೊಂದಿದ್ದರೆ, ಚೀನಾದ ಹೂಡಿಕೆದಾರರು ಯುಎಸ್ ಸಾಲದಲ್ಲಿ 1.4 ಲಕ್ಷ ಕೋಟಿ (ಟ್ರಿಲಿಯನ್) ಡಾಲರ್ ಮತ್ತು ಯುಎಸ್ ಶೇರು ಪಾಲು ಗಳಲ್ಲಿ  720 ಶತಕೋಟಿ ಡಾಲರ್ ಹೊಂದಿದ್ದಾರೆ.

ಉಭಯ ದೇಶಗಳ ಹಿರಿಯ ರಾಜತಾಂತ್ರಿಕರ ನಡುವೆ ಎರಡು ಸುತ್ತಿನ ಮಾತುಕತೆಗಳು ನಡೆದವು, ಆದರೆ ಈ ಮಾತುಕತೆಯಿಂದ ಮಹತ್ವದ ಯಾವ ನಿರ್ಣಯವು ಹೊರಹೊಮ್ಮಲಿಲ್ಲ.  ಆರ್ಥಿಕ ಸಮಸ್ಯೆಗಳ ಹೊರತಾಗಿ, ಹಾಂಗ್ ಕಾಂಗ್, ಕ್ಸಿಂಜಿಯಾಂಗ್, ತೈವಾನ್, ದಕ್ಷಿಣ ಚೀನಾ ಸಮುದ್ರದಲ್ಲಿ ಯುಎಸ್ ಹಸ್ತಕ್ಷೇಪ ಮಾಡುತ್ತಿದೆ ಮತ್ತು ಚೀನಾ ಸೈಬರ್ ಯುದ್ಧದಲ್ಲಿ ತೊಡಗಿದೆ ಎಂಬ ಆರೋಪಗಳು ಪ್ರಮುಖ ಸಮಸ್ಯೆಗಳಾಗಿವೆ.  ಕ್ವಾಡ್ (ಚೀನಾ-ವಿರೋಧಿ ನಾಲ್ಕು ದೇಶಗಳ ಕೂಟ) ನ್ನು ಔಪಚಾರಿಕಗೊಳಿಸುವ ಮೂಲಕ ಮತ್ತು ಯುರೋಪಿನಲ್ಲಿ ಅದರ ಸಾಂಪ್ರದಾಯಿಕ ಮಿತ್ರರಾಷ್ಟ್ರಗಳನ್ನು ಸಜ್ಜುಗೊಳಿಸುವ ಮೂಲಕ ಚೀನಾವನ್ನು ಪ್ರತ್ಯೇಕಿಸಲು ಯುಎಸ್ ಪ್ರಯತ್ನಿಸುತ್ತಿದೆ. ಯೂರೋಪಿನಲ್ಲಿ ತನ್ನ ಮಿತ್ರರಾಷ್ಟ್ರಗಳನ್ನು ಗೆಲ್ಲಲು, ಯುಎಸ್ ದೀರ್ಘಕಾಲದ ವಿವಾದಗಳನ್ನು ಪರಿಹರಿಸಿತು ಮತ್ತು ನಿರ್ಬಂಧಗಳನ್ನು ಮನ್ನಾ ಮಾಡಿತು.  ಭಾರತವನ್ನು ಕ್ವಾಡ್‌ಗೆ ಎಳೆಯುವುದು ಮತ್ತು ಅದರ ಮಿಲಿಟರಿ ಅವಲಂಬನೆ ಯನ್ನು ಹೆಚ್ಚಿಸುವುದು ಯುಎಸ್ ನ ಚೀನಾಕ್ಕೆ ನಿರ್ಬಂಧ ಹೇರುವ ಮತ್ತು ಪ್ರತ್ಯೇಕಿಸಿ ಒಂಟಿಯಾಗಿಸುವ ನೀತಿಯ ಭಾಗವಾಗಿದೆ.

ಜಿ-7 ಶೃಂಗಸಭೆ: ಜೂನ್ 2021 ರಲ್ಲಿ ನಡೆದ ಜಿ -7 ಶೃಂಗ ಸಭೆಯ ಮೂಲಕ, ಯುಎಸ್ ತನ್ನ ಮಿತ್ರರಾಷ್ಟ್ರಗಳನ್ನು ಚೀನಾ ವನ್ನು ಪ್ರತ್ಯೇಕಿಸುವ ತನ್ನ ಕಾರ್ಯಸೂಚಿಯಲ್ಲಿ ಸಜ್ಜುಗೊಳಿಸಲು ಬಳಸಿತು.  ಶೃಂಗಸಭೆಯು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ “ಬಿಲ್ಡ್ ಬ್ಯಾಕ್ ಬೆಟರ್ ವರ್ಲ್ಡ್” ಎಂಬ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯನ್ನು ಘೋಷಿಸಿತು. ಇದು ಚೀನಾದ “ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್‌” ಗೆ ಪ್ರತಿಸ್ಪರ್ಧಿಯಾಗಿ  ಯೋಜಿಸಿದ್ದು. ಆದರೆ ಈ ಯೋಜನೆಗೆ ಧನಸಹಾಯಕ್ಕಾಗಿ ಯಾವುದೇ ನಿರ್ದಿಷ್ಟ ಪ್ರಸ್ತಾಪಗಳನ್ನು ಮಾಡಲಾಗಿಲ್ಲ.  ಯುಎಸ್ ತನ್ನ ಎಲ್ಲಾ ಯುರೋಪಿಯನ್ ಮಿತ್ರರಾಷ್ಟ್ರಗಳ ಅವಿರತ ಬೆಂಬಲವನ್ನು ಗೆಲ್ಲುವ ಆಶಯವು  ಚೀನಾದೊಂದಿಗಿನ ಅವರ ಹಿತಾಸಕ್ತಿಗಳ ನಡುವಿನ ವೈರುಧ್ಯಗಳು ಮತ್ತು ಸಂಬಂಧಗಳಿಂದಾಗಿ ಈಡೇರಲಿಲ್ಲ.

ಜಿ-7 ಶೃಂಗಸಭೆಯ ನಂತರ ನಡೆದ ನ್ಯಾಟೋ ಶೃಂಗ ಸಭೆಯು ಚೀನಾವನ್ನು ತನ್ನ ಹೇಳಿಕೆಯಲ್ಲಿ ಮೊದಲ ಬಾರಿಗೆ ಭದ್ರತಾ ಬೆದರಿಕೆ ಎಂದು ಉಲ್ಲೇಖಿಸಿದೆ.  ಯುಎಸ್ ಚೀನಾವನ್ನು ತನ್ನ ಜಾಗತಿಕ ಯಜಮಾನಿಕೆಗೆ ಬೆದರಿಕೆ ಎಂದು ಪರಿಗಣಿಸುತ್ತದೆ ಮತ್ತು ಆದ್ದರಿಂದ ಚೀನಾವನ್ನು ಪ್ರತ್ಯೇಕಿಸಲು ತನ್ನ ಸಾಂಪ್ರದಾಯಿಕ ಮಿತ್ರರ ವಿಶ್ವಾಸವನ್ನು ಉಳಿಸಿಕೊಳ್ಳಲು ಬಯಸುತ್ತದೆ.

ಚೀನಾ-ಇಯು ಸಂಬಂಧಗಳು : ಆದಾಗ್ಯೂ, ಜರ್ಮನಿ, ಫ್ರಾನ್ಸ್ ಮತ್ತು ಇಟಲಿಯಂತಹ ದೇಶಗಳು ಚೀನಾದ ಜತೆ ಸಂಬಂಧಗಳ ವಿಷಯದಲ್ಲಿ ಯುಎಸ್ ಜೊತೆ ಸಂಪೂರ್ಣವಾಗಿ ಹೊಂದಿಕೊಳ್ಳಲು ಉತ್ಸುಕರಾಗಿರಲಿಲ್ಲ. ಯುಎಸ್ ನ್ನು ನಿರ್ಲಕ್ಷಿಸಿ, ಯುರೋಪಿಯನ್ ಯೂನಿಯನ್ ಮತ್ತು ಚೀನಾವನ್ನು ಡಿಸೆಂಬರ್ 2020 ರಲ್ಲಿ ‘ಹೂಡಿಕೆಯ ಸಮಗ್ರ ಒಪ್ಪಂದ’ (ಸಿಎಐ) ಮಾಡಿಕೊಂಡಿತು. ಜರ್ಮನ್ ಮತ್ತು ಫ್ರಾನ್ಸಿನ ಅನೇಕ ದೊಡ್ಡ ಕಂಪನಿಗಳು ಸಿಎಐ ಅನ್ನು ತಮ್ಮ ಹಿತಾಸಕ್ತಿಗೆ ಲಾಭದಾಯಕವೆಂದು ಪರಿಗಣಿಸುತ್ತವೆ ಮತ್ತು ಈ ಒಪ್ಪಂದವನ್ನು ಸಕ್ರಿಯವಾಗಿ ಬೆಂಬಲಿಸುತ್ತಿವೆ.  ಈ ಮೂಲಕ ಯುರೋಕೂಟವು ತಾನು ಜಾಗತಿಕ ವ್ಯವಹಾರಗಳನ್ನು ನಿರ್ವಚಿಸುವಲ್ಲಿ ಒಂದು ಪಾತ್ರವನ್ನು ಹೊಂದಿರುವ ಒಂದು ಸ್ವತಂತ್ರ ಮತ್ತು ಪ್ರಮುಖ ಧ್ರುವವಾಗಿದೆ ಎಂದು ಯುಎಸ್ ಗೆ ಸಂದೇಶವನ್ನು ಕಳುಹಿಸುವಂತೆ ಕಾಣುತ್ತಿದೆ.

ಜಿ-7 ಮತ್ತು ನ್ಯಾಟೋ ಶೃಂಗಸಭೆಗಳ ನಂತರ, ಜರ್ಮನ್ ಚಾನ್ಸೆಲರ್ ಮಾರ್ಕೆಲ್ ಮತ್ತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರಾನ್ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆ ಚರ್ಚಿಸಿದರು.  ಜಾಗತಿಕ ಸವಾಲುಗಳಿಗೆ ಉತ್ತಮವಾಗಿ ಸ್ಪಂದಿಸಲು ಚೀನಾ ಮತ್ತು ಯುರೋಪ್ ಸಹಕಾರವನ್ನು ವಿಸ್ತರಿಸುತ್ತವೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.  ಯುಎಸ್  ಬಯಸಿದಂತೆ ಚೀನಾದೊಂದಿಗೆ ಸಂಬಂಧ ಕಳಚಿಕೊಳ್ಳಲು ಮತ್ತು ಅದಕ್ಕಾಗಿ ಅದು ಒತ್ತಡವನ್ನು ಹೇರುತ್ತಿದ್ದರೂ, ಜರ್ಮನಿ ಮತ್ತು ಫ್ರಾನ್ಸ್ ಆ ಕುರಿತು ಉತ್ಸುಕವಾಗಿಲ್ಲ.  ಸಮೀಕ್ಷೆಯೊಂದರ ಪ್ರಕಾರ, ಮುಕ್ಕಾಲು ಭಾಗದಷ್ಟು ಜರ್ಮನ್ನರು ಚೀನಾದೊಂದಿಗೆ ಯಾವುದೇ ಸಂಭಾವ್ಯ ಮುಖಾಮುಖಿಯಲ್ಲಿ ಯು.ಎಸ್ ಜೊತೆ ನಿಲ್ಲಬಾರದು ಎಂದು ಅಭಿಪ್ರಾಯ ಪಡುತ್ತಾರೆ.

ಆದಾಗ್ಯೂ, ಮಾನವ ಹಕ್ಕುಗಳ ವಿಚಾರದಲ್ಲಿ ಯು.ಎಸ್, ಯುರೋಕೂಟ, ಕೆನಡಾ ಮತ್ತು ಬ್ರಿಟನ್ ಜೊತೆಗೂಡಿ ಕಾರ್ಯನಿರ್ವಹಿಸುತ್ತಿವೆ. ಅವರೆಲ್ಲರೂ ಮಾರ್ಚ್‌ನಲ್ಲಿ ಚೀನಾದ ಅಧಿಕಾರಿಗಳ ಮೇಲೆ, ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ನಿರ್ಬಂಧಗಳನ್ನು ವಿಧಿಸಿದ್ದರು.  ಜುಲೈನಲ್ಲಿ ಮತ್ತೊಮ್ಮೆ, ಹಾಂಗ್ ಕಾಂಗ್ ಮತ್ತು ಚೀನಾದ ಅಧಿಕಾರಿಗಳು ಹಾಂಗ್ ಕಾಂಗ್ ನಲ್ಲಿ ಮಾನವ ಹಕ್ಕುಗಳ ಮೇಲೆ ಧಾಳಿ ಮಾಡಿದ್ದಾರೆ ಎಂದು ಆರೋಪಿಸಿ ಯುರೋಕೂಟ ನಿರ್ಬಂಧಗಳನ್ನು ವಿಧಿಸಿತು.

ಇದಕ್ಕೆ ಪ್ರತಿಯಾಗಿ, ಯುರೋಕೂಟ ದಲ್ಲಿನ ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಚೀನಾ ನಿರ್ಬಂಧಗಳನ್ನು ವಿಧಿಸಿ, ಯುರೋಪಿಯನ್ ವ್ಯಾಪಾರ ಮಂಡಳಿಯನ್ನು ಎಚ್ಚರಿಸಿತು.

ಇದರ ಪರಿಣಾಮವಾಗಿ, ಯುರೋಕೂಟದ ಸಂಸತ್ತು ಸಿಎಐ ಒಪ್ಪಂದವನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ಅಂತಹ ಎಲ್ಲಾ ಒಪ್ಪಂದಗಳನ್ನು ಒಮ್ಮತದಿಂದ ಅಂಗೀಕರಿಸಬೇಕಾಗಿತ್ತು.

ಯು.ಎಸ್-ರಷ್ಯಾ ಶೃಂಗಸಭೆ

ಯು.ಎಸ್ ಮತ್ತು ರಷ್ಯಾ ಅಧ್ಯಕ್ಷರು ಎರಡು ದೇಶಗಳ ನಡುವೆ ಸಾಕಷ್ಟು ಉದ್ವಿಗ್ನತೆಗಳು ಇದ್ದಾಗ್ಯೂ, ಜಿ-7 ಶೃಂಗಸಭೆಯ ನಂತರ ಜೀನಿವಾದಲ್ಲಿ ಭೇಟಿಯಾದರು.  ನ್ಯಾಟೋವನ್ನು ಯುರೋಕೂಟದ ಪೂರ್ವದ ಗಡಿಗಳಿಗೆ ವಿಸ್ತರಿಸುವುದು, ರಷ್ಯಾ ಮೇಲೆ ನಿರ್ಬಂಧಗಳನ್ನು ವಿಧಿಸುವುದು ಮತ್ತು ಎರಡೂ ದೇಶಗಳಿಂದ ರಾಯಭಾರಿಗಳನ್ನು ಹಿಂತೆಗೆದುಕೊಳ್ಳುವುದು, ಕಪ್ಪು ಸಮುದ್ರದಲ್ಲಿ ಯುಎಸ್ ನೌಕಾಪಡೆಯ ನೌಕಾಪಡೆ ಚಲನವಲನಗಳು, ರಷ್ಯಾದ ಗಡಿಯಲ್ಲಿ ಮಿಲಿಟರಿ ಕಸರತ್ತುಗಳು, ದಶಕಗಳ ಹಿಂದೆ ಸಹಿ ಮಾಡಿದ ಶಸ್ತ್ರಾಸ್ತ್ರ ಒಪ್ಪಂದಗಳನ್ನು ನವೀಕರಿಸಲು ನಿರಾಕರಿಸುವುದು, ಸೈಬರ್ ದಾಳಿಯ ಆರೋಪಗಳು, ಯುಎಸ್ ಅಧ್ಯಕ್ಷೀಯ ಚುನಾವಣೆಗಳ ಮೇಲೆ ಪ್ರಭಾವ ಬೀರುವ ಪ್ರಯತ್ನಗಳು ಇತ್ಯಾದಿ – ವಿವಾದಾತ್ಮಕ ಚರ್ಚೆಯ ವಿಷಯವಾಗಿತ್ತು. ಎರಡೂ ದೇಶಗಳಲ್ಲಿ ರಾಜತಾಂತ್ರಿಕರನ್ನು ಪುನಃಸ್ಥಾಪಿಸಲು ಮತ್ತು ಚರ್ಚೆಗಳನ್ನು ಮುಂದುವರಿಸುವ ಒಪ್ಪಂದವನ್ನು ಹೊರತುಪಡಿಸಿ, ಶೃಂಗಸಭೆಯಿಂದ ಏನೂ ವಿಶೇಷ ಹೊರಬರಲಿಲ್ಲ.  ಈ ಸಭೆ ರಷ್ಯಾ ಮತ್ತು ಚೀನಾದ ನಡುವೆ ಬೆಳೆಯುತ್ತಿರುವ ಜಾಗತಿಕ ವ್ಯೂಹಾತ್ಮಕ ಪಾಲುದಾರಿಕೆಯಲ್ಲಿ  ಬಿರುಕು ಮೂಡಿಸಲು ಯು.ಎಸ್ ನಡೆಸಿದ ಇನ್ನೊಂದು ಪ್ರಯತ್ನವಾಗಿತ್ತು.

ರಷ್ಯಾದ ಮೇಲಿನ ವಿಷಯಗಳಲ್ಲಿ ಯುರೋಕೂಟವು ವಿಭಜಿತವಾಗಿತ್ತು. ರಷ್ಯಾದೊಂದಿಗೆ ಚರ್ಚೆಗಳನ್ನು ನಡೆಸಲು ಮತ್ತು ಮುಂದಕ್ಕೆ  ಹೆಜ್ಜೆಯಿಡಲು ಜರ್ಮನಿ ಮತ್ತು ಫ್ರಾನ್ಸ್ ಗಳು ಸಿದ್ಧವಾಗಿವೆ.  ಜರ್ಮನಿ ತನ್ನ ಇಂಧನ ಅಗತ್ಯಗಳಿಗಾಗಿ ರಷ್ಯಾದಿಂದ ಪೈಪ್‌ಲೈನ್ ಅನ್ನು ಮುಂದುವರಿಸಲು ಬಯಸುತ್ತದೆ. ಜರ್ಮನಿಯು ಈ ಯೋಜನೆಯೊಂದಿಗೆ ಮುಂದುವರಿಯುವುದನ್ನು ತಡೆಯಲು ಯು.ಎಸ್ ತುಂಬಾ ಪ್ರಯತ್ನಿಸಿತು, ಆದರೆ ಯಶಸ್ವಿಯಾಗಲಿಲ್ಲ.

ಲ್ಯಾಟಿನ್ ಅಮೇರಿಕ

ಕ್ಯೂಬಾ ಮೇಲೆ ನವೀಕೃತ ದಾಳಿಗಳು: ಸಮಾಜವಾದಿ ಕ್ಯೂಬಾದ ಮೇಲೆ ಅಮೆರಿಕ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಇದು ಕೋವಿಡ್-19 ಮಹಾಸೋಂಕನ್ನು ಒಂದು ಅವಕಾಶವಾಗಿ ಬಳಸಿಕೊಂಡಿದೆ. ಭಯೋತ್ಪಾದನೆಯನ್ನು ಪ್ರಾಯೋಜಿಸುವ ದೇಶಗಳ ಪಟ್ಟಿಯಲ್ಲಿ ಯು.ಎಸ್ ಕ್ಯೂಬಾವನ್ನು ನಮೂದಿಸಿದೆ.  ಕ್ಯೂಬಾದ ಮೇಲೆ ನಿರ್ಬಂಧಗಳನ್ನು ಬಿಗಿಗೊಳಿಸುವ 243 ಕ್ರಮಗಳನ್ನು ಟ್ರಂಪ್ ವಿಧಿಸಿದ್ದರು. ಇವುಗಳೆಲ್ಲವನ್ನೂ ಬಿಡೆನ್ ಮುಂದುವರಿಸಿದ್ದಾರೆ.

ಕಳೆದ ವರ್ಷ ಕ್ಯೂಬಾದ ಆರ್ಥಿಕತೆಯು ಶೇಕಡಾ 11 ರಷ್ಟು ಕುಸಿದಿದೆ. ನಿರ್ಬಂಧಗಳ ಪರಿಣಾಮವಾಗಿ, ಆಹಾರ, ತೈಲ ಮತ್ತು ಔಷಧಗಳು ಸೇರಿದಂತೆ ಹಲವು ಅಗತ್ಯ ವಸ್ತುಗಳ ಕೊರತೆಗೆ ಕಾರಣವಾಗಿದೆ. ಕ್ಯೂಬಕ್ಕೆ, ಸುಮಾರು 2 ಶತಕೋಟಿ ಡಾಲರ್‌ ಗಳು ಪ್ರವೇಶಿಸುವುದನ್ನು ತಡೆ ಹಿಡಿಯಲಾಯಿತು. ವೈದ್ಯಕೀಯ ಸರಬರಾಜುಗಳನ್ನು ಪಡೆಯಲು ಮತ್ತು ಅಗತ್ಯವಾದ ಉಪಕರಣಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಗಂಭೀರ ಜೀವಾಪಾಯದಲ್ಲಿದ್ದ ರೋಗಿಗಳನ್ನು ಉಳಿಸಲು ಇದು ಅಗತ್ಯವಾಗಿತ್ತು.

ಈ ಎಲ್ಲ ಅಡೆತಡೆಗಳನ್ನು ನಿವಾರಿಸಿ, ಕ್ಯೂಬಾ ಈಗ ಕೋವಿಡ್ ನಿಯಂತ್ರಿಸಲು 5 ಲಸಿಕೆ ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಅವುಗಳಲ್ಲಿ ಎರಡು, ಸೊಬೆರಾನಾ 02 ಮತ್ತು ಅಬ್ದಾಲಾ, ಶೇ. 90 ರಷ್ಟು ಪರಿಣಾಮಕಾರಿತನವನ್ನು ಹೊಂದಿವೆ.

ಅಗತ್ಯ ವಸ್ತುಗಳ ಕೊರತೆಯಿಂದಾಗಿ ಜನರು ಬೀದಿಗಿಳಿದು, ಆಹಾರ, ವಿದ್ಯುತ್ ಮತ್ತು ಔಷಧಿಗಳಿಗಾಗಿ ಒತ್ತಾಯಿಸಿದರು. ಈ ಪ್ರಕರಣಗಳಿಗೆ ಯು.ಎಸ್ ನೆರವು ಮತ್ತು ಕುಮ್ಮಕ್ಕು ನೀಡಿತು.  ಕ್ಯೂಬನ್ ಸರ್ಕಾರ ಮತ್ತು ಕ್ಯೂಬಾದ ಕಮ್ಯುನಿಸ್ಟ್‌ ಪಕ್ಷ (ಪಿಸಿಸಿ) ತಕ್ಷಣವೇ ಜನರ ಮಾತುಗಳನ್ನು ಆಲಿಸಲು ಮತ್ತು ಈ ಕಷ್ಟಗಳ ಹಿಂದಿನ ಕಾರಣಗಳನ್ನು ವಿವರಿಸಲು ಧಾವಿಸುವ ಮೂಲಕ ಪ್ರತಿಕ್ರಿಯಿಸಿತು.  ಕ್ಯೂಬನ್ ಕ್ರಾಂತಿಯನ್ನು ಬೆಂಬಲಿಸಲು ಮತ್ತು ಸಮಾಜವಾದ ವನ್ನು ರಕ್ಷಿಸಲು ಲಕ್ಷಾಂತರ ಜನರು ಒಟ್ಟುಗೂಡಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರೂ, ಪಿಸಿಸಿ ಮತ್ತು ಸರ್ಕಾರವು ಜನರನ್ನು ಜಾಗರೂಕರಾಗಿರಲು ಮತ್ತು ದೇಶವನ್ನು ಅಸ್ಥಿರಗೊಳಿಸುವ ಎಲ್ಲಾ ಸಾಮ್ರಾಜ್ಯಶಾಹಿ ಪ್ರಯತ್ನಗಳನ್ನು ತಡೆಯಲು ಒತ್ತಾಯಿಸಿತು. 60 ವರ್ಷಗಳಿಗಿಂತ ಹೆಚ್ಚು ಕಾಲ ಇರುವ ಅಮಾನವೀಯ ಆರ್ಥಿಕ ದಿಗ್ಬಂಧನವನ್ನು ತೆಗೆದುಹಾಕುವಂತೆ ಅವರು ಮತ್ತೊಮ್ಮೆ ಯುಎಸ್ ಅನ್ನು ಒತ್ತಾಯಿಸಿದ್ದಾರೆ.

ಎಡ ನವಚೈತನ್ಯದ ಸೂಚನೆಗಳು

ಪೆರು: ಪೆರುವಿನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಕ್ಷಗಳು ಮಹತ್ವದ ಗೆಲುವು ಸಾಧಿಸಿವೆ.  ಪ್ರಗತಿಪರ ಶಾಲಾ ಶಿಕ್ಷಕ ಮತ್ತು ಎಡ ಕಾರ್ಯಕರ್ತ ಪೆಡ್ರೊ ಕ್ಯಾಸ್ಟಿಲ್ಲೊ ಬಲಪಂಥೀಯ ನವ ಉದಾರವಾದಿ ಕೀಕೊ ಫುಜಿಮೊರಿಯನ್ನು ಸೋಲಿಸಿದರು.  ಕಳೆದ ನಾಲ್ಕು ವರ್ಷಗಳಲ್ಲಿ, ಪೆರು ನಾಲ್ಕು ಅಧ್ಯಕ್ಷರನ್ನು ಹೊಂದಿತ್ತು. ಒಬ್ಬರು ಮತ ಖರೀದಿ ಹಗರಣದಿಂದಾಗಿ ರಾಜೀನಾಮೆ ನೀಡಿದರು, ಇನ್ನೊಬ್ಬರು ದೋಷಾರೋಪಣೆಗೊಳಗಾದರು, ಮೂರನೆಯವರು ಒಂದು ವಾರದೊಳಗೆ ಕೆಳಗಿಳಿದರು, ಮತ್ತು ನಾಲ್ಕನೆಯವರು ಪ್ರಸ್ತುತ ಹಂಗಾಮಿ ಅಧ್ಯಕ್ಷರಾಗಿ ಚುನಾವಣೆಯ ಉಸ್ತುವಾರಿ ವಹಿಸಿಕೊಂಡವರು. ಕ್ಯಾಸ್ಟಿಲ್ಲೊ ಬಡವರ ಪರವಾದ ಕಾರ್ಯಸೂಚಿಯನ್ನು ಪ್ರಚಾರ ಮಾಡಿದರು. ಪ್ರಬಲ ಗಣಿಗಾರಿಕೆ ಸಂಸ್ಥೆಗಳ ಮೇಲೆ ಹೆಚ್ಚಿನ ತೆರಿಗೆಗಳನ್ನು ಹಾಕುವ ಭರವಸೆ ನೀಡಿದರು. ಎಲ್ಲಾ ವಿದೇಶಿ ಗಣಿಗಾರಿಕೆ ಯೋಜನೆಗಳ ಸ್ವಾಧೀನ, ಸರ್ವಾಧಿಕಾರ ಯುಗದ ನವ ಉದಾರವಾದಿ ಸಂವಿಧಾನವನ್ನು ಪುನಃ ಬರೆಯಲು ಜನಾಭಿಪ್ರಾಯ ಸಂಗ್ರಹ, ಎಲ್ಲಾ ಅಸಮಾನತೆಗಳನ್ನು ಕೊನೆಗೊಳಿಸಲು, ಸ್ಥಳೀಯ ಸಮುದಾಯಗಳು, ಮಹಿಳೆಯರು ಮತ್ತು ರೈತರ ಹಕ್ಕುಗಳನ್ನು ಖಾತರಿಪಡಿಸುವ ಆಶ್ವಾಸನೆ ನೀಡಿದರು. ಮಾನವ ಹಕ್ಕುಗಳಿಗೆ ಆದ್ಯತೆ ನೀಡಿ, ಶಿಕ್ಷಣಕ್ಕೆ ಬಜೆಟ್ ಹೆಚ್ಚಿಸುವ ಭರವಸೆಗಳನ್ನೂ ನೀಡಿದರು.

ಚಿಲಿ: ಹೊಸ ಸಂವಿಧಾನ ರಚಿಸುವ ಜವಾಬ್ದಾರಿಯನ್ನು ಹೊಂದಿರುವ ಸಂವಿಧಾನ ಸಭೆಗೆ 155 ಸದಸ್ಯರನ್ನು ಹಾಗೂ ಪ್ರಾಂತೀಯ ಗವರ್ನರ್‌ಗಳು, ಮೇಯರ್‌ಗಳು ಮತ್ತು ಕೌನ್ಸಿಲರ್‌ಗಳನ್ನು ಚಿಲಿ ಇತ್ತೀಚೆಗೆ ಚುನಾಯಿಸಿತು. ಇದರಲ್ಲಿ ಬಲಪಂಥೀಯ ಅಭ್ಯರ್ಥಿಗಳು ಪರಾಭವವನ್ನು ಹೊಂದಿದರು.  ಹೊಸದಾಗಿ ಆಯ್ಕೆಯಾದ ಸಾಂವಿಧಾನಿಕ ಸಭೆಯಲ್ಲಿ ಎಡ ಮತ್ತು ನವ ಉದಾರವಾದಿ ವಿರೋಧಿ ಶಕ್ತಿಗಳು ಪ್ರಾಬಲ್ಯ ಹೊಂದಿವೆ.  ಪ್ರಸ್ತುತ ರಾಜಕೀಯ ವ್ಯವಸ್ಥೆಯ ಸಂಪೂರ್ಣ ದುರಸ್ತಿಯನ್ನು ಜನರು ನಿರೀಕ್ಷಿಸುತ್ತಿದ್ದಾರೆ.

ಬ್ರೆಜಿಲ್: ಅಧ್ಯಕ್ಷ ಜಾಯಿರ್ ಬೋಲ್ಸೊನಾರೊ ವಿರುದ್ಧ ಪ್ರತಿಭಟನೆಗಳು ಬ್ರೆಜಿಲ್‌ನಾದ್ಯಂತ ತೀವ್ರಗೊಂಡಿವೆ.  ಕೋವಿಡ್ -19 ಮಹಾಸೋಂಕನ್ನು ನಿಯಂತ್ರಿಸುವಲ್ಲಿ ಸರ್ಕಾರದ ವೈಫಲ್ಯ, ಹೆಚ್ಚುತ್ತಿರುವ ಹಸಿವು, ನಿರುದ್ಯೋಗ ಮುಖ್ಯ ಸಮಸ್ಯೆಗಳಾಗಿವೆ. ಮಾಜಿ ಅಧ್ಯಕ್ಷ ಲೂಲಾ ಅವರನ್ನು ನ್ಯಾಯಾಲಯವು ಭ್ರಷ್ಟಾಚಾರದ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿತು. 2022 ರಲ್ಲಿ ನಿಗದಿಯಾಗಿರುವ ಅಧ್ಯಕ್ಷೀಯ ಚುನಾವಣೆಗೆ ಲೂಲಾ ಮುಂಚೂಣಿಯಲ್ಲಿದ್ದಾರೆ*

ಕೊಲಂಬಿಯಾ: ಆರಂಭದಲ್ಲಿ ತೆರಿಗೆಗಳನ್ನು ಹೆಚ್ಚಿಸುವ ಸರ್ಕಾರದ ಪ್ರಸ್ತಾವನೆಯ ವಿರುದ್ಧ ಏಪ್ರಿಲ್‌ನಿಂದ ಕೊಲಂಬಿಯಾದಲ್ಲಿ ಬೃಹತ್ ಕಾರ್ಮಿಕ ವರ್ಗದ ಮುಷ್ಕರಗಳು ನಡೆಯುತ್ತಿವೆ.  ಆದರೆ, ಅವು ನವ ಉದಾರವಾದದ ವಿರೋಧಿ ಸ್ವಭಾವವನ್ನು ಹೊಂದುತ್ತಿದ್ದು, ಬಲಪಂಥೀಯ ಸರ್ಕಾರದ ವಿರುದ್ಧ  ಕ್ರಮೇಣ ತಿರುಗಿದೆ.‌ ಎಡಪಕ್ಷಗಳು ಈ ಪ್ರತಿಭಟನೆಗಳನ್ನು ಮುನ್ನೆಡೆಸುತ್ತಿವೆ.

ಈಕ್ವೆಡಾರ್: ಈಕ್ವೆಡಾರ್ ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ, ಎಡಪಕ್ಷಗಳು ಸೋಲು ಅನುಭವಿಸಿದವು.  ಆದರೆ, ಅವು ಸಂಸತ್ತಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ವೆನೆಜುವೆಲಾ: ಯು.ಎಸ್ ಹೇರಿದ ನಿರ್ಬಂಧಗಳಿಂದಾಗಿ, ವೆನಿಜುವೆಲಾ ಅನಿರೀಕ್ಷಿತವಾಗಿ ಸಂಕಷ್ಟಗಳನ್ನು ಎದುರಿಸುತ್ತಿದೆ.

ಡಬ್ಲ್ಯು.ಎಚ್‌.ಒ ಕೋವಾಕ್ಸ್ ಸೌಲಭ್ಯದ ಮೂಲಕ ಕೋವಿಡ್ ಲಸಿಕೆಗಳನ್ನು ಖರೀದಿಸಲು ವೆನೆಜುವೆಲಾದ ಕೊನೆಯ ಪಾವತಿಗಳನ್ನು ಸ್ವಿಸ್ ಬ್ಯಾಂಕ್ ನಿರ್ಬಂಧಿಸಿತು ಮತ್ತು ಲಸಿಕೆ ಪೂರೈಕೆಯನ್ನು ಸ್ಥಗಿತಗೊಳಿಸಿತು.  ವಿದೇಶದಲ್ಲಿರುವ ವೆನಿಜುವೆಲಾದ ಸ್ವತ್ತುಗಳನ್ನು ಯು.ಎಸ್ ಖಜಾನೆ ಇಲಾಖೆಯು ನಿರ್ಬಂಧಿಸಿದೆ ಅಥವಾ ವಶಪಡಿಸಿಕೊಂಡಿದೆ.  ಔಷಧಗಳು ಅಥವಾ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಸಾವಿರಾರು ಜನರು ಬಳಲುತ್ತಿದ್ದಾರೆ.  ವೆನೆಜುವೆಲಾದ ತೈಲ ಮತ್ತು ವಿದ್ಯುತ್ ಉತ್ಪಾದನೆಯನ್ನು ಹಾಳುಮಾಡುವುದು, ಮತ್ತು ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಶಾಂತಿಯನ್ನು ಸೃಷ್ಟಿಸಲು ಸಶಸ್ತ್ರ ವಿರೋಧಿ ಪಡೆಗಳನ್ನು ಮತ್ತು ವಿರೋಧಿ ಗುಂಪುಗಳನ್ನು ಪ್ರಾಯೋಜಿಸುವುದು ಇವೆಲ್ಲಾ ಆ ದೇಶವನ್ನು ಅಸ್ಥಿರಗೊಳಿಸುವ ಯು.ಎಸ್.ನ  ಪ್ರಯತ್ನ ಗಳಲ್ಲಿ ಸೇರಿವೆ.  ವೆನೆಜುವೆಲಾ ಆಹಾರ, ಅಗತ್ಯ ವಸ್ತುಗಳು ಮತ್ತು ಇಂಧನದ ತೀವ್ರ ಕೊರತೆಗಳನ್ನು‍ ಎದುರಿಸುತ್ತಿದೆ.  ಈ ದೇಶದ ಬೆನ್ನೆಲುಬನ್ನೇ ಮುರಿಯುವ ನಿರ್ಬಂಧಗಳ ಹೊರತಾಗಿಯೂ, ವೆನೆಜುವೆಲಾ ತನ್ನ ಕಲ್ಯಾಣ ಕಾರ್ಯಗಳ ಪ್ರಯತ್ನಗಳನ್ನು ನಿರ್ವಹಿಸುತ್ತಿದೆ.

 ಅಧ್ಯಕ್ಷ ನಿಕೋಲಸ್ ಮಡುರೊ ಅವರು ವಿರೋಧ ಪಕ್ಷಗಳೊಂದಿಗೆ ಚರ್ಚೆಗೆ ಸಿದ್ಧ ಎಂದು ಘೋಷಿಸಿದರು.  ಈ ಚರ್ಚೆಗಳು ಮೆಕ್ಸಿಕೋದಲ್ಲಿ ನಡೆಯಲಿವೆ.  ನವೆಂಬರ್ 2021 ರಲ್ಲಿ ನಡೆಯಲಿರುವ ವಿವಿಧ ಸ್ಥಳೀಯ ಸಂಸ್ಥೆಗಳು ಮತ್ತು ಪ್ರಾಂತೀಯ ವಿಧಾನ ಸಭಾ ಚುನಾವಣೆಗಳಲ್ಲಿ ಭಾಗವಹಿಸಲು ಸರ್ಕಾರವು ಎಲ್ಲಾ ವಿರೋಧ ಪಕ್ಷಗಳನ್ನು ಒತ್ತಾಯಿಸುತ್ತಿದೆ.

ಉತ್ತರ ಆಫ್ರಿಕಾ/ಪಶ್ಚಿಮ ಏಷ್ಯಾ:

ಪ್ಯಾಲೆಸ್ಟೈನ್ ಮೇಲೆ ಇಸ್ರೇಲಿ ದಾಳಿ: ಪ್ಯಾಲೆಸ್ಟೈನ್ ನ ಗಾಜಾ ಮೇಲೆ ಇಸ್ರೇಲಿ ವಾಯುದಾಳಿ ಮುಂದುವರೆದಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವು ಪ್ಯಾಲೆಸ್ಟೈನ್ ನಾಗರಿಕರ ಸಾವಿಗೆ ಕಾರಣವಾಗುತ್ತಿದೆ.  ಪೂರ್ವ ಜೆರುಸಲೆಮ್ ಅನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳುವ ಉದ್ದೇಶವನ್ನು ಇಸ್ರೇಲ್ ಹೊಂದಿದೆ ಮತ್ತು ಪ್ಯಾಲೆಸ್ಟೀನಿಯನ್ನರು ವಾಸಿಸುವ ಪ್ರದೇಶಗಳಲ್ಲಿ ಯಹೂದಿ ವಸಾಹತುಗಳ ನಿರ್ಮಾಣವನ್ನು ತೀವ್ರಗೊಳಿಸುತ್ತಿದೆ. ಶೇಖ್ ಜರ್ರಾ ನೆರೆಹೊರೆಯ ನಿವಾಸಿಗಳನ್ನು ಬಲವಂತವಾಗಿ ಹೊರಹಾಕುವ ಪ್ರಯತ್ನಗಳನ್ನು ಪ್ರತಿಭಟಿಸುತ್ತಿದ್ದವರ ಮೇಲೆ ಇಸ್ರೇಲ್ ಕ್ರೂರವಾಗಿ ದಾಳಿ ಮಾಡಿದೆ. ಮುಸ್ಲಿಮರ ಮೂರನೇ ಪವಿತ್ರ ದೇವಾಲಯವಾದ ಅಲ್-ಅಕ್ಸಾ ಮಸೀದಿ ಕಾಂಪೌಂಡ್ ಮೇಲೆ, ಅದೂ ಪವಿತ್ರ ರಂಜಾನ್ ಸಮಯದಲ್ಲಿ ಇಸ್ರೇಲಿ ಪಡೆಗಳು ದಾಳಿ ಮಾಡಿದವು ಈ ದಾಳಿಯಲ್ಲಿ ನೂರಾರು ಜನರು ಗಾಯಗೊಂಡರು. ಉಗ್ರ ಬಲಪಂಥೀಯ ನೆತನ್ಯಾಹು ನೇತೃತ್ವದ ಮಧ್ಯಂತರ ಸರ್ಕಾರವು ರಾಜಕೀಯ ಲಾಭಕ್ಕಾಗಿ ಈ ದಾಳಿಗಳನ್ನು ನಡೆಸಿತು.

ಪ್ರಧಾನ ಮಂತ್ರಿಯಾಗಿ ನೆತನ್ಯಾಹು ಉಚ್ಚಾಟನೆಯಾದರೂ ಮತ್ತು ನಾಫ್ತಾಲಿ ಬೆನೆಟ್ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೂ  ಪ್ಯಾಲೆಸ್ಟೈನ್ ಕುರಿತು ಇಸ್ರೇಲಿನ ನೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಸ್ರೇಲ್‌ನಲ್ಲಿ ವಾಸಿಸುತ್ತಿರುವ ಪ್ಯಾಲೆಸ್ತೀನಿಯರಿಗೆ ಲಸಿಕೆಯನ್ನು ಸಹ ನಿರಾಕರಿಸಲಾಗಿದೆ. 1967 ಗಡಿಗಳು ಮತ್ತು ಪೂರ್ವ ಜೆರುಸಲೆಮ್ ಅನ್ನು ಪ್ಯಾಲೆಸ್ಟೈನ್ ರಾಜಧಾನಿಯಾಗಿ ಒಪ್ಪಿಕೊಳ್ಳುವ  “ಎರಡು ದೇಶಗಳ ಪರಿಹಾರ”ವನ್ನು ಇಸ್ರೇಲ್ ಒಪ್ಪಿಕೊಳ್ಳದಿದ್ದರೆ ಮತ್ತು ಪಾಲಿಸದಿದ್ದರೆ ಶಾಂತಿ ನೆಲೆಸಲು ಸಾಧ್ಯವಿಲ್ಲ.

ಅರಬ್ ದೇಶಗಳ ನಿಲುವು: 2020ರಲ್ಲಿ, ನಾಲ್ಕು ಅರಬ್ ದೇಶಗಳಾದ ಯುನೈಟೆಡ್ ಅರಬ್ ಎಮಿರೇಟ್ಸ್, ಮೊರಾಕೊ, ಸುಡಾನ್ ಮತ್ತು ಬಹ್ರೇನ್ಗಳು ಅಮೆರಿಕದ ಲಾಭದಾಯಕ ವ್ಯವಹಾರಗಳ ಒತ್ತಾಯದಿಂದಾಗಿ ಇಸ್ರೇಲ್ ಜೊತೆಗಿನ ಸಂಬಂಧವನ್ನು ಸುಧಾರಿಸಿಕೊಂಡವು. ಇಸ್ರೇಲ್ ನೊಂದಿಗಿನ ಯುಎಇ ಸಂಬಂಧವನ್ನು ಸಾಮಾನ್ಯಗೊಳಿಸಲು ಅಬ್ರಹಾಂ ಒಪ್ಪಂದಗಳಿಗೆ ಸಹಿ ಮಾಡಲು  ಅಮೆರಿಕ ದಲ್ಲಾಳಿ ಕೆಲಸ ಮಾಡಿದೆ. ಸೌದಿ ಅರೇಬಿಯಾ ಈ ಒಪ್ಪಂದಗಳಿಗೆ ಸಹಿ ಹಾಕದಿದ್ದರೂ, ನಿಧಾನವಾಗಿ ಇಸ್ರೇಲ್‌ನೊಂದಿಗೆ ತನ್ನ ಸಂಬಂಧವನ್ನು ಉತ್ತಮ ಪಡಿಸಿಕೊಳ್ಳುತ್ತಿದೆ. ಪ್ಯಾಲೆಸ್ಟೀನಿಯನ್ನರು  ಈ ಎಲ್ಲಾ ಒಪ್ಪಂದಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ದೇಶಗಳು ಇಸ್ರೇಲಿನೊಂದಿಗೆ ಸಂಬಂಧವನ್ನು ಬೆಳೆಸಿಕೊಂಡಿರುವುದರಿಂದ, ಈ ದೇಶಗಳ ಯಾವುದೇ ಪ್ರಮುಖ ನಾಯಕರು ಗಾಜಾ ಮೇಲಿನ ಇಸ್ರೇಲಿ ದಾಳಿಯನ್ನು ದೃಢವಾಗಿ ಖಂಡಿಸಲಿಲ್ಲ. ಅದ್ದರಿಂದ ಪ್ಯಾಲೆಸ್ಟೈನ್ ಸ್ವತಂತ್ರ ದೇಶವಾಗಿ ರಚನೆಯಾದಾಗ ಮಾತ್ರ ಅರಬ್ ರಾಷ್ಟ್ರಗಳು ಇಸ್ರೇಲ್ ಜೊತೆ ಸಂಬಂಧವನ್ನು ಬೆಳಸಬೇಕು ಎಂಬ ಅರಬ್ ಶಾಂತಿ ಉಪಕ್ರಮದ ಉದ್ದೇಶವನ್ನು ಅಲ್ಲಗಳೆಯುತ್ತಿದ್ದಾರೆ.

ಶಿಯಾಗಳು ಮತ್ತು ಸುನ್ನಿಗಳ ನಡುವಿನ ಪಂಥೀಯ ವಿಭಜನೆಯನ್ನು ಅಮೆರಿಕ ಬಳಸಿಕೊಳ್ಳುತ್ತಿದೆ. ಶಿಯಾಗಳು ಬಹುಸಂಖ್ಯಾತರಾಗಿರುವ ಇರಾನ್ ದೇಶವನ್ನು ಸಾಮಾನ್ಯ ಶತ್ರು ಎಂದು ಬಿಂಬಿಸಿ ಪ್ಯಾಲೆಸ್ಟೈನ್ ಹಿತಾಸಕ್ತಿಗಳನ್ನು ಬಲಿಕೊಟ್ಟಾದರೂ ಇರಾನ್ ವಿರುದ್ಧ ಇತರರು ಇಸ್ರೇಲ್ ಜೊತೆ ಕೈಜೋಡಿಸುವಂತೆ ಮಾಡಲಾಗಿದೆ.  ಈ ರೀತಿಯ ವಿಚ್ಛಿದ್ರಕಾರಿ ಕ್ರಮಗಳು  ಪಶ್ಚಿಮ ಏಷ್ಯಾದ ದೇಶಗಳ ಒಳಗೆ ಮತ್ತು ದೇಶಗಳ ನಡುವೆ ಪಂಥೀಯ ಕಲಹವನ್ನು ಇನ್ನಷ್ಟು ತೀವ್ರಗೊಳಿಸುತ್ತವೆ.

ಇರಾನ್‌ನಲ್ಲಿ ಹೊಸ ಅಧ್ಯಕ್ಷ ಮತ್ತು ಪರಮಾಣು ಮಾತುಕತೆ: ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ಇಬ್ರಾಹಿಂ ರೈಸಿ ಇರಾನ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಚುನಾವಣೆಯು ಕಡಿಮೆ ಮತದಾನವನ್ನು (ಶೇ. 49) ಕಂಡಿತು ಮತ್ತು  ವಿಶ್ವಾಸಾರ್ಹ ಪರ್ಯಾಯದ ಅನುಪಸ್ಥಿತಿಯಲ್ಲಿ, ಉದ್ದೇಶಪೂರ್ವಕವಾಗಿ ಹಾಳು ಮಾಡಲಾದ, ಲಕ್ಷಾಂತರ ಮತಪತ್ರಗಳು ಆರ್ಥಿಕ ಸಂಕಷ್ಟಗಳ ವಿರುದ್ಧ ಅಸಮಾಧಾನದ, ಆಹಾರ ಮತ್ತು ಇಂಧನದ ಬೆಲೆಗಳ ಏರಿಕೆಯ ವಿರುದ್ಧದ ಅಭಿವ್ಯಕ್ತಿಯಾಗಿ ಕಂಡವು.

ಏಪ್ರಿಲ್‌ನಲ್ಲಿ ಆರಂಭವಾದ ಇರಾನ್ ಜೊತೆಗಿನ ವಿಯೆನ್ನಾ ಪರಮಾಣು ಮಾತುಕತೆಗಳನ್ನು, ಇಬ್ರಾಹಿಂ ರೈಸಿ ಅಧ್ಯಕ್ಷರಾದ ನಂತರ, ಸ್ಥಗಿತಗೊಳಿಸಿ ಆಗಸ್ಟ್ 3 ರ ವರೆಗೆ ಮುಂದೂಡಲಾಗಿದೆ. ಒಪ್ಪಂದಕ್ಕೆ ಅಮೆರಿಕ ಬದ್ಧತೆಯನ್ನು ತೋರಬೇಕೆಂದು ಇರಾನ್ ಒತ್ತಾಯಿಸುತ್ತಿದೆ ಮತ್ತು ಟ್ರಂಪ್ ಆಡಳಿತವು ಮಾಡಿದಂತೆ ಒಪ್ಪಂದದಿಂದ ಹಿಂದೆ ಸರಿಯುವುದಿಲ್ಲ ಎಂದು ಖಾತರಿಪಡಿಸುವಂತೆ ಕೇಳುತ್ತಿದೆ. ಅಮೆರಿಕ ಹೇರಿರುವ ನಿರ್ಬಂಧಗಳನ್ನು ತಕ್ಷಣವೇ ತೆಗೆದುಹಾಕಬೇಕೆಂದು ಇರಾನ್ ಬಯಸುತ್ತಿದೆ.

ರಾಜಕೀಯ ಪ್ರಕ್ಷುಬ್ಧತೆ

ಮಹಾಸೋಂಕು ಮತ್ತು ಅದು ಉಂಟುಮಾಡಿದ ಆರ್ಥಿಕ ತೊಂದರೆಗಳು ಇಡೀ ಪಶ್ಚಿಮ ಏಷ್ಯಾ ಪ್ರದೇಶದ ಮೇಲೆ ಪರಿಣಾಮ ಬೀರಿದೆ. ವ್ಯಾಪಕ ನಿರುದ್ಯೋಗ, ಬೆಲೆ ಏರಿಕೆ ಮತ್ತು ಆರ್ಥಿಕ ಸಂಕಷ್ಟಗಳಿಂದಾಗಿ ಪ್ರತಿಭಟನೆಗಳು ಹೆಚ್ಚಾಗಿವೆ ಮತ್ತು ರಾಜಕೀಯ ಪ್ರಕ್ಷುಬ್ಧತೆ ಸೃಷ್ಟಿಯಾಗಿದೆ. ಇರಾಕ್, ಲೆಬನಾನ್, ಟುನೀಶಿಯಾ ಮತ್ತು ಇತರ ದೇಶಗಳಲ್ಲಿ ಇಂತಹದ್ದೇ ಪರಿಸ್ಥಿತಿ ಇದೆ.

ಇರಾಕ್: 18 ವರ್ಷಗಳ ಅತಿಕ್ರಮಣ ಮತ್ತು ವಿನಾಶದ ನಂತರ ಈ ವರ್ಷದ ಅಂತ್ಯದ ವೇಳೆಗೆ ಇರಾಕ್‌ನಿಂದ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುವುದಾಗಿ ಅಮೆರಿಕ ಘೋಷಿಸಿದೆ ಮತ್ತು ಒಪ್ಪಂದಕ್ಕೆ ಸಹಿ ಹಾಕಲಾಗಿದೆ.  ಇರಾಕಿನ ಮೂರನೇ ಒಂದು ಭಾಗದ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಬಂಡುಕೋರರು ಮತ್ತು ಸಶಸ್ತ್ರ ಗುಂಪುಗಳ ಹರಡುವಿಕೆ, ಪಂಥೀಯ ಹೋರಾಟಗಳು ಮತ್ತು ಹತ್ಯೆಗಳು ಹಾಗೂ ಇರಾಕಿನ ಭೂಪ್ರದೇಶದ ಮೂರನೇ ಎರಡರಷ್ಟನ್ನು ಆಕ್ರಮಿಸಿರುವ ಭಯೋತ್ಪಾದಕ ಸಂಘಟನೆಗಳ ಹೊರಹೊಮ್ಮುವಿಕೆಯಿಂದಾಗಿ ಇರಾಕ್ ನ್ನು ಸಂಪೂರ್ಣವಾಗಿ ಹಾಳುಗೆಡವಲಾಗಿದೆ. ಅವಧಿಪೂರ್ವ ಚುನಾವಣೆಗಾಗಿ, ಸಂಪೂರ್ಣ ರಾಜಕೀಯ ಮತ್ತು ಚುನಾವಣಾ ವ್ಯವಸ್ಥೆಯ ಸುಧಾರಣೆಗಾಗಿ, ಆರ್ಥಿಕತೆ ಮತ್ತು ಆಡಳಿತದ ಭ್ರಷ್ಟಾಚಾರವನ್ನು ಎದುರಿಸಲು, ನಿರುದ್ಯೋಗವನ್ನು ಕೊನೆಗೊಳಿಸಲು ಮತ್ತು ಜೀವನಮಟ್ಟದಲ್ಲಿ ಸುಧಾರಣೆ ತರಲು ಇರಾಕಿನ ಜನತೆ ಒತ್ತಾಯಿಸುತ್ತಿದ್ದಾರೆ.

ಈ ವರ್ಷದ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯಲಿದೆ ಎಂದು ಇರಾಕ್ ಸರ್ಕಾರ ಘೋಷಿಸಿತ್ತು. ಚುನಾವಣೆ ನಡೆಸಲು 52 ಲಕ್ಷ ಡಾಲರ್ ಸಹಾಯ ನೀಡುವುದಾಗಿ ಅಮೆರಿಕ ಭರವಸೆ ನೀಡಿತ್ತು. ಇರಾಕ್ ಕಮ್ಯುನಿಸ್ಟ್ ಪಕ್ಷವು ತನ್ನ ಸದಸ್ಯರ ನಡುವೆ ಜನಾಭಿಪ್ರಾಯ ಸಂಗ್ರಹಿಸಿ, ರಾಜಕೀಯ ಪರಿಸ್ಥಿತಿಯು ನ್ಯಾಯಯುತ ಮತ್ತು ಶಾಂತಿಯುತ ಚುನಾವಣೆ ನಡೆಸಲು ಅನುಕೂಲಕರವಾಗಿರದ ಕಾರಣ  ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ನಿರ್ಧರಿಸಿತು.

ಲೆಬನಾನ್: ಲೆಬನಾನ್ ತನ್ನ ಇತಿಹಾಸದಲ್ಲೇ ಅತ್ಯಂತ ಕರಾಳ ಬಿಕ್ಕಟ್ಟನ್ನು ಹಾದು ಹೋಗುತ್ತಿದೆ.  ಈ ದೇಶವು 1800ರಿಂದ  ಈಚೆಗೆ  ವಿಶ್ವದ ಯಾವುದೇ ದೇಶ ಕಾಣದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಲ್ಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಯುನಿಸೆಫ್ ಪ್ರಕಾರ, ಶೇ. 77 ಕ್ಕಿಂತ ಹೆಚ್ಚು ಲೆಬನಾನಿನ ಜನರ ಹತ್ತಿರ ಈಗ ಸಾಕಷ್ಟು ಆಹಾರವಾಗಲೀ ಅಥವಾ ಆಹಾರವನ್ನು ಖರೀದಿಸಲು ಸಾಕಷ್ಟು ಹಣವಾಗಲೀ ಇಲ್ಲ. ಬ್ಯಾಂಕುಗಳಿಂದ ಹಣ ಹಿಂಪಡೆಯುವುದನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಔಷಧಾಲಯಗಳು ಔಷಧಿಗಳ ಕೊರತೆಯನ್ನು ಎದುರಿಸುತ್ತಿವೆ. ಜಿಡಿಪಿಯು 2019 ರಲ್ಲಿ 6.7% ಸಂಕುಚಿತಗೊಂಡ  ಹಿನ್ನೆಲೆಯಲ್ಲಿ 2020 ರಲ್ಲಿ ನೈಜ ಜಿಡಿಪಿ 20.3% ಸಂಕುಚಿತಗೊಂಡಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. ಡಾಲರ್ ಲೆಕ್ಕದಲ್ಲಿ ತಲಾವಾರು ಜಿಡಿಪಿ 40% ಕುಸಿದಿದೆ. ಜನಸಂಖ್ಯೆಯ  ಅರ್ಧಕ್ಕಿಂತ ಹೆಚ್ಚು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ನಿರುದ್ಯೋಗ ವೇಗವಾಗಿ ಏರುತ್ತಿದೆ.

ಬೈರುತ್ ಬಂದರಿನಲ್ಲಿ ಭಾರೀ ಸ್ಫೋಟ ಸಂಭವಿಸಿತು. ಇದು ನಗರದಲ್ಲಿ ವಿನಾಶವನ್ನೇ ಉಂಟುಮಾಡಿತು. ಇದರಿಂದಾಗಿ ಸರ್ಕಾರವು ರಾಜೀನಾಮೆ ನೀಡಬೇಕಾಯಿತು. ಅಲ್ಲಿಂದೀಚೆಗೆ, ಯಾವುದೇ ಸರ್ಕಾರ ರಚನೆಯಾಗಲಿಲ್ಲ. ಇಬ್ಬರು ಪ್ರಧಾನ ಮಂತ್ರಿಗಳನ್ನು ನೇಮಿಸಿದರೂ ರಾಜಕೀಯ ಅಸ್ಥಿರತೆ ಮುಂದುವರೆದಿದೆ. ಫ್ರೆಂಚ್ ಸರ್ಕಾರ (ಹಿಂದಿನ ವಸಾಹತು ಆಡಳಿತಗಾರರು) ಮಧ್ಯಪ್ರವೇಶಿಸಲು ಹಾಗೂ ರಾಜಕೀಯ ಮತ್ತು ಆರ್ಥಿಕ ನೀತಿಗಳನ್ನು ರೂಪಿಸಲು ಪ್ರಯತ್ನಿಸುತ್ತಿದೆ.

ಟುನೀಶಿಯಾ:  ಟುನೀಶಿಯಾದ ಹಲವಾರು ಪ್ರಾಂತ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದು, ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು ಹದಗೆಟ್ಟಿರುವ ಬಗ್ಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸರ್ಕಾರವನ್ನು ಉಚ್ಚಾಟಿಸಬೇಕು ಮತ್ತು ಸಂಸತ್ತನ್ನು ವಿಸರ್ಜಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಹಿಚೆಮ್ ಮೆಚಿಚಿಯನ್ನು ಪ್ರಧಾನ ಮಂತ್ರಿ ಹುದ್ದೆಯಿಂದ ಅಧ್ಯಕ್ಷರು ತೆಗೆದುಹಾಕಿದ್ದಾರೆ ಮತ್ತು ಸಂಸತ್ತಿನ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದಾರೆ.  ಸರ್ಕಾರವನ್ನು ವಹಿಸಿಕೊಂಡು ಎಲ್ಲಾ ಸಂಸತ್ ಸದಸ್ಯರಿಗಿದ್ದ ವಿನಾಯಿತಿಗಳನ್ನು ರದ್ದುಗೊಳಿಸಿ ಆರ್ಥಿಕ ಬಿಕ್ಕಟ್ಟಿನಲ್ಲಿ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ಅವಕಾಶ ಮಾಡಿದ್ದಾರೆ.

ದಕ್ಷಿಣ ಏಷ್ಯಾ

ಅಫ್ಘಾನಿಸ್ತಾನ: ಕಳೆದ ವರ್ಷ ತಾಲಿಬಾನ್ ಜೊತೆ ಮಾಡಿಕೊಂಡ ಒಪ್ಪಂದದಂತೆ ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲು ಆರಂಭಿಸಿದೆ.  ಅಮೆರಿಕ-ನ್ಯಾಟೋ ಪಡೆಯನ್ನು ಹಿಂತೆಗೆದುಕೊಳ್ಳುವಿಕೆಯು ಶೇಕಡಾ 95 ಕ್ಕಿಂತಲೂ ಹೆಚ್ಚು ಪೂರ್ಣಗೊಂಡಿದ್ದು ಆಗಸ್ಟ್ 31 ರೊಳಗೆ ಮುಕ್ತಾಯವಾಗುತ್ತದೆ. 2 ಲಕ್ಷ ಕೋಟಿ (ಟ್ರಿಲಿಯನ್) ಡಾಲರ್ ವೆಚ್ಚದಲ್ಲಿ ನಡೆಸಿದ ಈ ಯುದ್ಧ ಅಮೆರಿಕ ನಡೆಸಿದ ಅತ್ಯಂತ ದೀರ್ಘ (20 ವರ್ಷ) ಯುದ್ಧಗಳಲ್ಲಿ ಒಂದಾಗಿದೆ. ತನ್ನ ವ್ಯೂಹಾತ್ಮಕ ಪ್ರಾಮುಖ್ಯತೆಯಿಂದಾಗಿ ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ದೂರವಿರಲು ಅಮೆರಿಕ ಸಿದ್ಧವಿಲ್ಲ. ಅಫ್ಘಾನಿಸ್ತಾನ, ಪಾಕಿಸ್ತಾನ, ಉಜ್ಬೇಕಿಸ್ತಾನ್ ಮತ್ತು ಅಮೆರಿಕ ಒಳಗೊಂಡ ಮಧ್ಯ ಏಷ್ಯಾ ಕೂಟವೊಂದನ್ನು ರಚಿಸಲಾಗಿದೆ. ಇದು ಅಮೆರಿಕ ತನ್ನ ನಿಯಂತ್ರಣವನ್ನು ಉಳಿಸಿಕೊಳ್ಳಲು ಮತ್ತು ಮಧ್ಯ ಏಷ್ಯಾದ ಮೇಲೆ ಚೀನಾ ಮತ್ತು ರಷ್ಯಾದ ಪ್ರಭಾವವನ್ನು ಎದುರಿಸುವ ಉದ್ದೇಶಿಸವನ್ನು ಹೊಂದಿದೆ.

ಅಮೆರಿಕದ ಭೂ ಪಡೆಗಳನ್ನು ಹಿಂತೆಗೆದುಕೊಳ್ಳುವುದರೊಂದಿಗೆ, ತಾಲಿಬಾನ್ ಪಡೆಗಳು ದೇಶದ ಹೆಚ್ಚಿನ ಭಾಗಗಳಲ್ಲಿ ವೇಗವಾಗಿ ತಮ್ಮ ಪ್ರಭಾವವನ್ನು ಹರಡುತ್ತಿವೆ ಮತ್ತು ತಮ್ಮ ಹಿಡಿತವನ್ನು ಸ್ಥಾಪಿಸಿಕೊಳ್ಳುತ್ತಿವೆ. ತಾಲಿಬಾನ್ ಅನೇಕ ಪ್ರದೇಶಗಳನ್ನು ತ್ವರಿತವಾಗಿ ವಶಪಡಿಸಿಕೊಂಡಿದೆ, ಆಯಕಟ್ಟಿನ ಗಡಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ ಮತ್ತು ಹಲವಾರು ಪ್ರಾಂತೀಯ ರಾಜಧಾನಿಗಳಿಗೆ ಬೆದರಿಕೆ ಒಡ್ಡುತ್ತಿದೆ.

ಪ್ರಸ್ತುತ ಅಫ್ಘಾನಿಸ್ತಾನ ಸರ್ಕಾರವು ಅಧಿಕಾರ ಹಂಚಿಕೆ ಸೂತ್ರಗಳ ಬಗ್ಗೆ ಚರ್ಚಿಸಲು ದೋಹಾದಲ್ಲಿ ತಾಲಿಬಾನ್ ಜೊತೆ ಮಾತುಕತೆ ಆರಂಭಿಸಿತ್ತು. ಆದರೆ ತಾಲಿಬಾನ್, ಸರ್ಕಾರವನ್ನು ಅಧಿಕಾರ ತ್ಯಜಿಸಿ ಹೊರನಡೆಯುವಂತೆ ಒತ್ತಾಯಿಸುತ್ತಿದೆ.

ಮಧ್ಯ ಏಷ್ಯಾದ ಅನೇಕ ದೇಶಗಳು ಅಫ್ಘಾನಿಸ್ತಾನದೊಂದಿಗೆ ಗಡಿಗಳನ್ನು ಹಂಚಿಕೊಂಡಿವೆ ಮತ್ತು ಈ ಬೆಳವಣಿಗೆಗಳು ಹಾಗೂ ತಾಲಿಬಾನ್‌ನ ತ್ವರಿತ ಪ್ರಗತಿಯ ಬಗ್ಗೆ ಕಳವಳ ಹೊಂದಿವೆ. ರಷ್ಯಾ ತಾಲಿಬಾನ್ ಜೊತೆ ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿದೆ ಮತ್ತು  ಆ ಮಾತುಕತೆಯಲ್ಲಿ ರಷ್ಯಾ ಅಥವಾ ನೆರೆಯ ರಾಷ್ಟ್ರಗಳ ಮೇಲೆ ದಾಳಿ ಮಾಡಲು ಅಫ್ಘಾನಿಸ್ತಾನದ ನೆಲವನ್ನು ಬಳಸಲು ಅನುಮತಿಸುವುದಿಲ್ಲ ಎಂದು ತಾಲಿಬಾನ್ ಭರವಸೆ ನೀಡಿದೆ.

ಚೀನಾ ಸಹ ತಾಲಿಬಾನ್ ನಾಯಕತ್ವದೊಂದಿಗೆ ಮಾತುಕತೆ ನಡೆಸಿ ಕೆಲವು ವಿಚಾರಗಳಲ್ಲಿ ಒಂದು ತಿಳುವಳಿಕೆಗೆ ಬಂದಿದೆ. ಅಂತೆಯೇ, ಅಫ್ಘಾನಿಸ್ತಾನದೊಂದಿಗೆ ಗಡಿ ಹಂಚಿಕೊಳ್ಳುವ ಇರಾನ್ ಕೂಡ ತಾಲಿಬಾನ್ ಜೊತೆ ಮಾತುಕತೆ ನಡೆಸಿ ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ತಾಲಿಬಾನನ್ನು ಬೆಂಬಲಿಸುವ ಪಾಕಿಸ್ತಾನವು ವಿಷಮ ಸನ್ನಿವೇಶದಲ್ಲಿ ಪ್ರಮುಖ ಪಾತ್ರಗಾರನಾಗಿ ಗುರುತಿಸಿಕೊಂಡಿದೆ.

ಏಕಾಂಗಿಯಾದ ಭಾರತ:  ತನ್ನ ಎಲ್ಲಾ ಜವಾಬ್ದಾರಿಯನ್ನು ಅಮೆರಿಕಕ್ಕೆ ವಹಿಸುವುದರ ಮೂಲಕ  ಅಫ್ಘಾನಿಸ್ತಾನದ ವಿಚಾರದಲ್ಲಿ ಭಾರತ ಏಕಾಂಗಿಯಾಗಿದೆ. ನಮ್ಮ ಸರ್ಕಾರದ ನಿಲುವುಗಳು ತಾಲಿಬಾನ್‌ನ ‘ನ್ಯಾಯಸಮ್ಮತತೆ’ ಕುರಿತು ಪ್ರಶ್ನೆ ಎತ್ತುತ್ತಿರುವುದರಿಂದ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳಿಂದ ಭಾರತವನ್ನು ಮತ್ತಷ್ಟು ಏಕಾಂಗಿಯಾಗಿಸಿವೆ. ಅಮೆರಿಕ – ಮಧ್ಯ ಏಷ್ಯಾ ಕೂಟದಲ್ಲಿ ಭಾರತವು ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. ತಾಲಿಬಾನ್‌ನೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವ ಭಾರತ ಸರ್ಕಾರದ ಪ್ರಯತ್ನಗಳು ತಡವಾಗಿ ಪ್ರಾರಂಭವಾದವು ಇವು ಹೆಚ್ಚಾಗಿ ಅಮೆರಿಕ-ತಾಲಿಬಾನ್ ಸಂಬಂಧಗಳ ಮೇಲೆ ಅವಲಂಬಿತವಾಗಿವೆ.

ದಕ್ಷಿಣ ಏಷ್ಯಾ ವೇದಿಕೆ: ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಭಾರತದ ಪ್ರಭಾವಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ. ಎಂಟು ಸಾರ್ಕ್ ಸದಸ್ಯ ರಾಷ್ಟ್ರಗಳ ಪೈಕಿ ಐದು  ದೇಶಗಳು ಚೀನಾದ ಮುತುವರ್ಜಿಯಿಂದ  ಚೀನಾ-ದಕ್ಷಿಣ ಏಷ್ಯಾ ದೇಶಗಳ  ಬಡತನ ನಿರ್ಮೂಲನೆ ಮತ್ತು ಸಹಕಾರಿ ಅಭಿವೃದ್ಧಿ ಕೇಂದ್ರವನ್ನು ಆರಂಭಿಸಿವೆ.  ಏಪ್ರಿಲ್ 2021 ರಲ್ಲಿ ಚೀನಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದ ವಿದೇಶಾಂಗ ಮಂತ್ರಿಗಳ ಸಭೆಯ ಫಲಿತಾಂಶವಾಗಿ ಜುಲೈ ತಿಂಗಳಲ್ಲಿ ಈ ಕೇಂದ್ರ ಆರಂಭವಾಗಿದೆ.

ಸಾರ್ಕ್: 2014 ರ ನಂತರ ಯಾವುದೇ ಸಾರ್ಕ್ ಶೃಂಗಸಭೆ ನಡೆಯಲಿಲ್ಲ. ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸಲು 2016 ರಲ್ಲಿ  ಭಾರತ ನಿರಾಕರಿಸಿದ್ದರಿಂದ, ಸಾರ್ಕ್ ಶೃಂಗಸಭೆ ಪ್ರಕ್ರಿಯೆಯು ವಾಸ್ತವಿಕವಾಗಿ ಸತ್ತು ಹೋಗಿದೆ. ಭಾರತ ಸರ್ಕಾರವು ಸಾರ್ಕ್ ಅನ್ನು ಪುನರುಜ್ಜೀವನಗೊಳಿಸುವ ಆಸಕ್ತಿ ಹೊಂದಿಲ್ಲ ಮತ್ತು ಬದಲಾಗಿ ಹೊಸದಾಗಿ ರಚಿಸಲಾದ ಗುಂಪು, ಬಂಗಾಳ ಕೊಲ್ಲಿಯ ಕರಾವಳಿಯನ್ನು ಹಂಚಿಕೊಳ್ಳುವ ಏಳು ದೇಶಗಳನ್ನು ಹೊಂದಿರುವ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ (BIMSTEC) ಹೊಸದಾಗಿ ರಚಿಸಿದ ಗುಂಪಿನಲ್ಲಿ ಆಸಕ್ತಿ ಹೊಂದಿದೆ ಎಂಬ ಅನಿಸಿಕೆ ಇದೆ. ಭಾರತ ಸರ್ಕಾರದ ‘ಲಸಿಕೆ ರಾಜತಾಂತ್ರಿಕತೆ’ಯು ದಯನೀಯವಾಗಿ ವಿಫಲವಾದ ಕಾರಣ ನಮ್ಮ ನೆರೆಯ ಅನೇಕ ದೇಶಗಳು ನಿರಾಶೆಗೆ ಒಳಗಾಗಿವೆ. ಈ ದೇಶಗಳಿಗೆ ಚೀನಾವು ನೆರವು ನೀಡಿತು, ಚೀನಾ ದೇಶವು ಭಾರತವನ್ನು ಹೊರತುಪಡಿಸಿ ದಕ್ಷಿಣ ಏಷ್ಯಾದ ಎಲ್ಲ ದೇಶಗಳಿಗೂ ತನ್ನ ಲಸಿಕೆಗಳನ್ನು ಪೂರೈಸಿದೆ. ಈ ಕ್ರಮಗಳಿಂದಾಗಿ, ಭಾರತವು ನೆರೆಹೊರೆಯಲ್ಲಿ ಹೆಚ್ಚು ಕಡಿಮೆ ಒಬ್ಬಂಟಿಯಾಗಿದೆ.

ನೇಪಾಳ: ದೇಶವನ್ನು ಆವರಿಸಿರುವ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಮಧ್ಯಪ್ರವೇಶಿಸಿಸಲು ಕೇಳಿಕೊಂಡ ನಂತರ ನೇಪಾಳದ ಸುಪ್ರೀಂ ಕೋರ್ಟ್ ಶೇರ್ ಬಹದ್ದೂರ್ ದೇವುಬಾ ಅವರನ್ನು ಪ್ರಧಾನಿಯಾಗಿ ನೇಮಿಸಲು ಆದೇಶಿಸಿದೆ. ನೇಪಾಳಿ ಕಮ್ಯುನಿಸ್ಟ್ ಪಕ್ಷದಲ್ಲಿನ (ಎನ್.ಸಿ.ಪಿ) ಗುಂಪುಗಾರಿಕೆಯಿಂದಾಗಿ ಅವರದೇ ಪಕ್ಷದ ಸಂಸತ್ ಸದಸ್ಯರು ಕೆಪಿ ಓಲಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಳ್ಳಲು ಕಾರಣವಾಯಿತು. ಇದರಿಂದಾಗಿ ಕೆಪಿ ಓಲಿ ರಾಜೀನಾಮೆ ನೀಡಿ, ಸಂಸತ್ತಿನ ವಿಸರ್ಜನೆಗೆ ಶಿಫಾರಸು ಮಾಡುವಂತಾಯಿತು.  ಮೊದಲ ಬಾರಿಗೆ ಕಳೆದ ವರ್ಷ ಡಿಸೆಂಬರ್ 20 ರಂದು ಸಂಸತ್ತನ್ನು ವಿಸರ್ಜಿಸಲಾಯಿತು. ಫೆಬ್ರವರಿ 23 ರಂದು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಸಂಸತ್ತಿನ ವಿಸರ್ಜನೆ ಅಸಂವಿಧಾನಿಕ ಎಂದು ಹೇಳಿ, ಸಂಸತ್ತನ್ನು ಪುನರ್ಸ್ಥಾಪಿಸಿತು. ಮೇ 10 ರಂದು ಓಲಿ ವಿಶ್ವಾಸಮತವನ್ನು ಕಳೆದುಕೊಂಡರು, ಅಲ್ಲಿ 93 ಸಂಸದರು ಮಾತ್ರ ಅವರ ಪರವಾಗಿ ನಿಂತರು ಆದ್ದರಿಂದ ಅವರು ಸದನವನ್ನು ವಿಸರ್ಜಿಸಲು ಮತ್ತೊಮ್ಮೆ ಶಿಫಾರಸು ಮಾಡಿದರು, ಅದನ್ನು ಮತ್ತೊಮ್ಮೆ ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಬದಲಾಗಿ, ಅದು ದೇವುಬಾರನ್ನು ಪ್ರಧಾನಿಯಾಗಿ ನೇಮಿಸುವಂತೆ ರಾಷ್ಟ್ರಪತಿಗಳಿಗೆ ಆದೇಶಿಸಿತು. ದೇವುಬಾ ಸಂಸತ್ತಿನಲ್ಲಿ ವಿಶ್ವಾಸಮತದ ಮತವನ್ನು ಗೆಲ್ಲುವ ಮೂಲಕ ತನ್ನ ಬಹುಮತವನ್ನು ಸಾಬೀತುಪಡಿಸಿದರು. 271 ಸದಸ್ಯರ ಕೆಳಮನೆಯಲ್ಲಿ ಸಿಪಿಎನ್ (ಯುಎಂಎಲ್) ಬಣದ 22 ಸದಸ್ಯರು ಸೇರಿದಂತೆ 165 ಸದಸ್ಯರು- ಶೇ. 60 – ಸದನದ ಬಹುಮತ ಪರೀಕ್ಷೆಯಲ್ಲಿ ದೇವುಬಾಗೆ ಮತ ಚಲಾಯಿಸಿದರು.

ಶ್ರೀಲಂಕಾ: ನವೆಂಬರ್ 2020 ರ ಸಂಸತ್ ಚುನಾವಣೆಯಲ್ಲಿ ಮಹೀಂದ್ರ ರಾಜಪಕ್ಸೆ ನೇತೃತ್ವದ ಶ್ರೀಲಂಕಾ ಪೀಪಲ್ಸ್ ಫ್ರೀಡಂ ಅಲೈಯನ್ಸ್‌ನ ಭರ್ಜರಿ ಗೆಲುವಿನಿಂದ ರಾಜಪಕ್ಷೆ ಸಹೋದರರು (ಗೋಟಾಬಯ ರಾಜಪಕ್ಸೆ ಅಧ್ಯಕ್ಷರು) ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಎಲ್ಲಾ ನಾಲ್ಕು ಜನ ರಾಜಪಕ್ಷೆ ಸಹೋದರರು ಸರ್ಕಾರದಲ್ಲಿ ಅಧಿಕಾರ ಹೊಂದಿದ್ದಾರೆ.  ತಮಿಳು ಮತ್ತು ಮುಸ್ಲಿಂ ಅಲ್ಪಸಂಖ್ಯಾತರಿಗೆ ಪ್ರತಿಕೂಲವಾದ ಶ್ರೀಲಂಕಾ ಬೌದ್ಧ ರಾಷ್ಟ್ರೀಯತೆಯನ್ನು ರಾಜಪಕ್ಷೆ ಸರ್ಕಾರ ತನ್ನ ಅನುಕೂಲಕ್ಕೆ ಬಳಸುತ್ತಿದೆ.

ಅಂತರ್ಯುದ್ಧದ ಸಮಯದಲ್ಲಿನ ಯುದ್ಧ ಅಪರಾಧಗಳ ಕುರಿತು ಸ್ವತಂತ್ರ ತನಿಖೆಯನ್ನು ಮುಂದುವರಿಸಲು ಸರ್ಕಾರ ನಿರಾಕರಿಸಿತು. ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಿಗೆ ಅಧಿಕಾರ ಹಂಚಿಕೆಯ ಕ್ರಮಗಳನ್ನು ಜಾರಿಗೊಳಿಸುವ ಯಾವುದೇ ಲಕ್ಷಣಗಳನ್ನು ಸರ್ಕಾರ ತೋರಿಸುತ್ತಿಲ್ಲ. ಶ್ರೀಲಂಕಾ ಸಂವಿಧಾನದ 13ಎ ಅನ್ನು ನಿಜಾರ್ಥದಲ್ಲಿ ಜಾರಿಗೊಳಿಸಲಾಗುತ್ತಿದೆಯೆ ಎಂದು ನೋಡಲು ಭಾರತ ಸರ್ಕಾರ ಪ್ರಯತ್ನಗಳನ್ನು ಮುಂದುವರಿಸಬೇಕಾಗಿದೆ.

ಮ್ಯಾನ್ಮಾರ್: ಫೆಬ್ರವರಿಯಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದ ಸೇನಾ ದಂಗೆಯ ನಂತರ ಸಾವಿರಾರು ಜನರು ಬೀದಿಗಿಳಿದು ಆಂಗ್ ಸಾನ್ ಸೂ ಕಿ ಮತ್ತು ಆಕೆಯ ಪಕ್ಷದ ಸಹೋದ್ಯೋಗಿಗಳ ಬಂಧನದ ವಿರುದ್ದ ಪ್ರತಿಭಟಿಸುತ್ತಿದ್ದಾರೆ. ಕಳೆದ ವರ್ಷ ನಡೆದ ಚುನಾವಣೆಯಲ್ಲಿ, ಸೂಕಿಯವರ ಪಕ್ಷವು ಗೆದ್ದಿತ್ತು. ಆದರೆ ಈ ಫಲಿತಾಂಶಗಳನ್ನು ಸ್ವೀಕರಿಸಲು ಸೇನೆಯು ನಿರಾಕರಿಸಿತು. ಸಶಸ್ತ್ರ ಪಡೆಗಳ ಉನ್ನತ ಶ್ರೇಣಿಯ ಅಧಿಕಾರಿಗಳು ಅಧಿಕಾರ ಮತ್ತು ವ್ಯಾಪಾರ ಹಿತಾಸಕ್ತಿಗಳ ಪ್ರಬಲ ಜಾಲವನ್ನು ನಿರ್ಮಿಸಿಕೊಂಡಿದ್ದಾರೆ. ತಮ್ಮ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು, ಅವರು ಸರ್ಕಾರದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಲು ಬಯಸುತ್ತಾರೆ. ಸೇನಾ ದಂಗೆ ವಿರುದ್ಧದ ಪ್ರತಿಭಟನೆಗಳಿಗೆ ತೀವ್ರ ದಮನಕಾರಿಯಾಗಿ ಪ್ರತಿಕ್ರಿಯಿಸಲಾಗಿದೆ.

ಮ್ಯಾನ್ಮಾರ್‌ನಲ್ಲಿನ ಅಶಾಂತಿ ಭಾರತವೂ ಸೇರಿದಂತೆ ಎಲ್ಲಾ ಗಡಿ ರಾಷ್ಟ್ರಗಳ ಮೇಲೆ ಪ್ರಭಾವ ಬೀರುತ್ತದೆ. ಮ್ಯಾನ್ಮಾರ್‌ನ್ನು ನಿಯಂತ್ರಿಸಲು ಸಾಮ್ರಾಜ್ಯಶಾಹಿ ಶಕ್ತಿಗಳು ಉತ್ಸುಕವಾಗಿವೆ ಮತ್ತು ಅನೇಕ ಗುಪ್ತಚರ ಸಂಸ್ಥೆಗಳು ಆ ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಮ್ಯಾನ್ಮಾರ್ ಕೂಡಾ ಸದಸ್ಯರಾಗಿರುವ ಆಸಿಯಾನ್, ಪರಿಸ್ಥಿತಿಯನ್ನು ಪರಿಹರಿಸಲು ಐದು ಅಂಶಗಳ ಸೂತ್ರವನ್ನು ಅಳವಡಿಸಿಕೊಂಡಿತ್ತು. ಮ್ಯಾನ್ಮಾರ್‌ನಲ್ಲಿ ಯಾವುದೇ ರೀತಿಯ ಬಾಹ್ಯ ಹಸ್ತಕ್ಷೇಪವು ನಮ್ಮ ದೇಶದ ಮತ್ತು ಇಡೀ ಪ್ರದೇಶದ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿದೆ.  ಪ್ರಜಾಪ್ರಭುತ್ವ ಹಕ್ಕುಗಳ ಮರುಸ್ಥಾಪನೆಗಾಗಿ ಮತ್ತು ಸರಿಯಾಗಿ ಚುನಾಯಿತವಾದ ಸರ್ಕಾರದ ಸ್ಥಾಪನೆಗಾಗಿ ಹೋರಾಡುತ್ತಿರುವ ಮ್ಯಾನ್ಮಾರ್ ಜನತೆಗೆ ನಮ್ಮ ಸೌಹಾರ್ದತೆಯನ್ನು ವ್ಯಕ್ತಪಡಿಸಬೇಕು.

ಹವಾಮಾನ ಬದಲಾವಣೆ:
ವಿನಾಶಕಾರಿ ವಿಪರೀತ ಹವಾಮಾನ ಅವಘಡಗಳು

ಹವಾಮಾನ ಬದಲಾವಣೆ ಕುರಿತು ಅಂತರ್ ಸರ್ಕಾರಿ ಸಮಿತಿಯ (ಐಪಿಸಿಸಿ) ಇತ್ತೀಚಿನ ವರದಿ: ಹವಾಮಾನ ಬದಲಾವಣೆ 2021: ಭೌತ ವಿಜ್ಞಾನವು ‘ಜಾಗತಿಕ ತಾಪಮಾನ ಪ್ರವೃತ್ತಿಗಳ ಮೇಲೆ ಎಚ್ಚರಿಕೆಯ ಗಂಟೆಗಳನ್ನು ಬಾರಿಸಿದೆ. ಹಿಂದೂ ಮಹಾಸಾಗರವು ವೇಗವಾಗಿ ಬೆಚ್ಚಗಾಗುತ್ತಿದೆ, ಇದು ಸಮುದ್ರ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ, ಆಗಾಗ್ಗೆ ಮತ್ತು ತೀವ್ರವಾಗಿ ಕರಾವಳಿಯಲ್ಲಿ ಪ್ರವಾಹಕ್ಕೆ ಕಾರಣವಾಗುತ್ತದೆ ಎಂದು ಹೇಳಿದೆ. ಭಾರತದ ಕರಾವಳಿಯ 2.86 ಕೋಟಿ ಜನರು ತೀವ್ರ ಪ್ರವಾಹ ಮತ್ತು ಆಗಾಗ್ಗೆ ಚಂಡಮಾರುತದ ಬಿರುಗಾಳಿಗೆ ತುತ್ತಾಗುತ್ತಾರೆ.

ಉತ್ತರ ಗೋಳಾರ್ಧದ ಪ್ರಮುಖ ಪ್ರದೇಶಗಳು, ವಿಶೇಷವಾಗಿ ಯುರೋಪ್, ಅಮೆರಿಕ ಮತ್ತು ಕೆನಡಾ ದೇಶಗಳು 2021 ರ ಜೂನ್-ಜುಲೈ ತಿಂಗಳಲ್ಲಿ  ಹವಾಮಾನ ಬದಲಾವಣೆಗೆ ಸಂಬಂಧಿಸಿದ ತೀವ್ರ ಹವಾಮಾನ ಅವಘಡಗಳಿಗೆ ಸಿಕ್ಕು ನಲುಗಿವೆ. ಕೆಲವು ಅತ್ಯಂತ ಅಭಿವೃದ್ಧಿ ಹೊಂದಿದ ದೇಶಗಳು ಅನುಭವಿಸಿದ ಅಪಾರ ಹಾನಿ ಮತ್ತು ಹಾನಿಯನ್ನು ಎದುರಿಸಲು ಅವುಗಳ ಸಿದ್ಧತೆಯ ಕೊರತೆ, ಅಲ್ಲಿನ ಸರ್ಕಾರಗಳು ಮತ್ತು ಜನರಿಗೆ ತೀವ್ರ ಆಘಾತವನ್ನುಂಟುಮಾಡಿದೆ. ಹವಾಮಾನ ವೈಪರೀತ್ಯದ ಪರಿಣಾಮಗಳು ಹೆಚ್ಚಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಂಭವಿಸುತ್ತಿದೆ ಎಂದು ಹೇಳಿಕೊಂಡು ಬರುವುದು ಬಹಳ ಹಿಂದಿನಿಂದಲೂ ವಾಡಿಕೆಯಾಗಿತ್ತು.

ಉತ್ತರ ಯೂರೋಪ್ ವಿಶೇಷವಾಗಿ ಬ್ರಿಟನ್, ಜರ್ಮನಿ, ಬೆಲ್ಜಿಯಂ, ಹಾಲೆಂಡ್ ಮತ್ತು ಇಟಲಿಯಲ್ಲಿ ಭಾರೀ ಮಳೆಯಿಂದಾಗಿ ಹಠಾತ್ ಮತ್ತು ಭಾರೀ ಪ್ರವಾಹ ಉಂಟಾಗಿ ಅಧಿಕಾರಿಗಳ ಅರಿವಿಗೆ ನಿಲುಕುವ ಮೊದಲೇ ಅಪಾರ ಜೀವಹಾನಿ ಸಂಭವಿಸಿತು, ಮೂಲಸೌಕರ್ಯ ಮತ್ತು ಮನೆಗಳಿಗೆ ಹಾನಿಯಾಯಿತು. ಏಕಕಾಲದಲ್ಲಿ, ದಕ್ಷಿಣ ಯೂರೋಪಿನಲ್ಲಿ ವಿಶೇಷವಾಗಿ ಇಟಲಿ, ಗ್ರೀಸ್, ಅಲ್ಬೇನಿಯಾ, ಹಿಂದಿನ ಯುಗೊಸ್ಲಾವ್ ಗಣರಾಜ್ಯಗಳು, ಆಗ್ನೇಯ ಟರ್ಕಿ ಮತ್ತು ಮೆಡಿಟರೇನಿಯನ್ ಅಥವಾ ಅದರ ಸಮೀಪದ ಇತರ ದೇಶಗಳಲ್ಲಿ ತೀವ್ರ ಶಾಖದ ಅಲೆಗಳನ್ನು ಉಂಟಾಗಿ, ಒಣ ಹವೆ ಹೆಚ್ಚಾಗಿ ಭಾರೀ ಕಾಳ್ಗಿಚ್ಚಿಗೆ ಕಾರಣವಾಯಿತು. ಅಮೆರಿಕ ಮತ್ತು ಕೆನಡಾ ದೇಶಗಳಲ್ಲಿ ಕಂಡು ಕೇಳರಿಯದ ರೀತಿಯ ಮತ್ತು ಸುದೀರ್ಘವಾದ ಶಾಖದ ಅಲೆಗಳು ಉಂಟಾದವು. ಇದಕ್ಕೆ ಜನರಾಗಲಿ ಮತ್ತು ಅಧಿಕಾರಿಗಳಾಗಲಿ ಯಾವುದೇ ಸಿದ್ದತೆ ಮಾಡಿಕೊಂಡಿರಲಿಲ್ಲ. ವಿಶೇಷವಾಗಿ ಕೆನಡಾದಲ್ಲಿ ಸಿದ್ದತೆ ಮಾಡಿಕೊಳ್ಳಲು ಸಂಪೂರ್ಣವಾಗಿ ವಿಫಲವಾಗಿದ್ದರು.

  ತಜ್ಞರು ಈ ಹವಾಮಾನ ವೈಪರೀತ್ಯಗಳು ಒಂದು ಸಾವಿರ ವರ್ಷಕ್ಕೆ ಒಮ್ಮೆ ಸಂಭವಿಸಬಹುದಾದ ವಿದ್ಯಮಾನಗಳೆಂದು ವಿವರಿಸಿದ್ದಾರೆ. ಆದರೆ ಇಂತಹ ಘಟನೆಗಳು ಪದೇ ಪದೇ ಮರುಕಳಿಸುವ ಪ್ರವೃತ್ತಿಗಳು ಕಾಣುತ್ತಿವೆ ಎಂದು ಎಚ್ಚರಿಸಿದ್ದಾರೆ. 1850 ಕ್ಕೆ ಹೋಲಿಸಿದರೆ ಜಾಗತಿಕ ಸರಾಸರಿ ತಾಪಮಾನವು 1.2 ಡಿಗ್ರಿ ಸೆಲ್ಸಿಯಸ್ ಏರಿಕೆಯಾದಾಗ ಈ ಸ್ಥಿತಿ ಇದ್ದರೆ, 2 ಡಿಗ್ರಿ ಸೆಲ್ಸಿಯಸ್ ಅಥವಾ ಹೆಚ್ಚಿನ ತಾಪಮಾನ ಏರಿಕೆಯ ಪರಿಣಾಮಗಳು ಅನಿವಾರ್ಯವಾಗಿ ಇನ್ನೂ ದುರಂತಮಯವಾಗಿರುತ್ತವೆ ಎಂದು ಅಂತರರಾಷ್ಟ್ರೀಯ ವೈಜ್ಞಾನಿಕ ಸಂಸ್ಥೆಗಳು ಊಹಿಸಿವೆ.

  ಮುಂದಿನ ಹವಾಮಾನ ಶೃಂಗಸಭೆಯು ಡಿಸೆಂಬರ್ 2021 ರಲ್ಲಿ ಗ್ಲ್ಯಾಸ್ಗೋದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಪ್ಯಾರಿಸ್ ಒಪ್ಪಂದದ ಸಮಯದಲ್ಲಿ ಎಲ್ಲಾ ದೇಶಗಳು ನೀಡಿದ್ದ ಇಂಗಾಲ ಹೊರಸೂಸುವಿಕೆ ಕಡಿತದ ಪ್ರತಿಜ್ಞೆಗೆ  ಹೋಲಿಸಿದರೆ ಹೆಚ್ಚಿನ ಇಂಗಾಲ ಹೊರಸೂಸುವಿಕೆ ಆಗುತ್ತಿರುವ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳುವ ನಿರೀಕ್ಷೆಯಿದೆ. ನಿವ್ವಳ-ಶೂನ್ಯ ಹೊರಸೂಸುವಿಕೆಯ(ಅಂದರೆ ಹಸಿರುಮನೆ ಅನಿಲ ಹೊರಸೂಸುವಿಕೆಗಳು ಅರಣ್ಯಗಳು, ಸಾಗರಗಳು ಮತ್ತು ಇತರ ಸಿಂಕ್‌ಗಳಿಂದ ಹೀರಿಕೊಳ್ಳುವ GHG ಗಳಿಗೆ ಸಮನಾಗಿದ್ದಾಗ) ಗುರಿಯನ್ನು ತಲುಪುವುದೂ ಒಳಗೊಂಡಂತೆ ಅಭಿವೃದ್ಧಿ ಹೊಂದಿದ ದೇಶಗಳು ಹೆಚ್ಚು ತೀಕ್ಷ್ಣವಾದ ಕಡಿತ ಮಾಡಲು ನೋವಾದರೂ ಒಪ್ಪಿಕೊಳ್ಳುವ ಅಗತ್ಯವಿದೆ. ಗಡುವಿನ ಅವಧಿಯಾದ 2050 ಕ್ಕಿಂತ ಮೊದಲು ಈ ಗುರಿ ಸಾಧಿಸುವತ್ತ ಗಮನ ನೀಡಬೇಕು. ಅಭಿವೃದ್ಧಿ ಹೊಂದಿದ ದೇಶಗಳು ಯಾವುದೇ ತಡೆಯಿಲ್ಲದೆ  ಹಸಿರು ತಂತ್ರಜ್ಞಾನಗಳನ್ನು ಎಲ್ಲಾ ದೇಶಗಳಿಗೆ ವರ್ಗಾಯಿಸಬೇಕು. ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸಲು ಮತ್ತು ಸರಿಹೊಂದಿಸಲು ಹೆಚ್ಚಿನ ಹಣವನ್ನು ಒದಗಿಸಬೇಕು.

ಭಾರತ: ಕಳೆದ ಒಂದು ದಶಕ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಭಾರತವು 200-300 ಮಿ.ಮೀ.ಗಿಂತಲೂ ಅಧಿಕ ಮಳೆಯ ಆವರ್ತನ ಮತ್ತು ತೀವ್ರತೆಯನ್ನು ಅನುಭವಿಸಿದೆ.  ಇದರ ಪರಿಣಾಮವಾಗಿ ಪ್ರವಾಹ, ನಗರ ಪ್ರದೇಶಗಳ ಜಲಾವೃತ, ದೇಶದ ವಿವಿಧ ಭಾಗಗಳಲ್ಲಿ ಭೂಕುಸಿತದಿಂದ ಅಪಾರ ಹಾನಿ ಉಂಟಾಗಿದೆ. ಕರಾವಳಿಯಲ್ಲಿ ಸಮುದ್ರ ಕೊರೆತ ನಿರಂತರವಾಗಿ ನಡೆಯುತ್ತಿದೆ.  ಸಮುದ್ರ ಮಟ್ಟದ ಏರಿಕೆಯಿಂದಾಗಿ ಸುಂದರಬನ ಮುಳುಗಡೆಯಾಗುತ್ತಿವೆ.  ಪ್ರಮುಖ ಕರಾವಳಿ ನಗರಗಳಿಗೂ ಇದರಿಂದಾಗಿ ದೊಡ್ಡ ಬೆದರಿಕೆ ಬಂದಿದೆ. ಆದರೆ ಕೇಂದ್ರ ಸರ್ಕಾರ ಈ ಯಾವುದೇ ಸಮಸ್ಯೆಗಳನ್ನು ನಿಭಾಯಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇದು ಹಂತ-ಹಂತದ ಪ್ರಗತಿ ಪರಿಶೀಲನೆಯೊಂದಿಗೆ ಒಂದು ಗುರಿ-ಆಧಾರಿತ ತುರ್ತು ರಾಷ್ಟ್ರೀಯ ಕಾರ್ಯಕ್ರಮವಾಗಬೇಕು.  ಇಂತಹ ಕ್ರಿಯೆಗಳು ವಿಳಂಬವಾದಂತೆಲ್ಲ, ಹೆಚ್ಚು ದುಬಾರಿಯಾಗುತ್ತವೆ ಮತ್ತು ಮೂಲಸೌಕರ್ಯ, ಜೀವನ ಮತ್ತು ಜೀವನೋಪಾಯಗಳಿಗೆ ಹೆಚ್ಚಿನ ಹಾನಿ ಉಂಟುಮಾಡುತ್ತವೆ.

ರಾಷ್ಟ್ರೀಯ

ಕೋವಿಡ್ ಮಹಾಸೋಂಕು-ಲಸಿಕೆ ಕೊರತೆಗಳು

ಕೋವಿಡ್ ಸೋಂಕಿನ ಪ್ರಕರಣಗಳು ದಿನಂಪ್ರತಿ ಏರಿಕೆಯಾಗುತ್ತಲಿವೆ. ಜುಲೈ 20 ರಂದು ಕೊನೆಗೊಂಡ ವಾರದಲ್ಲಿ ಸೋಂಕಿನ ಏಳು ದಿನಗಳ ಸರಾಸರಿಯು ದಿನಂಪ್ರತಿ 37,975 ಪ್ರಕರಣಗಳಿದ್ದು, ಆಗಸ್ಟ್ 3ಕ್ಕೆ ಕೊನೆಗೊಂಡ ವಾರದಲ್ಲಿ 40,710ಕ್ಕೆ ಏರಿತ್ತು.  ಈಗ ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆಯು 42 ಲಕ್ಷದಷ್ಟಿದೆ. ಅಧಿಕೃತ ಎಣಿಕೆಯ ಪ್ರಕಾರ ಒಟ್ಟು 4.245 ಲಕ್ಷದಷ್ಟು ಸಾವುಗಳು ಸಂಭವಿಸಿವೆ. ಜಾಗತಿಕವಾಗಿ ಮತ್ತು ಆಂತರಿಕವಾಗಿ ಅಂದಾಜಿಸಿರುವಂತೆ ಈ ಎಣಿಕೆಯ ಒಂದು ಕಡಿಮೆ ಅಂದಾಜಾಗಿದೆ. ವಾಶಿಂಗ್ಟನ್ ಜಾಗತಿಕ ಬೆಳವಣಿಗೆಗಳ ಕೇಂದ್ರವು ಭಾರತದಲ್ಲಿ ಸಾವಿನ ಸಂಖ್ಯೆಯು 34-49 ಲಕ್ಷಕ್ಕೆ ಮಧ್ಯೆ ಇರಬಹುದು ಎಂದು ಅಂದಾಜಿಸಿದೆ. ಹಲವಾರು ಆಂತರಿಕ ಅಧ್ಯಯನಗಳು ಸಹ ಕೊರೋನಾ ಸಾವುಗಳನ್ನು ಇನ್ನಿತರ ಸಹವರ್ತಿ ರೋಗಗಳಿಂದ ಸಂಭವಿಸಿದ ಸಾವುಗಳಾಗಿವೆ ಎಂದು ದಾಖಲಿಸುವುದರಿಂದ ಕಳೆದ ವರ್ಷ ದಾಖಲಾದ ಸಾವುಗಳಿಗಿಂತ ಹೆಚ್ಚಿವೆ ಎಂದು ತೋರಿಸಿವೆ.

ಈ ಮಹಾಸೋಂಕಿನ ಅನಾಹುತಕಾರಿ ಮೂರನೇ ಅಲೆಯನ್ನು ತಡೆಯಲು ಲಸಿಕಾಕರಣವನ್ನು ಭಾರಿ ಪ್ರಮಾಣದಲ್ಲಿ ಮಾಡುವ ಅನಿವಾರ್ಯತೆ ಇದೆ. ಪ್ರಸ್ತುತ ನಮ್ಮ ವಯಸ್ಕ ಜನಸಂಖ್ಯೆಯ ಕೇವಲ ಶೇ.11.30 ಜನರು ಎರಡು ಡೋಸ್ ಲಸಿಕೆಯನ್ನು ಮತ್ತು ಇವರನ್ನು ಒಳಗೊಂಡಂತೆ ಶೇ.40 ಜನರು ಒಂದು ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಈ ದರದಲ್ಲಿ ಸಮಸ್ತ ವಯಸ್ಕ ಜನಸಂಖ್ಯೆಗೆ ಈ ವರ್ಷಾಂತ್ಯದ ವೇಳೆಗೆ ಲಸಿಕೆಯನ್ನು ನೀಡಲಾಗುತ್ತದೆ ಎನ್ನುವುದು ಅಸಾಧ್ಯವಾಗಿದೆ.

ಲಸಿಕೀಕರಣದ ಈ ನಿಧಾನಗತಿಗೆ ಕಾರಣ ಲಸಿಕೆಗಳ ಕೊರತೆಯೇ ಆಗಿದೆ. ಪ್ರತಿಯೊಂದು ರಾಜ್ಯವು ಕಡಿಮೆ ಪೂರೈಕೆ ಕುರಿತು ದೂರುತ್ತಿದೆ. ಕೇಂದ್ರ ಸರ್ಕಾರವು ಜೂನ್ 26 ರಂದು ಸರ್ವೋಚ್ಛನ್ಯಾಯಾಲಕ್ಕೆ ಪ್ರಮಾಣ ಪತ್ರವನ್ನು ಸಲ್ಲಿಸಿ ಜುಲೈ 31 ರೊಳಗೆ 51.6 ಕೋಟಿ ಡೋಸ್‌ಗಳು ದೊರಕಲಿವೆ ಎಂದು ಹೇಳಿತು. ಆದಾಗ್ಯೂ ಆಗಸ್ಟ್ 2 ರ ವೇಳೆಗೆ 49.7 ಕೋಟಿ ಡೋಸ್‌ಗಳನ್ನು ಒದಗಿಸಿತು. ಸುಮಾರು 2 ಕೋಟಿಯಷ್ಟು ಕಡಿಮೆ. ಲಸಿಕೆಗಳ ಉತ್ಪಾದನೆಯನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು. ಇದಕ್ಕಾಗಿ ಸರ್ಕಾರವು ಕೋವ್ಯಾಕ್ಸಿನ್ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನವನ್ನು ಇನ್ನಿತರ ಸಾರ್ವಜನಿಕ ಉದ್ದಿಮೆಗಳಿಗೆ, ಖಾಸಗಿ ಕಂಪನಿಗಳಿಗೆ ಉತ್ಪಾದನೆಯನ್ನು ತೀವ್ರಗೊಳಿಸಲು ವರ್ಗಾವಣೆ ಮಾಡಬೇಕು. ಸಾಕಷ್ಟು ಆರ್ಥಿಕ ಬೆಂಬಲವನ್ನು ನೀಡಬೇಕು. ಜೊತೆಗೆ ಸಿಗಬಹುದಾದ ಜಾಗತಿಕ ಮೂಲಗಳಿಂದ ಸಂಗ್ರಹಿಸಬೇಕು.

ಕೇರಳ:

ಕೇರಳ ರಾಜ್ಯ ಸರ್ಕಾರವು ಪ್ರಾಮಾಣಿಕವಾಗಿ ಪ್ರಕಟಿಸಿದ ಅಂಕಿ ಸಂಖ್ಯೆಗಳನ್ನು ಬಳಸಿಕೊಂಡು, ಕೇಂದ್ರದ ಬಿಜೆಪಿ ಸರ್ಕಾರ ಭಾರತದಲ್ಲಿ ಕೊರೊನಾ ಪ್ರಕರಣಗಳು ಮರುಕಳಿಸುವುದಕ್ಕೆ ಕೇರಳವನ್ನು ದೂರುವ ಒಂದು ಪ್ರಚಾರವನ್ನು ಆರಂಭಿಸಿತು. ಹೆಚ್ಚಿನ ಸೋಂಕುಗಳು ಪತ್ತೆಯಾಗಲು ಕೇರಳದಲ್ಲಿ ನಡೆಸುತ್ತಿರುವ ಹೆಚ್ಚಿನ ಪರೀಕ್ಷೆಗಳು ಕಾರಣವಾಗಿದೆ. ಎರಡು ಲಕ್ಷ ಪರೀಕ್ಷೆಗಳನ್ನು ಮಾಡಿದ ದಿನಗಳೂ ಅಲ್ಲಿವೆ. ಕೇರಳವು, ರಾಷ್ಟ್ರೀಯ ಸೋಂಕಿನ ಸರಾಸರಿ 33 ರಲ್ಲಿ ಒಬ್ಬರ ಸೋಂಕನ್ನು ಗುರುತಿಸುವುದಕ್ಕೆ ಪ್ರತಿಯಾಗಿ, ಆರರಲ್ಲಿ ಒಬ್ಬರಿಗೆ ಸೋಂಕನ್ನು ಗುರುಸಿದೆ. ಆದರೆ ರಾಜ್ಯದ ಪ್ರತಿಕಾಯಗಳ ಇರುವಿಕೆಯ ಪ್ರಮಾಣ  (ಸೆರೊ-ಪ್ರೆವಲೆನ್ಸ್) ಶೇ. 44 ರಷ್ಟಿದ್ದು ಅದು ಭಾರತದ ಶೇ. 68 ಕ್ಕಿಂತ ಕಡಿಮೆ ಇದೆ. ಸೋಂಕು ಹರಡುವುದನ್ನು ಇದು ಉತ್ತಮವಾಗಿ ನಿರ್ವಹಿಸಿದೆ ಎನ್ನುವದನ್ನು ತೋರಿಸುತ್ತದೆ. ರಾಷ್ಟ್ರೀಯ ಸರಾಸರಿಯ ಶೇ.11ಕ್ಕೆ ಹೋಲಿಸಿದರೆ ಕೇರಳವು ತನ್ನ ವಯಸ್ಕ ಜನಸಂಖ್ಯೆಯ ಶೇ. 23 ರಷ್ಟು ಜನರಿಗೆ ಸಂಪೂರ್ಣ ಲಸಿಕೀಕರಣವನ್ನು ಮಾಡಿದೆ. ಅದರ ಸಾವಿನ ಪ್ರಮಾಣವು 0.5 ರಷ್ಟಿದ್ದು ರಾಷ್ಟ್ರೀಯ ಸರಾಸರಿಯ 1.3 ರ ಮೂರನೇ ಒಂದು ಭಾಗದ ಹತ್ತಿರವಿದೆ. ಆಸ್ಪತ್ರೆಗಳಲ್ಲಿ ಶೇ. 57 ಕೋವಿಡ್ ಹಾಸಿಗೆಗಳು ಮತ್ತು ಶೇ. 40 ತೀವ್ರ ನಿಗಾ ಘಟಕಗಳು ಭರ್ತಿಯಾಗಿದ್ದು ಅಲ್ಲಿನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ದೇಶದ ಇತರ ಭಾಗಗಳಿಗಿಂತ ಉತ್ತಮವಾಗಿದೆ. ಎನ್ನುವುದನ್ನು ತೋರಿಸುತ್ತದೆ.

ಪಕ್ಷದ ಪರಿಹಾರ ಚಟುವಟಿಕೆಗಳು

ದೇಶದ ಎಲ್ಲೆಡೆಯೂ ನಮ್ಮ ಪಕ್ಷದ ಘಟಕಗಳು ಮಹಾಸೋಂಕು ಮತ್ತು ಲಾಕ್‌ಡೌನ್‌ನಿಂದ ಸಂತ್ರಸ್ತರಾದ ಜನರಿಗೆ ಪರಿಹಾರ ನೀಡುವಲ್ಲಿ ಹೆಚ್ಚು ಕ್ರಿಯಾಶೀಲವಾಗಿವೆ. ಆಂಧ್ರ ಪ್ರದೇಶದಲ್ಲಿ ನಮ್ಮ ರಾಜ್ಯ ಸಮಿತಿಯು ಕ್ವಾರಂಟೈನ್ (ಪ್ರತ್ಯೇಕ) ಕೇಂದ್ರಗಳಿಂದ ಹಿಡಿದು ಉಪಚಾರದ ಕೇಂದ್ರದವರೆಗೆ ವೈದ್ಯಕೀಯ ಸೌಲಭ್ಯಗಳನ್ನು ಸ್ಥಾಪಿಸಿದೆ. ಬಂಗಾಳದಲ್ಲಿ ಕೆಂಪು ಸ್ವಯಂ ಸೇವಕರ ದಳವು ದೊಡ್ಡ ಮಟ್ಟದಲ್ಲಿ ಪರಿಹಾರವನ್ನು ನೀಡುವ ಅನುಕರಣಿಯ ವಿಧಾನಗಳನ್ನು ಕೈಗೊಂಡಿದೆ. ಅದೇ ರೀತಿ ಹಲವಾರು ರಾಜ್ಯಗಳಲ್ಲಿ ಉಚಿತ ಆಹಾರದ ಕಿಟ್‌ಗಳನ್ನು ಮತ್ತು ಇನ್ನಿತರ ಸಹಾಯವನ್ನು ಜನರಿಗೆ ನೀಡಲಾಗುತ್ತಿದೆ.

ಭಾರತದ ಆರ್ಥಿಕತೆ

ಭಾರತದ ಆರ್ಥಿಕತೆಯು ಹಿಂದೆದೂ ಕಂಡಿರದ ಹಿಂಜರಿತವನ್ನು ಎದುರಿಸುತ್ತಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿ (ಐ.ಎಂ.ಎಫ್) ಯು ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ದ 2021-22ರ ಬೆಳವಣಿಗೆಯ ಮುನ್ನೋಟವನ್ನು ಶೇ.12.5 ರಿಂದ ಶೇ.9.5 ಕ್ಕೆ ತಗ್ಗಿಸಿದೆ. ಪ್ರತಿಯೊಂದು ಪ್ರಮುಖ ವಲಯವೂ ಅವನತಿಯನ್ನು ತೋರಿಸುತ್ತಿದೆ. ಭಾರತದ ಜಿಡಿಪಿಯು 2019-20 ರಲ್ಲಿ 146 ಲಕ್ಷ ಕೋಟಿ ರೂ. ಗಳಾಗಿದ್ದದ್ದು 2021ರಲ್ಲಿ 135 ಲಕ್ಷ ಕೋಟಿ ರೂ. ಗಳಿಗೆ ಕುಸಿದಿದೆ.

ಈ ಹಿಂಜರಿತವನ್ನು ತಡೆಯಲು ಸರ್ಕಾರವು ಹೆಚ್ಚಿನ ವೆಚ್ಚಗಳನ್ನು ಮಾಡಬೇಕು. ಇದರಿಂದ ಉದ್ಯೋಗದಲ್ಲಿ ಹೆಚ್ಚಳವಾಗುತ್ತದೆ ಮತ್ತು ಜನರ ಕೈಯಲ್ಲಿ ಕೊಳ್ಳುವ ಶಕ್ತಿ ಮತ್ತು ಹಣ ವೃದ್ಧಿಯಾಗುತ್ತದೆ. ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಆಂತರಿಕ ಬೇಡಿಕೆಯನ್ನು ಹೆಚ್ಚಿಸಲು ತೀವ್ರ ಅವಶ್ಯಕತೆಯಾದ ಮೂಲಭೂತ ಸೌಕರ್ಯಗಳ ನಿಮಾರ್ಣದಲ್ಲಿ, ಭಾರಿ ಪ್ರಮಾಣದಲ್ಲಿ ಸಾರ್ವಜನಿಕ ಹೂಡಿಕೆಯನ್ನು ಮಾಡಬಹುದಿತ್ತು. ಆಂತರಿಕ ಬೇಡಿಕೆಯು ಕುಸಿತವನ್ನು ಕಂಡಿರುವದು ಈ ಹಿಂಜರಿತಕ್ಕೆ ಮುಖ್ಯ ಕಾರಣವಾಗಿದೆ. ಅದರ ಬದಲಿಗೆ ಘೋಷಿಸಲಾದ ಎಲ್ಲಾ ಉತ್ತೇಜಕ ಪ್ಯಾಕೇಜುಗಳು ಪ್ರಮುಖವಾಗಿ ವ್ಯಾಪಾರ ವಹಿವಾಟಿಗೆ ಸಾಲವನ್ನು ಒದಗಿಸುವ ಕ್ರಮಗಳಾಗಿವೆ. ಆರ್ಥಿಕತೆಯು ಯಾವಾಗ ಹಿಂಜರಿತವನ್ನು ಅನುಭವಿಸುತ್ತದೆಯೋ ಆಗ ಯಾವ ವ್ಯಾಪಾರವೂ ಸಾಲವನ್ನು ಪಡೆಯಲು ಬಯಸುವುದಿಲ್ಲ. ನೇರ ನಗದು ವರ್ಗಾವಣೆ ಮತ್ತು ಉಚಿತ ಆಹಾರ ಕಿಟ್‌ಗಳನ್ನು ಹಂಚುವ ಮೂಲಕ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸ ಬಹುದಿತ್ತು. ಕೇಂದ್ರ ಸರ್ಕಾರವು ಈ ಕ್ರಮಗಳನ್ನು ಜಾರಿ ಮಾಡುವುದನ್ನು ತಿರಸ್ಕರಿಸಿತು ಇದರ ನಿವ್ವಳ ಫಲಿತಾಂಶವೇನೆಂದರೆ ಜನತೆಯ ಮೇಲೆ ಸಂಕಟಗಳ ಹೊರೆ ಮತ್ತು ಹಸಿವು, ನಿರುದ್ಯೋಗಗಳ ಹೆಚ್ಚಳ.

ಉತ್ತೇಜಕ ಪ್ಯಾಕೇಜುಗಳ ಸ್ವರೂಪವು ಬಡವರ ವಿರೋಧಿ, ಶ್ರೀಮಂತರ ಪರ ಮತ್ತು ರಾಜ್ಯಗಳ ವಿರುದ್ಧ ತಾರತಮ್ಯವಾಗಿತ್ತು. ಈ ಪ್ಯಾಕೇಜುಗಳು, ಕಾರ್ಪೋರೇಟ್ ತೆರಿಗೆ ಅದಾಯವು 2019-20ರಲ್ಲಿನ 5.5 ಲಕ್ಷ ಕೋಟಿ ರೂ. ಗಳಿಂದ 2020-21 ರಲ್ಲಿ 4.5 ಲಕ್ಷ ಕೋಟಿ ರೂ. ಗಳಿಗೆ ಕುಸಿಯಲು ಅವಕಾಶ ಮಾಡಿಕೊಟ್ಟವು. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದ ತೀವ್ರ ಹೆಚ್ಚಳದಿಂದಾಗಿ ಕೇಂದ್ರ ಸರ್ಕಾರದ ತೆರಿಗೆ ಆದಾಯವು 1 ಲಕ್ಷ ಕೋಟಿ ರೂ. ಗಳಷ್ಟು ವೃದ್ಧಿಸಿತು. ಹಾಗೆಯೇ ಒಟ್ಟು ತೆರಿಗೆ ಆದಾಯದ ರಾಜ್ಯಗಳ ಪಾಲು 6.5 ಲಕ್ಷ ಕೋಟಿ ರೂ. ಗಳಿಂದ 5.9 ಲಕ್ಷ ಕೋಟಿ ರೂ. ಗಳಿಗೆ ಕುಸಿಯಿತು ಈ ಸಾಂಕ್ರಾಮಿಕ ಸಮಯದಲ್ಲಿ ಕೊರೋನಾ ಹೆಚ್ಚಳವನ್ನು ಎದುರಿಸಲು ಆದಾಯದಲ್ಲಿ ಕುಸಿತವನ್ನು ಎದುರಿಸುತ್ತಿದ್ದ ರಾಜ್ಯಗಳಿಗೆ ಆರ್ಥಿಕವಾಗಿ ಬೆಂಬಲಿಸಬೇಕಿದ್ದ ಸಮಯದಲ್ಲಿ, ರಾಜ್ಯಗಳ ಆದಾಯ ಕುಸಿಯುವಂತಹ ಕ್ರಮಗಳನ್ನು ಕೈಗೊಂಡು ಕೇಂದ್ರ ಸರ್ಕಾರವು ಹೆಚ್ಚಿನ ಆದಾಯಗಳನ್ನು ಸಂಗ್ರಹಿಸುತ್ತಿತ್ತು.

ರಾಷ್ಟ್ರೀಯ ಆಸ್ತಿಗಳ ಲೂಟಿ

ಈ ಹಿಂದಿನ ಕೇಂದ್ರ ಸಮಿತಿಗಳ ಸಭೆಗಳಲ್ಲಿ ಗುರುತಿಸಿದಂತೆ, ದೊಡ್ಡ ಮಟ್ಟದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದಿಂದಾಗುವ ಲೂಟಿಯು, ಆಳುವ ಪಕ್ಷವು ಸಂಸತ್ತಿನಲ್ಲಿ ಸೃಷ್ಟಿಸಿದ ಕೋಲಾಹಲದ ನಡುವೆ, ತೀವ್ರವಾಗಿ ಮುಂದುವರೆಯುತ್ತಿದೆ. ಖಾಸಗೀಕರಣವನ್ನು ಕಾನೂನುಬದ್ಧಗೊಳಿಸಲು ಶಾಸನಗಳನ್ನು ಮಾಡಲಾಗಿದೆ. ಇತ್ತೀಚಿನದು ಆರ್ಥಿಕತೆಯ ಮೇಲೆ ವಿನಾಶಕಾರಿ ಪರಿಣಾಮ ಬೀರುವ ವಿಮಾರಂಗದ ಖಾಸಗೀಕರಣ. ವಿಮಾರಂಗವು ಹಣಕಾಸು ಕ್ಷೇತ್ರದಲ್ಲಿ, ಮೂಲಭೂತ ಸೌಕರ್ಯಗಳಲ್ಲಿ ದೊಡ್ಡ ಹೂಡಿಕೆದಾರನಾಗಿದೆ. ವಿದೇಶಿ ಮತ್ತು ದೇಶಿಯ ಎರಡೂ ಖಾಸಗೀ ಕಾರ್ಪೋರೇಟ್ ಗಳಿಗೆ ಈ ಅಪಾರ ಹಣವನ್ನು ಒಪ್ಪಿಸುವುದರಿಂದ ಭಾರತವು ಅಭಿವೃದ್ಧಿಗೆ ಬೇಕಾಗುವ ಸಂಪನ್ಮೂಲಗಳಿಂದ ವಂಚಿತವಾಗುತ್ತದೆ.

ದುಡಿಯುವ ಜನರ ಹಕ್ಕುಗಳ ಮೇಲೆ ಮತ್ತಷ್ಟು ದಾಳಿ

ತಲೆಮಾರುಗಳ ಹೋರಾಟದಿಂದ ಗಳಿಸಿಕೊಳ್ಳಲಾದ ಹಕ್ಕುಗಳನ್ನು ಕಾರ್ಮಿಕವರ್ಗದಿಂದ ಕಸಿದುಕೊಳ್ಳುವ ಕಾರ್ಮಿಕ ಕಾನೂನುಗಳ ರದ್ದತಿಯ ನಂತರ, ಕಾರ್ಮಿಕ ವರ್ಗದ ಹಕ್ಕುಗಳ ಮೇಲಿನ ಹೊಸ ದಾಳಿಯೆಂದರೆ ಅವಶ್ಯಕ ರಕ್ಷಣ ಸೇವೆಗಳಲ್ಲಿ ಯಾವುದೇ ಮುಷ್ಕರವನ್ನು ಪ್ರತಿಬಂಧಿಸಿದ್ದು. ಇದನ್ನು ಸಂಸತ್ತಿನಲ್ಲಿ ಗಲಭೆಗಳ ನಡುವೆಯೇ ಮಂಜೂರು ಮಾಡಲಾಯಿತು. ಇನ್ನಷ್ಟು ಇದೇ ರೀತಿಯ ಕರಾಳ ಕಾನೂನುಗಳು ಬರುವ ಸಂಭವವಿದೆ.

ವಿಮಾರಂಗವಲ್ಲದೆ, ಸಾರ್ವಜನಿಕ ವಲಯದ ಬ್ಯಾಂಕುಗಳನ್ನು, ಲಾಭಮಾಡುತ್ತಿರುವ `ನವರತ್ನ’ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮತ್ತು ವಿಶಾಖಪಟ್ಟಣದ ಉಕ್ಕು ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಜೊತೆ ಜೊತೆಗೆ ಭಾರತೀಯ ರೈಲ್ವೆ ಮತ್ತು ಸಾರಿಗೆ ಮೂಲಸೌಕರ್ಯಗಳನ್ನು ಖಾಸಗೀಕರಣಗೊಳಿಸುವುದು ನಡೆಯುತ್ತಿದೆ.

ಖನಿಜ ಸಂಪತ್ತಿನಂತಹ ನಮ್ಮ ರಾಷ್ಟ್ರೀಯ ಆಸ್ತಿಗಳ ಲಂಗುಲಗಾಮಿಲ್ಲದ ಲೂಟಿಯು ಖಾಸಗೀಕರಣದ ಮೂಲಕ ಮುಂದುವರಿಯುತ್ತಿದೆ.

ಜನತೆಯ ಮೇಲೆ ಪರಿಣಾಮ

ಬಡತನದಲ್ಲಿ ಗಂಭೀರ ಹೆಚ್ಚಳ: ಭಾರತದಲ್ಲಿ ಬಡತನವು ಏರಿಕೆಯಾಗುತ್ತಿದೆ ಎಂದು ಅಂಕಿಸಂಖ್ಯೆಗಳು ತೋರಿಸುತ್ತಿವೆ. ಯೋಜನಾ ಆಯೋಗವನ್ನು ರದ್ದು ಮಾಡುವುದರ ಜೊತೆಗೆ ಸ್ವಾತಂತ್ರ್ಯ ಬಂದಾಗಿನಿಂದ ಭಾರತವು ಈ ಮೊದಲು ಅನುಸರಿಸುತ್ತಿದ್ದ ದಾರಿದ್ರ್ಯದ ಮಟ್ಟವನ್ನು ಅಳೆಯುವ ಮೂಲ ಪೌಷ್ಠಿಕತೆಯ ಪ್ರಮಾಣ ಆಧಾರಿತ ರೂಢಿಗತ ವಿಧಾನವನ್ನು ಮೋದಿ ಸರ್ಕಾರವು ತ್ಯಜಿಸಿದೆ. ಪೌಷ್ಠಿಕತೆಯ ರೂಢಿಗತ ಪ್ರಮಾಣವನ್ನು ಭಾರತದ ಗ್ರಾಮೀಣ ಭಾಗದಲ್ಲಿ 2200 ಕ್ಯಾಲೋರಿಗಳೆಂದು, ನಗರ ಪ್ರದೇಶಗಳಲ್ಲಿ 2100 ಕ್ಯಾಲೋರಿಗಳೆಂದು ನಿರ್ಧರಿಸಲಾಗಿದೆ. ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್.ಎಸ್.ಎಸ್)ಯು ನಡೆಸಿದ ವಿಸ್ತೃತ ಮಾದರಿ ಸಮೀಕ್ಷೆಯು 1993-94 ರಲ್ಲಿ ಈ ಪ್ರಮಾಣದ ಆಧಾರದಲ್ಲಿ ಭಾರತದ ಗ್ರಾಮೀಣ ಭಾಗದ ಶೇ. 58 ಮತ್ತು ನಗರ ಪ್ರದೇಶಗಳ ಶೇ. 57 ರಷ್ಟು ಜನರು ಬಡತನದ ರೇಖೆಗಿಂತ ಕೆಳಗಿದ್ದರು ಎನ್ನುವದನ್ನು ತೋರಿಸುತ್ತದೆ. ಇದೇ ರೀತಿಯ ರಾಷ್ಟ್ರೀಯ ಮಾದರಿ ಸಮೀಕ್ಷೆಯು 2011-12 ರಲ್ಲಿ ಕ್ರಮವಾಗಿ ಶೇ. 68 ಮತ್ತು ಶೇ. 65 ರಷ್ಟಿತ್ತು ಎನ್ನುತ್ತದೆ. ಮುಂದಿನ ದೊಡ್ಡ ಮಾದರಿ ಸಮೀಕ್ಷೆಯನ್ನು 2017-18 ರಲ್ಲಿ ನಡೆಸಲಾಯಿತು. ಆದರೆ ಈ ಸತ್ಯವನ್ನು ಮರೆ ಮಾಚಲು ಮೋದಿ ಸರ್ಕಾರವು ಸಮೀಕ್ಷೆಯ ಅಂಕಿ ಅಂಶಗಳನ್ನು ತಡೆಹಿಡಿಯಿತು. ಮಾಧ್ಯಮಗಳಲ್ಲಿ ಸೋರಿಕೆಯಾದ ಅಂಕಿ ಅಂಶಗಳು ಗ್ರಾಮೀಣ ಬಾರತದಲ್ಲಿ ತಲಾವಾರು ನೈಜ ಬಳಕೆಯ ವೆಚ್ಚವು (ಕೇವಲ ಆಹಾರ ಮಾತ್ರವಲ್ಲ) ಶೇ.9ರಷ್ಟು ಕುಸಿತವಾಗಿರುವುದನ್ನೂ ತೋರಿಸುತ್ತವೆ. ಮಹಾಸೋಂಕು ಬಂದೆರಗುವ ಮೊದಲೇ ನಗರ ಮತ್ತು ಗ್ರಾಮೀಣ ಭಾರತದಲ್ಲಿ ಹಿಂದೆ ಕಂಡು ಕೇಳರಿಯದಷ್ಟು ಬಡತನದಲ್ಲಿ ವೃದ್ಧಿಯಾಗಿರುವದು ಸ್ವಷ್ಟವಿದೆ.

ಅಂದಿನಿಂದ ಪರಿಸ್ಥಿತಿಯು ಇನ್ನಷ್ಟು ಹದಗೆಟ್ಟೆದೆ. ಈಗಾಗಲೇ ಏರುತ್ತಿರುವ ದಾರಿದ್ರ್ಯದ ಮಟ್ಟಗಳು ಮತ್ತು ಅವುಗಳ ಮೇಲೆ ಮಹಾಸೋಂಕು ಮತ್ತು ಅದರ ಜೊತೆಗೆ ಲಾಕ್‌ಡೌನ್ ಸೇರಿಕೊಂಡಿವೆ. ಸಾಂಕ್ರಾಮಿಕದ ಸಂದರ್ಭದಲ್ಲಿ ಬಹುತೇಕ ಕುಟುಂಬಗಳ ಋಣಭಾರವು ಆತಂಕಕಾರಿಯಾಗುವಷ್ಟು ಹೆಚ್ಚಾಯಿತು. ಉಳಿವಿಗಾಗಿ ಕುಟುಂಬಗಳು ತಮ್ಮ ಆಭರಣಗಳನ್ನು ಮತ್ತು ಇನ್ನಿತರ ಆಸ್ತಿಗಳನ್ನು ಮಾರಬೇಕಾಯಿತು. ನಮ್ಮ ಒಟ್ಟು ಆಂತರಿಕ ಉತ್ಪನ್ನಕ್ಕೆ ಶೇ.60ರಷ್ಟು ಸಂದಾಯ ಮಾಡುವ ಕೌಟುಂಬಿಕ ಗ್ರಾಹಕ ವೆಚ್ಚಗಳಲ್ಲಿ ಗಾಬರಿ ಹುಟ್ಟಿಸುವಷ್ಟು ಇಳಿಕೆಯಾಗಿದೆ. ಇದು ಜನತೆಯ ಮೇಲೆ ತೀವ್ರ ಆರ್ಥಿಕ ದಾರಿದ್ರ್ಯವನ್ನೂ ಹೇರುತ್ತದೆ ಮತ್ತು ಆರ್ಥಿಕ ಹಿಂಜರಿತವನ್ನು ಆಳಗೊಳಿಸುತ್ತದೆ.

ಇಂದು ಜಗತ್ತಿನ ಹಸಿವಿನ ಸೂಚ್ಯಂಕವು ಭಾರತವನ್ನು `ಗಂಭೀರ ವಲಯ’ ದಲ್ಲಿ ಇರಿಸಿದೆ. ಐದನೆಯ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್.ಎಫ್.ಹೆಚ್.ಎಸ್.ಜೆ.-5) ವಿಶೇಷವಾಗಿ ಮಕ್ಕಳಲ್ಲಿ ಸೇರಿದಂತೆ ಅಪೌಷ್ಟಿಕತೆ, ಶಿಶುಮರಣ ಪ್ರಮಾಣದಲ್ಲಿ ಮತ್ತು ಇನ್ನಿತರ ಸೂಚ್ಯಾಂಕಗಳಲ್ಲಿ ಆತಂಕಕಾರಿ ಏರಿಕೆಯಾಗಿರುವುದನ್ನು ತೋರಿಸುತ್ತದೆ. ಸುಸ್ಥಿರ ಅಭಿವೃದ್ಧಿಯ ಜಾಗತಿಕ ಸೂಚ್ಯಾಂಕದಲ್ಲಿ (ಎಸ್‌ಡಿಜಿ) ಭಾರತವನ್ನು ಎರಡು ಶ್ರೇಣಿ ಕೆಳಗೆ ಇಳಿಸಲಾಗಿದೆ. ಕಳೆದ ಈ ಒಂದು ವರ್ಷದಲ್ಲಿ ಪ್ಯೂ ಸಂಶೋಧನಾ ಕೇಂದ್ರವು ಭಾರತದಲ್ಲಿ ದಾರಿದ್ರ್ಯ ರೇಖೆಗಿಂತ ಕೆಳಗಿರುವವರ ಸಂಖ್ಯೆಯು 6.0 ರಿಂದ 13.4 ಕೋಟಿಗೆ ಏರಿಕೆಯಾಗಿದೆ ಎಂದು ಅಂದಾಜಿಸಿವೆ. ಕಳೆದ ವರ್ಷದಲ್ಲಿ ಜಾಗತಿಕ ಬಡತನದ ಹೆಚ್ಚಳಕ್ಕೆ ಭಾರತವು ಶೇ. 57.3 ರಷ್ಟು ಪಾಲನ್ನು ನೀಡಿದೆ. ನಮ್ಮ ಮಧ್ಯಮ ವರ್ಗಗಳ ಶೇ. 59.3 ರಷ್ಟು ಜನರು ಬಡತನಕ್ಕೆ ಜಾರಿದ್ದಾರೆ.

ಹೆಚ್ಚುತ್ತಿರುವ ನಿರುದ್ಯೋಗ: 2020 ರಲ್ಲಿ ಲಾಕ್‌ಡೌನ್ ಪ್ರಾರಂಭವಾದ ಕೂಡಲೇ ಶೇ.24 ರಷ್ಟು ನಿರುದ್ಯೋಗ ಹೆಚ್ಚಳವಾಯಿತು. ಇದೇ ಸಮಯದಲ್ಲಿ ಶ್ರಮಿಕರ ಭಾಗವಹಿಸುವಿಕೆಯ ದರವು ಕಳೆದ ವರ್ಷ ಶೇ.40 ರಷ್ಟು ತೀವ್ರವಾಗಿ ಕುಸಿದಿದೆ. ಈ ಮೊದಲು ಉದ್ಯೋಗದಲ್ಲಿದ್ದವರ ಕಾಲು ಭಾಗದಷ್ಟು ಸಂಬಳ ಪಡೆಯುವ ಉದ್ಯೋಗಿಗಳು, ಅಂದರೆ 2.1 ಕೋಟಿ ಉದ್ಯೋಗಗಳು ಕಳೆದುಹೋಗಿವೆ ಎಂದು ಅಂದಾಜಿಸಲಾಗಿದೆ. ಕೆಟ್ಟ ಪರಿಣಾಮವನ್ನು ಎದುರಿಸಿದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರದಲ್ಲಿ ಶೇ. 25 ರಷ್ಟು ಕೈಗಾರಿಕಾ ಕಾರ್ಮಿಕರು ಕೆಲಸವನ್ನು ಕಳೆದುಕೊಂಡಿದ್ದಾರೆ. ಇದು 1.5 ಕೋಟಿಗಳಷ್ಟಾಗುತ್ತದೆ. ವಿವಿಧ ಅಂದಾಜುಗಳಿದ್ದರೂ, ಈ ಅವಧಿಯಲ್ಲಿ ಅತ್ಯಧಿಕ ಉದ್ಯೋಗಗಳನ್ನು ಸೃಷ್ಟಿಸುವ ನಿರ್ಮಾಣ (ಶೇ.50), ವ್ಯಾಪಾರ, ಹೋಟೆಲುಗಳು ಮತ್ತು ಇನ್ನಿತರ ಸೇವೆಗಳು (ಶೇ. 47), ಉತ್ಪಾದನೆ (ಶೇ. 13) ಮತ್ತು ಗಣಿಗಾರಿಕೆ (ಶೇ. 23) ಗಳ ಮೇಲೆ ತೀವ್ರ ಪರಿಣಾಮಗಳು ಆಗಿದ್ದು ಅವು ಕುಸಿದಿವೆ, ಎಂಬುದರಿಂದಲೇ ಉದ್ಯೋಗದಲ್ಲಿ ಭಾರಿ ಕುಸಿತದ ನೈಜ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು.

ಕೆಲಸ ಕಳೆದುಕೊಂಡ ಬಹುತೇಕ ಜನರು ವಿಶೇಷವಾಗಿ ವಲಸೆ ಕಾರ್ಮಿಕರು ಬದುಕಿಗಾಗಿ ಮನರೇಗಾ (ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ) ಕಾರ್ಯಕ್ರಮವನ್ನು ನಂಬಿಕೊAಡಿದ್ದಾರೆ. ಇಂತಹ ಸಂದರ್ಭದಲ್ಲಿ ಮನರೇಗಾ ಕೆಲಸಗಳನ್ನು ವಿಸ್ತಾರಗೊಳಿಸಬೇಕಿತ್ತು. ಬದಲಿಗೆ ಹಂಚಿಕೆಯಲ್ಲಿ ತೀವ್ರ ಕುಸಿತವಾಗಿದೆ. ಇತ್ತೀಚಿನ ಬಜೆಟ್‌ನಲ್ಲಿ 2020-21 ರ ಪರಿಷ್ಕೃತ ಅಂದಾಜಿಗಿAತ ಶೇ. 34 ರಷ್ಟು ಕಡಿಮೆ ಹಂಚಿಕೆ ಮಾಡಲಾಗಿದೆ. ಮನರೇಗಾಕ್ಕೆ ಬೇಡಿಕೆ ಹೆಚ್ಚುತ್ತಿದೆ. (2020-2021 ರಲ್ಲಿ ಹಿಂದೆದೂ ಕಂಡರಿಯದ 72 ಲಕ್ಷ ಕುಟುಂಬಗಳು 100 ದಿನಗಳ ಕೆಲಸವನ್ನು ಪೂರೈಸಿವೆ) ಮತ್ತು ಸರ್ಕಾರವು ಹೆಚ್ಚಿನ ಕೂಲಿಯೊಂದಿಗೆ ಕೆಲಸದ ದಿನಗಳನ್ನು ಹೆಚ್ಚಿಸಲು ನಿರಾಕರಿಸುತ್ತಿದೆ.

ನಾಗಾಲೋಟದ ಹಣದುಬ್ಬರ

ಅಗತ್ಯ ವಸ್ತುಗಳ ಬೆಲೆಯಲ್ಲಿ ನಾಗಾಲೋಟದ ಹಣದುಬ್ಬರದಿಂದಾಗಿ ಜನತೆಯ ಸಂಕಷ್ಟಗಳು ದ್ವಿಗುಣಗೊಂಡಿವೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಅಬಕಾರಿ ಸುಂಕದಲ್ಲಿ ಭಾರಿ ಹೆಚ್ಚಳವಾಗಿರುವದರಿಂದ ಇದು ಪ್ರಚೋದಿತವಾಗಿವೆ. ಜನವರಿ 1 ಮತ್ತು ಜುಲೈ 22, 2021ರ ಅವಧಿಯಲ್ಲಿ ಪೆಟ್ರೋಲ್ ಬೆಲೆಯನ್ನು 67 ಬಾರಿ ಮತ್ತು ಡೀಸೆಲ್ ಬೆಲೆಯನ್ನು 63 ಬಾರಿ ಪರಿಷ್ಕರಿಸಲಾಗಿದೆ. ಅನಿ¯ ಸಿಲಿಂಡರ್‌ಗಳ ಬೆಲೆಯು ಕ್ರೂರ ಹೆಚ್ಚಳವನ್ನು ಕಂಡಿವೆ. ಮೇ 2020 ರಿಂದ ಗ್ಯಾಸ್ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ಕಿತ್ತು ಹಾಕಲಾಗಿದೆ. ಕಳೆದ ಏಳು ತಿಂಗಳುಗಳಲ್ಲಿ ಸಿಲಿಂಡರ್‌ನ ಬೆಲೆಯು ರೂ.250 ರಷ್ಟು ಏರಿಕೆಯಾಗಿದ್ದು ದೆಹಲಿಯಲ್ಲಿ ಅದರ ಸರಾಸರಿ ಬೆಲೆಯು 834 ರೂ. ಆಗಿವೆ. ಕಚ್ಚಾ ತೈಲ ಮತ್ತು ಎಲ್‌ಪಿಜಿ ಬೆಲೆಯು ಜಾಗತಿಕವಾಗಿ ತೀವ್ರ ಕುಸಿತವನ್ನು ಕಾಣುತ್ತಿರುವಾಗ ಈ ಹೆಚ್ಚಳಗಳು ಆಗಿವೆ. 2019-20ರಲ್ಲಿ ಭಾರತದ ಖರೀದಿ ಬೆಲೆ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆಯು, ಅದರ ಹಿಂದಿನ ವರ್ಷಕ್ಕಿಂತ ಶೇ.30 ರಷ್ಟು ಕಡಿಮೆಯಾಗಿತ್ತು. ಇದು 2004-05ರ ನಂತರ ಅತ್ಯಂತ ಕಡಿಮೆ ಬೆಲೆಯಾಗಿದೆ. ಭಾರತದ ಎಲ್‌ಪಿಜಿ ಯ ಖರೀದಿಯ ವೆಚ್ಚ 2014ರ ಆರ್ಥಿಕ ವರ್ಷದಲ್ಲಿ ಪ್ರತಿ ಮೆಟ್ರಿಕ್ ಟನ್ ಗೆ 880 ಡಾಲರು ಇದ್ದದ್ದು 2021ರ ಆರ್ಥಿಕ ವರ್ಷದಲ್ಲಿ 382 ಡಾಲರಿಗೆ ಕುಸಿದಿದೆ.

ಈ ಲಾಭವನ್ನು ಜನರಿಗೆ ವರ್ಗಾಯಿಸುವುದರ ಬದಲಿಗೆ ಸರ್ಕಾರವು ಲಾಭವನ್ನು ಸಂಗ್ರಹಿಸುತ್ತಿದೆ. 2020-21 ರಲ್ಲಿ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕಗಳು ಮತ್ತು ಸೆಸ್‌ಗಳ ಮೂಲಕ 3.4 ಲಕ್ಷಕೋಟಿ ರೂ. ಗಳನ್ನು ಸಂಗ್ರಹಿಸಿವೆ. ಇದು ಕಳೆದ ವರ್ಷ ಸಂಗ್ರಹಿಸಿದ ಮೊತ್ತಕ್ಕಿಂತ 1.56 ಲಕ್ಷ ಕೋಟಿ ರೂ. ಗಳಷ್ಟು ಹೆಚ್ಚಾಗಿವೆ.

ಅಸಮಾನತೆಗಳ ಅಸಹ್ಯ ಬೆಳವಣಿಗೆ

ಫೋರ್ಬ್ಸ್ ಪ್ರಕಾರ ಭಾರತದಲ್ಲಿ ಈ ಮಹಾಸೋಂಕಿನ ಅವಧಿಯಲ್ಲಿ ಜನತೆಯ ಸಂಕಷ್ಟಗಳ ಪ್ರಮಾಣವು ಈ ಪರಿಯಲ್ಲಿದ್ದಾಗ ಶತಕೋಟ್ಯಾಧಿಪತಿಗಳ (ಬಿಲಿಯನೇರ್ ಗಳ) ಸಂಖ್ಯೆಯು 102 ರಿಂದ 140 ಕ್ಕೆ ಹೆಚ್ಚಳವಾಗಿದೆ. ಅವರ ಒಟ್ಟು ಆಸ್ತಿಯು 596 ಶತಕೋಟಿ ಡಾಲರ್ ಗೆ ದ್ವಿಗುಣಗೊಂಡಿದೆ. ಭಾರತವು ಇಂದು ಅತಿಹೆಚ್ಚು ಶತಕೋಟ್ಯಾಧಿಪತಿಗಳನ್ನು ಹೊಂದಿದ ಮೂರನೇ ದೇಶವಾಗಿದೆ.

ಮಹಿಳೆ, ದಲಿತ ಮತ್ತು ಆದಿವಾಸಿಗಳ ಮೇಲೆ ಮುಂದುವರೆದ ದಾಳಿಗಳು:

ಮಹಿಳೆಯರ ಮೇಲೆ ಲೈಂಗಿಕ ಅಪರಾಧಗಳು, ಕೌಟುಂಬಿಕ ಹಿಂಸೆ ಮತ್ತು ದಬ್ಬಾಳಿಕೆಗಳು ಹೆಚ್ಚುತ್ತಿರುವುದು ಮುಂದುವರೆದಿದೆ. ದಲಿತ ಮಹಿಳೆಯರು ಮತ್ತು ಅಪ್ರಾಪ್ತರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗಳು ಮುಂದುವರೆದಿರುವ ಪ್ರಕರಣಗಳು ಭೀಭತ್ಸವಾಗಿವೆ.

ದಲಿತರ ವಿರುದ್ಧ ಸಾಮಾಜಿಕ ಅನ್ಯಾಯಗಳು ಮತ್ತು ಅಪರಾಧಗಳು ಹೆಚ್ಚಾಗುತ್ತಿರುವುದು ಮುಂದುವರೆದಿವೆ. ಕಳೆದ ಐದು ವರ್ಷಗಳಲ್ಲಿ ತಮ್ಮ ಕೈಗಳಿಂದ ಸಫಾಯಿ ಕೆಲಸ ಮಾಡುವ ಕಾರ್ಮಿಕರ ಯಾವ ಸಾವು ಸಂಭವಿಸಿಲ್ಲವೆAದು ಇತ್ತೀಚೆಗೆ ಸರ್ಕಾರವು ಸಂಸತ್ತಿಗೆ ತಿಳಿಸಿತ್ತು. ಇದೊಂದು ನಿರ್ಲಜ್ಜ ಸುಳ್ಳು. ಫೆಬ್ರವರಿಯಲ್ಲಿ ಬಜೆಟ್ ಮಂಡನೆಯ ಸಂದರ್ಭದಲ್ಲಿ ಸರ್ಕಾರವೇ ಕಳೆದ ಐದು ವರ್ಷಗಳಲ್ಲಿ ನಿಷೇಧಿಸಿರುವ ಈ ಕೆಟ್ಟ ಆಚರಣೆಯಿಂದಾಗಿ 340 ಸಾವುಗಳು ಸಂಭವಿಸಿವೆ ಎಂದು ಸಂಸತ್ತಿಗೆ ತಿಳಿಸಿತ್ತು. ದಲಿತ ಹಕ್ಕುಗಳ ಸಂಘಟನೆಗಳು ನೀಡಿರುವ ನಿಜವಾದ ಸಂಖ್ಯೆಯು 472.

ಅರಣ್ಯ ಹಕ್ಕುಗಳ ಕಾಯ್ದೆ ಅನ್ವಯ ನೀಡಲಾದ ಆದಿವಾಸಿ ಹಕ್ಕುಗಳನ್ನು ತೀವ್ರವಾಗಿ ದುರ್ಬಲಗೊಳಿಸಲಾಗಿದೆ. ಗಣಿಗಾರಿಕೆಯ ಖಾಸಗೀಕರಣದಿಂದಾಗಿ ಬಹಳಷ್ಟು ಸ್ಥಳಗಳಲ್ಲಿ ಅವರನ್ನು ಅವರ ಪಾರಂಪರಿಕ ವಾಸದ ನೆಲೆಗಳಿಂದ ನಿರ್ದಯವಾಗಿ ಒಕ್ಕಲೆಬ್ಬಿಸಲಾಗುತ್ತಿದೆ.

ಒಕ್ಕೂಟವಾದದ ಮೇಲೆ ಹೆಚ್ಚುತ್ತಿರುವ ಹಲ್ಲೆಗಳು

ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಒಕ್ಕೂಟವಾದ ಮತ್ತು ರಾಜ್ಯಗಳ ಹಕ್ಕುಗಳ ಮೇಲೆ ಎಲ್ಲ ಕಡೆಯಿಂದಲೂ ನಿರಂತರ ದಾಳಿಗಳಾಗುತ್ತಿವೆ. ರಾಜ್ಯಪಾಲರು ಮತ್ತು ಲೆ. ಗವರ್ನರ್ ‌ಗಳ ಪಾತ್ರವೂ ಸಂವಿಧಾನದ ಎಲ್ಲ ಔಚಿತ್ಯಗಳನ್ನು ಉಲ್ಲಂಘಿಸುತ್ತಿದೆ. ಮಹಾರಾಷ್ಟ್ರದ ರಾಜ್ಯಪಾಲರಾಗಲಿ ಅಥವಾ ಪ. ಬಂಗಾಳದ ರಾಜ್ಯಪಾಲರಾಗಲಿ ಕೇಂದ್ರದ ಆಳುವ ಪಕ್ಷದ ಏಜೆಂಟ್‌ರಂತೆ ಬಹಿರಂಗವಾಗಿ ವರ್ತಿಸುತ್ತಿದ್ದಾರೆ. ಸ್ಥಳೀಯ ಜನರ ಹಕ್ಕುಗಳನ್ನು ತುಳಿದು ಹಾಕುವ ಲಕ್ಷ ದ್ವೀಪದ ಆಡಳಿತಾಧಿಕಾರಿಯ ಕ್ರಮಗಳು ಅಪಮಾನಕಾರವಾಗಿವೆ. ಶಾಲೆಗಳ ಮಧ್ಯಾಹ್ನದ ಊಟದಿಂದ ಹಿಡಿದು ಭೂಮಿಯ ಹಕ್ಕಿನ ವರೆಗೆ ಈ ಆಡಳಿತಾಧಿಕಾರಿಯು (ಗುಜರಾತ್‌ನ ಒಬ್ಬ ಬಿಜೆಪಿ ನಾಯಕ) ಒಬ್ಬ ವೈಸ್‌ರಾಯ್ ನಂತೆ ವರ್ತಿಸುತ್ತಿದ್ದಾನೆ.

ರಾಜ್ಯಗಳ ವಿತ್ತೀಯ ಅವಕಾಶವನ್ನು ನಿರಂತರವಾಗಿ ಅತಿಕ್ರಮಿಸಲಾಗುತ್ತಿವೆ. ಕೇಂದ್ರವು ರಾಜ್ಯಗಳ ಜಿ.ಎಸ್.ಟಿ ಪರಿಹಾರ ಬಾಕಿಯನ್ನು ಕೊಡುತ್ತಿಲ್ಲ. ರಾಜ್ಯಗಳ ಸಾಲದ ಮಿತಿಯನ್ನು ಹೆಚ್ಚಿಸಲು ಷರತ್ತುಗಳನ್ನು ವಿಧಿಸಲಾಗುತ್ತಿದೆ. ರಾಜ್ಯಗಳು ವಿಭಜಕ ತೆರಿಗೆಯ ತಮ್ಮ ಪಾಲನ್ನು ಪಡೆಯುವದರಲ್ಲಿ ವಂಚಿತರಾಗಲು ಹೆಚ್ಚು ಹೆಚ್ಚು ವಿಶೇಷ ತೆರಿಗೆಗಳನ್ನು, ಲೆವಿಗಳನ್ನು ವಿಧಿಸಲಾಗುತ್ತಿದೆ. ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ನೀಡುವುದನ್ನು ಇನ್ನೂ ಐದು ವರ್ಷಗಳ ಕಾಲ ವಿಸ್ತರಿಸಿ ಮುಂದುವರೆಸಬೇಕು.

ಮೂರು ಕೃಷಿ ಕಾನೂನುಗಳು, ರಾಷ್ಟಿçÃಯ ಶಿಕ್ಷಣ ನೀತಿ ಮತ್ತು ಹಲವಾರು ಕೇಂದ್ರ ಪ್ರಾಯೋಜಿತ ಯೋಜನೆಗಳ ಮೂಲಕ ರಾಜ್ಯಗಳ ಶಿಕ್ಷಣ, ಆರೋಗ್ಯ, ಕೃಷಿ ಗ್ರಾಮೀಣಾಭಿವೃದ್ಧಿ ಹಕ್ಕುಗಳನ್ನು ಕೇಂದ್ರವು ಅತಿ ಕ್ರಮಿಸುತ್ತಿದೆ. ಕೇಂದ್ರದಲ್ಲಿ ಸಹಕಾರ ಸಚಿವಾಲಯದ ಸೃಷ್ಟಿಯು ರಾಜ್ಯಗಳ ಹಕ್ಕುಗಳ ಇನ್ನೊಂದು ಅತಿಕ್ರಮಣವಾಗಿವೆ. ಏಕೆಂದರೆ ಸಹಕಾರವು ರಾಜ್ಯಕ್ಕೆ ಸಂಬAಧಿಸಿದ ವಿಷಯವಾಗಿವೆ.

ಒಕ್ಕೂಟವಾದದ ಮೇಲಿನ ಈ ರೀತಿಯ ದಾಳಿಗಳನ್ನು ದೂರವಿಡಲು ಬಿಜೆಪಿಯೇತರ ರಾಜ್ಯ ಸರ್ಕಾರಗಳು ಒಂದಾಗುವದು ಅವಶ್ಯವಾಗಿವೆ. ರಾಜ್ಯಗಳ ಹಕ್ಕುಗಳ, ಒಕ್ಕೂಟ ತತ್ವದ ರಕ್ಷಣೆಯು ಸರ್ವಾಧಿಕಾರಿ ಕೇಂದ್ರೀಕರಣದ ವಿರುದ್ಧದ ಹೋರಾಟದ ಭಾಗವಾಗಿದೆ.

ಸಂಸದೀಯ ಸಂಸ್ಥೆಗಳ ಮೇಲೆ ದಾಳಿಗಳು

ಪೆಗಾಸಸ್ ಗೂಢಚಾರಿ ತಂತ್ರಾಂಶದ ಕಣ್ಣಾವಲು ಕುರಿತು ಚರ್ಚಿಸಲು ಮೋದಿ ಸರ್ಕಾರದ ನಿರ್ದಯ ತಿರಸ್ಕಾರವು ಈಗ ನಡೆಯುತ್ತಿರುವ ಸಂಸತ್ತಿನ ಮಳೆಗಾಲದ ಅಧಿವೇಶನವನ್ನು ಅಡ್ಡಿಪಡಿಸುತ್ತಿದೆ. ಇನ್ನಿತರ ಎಲ್ಲ ಬಹುಮುಖ್ಯ ವಿಷಯಗಳಾದ ರೈತರ ಹೋರಾಟ, ಜನರ ಜೀವನೋಪಾಯದ ಮೇಲಿನ ದಾಳಿ. ಹೆಚ್ಚುತ್ತಿರುವ ನಿರುದ್ಯೋಗ, ಬೆಲೆ ಏರಿಕೆ, ಜನರ ಮೂಲಭೂತ ಹಕ್ಕುಗಳ ಮತ್ತು ನಾಗರಿಕ ಸ್ವಾತಂತ್ರದ ಮೇಲಿನ ದಾಳಿ – ಇವುಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ಅವಕಾಶ ನೀಡುತ್ತಿಲ್ಲ.

ಭಾರತದ ಸಂವಿಧಾನವು ಕಟ್ಟಳೆ ವಿಧಿಸಿದಂತೆ ಕೇಂದ್ರ ಸರ್ಕಾರವು ಸಂಸತ್ತಿಗೆ ಸತ್ಯವನ್ನು ಹೇಳಲು, ಉತ್ತರದಾಯಿತ್ವವನ್ನು ಹೊಂದಲು ಇಚ್ಛಿಸುವದಿಲ್ಲ ಎನ್ನುವದು ಸ್ವಷ್ಟವಾಗಿದೆ. ಜನತೆಯ ಸಾರ್ವಭೌಮತ್ವವನ್ನು “ನಾವು ಜನತೆ …….” ಜಾರಿಗೊಳಿಸುವಲ್ಲಿ ನಮ್ಮ ಸಂವಿಧಾನಿಕ ಯೋಜನೆಯಲ್ಲಿ ಸಂಸತ್ತು ನಿರ್ಣಾಯಕ ಕೊಂಡಿಯಾಗಿದೆ. ಸರ್ಕಾರವು ಸಂಸತ್ತಿಗೆ ಉತ್ತರದಾಯಿಯಾಗಿರುತ್ತದೆ ಮತ್ತು ಸಂಸದರು ಜನರಿಗೆ ಉತ್ತರದಾಯಿಯಾಗಿರುತ್ತಾರೆ. ಸಂಸತ್ತು ಕಾರ್ಯನಿರ್ವಹಿಸದೇ ಇದ್ದಾಗ ಈ ಕೊಂಡಿಯು ಅಸ್ತವ್ಯಸ್ತಗೊಂಡು,   ಜನರ ಸಾರ್ವಭೌಮತ್ವದ ಪ್ರಾಧಾನ್ಯತೆಯನ್ನು ದುರ್ಬಲಗೊಳಿಸುತ್ತದೆ.  ಈ ರೀತಿಯಾಗಿ ಸಾಂವಿಧಾನಿಕ ಕ್ರಮವನ್ನು ನಾಶಗೊಳಿಸಲಾಗುತ್ತಿದೆ.

ನ್ಯಾಯಾಂಗ, ಚುನಾವಣಾ ಆಯೋಗ ಮತ್ತಿತರ ಸ್ವಾಯತ್ತ ಸಾಂವಿಧಾನಿಕ ಪ್ರಾಧಿಕಾರಗಳು ಸರ್ಕಾರದ ಹಾದಿಯನ್ನೇ ತುಳಿಯುವ ಒತ್ತಡದಲ್ಲಿವೆ. ಸಿ.ಬಿ.ಐ ಮತ್ತು ಜಾರಿ (ಇ.ಡಿ.) ನಿರ್ದೇಶನಾಲಯ ದಂತಹ ಏಜೆನ್ಸಿಗಳು ಆಳುವ ಪಕ್ಷದ ತೊತ್ತುಗಳು ಮತ್ತು ರಾಜಕೀಯ ಪ್ರತಿನಿಧಿಗಳಂತೆ ವರ್ತಿಸುವುದನ್ನು ಮುಂದುವರೆಸುತ್ತಿವೆ.

ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯದ ಮೇಲೆ ದಾಳಿಗಳು

ಯಾವುದೇ ಅರೋಪಗಳಿಲ್ಲದೇ ನೂರಾರು ಜನರು ಕರಾಳ ಯು.ಎ.ಪಿ.ಎ/ದೇಶದ್ರೋಹ/ಎನ್.ಎಸ್.ಎ ಗಳ ಅಡಿಯಲ್ಲಿ ಬಂಧನದಲ್ಲಿ ಮುಂದುವರೆಯುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ಭೀಮಾ ಕೋರೆಗಾಂವ್ ಅಪಾದಿತರು ಜೈಲಿನಲ್ಲಿಯೇ ಇದ್ದಾರೆ. 84 ವರ್ಷದ ಜೆಸುಯಿತ್ ಪಾದ್ರಿ ಸ್ಟಾನ್ ಸ್ವಾಮಿಯವರು ಪಾರ್ಕಿನ್‌ಸನ್ ಜೊತೆಗೆ ಇನ್ನಿತರ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾಗ ಅವರಿಗೆ ವೈದ್ಯೋಪಚಾರವನ್ನು ನಿರಾಕರಿಸಿದ್ದರಿಂದ ಅವರು ಸಾವನ್ನಪ್ಪಿದ್ದನ್ನು ದೇಶವು ನೋಡಿದೆ. ನ್ಯಾಯಾಂಗವು ಮಧ್ಯಪ್ರವೇಶ ಮಾಡಿ ಅವರನ್ನು ಆಸ್ಪತ್ರಗೆ ದಾಖಲಿಸಬೇಕೆಂದು ನಿರ್ದೇಶಿಸಿಸುವ ವೇಳೆಗೆ ಅವರ ಕಸ್ಟಡಿ ಸಾವನ್ನು ತಡೆಯಲು ತುಂಬಾ ತಡವಾಗಿತ್ತು. ಸುಳ್ಳು ಮೊಕದ್ದಮೆಗಳನ್ನು ಹೂಡಿದವರು, ಬಂಧನವನ್ನು ಮುಂದುªರೆಸಿದವರು ಮತ್ತು ಅಮಾನವೀಯವಾಗಿ ನಡೆಸಿಕೊಂಡವರು ಅವರ ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳಬಾರದು. ಈ ರೀತಿಯ ರಾಜಕೀಯ ಪ್ರಚೋದಿತ ಮೊಕದ್ದಮೆಗಳಲ್ಲಿ ಬಂಧಿತರಾದವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು.

ನ್ಯಾಯಾಂಗದ ಮಧ್ಯಪ್ರವೇಶದಿಂದ ಸಿಎಎ/ಎನ್.‌ಆರ್.ಸಿ/ಎನ್.ಪಿ.ಆರ್ ವಿರೋಧಿ ಹೋರಾಟಗಳಲ್ಲಿ ಶಾಂತಿಯುತವಾಗಿ ಭಾಗವಹಿಸಿದ್ದ ಕೆಲ ಯುವಜನರು ಬಿಡುಗಡೆ ಹೊಂದಿದ್ದಾರೆ. ಇನ್ನಿತರ ಬಹಳಷ್ಟು ಜನರು ಯಾವುದೇ ಪ್ರಕರಣಗಳಿಲ್ಲದೆ ಇದ್ದಾಗ್ಯೂ ಬಂಧನದಲ್ಲಿ ಮುಂದುವರೆದಿದ್ದಾರೆ.  ಹಲವಾರು ಪತ್ರಕರ್ತರು ಸತ್ಯವನ್ನು ವರದಿ ಮಾಡಿರುವದಕ್ಕೆ ಬಂಧನಕ್ಕೊಳಗಾಗಿದ್ದಾರೆ. ವಿಡಿಯೋ ಚಿತ್ರೀಕರಣದ ದಾಖಲೆಗಳಿದ್ದಾಗಲೂ ಕಳೆದ ವರ್ಷ ಜೆ.ಎನ್.ಯು ಆವರಣದಲ್ಲಿ ಹಿಂಸಾತ್ಮಕ ಗಲಭೆ ಮಾಡಿದ ಹೊರಗಿನವರು ಯಾರನ್ನೂ ದೆಹಲಿ ಪೊಲೀಸರು ಬಂಧಿಸಿಲ್ಲವೆಂದು ಸಂಸತ್ತಿಗೆ ತಿಳಿಸಲಾಯಿತು. ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಬಿಜೆಪಿ ಆಳ್ವಿಕೆಯಲ್ಲಿ ಪೊಲೀಸರು ಅವರ ರಾಜಕೀಯ ಕಾರ್ಯಸೂಚಿಯನ್ನು ಮುಂದುವರೆಸಲು ಕಾರ್ಯ ನಿರ್ವಹಿಸುತ್ತಿದ್ದಾರೆ.

ತೀವ್ರವಾಗುತ್ತಿರುವ ಕೋಮು ಧ್ರುವೀಕರಣ

ಅಲ್ಪಸಂಖ್ಯಾತರ ವಿರುದ್ಧ ಕೋಮುಧ್ರುವೀಕರಣವನ್ನು ಇನ್ನಷ್ಟು ತೀವ್ರಗೊಳಿಸುವ ತನ್ನ ಉದ್ದೇಶಗಳಿಗಾಗಿ ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳು ಅವರನ್ನು ಗುರಿಯಾಗಿಸಿ ಹೊಸ ಕಾನೂನುಗಳನ್ನು ಜಾರಿ ಮಾಡುತ್ತಿವೆ ಮತ್ತು ಕೋಮುವಾದಿ ಹಿಂದುತ್ವ ಮತಬ್ಯಾಂಕನ್ನು ಕ್ರೋಢೀಕರಿಸುತ್ತಿದೆ. ಜನಸಂಖ್ಯಾ ನಿಯಂತ್ರಣ, ಜಾನುವಾರುಗಳ ಸಾಗಣೆ, ಇತರೆ ಇಂತಹ ಹೊಸ ಕಾನೂನುಗಳನ್ನು ಜಾರಿ ಮಾಡಲಾಗುತ್ತಿದೆ. ಗ್ಯಾನವಾಪಿ ಮಸೀದಿ ಕುರಿತಂತೆ ಅಲ್ಲಿ ಈ ಮೊದಲು ದೇವಸ್ಥಾನ ಸಂಕೀರ್ಣವಿತ್ತೇ ಎನ್ನುವುದನ್ನು ಸಮೀಕ್ಷಿಸಲು ಕೆಳಹಂತದ ನ್ಯಾಯಲಯವೊಂದು ಹೊರಡಿಸಿದ ಆದೇಶವು, ಈಗಿರುವ ಕಾನೂನಿನ ಉಲ್ಲಂಘನೆಯಾಗಿದೆ. ಇದನ್ನು ಕೋಮುಧ್ರುವೀಕರಣವನ್ನು ಇನ್ನಷ್ಟು ತೀವ್ರಗೊಳಿಸಲು ಹಿಂದುತ್ವ ಪಡೆಗಳು ಬಳಸಿಕೊಳ್ಳುತ್ತಿವೆ. ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆಯು ಎಲ್ಲ ಪೂಜಾಸ್ಥಳಗಳಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ನಿರ್ದೇಶಿಸುತ್ತದೆ. ಮೇಲಿನ ನ್ಯಾಯಾಲಯಗಳು ಮಧ್ಯಪ್ರವೇಶಿಸಿ ಕೆಳಹಂತದ ನ್ಯಾಯಾಲಯದ ಈ ತೀರ್ಪನ್ನು ಅಸಿಂಧುಗೊಳಿಸಬೇಕು.

ಜಮ್ಮು ಮತ್ತು ಕಾಶ್ಮೀರ: ಪರಿಸ್ಥಿತಿ ಹದಗೆಡುತ್ತಿದೆ

ಕೇಂದ್ರ ಸರ್ಕಾರವು ಪರಿಚ್ಛೇದ 370 ಮತ್ತು 35ಎ ಯನ್ನು ರದ್ದುಗೊಳಿಸಿ,. ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಸರ್ಜಿಸಿ ಎರಡು ಕೇಂದ್ರಾಡಳಿತ ಪ್ರವೇಶವಾಗಿ ಪುನರ‍್ರಚಿಸಿ ಎರಡು ವರ್ಷಗಳಾಗಿವೆ. ಈ ರದ್ದತಿಯು ಸಂವಿಧಾನದ ಉಲ್ಲಂಘನೆಯಾಗಿದೆ ಎನ್ನುವ ನ್ಯಾಯಿಕ ಅಹವಾಲು ಸವೋಚ್ಛ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಬಾಕಿ ಇರುವದು ದುರ್ದೈವ.  ಜಮ್ಮು ಮತ್ತು ಕಾಶ್ಮೀರದ ಜನತೆ ಮತ್ತು ಭಾರತದ ಒಕ್ಕೂಟದ ಮಧ್ಯೆ ಸಂಬಂಧಗಳನ್ನು ಹಾನಿಗೊಳಿಸುವ ಈ ಕ್ರಮಗಳ ಅಸಮರ್ಥನೀಯ ಅನುಮೋದನೆಗೆ ಇದು ಅವಕಾಶ ಮಾಡಿಕೊಡುತ್ತದೆ.

ಪರಿಚ್ಛೇದ 35ಎ ಯ ರದ್ದತಿಯು ಕಾಯಂ ನಿವಾಸಿಗಳ ಸ್ಥಿತಿಯನ್ನು ಅತಂತ್ರಗೊಳಿಸುತ್ತವೆ. ಉದ್ಯೋಗಗಳ ರಕ್ಷಣೆ ಮತ್ತು ಭೂ ಹಕ್ಕಿನ ಬೇಕಾಬಿಟ್ಟಿ ರದ್ದತಿ ಜಮ್ಮು ಮತ್ತು ಕಾಶ್ಮೀರದ ಎಲ್ಲ ಭಾಗಗಳಲ್ಲೂ ಆಳವಾದ ಪ್ರತ್ಯೇಕತೆ ಮತ್ತು ಅಭದ್ರತೆಗೆ ಕಾರಣವಾಗುತ್ತದೆ. ಆರ್ಥಿಕತೆಯು ಸಂಪೂರ್ಣವಾಗಿ ಕುಸಿದಿದೆ. ಗಂಭೀರವಾಗಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಆಡಳಿತದ ಕೊರತೆಯಿಂದ ಭ್ರಷ್ಟ್ಟಾಚಾರವು ಮುಂದುವರೆಯುತ್ತಿದೆ. ಮಾಧ್ಯಮಗಳ ಮೇಲಿನ ದಾಳಿಯಿಂದಾಗಿ ಜನತೆಯ ಸಂಕಟಗಳು ಮತ್ತು ದಮನಗಳನ್ನು ಮೌನವಾಗಿಸಲಾಗಿದೆ.

‘ಗುಪ್ಕರ್ ಘೋಷಣೆಗಾಗಿ ಜನತೆಯ ಮೈತ್ರಿಕೂಟ’ದ (ಪಿ.ಎ.ಜಿ.ಡಿ) ನಾಯಕರೊಡನೆ ಪ್ರಧಾನ ಮಂತ್ರಿಗಳ `ದಿಲ್‌ಸೆ ಜೋಡೋ, ದಿಲ್ಲಿಸೇ ಜೋಡೋ’ (ಹೃದಯಗಳನ್ನು ಬೆಸೆಯಿರಿ, ದೆಹಲಿಯೊಂದಿಗೆ ಬೆಸೆಯಿರಿ) ಎನ್ನುವ ಘೋಷಣೆಯ ಅತಿರಂಜಿತ ಪ್ರಚಾರದಿಂದ ನಡೆದ ನೀತಿಯು ಕೇವಲ ಒಂದು ಕಣ್ಣೊರೆಸುವ ತಂತ್ರವಾಗಿದ್ದು ಅದರಿಂದ ಗಮನಾರ್ಹವಾದ ಏನೂ ಹೊರಹೊಮ್ಮಲಿಲ್ಲ. ವಿಧಾನ ಸಭೆಯಲ್ಲಿ ಕಣಿವೆಯ ಪ್ರಾತಿನಿಧ್ಯವನ್ನು ಕುಗ್ಗಿಸಲು ಆರ್‌ಎಸ್‌ಎಸ್/ಬಿಜೆಪಿ ಕಾರ್ಯಸೂಚಿಯೊಂದಿಗೆ ಕ್ಷೇತ್ರಗಳನ್ನು ಪರಿಮಿತಿಗೊಳಿಸುವ ಕ್ರಮವು ಮುಂದುವರೆಯುತ್ತಿವೆ.

ನಾಗರಿಕ ಸ್ವಾತಂತ್ರ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನವು ಎಗ್ಗಿಲ್ಲದೇ ಮುಮದುವರಿಯುತ್ತಿದೆ. ನೌಕರರೂ ಒಳಗೊಂಡAತೆ ಎಲ್ಲ ವಿಬಾಗಗಳ ಜನರ ಬಂಧನ ಮತ್ತು ಕಿರುಕುಳಗಳು ಮುಂದುವರಿಯುತ್ತಿವೆ. ಕಾನೂನು ಸುವ್ಯವಸ್ಥೆ ಮತ್ತು ಕಲ್ಲೆಸತದ ಪ್ರಕರಣಗಳಲ್ಲಿ ಪಾಲ್ಗೊಂಡವರ ಪಾಸ್‌ಪೋರ್ಟ್ ಮತ್ತು ಸರ್ಕಾರಿ ಸೇವೆಗಳನ್ನು ತಡೆಹಿಡಿಯಲಾಗುತ್ತಿದೆ. ಪೋಲಿಸ್ ವರದಿಯನ್ನು ಅಪರಾಧವೆಂದು ಪರಿಗಣಿಸುವುದು ಮತ್ತು ಅವರಿಗೆ ಈ ಎಲ್ಲ ಸೇವೆಗಳನ್ನು ನಿರಾಕರಿಸುವುದು ನೈಸರ್ಗಿಕ ನ್ಯಾಯದ ತತ್ವಗಳ ನಿರಾಕರಣೆಯಾಗಿದೆ. ಅಪರಾಧವು ಸಿದ್ಧವಾಗಿ ತೀರ್ಪು ಬರುವವರೆಗೆ ಎಲ್ಲರೂ ನಿರಪರಾಧಿಗಳು ಎಂದು ನ್ಯಾಯಾಂಗಶಾಸ್ತ್ರವು ಹೇಳುತ್ತದೆ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಇದನ್ನು ನಿರ್ದಯವಾಗಿ ಉಲ್ಲಂಘಿಸಲಾಗಿದೆ.

ಈ ಎರಡು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಜನತೆಯ ಸಾಮಾನ್ಯ ಬದುಕು, ಓಡಾಟ ಮತ್ತು ಸಂಪರ್ಕ-ಸಂವಹನಗಳಿಗೆ ಗಣನೀಯವಾಗಿ ಅಡ್ಡಿಪಡಿಸಲಾಗಿದೆ. ಎರಡು ವರ್ಷಗಳ ನಂತರವೂ ಕರಾಳ ಯುಎಪಿಎ ಅಡಿಯಲ್ಲಿ ಬಂಧಿತರಾದ 2364 ಜನರ ಪೈಕಿ 1100 ಜನರು ಇನ್ನೂ ಬಂಧನದಲ್ಲಿದ್ದಾರೆ. ಸಾರ್ವಜನಿಕ ಸುರಕ್ಷಾ ಕಾಯ್ದೆ(ಪಿಎಸ್‌ಎ) ಯಡಿ ಬಂಧಿತರಾದ 854 ಜನರ ಪೈಕಿ 284 ಜನ ಬಂಧನದಲ್ಲಿ ಮುಂದುವರಿದಿದ್ದಾರೆ.

‘ಗುಪ್ಕರ್ ಘೋಷಣೆಗಾಗಿ ಜನತೆಯ ಮೈತ್ರಿ’ (ಪಿಎಜಿಡಿ)ಯು ಬಿಜೆಪಿಯ `ನಯಾ ಕಾಶ್ಮೀರ’ ಘೋಷಣೆಯು ಸಂಪೂರ್ಣವಾಗಿ ಬಯಲಾಗಿದೆ ಎಂದು ಘೋಷಿಸಿದೆ. ಜಮ್ಮು ಮತ್ತು ಕಾಶ್ಮೀರದ ಜನತೆಯ ಒಂದು ಸುದೀರ್ಘ ಐತಿಹಾಸಿಕ ಹೋರಾಟದಿಂದ ಅಸ್ಥಿತ್ವಕ್ಕೆ ಬಂದ `ಕಾಶ್ಮೀರ’ವನ್ನು ಸವರ್ನಾಶ ಗೊಳಿಸುವುದರಿಂದ ಏನು ಸಾಧಿಸಲಾಗಿದೆ ಎನ್ನುವದು ಅಲ್ಲಿನ ಜನರ ಪ್ರಶ್ನೆಯಾಗಿದೆ. ಇದು ಎಲ್ಲ ಪ್ರದೇಶಗಳು ಮತ್ತು ಸಮುದಾಯಗಳ ಜನರನ್ನು ಸರ್ವಾಧಿಕಾರಿ ರಾಜ ಪ್ರಭುತ್ವ ಮತ್ತು ನಿರ್ದಯ ಊಳಿಗಮಾನ್ಯ ವ್ಯವಸ್ಥೆಯ ಸಂಕೋಲೆಗಳಿಂದ ಮುಕ್ತಗೊಳಿಸುವ ಮೂಲಕ ಘನತೆಯಿಂದ ಅಧಿಕಾರವನ್ನು ನೀಡಿತು.

ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಂದು ಪ್ರದೇಶದ ಜನರು ಮತ್ತು ಸಮುದಾಯ ಒಗ್ಗಟ್ಟಾಗಿರುವುದು ಮತ್ತು ಸುಳ್ಳು ಪ್ರಚಾರಗಳಿಗೆ ಮತ್ತು ಅವರನ್ನು ವಿಭಜಿಸುವ, ನಿಶ್ಯಸ್ತçರನ್ನಾಗಿಸುವ ಪ್ರಯತ್ನಗಳಿಗೆ ಬಲಿಯಾಗದೆ ಇರುವದು ಅತಿ ಮುಖ್ಯವಾಗಿದೆ.

ಭಾರತದ ಸಂವಿಧಾನವು ಖಾತ್ರಿಗೊಳಿಸಿದ ಎಲ್ಲ ಹಕ್ಕುಗಳ ಜೊತೆ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಪುನರ್ ಸ್ಥಾಪಿಸಬೇಕು ಮತ್ತು ಅಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸಬೇಕು.

ಎಲ್ಲ ರಾಜಕೀಯ ಕೈದಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಜನರ ಅಡೆತಡೆಯಿಲ್ಲದ ಸಂಚಾರದ ಜೊತೆಗೆ ಎಲ್ಲ ಸಂಪರ್ಕ ಸಾಧನಗಳನ್ನು ಪುನರ್ ಸ್ಥಾಪಿಸಬೇಕು.

ಸಿನಿಮಾಟೋಗ್ರಫಿ ಕಾಯ್ದೆ ತಿದ್ದುಪಡಿ

ಸಿನಿಮಾಟೋಗ್ರಾಫಿ ಕಾಯ್ದೆಗೆ ಮೋದಿ ಸರ್ಕಾರವು ತರಲು ಹೊರಟಿರುವ ಪ್ರಸ್ತಾವಿತ ತಿದ್ದುಪಡಿಗಳು ಚಿತ್ರ ತಯಾರಕರ ಕ್ರಿಯಾಶೀಲ ಪ್ರತಿಭೆಗಳ ಮೇಲೆ ಮತ್ತು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯಾಗಿವೆ. ಕಾಯ್ದೆಯ ಸೆಕ್ಷನ್ 5ಬಿ(1) (ಚಲನಚಿತ್ರಕ್ಕೆ ಸರ್ಟಿಫಿಕೇಟ್ ಕೊಡಲು ಮಾರ್ಗದರ್ಶಿ ತತ್ವಗಳು) ಉಲ್ಲಂಘನೆಯಾದಾಗ ಅದನ್ನು `ಪರಿಷ್ಕರಿಸುವ ಅಧಿಕಾರದ ಹಕ್ಕನ್ನು ತಾನು ಪಡೆಯಲು ನಿಬಂಧನೆಗಳನ್ನು ಸೇರಿಸಲು ಕೇಂದ್ರ ಸರ್ಕಾರವು ಬಯಸುತ್ತಿದೆ. ಇದು ಈಗಾಗಲೇ ಪ್ರಮಾಣೀಕರಿಸಲಾದ ಚಲನಚಿತ್ರಗಳನ್ನು ಹಿಂತೆಗೆಯಕೊಳ್ಳುವುದಕ್ಕೆ ಸಮವಾಗಿದೆ. ಇತ್ತೀಚೆಗೆ ಬಲಪಂಥೀಯ ಶಕ್ತಿಗಳು ಹಿಂದುತ್ವ ಪಡೆ ಮತ್ತು ಜಾತಿವಾದಿ ಗುಂಪುಗಳ ನಾಯಕತ್ವದಲ್ಲಿ ತಮಗೆ ಇಷ್ಟವಾಗದ ಚಲನಚಿತ್ರಗಳನ್ನು ಗುಂಪು ಸೆನ್ಸಾರ್ ಮಾಡುವುದಕ್ಕೆ ಮುಂದಾದ ಘಟನೆಗಳನ್ನು ನೋಡಿದ್ದೇವೆ. ಈಗ ಸರ್ಕಾರವೇ ತನ್ನ ಸಿದ್ಧಾಂತವನ್ನು ಟೀಕಿಸುವ ಚಿತ್ರಗಳನ್ನು ನಿಲ್ಲಿಸುವ ಅಧಿಕಾರವನ್ನೂ ಬಯಸುತ್ತಿದೆ. ಇದು ಚಲನಚಿತ್ರ ಸೆನ್ಸಾರ್ ಮಂಡಳಿಯ ಸ್ವಾಯತ್ತ ಅಧಿಕಾರವಾಗಿದ್ದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಹಕ್ಕನ್ನು ಹಲವಾರು ರೀತಿಯಲ್ಲಿ ಮೊಟಕುಗೊಳಿಸುತ್ತಿದೆ. ಸೆನ್ಸಾರ್ ಮಂಡಳಿಯು ಸೂಚಿಸಿದ ಕಡಿತಗಳ ವಿರುದ್ಧ ಮೇಲ್ಮನವಿ ನಿಲ್ಲಿಸಲು ಇದ್ದ ಸಂಸ್ಥೆಯನ್ನು ಏಪ್ರಿಲ್‌ನಲ್ಲಿ ಸಚಿವಾಲಯವು ವಿಸರ್ಜಿಸಿವೆ.

ಈ ಕ್ರೂರ ತಿದ್ದುಪಡಿಗಳನ್ನು ಸಿನಿಮಿಯ ಪ್ರತಿಭೆ ಮತ್ತು ಸ್ವಾತಂತ್ರ್ಯದ ಕತ್ತು ಹಿಸುಕಲು ವಿನ್ಯಾಸಗೊಳಿಸಲಾಗಿದೆ. ಹೆಸರಾಂತ ಚಲನಚಿತ್ರ ನಿರ್ಮಾಪಕರ ಬೇಡಿಕೆಯಂತೆ ಮೇಲ್ಮನವಿ ಮಂಡಳಿಯನ್ನು ಪುನರ್ ಸ್ಫಾಪಿಸಬೇಕು. ಪ್ರಜಾಸತ್ತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಈ ದಾಳಿಯ ವಿರುದ್ಧ ಧೈರ್ಯದಿಂದ ದನಿ ಎತ್ತುತ್ತಿರುವ ಚಿತ್ರರಂಗದಲ್ಲಿರುವವರ ಹೋರಾಟವನ್ನು ಬೆಂಬಲಿಸಬೇಕು.

ಪ್ರತಿಗಾಮಿ ಐಟಿ ನಿಯಮಗಳು

ಫೆಬ್ರವರಿ 25, 2021 ರಂದು ಹೊರಡಿಸಲಾದ ನೋಟಿಪಿಕೇಷನ್ ಮೂಲಕ ಸರ್ಕಾರವು ಇತ್ತೀಚೆಗೆ ಕೆಲವು ಬಾಧ್ಯತೆಗಳಿಂದ ಫೇಸ್ ಬುಕ್  ಹಾಗೂ ಟ್ವಿಟರ್ ನಂತಹ ಮಧ್ಯವರ್ತಿ ವೇದಿಕೆಗಳನ್ನು ರಕ್ಷಿಸುವ ಐಟಿ ಕಾನೂನಿನ ನಿಬಂದನೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಮಾರ್ಪಡಿಸಿದೆ. ಈ ನಿಯಮಗಳನ್ನು ಮಧ್ಯವರ್ತಿ ವೇದಿಕೆಗಳು ಪಾಲಿಸಬೇಕಿದೆ. ಇದು ಮೇ 26, 2021 ರಿಂದ ಜಾರಿಗೆ ಬಂದಿದೆ. ಇದರ ಪ್ರಕಾರ ಸಂದೇಶಗಳ ರವಾನೆ ಮಾಡುವ ಎಲ್ಲಾ ಮಧ್ಯವರ್ತಿ ವೇದಿಕೆಗಳು ಮೆಸೇಜ್ (ಸಂದೇಶ) ನ ‘ಮೊದಲ ಸೃಷ್ಟಿಕರ್ತ’ ಯಾರು ಎಂದು ಗುರುತಿಸಬೇಕು ಮತ್ತು ಆ ಮಾಹಿತಿಯನ್ನು ನ್ಯಾಯಲಯಗಳು ಅಥವಾ ಸರ್ಕಾರ ಕೇಳಿದಾಗ ಒದಗಿಸಬೇಕು.

ಈಗ ಅಸ್ತಿತ್ವದಲ್ಲಿರುವ ಸಂದೇಶ ರವಾನೆ ಶಿಷ್ಟಾಚಾರದ ಮತ್ತು ಸಂದೇಶ ಸೇವೆ ಬಳಕೆದಾರರೆಲ್ಲರ ಸುರಕ್ಷಿತತೆಯನ್ನು ಇಲ್ಲವಾಗಿಸುವುದು ಇದರ ತಿರುಳು ಎಂದು ಡಿಜಿಟಲ್ ಸಂಸ್ಥೆಗಳು ಹೇಳಿವೆ. ಇದನ್ನು ತಾಂತ್ರಿಕ ಪರಿಣಿತರು ಕೂಡ ಅನುಮೋದಿಸಿದ್ದಾರೆ. ಭದ್ರತಾ ಶಿಷ್ಟಾಚಾರವನ್ನು ದುರ್ಬಲಗೊಳಿಸುವುದು ಬಳಕೆದಾರರ ಖಾಸಗಿತನವನ್ನು ಉಲ್ಲಂಘಿಸುವುದರ ಜೊತೆಗೆ ಕ್ರಿಮಿನಲ್ ದುರುದ್ದೇಶಕ್ಕಾಗಿ ಹ್ಯಾಕಿಂಗ್ ದುರುಪಯೋಗದ ಸಾಧ್ಯತೆಯನ್ನು ಹೆಚ್ಚು ಮಾಡಲಿದೆ.

ಹಲವು ಬಿಜೆಪಿ ನಾಯಕರ ಟ್ವೀಟ್ ಗಳು ತಿರುಚಿದ ಫೊಟೊ/ವಿಡಿಯೊಗಳನ್ನು ಬಳಸಿಕೊಂಡಿವೆ ಎಂದು ಟ್ವಿಟರ್ ಗುರುತಿಸಿದ್ದಕ್ಕಾಗಿ ಅದನ್ನು ಬೆದರಿಸಲು ಭಾರತ ಸರ್ಕಾರ, ದೆಹಲಿ ಪೊಲೀಸ್ ರನ್ನು ಬಳಸಿಕೊಂಡಿದೆ.  ಟ್ವಿಟರ್ ಕಛೇರಿಗಳ ಮೇಲಿನ ಬಿಜೆಪಿ ಸರ್ಕಾರದ ಐಟಿ ಸಚಿವಾಲಯ ಹಾಗೂ ಪೊಲೀಸ್ ದಾಳಿ ಗಳ ಮೂಲಕ ಈ ಸಂಸ್ಥೆಗಳ ಪಕ್ಷಪಾತದ ಬಳಕೆಯು, ಒಂದು ನಗ್ನ ಬೆದರಿಕೆಯಾಗಿದೆ.

ಜನರ ಸಂದೇಶಗಳು ಸರ್ಕಾರಕ್ಕೆ ದೊರಕುವಂತೆ ಮಾಡುವ ಸುರಕ್ಷತೆ ಶಿಷ್ಟಾಚಾರವನ್ನು ಕಡೆಗಣಿಸುವುದು ಒಂದು ಅಪಾಯಕಾರಿ ಹಾಗೂ ಪ್ರತಿಗಾಮಿ ಕ್ರಮವಾಗಿದೆ. ಇದು ನಾಗರಿಕರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುವ ಕಣ್ಗಾವಲು ಪ್ರಭುತ್ವದ ವಿನ್ಯಾಸವನ್ನು ಬಲಗೊಳಿಸುತ್ತದೆ. ನಾಗರಿಕರ ಖಾಸಗಿತನವನ್ನು ರಕ್ಷಿಸಲು ಒಂದು ಬಲಿಷ್ಠ ದತ್ತಾಂಶ ರಕ್ಷಣಾ ಕಾಯ್ದೆಯನ್ನು ಸಂಸತ್ ಅಂಗೀಕರಿಸಬೇಕಾಗಿದೆ.

ಜಾಗತಿಕ ಸ್ಥಾನದಲ್ಲಿ ತೀವ್ರ ಇಳಿಕೆ:  ಜನರ ಪ್ರಜಾಪ್ರಭುತ್ವ ಹಕ್ಕುಗಳ, ನಾಗರಿಕ ಸ್ವಾತಂತ್ರ್ಯ ದ  ಹಾಗೂ ಮಾನವ ಹಕ್ಕುಗಳ ಮೇಲಿನ ಧಾಳಿಗಳು, ಎಲ್ಲಾ ಭಿನ್ನಮತಗಳನ್ನು ದೇಶ ವಿರೋಧಿ ಎಂದು ಪರಿಗಣನೆ ಮತ್ತು ಸಂವಿಧಾನ ಬದ್ದ ಖಾತರಿಗಳ ಅವಗಣನೆ ಗಳಿಂದಾಗಿ ಪ್ರಜಾಪ್ರಭುತ್ವ ದೇಶವಾಗಿ  ಹಲವು ಜಾಗತಿಕ ಸಂಸ್ಥೆಗಳ ದೃಷ್ಟಿಯಲ್ಲಿ ಭಾರತದ ಸ್ಥಾನವು ತೀವ್ರ ಇಳಿಕೆ ದಾಖಲಿಸಿದೆ.

ಸ್ವೀಡನ್ ನ ‘ವಿ ಡೆಮ್’ ಸಂಸ್ಥೆಯು ಭಾರತವನ್ನು ಒಂದು’ ಚುನಾಯಿತ ಸರ್ವಾಧಿಕಾರ’ ಎಂದು ಕರೆದಿದೆ. ‘ದಿ ಎಕಾನಮಿಸ್ಟ್’ ನ ಇಂಟೆಲಿಜೆನ್ಸ್ ಘಟಕವು ಭಾರತವನ್ನು ‘ದೋಷಪೂರಿತ ಪ್ರಜಾಪ್ರಭುತ್ವ’ ಎಂದು ಹೇಳಿದೆ. ಯು.ಎಸ್ ಮೂಲದ ಪ್ರೀಡಂ ಹೌಸ್ ಭಾರತವನ್ನು ‘ ಮುಕ್ತ ಪ್ರಜಾಪ್ರಭುತ್ವ’ ಸ್ಥಾನ ದಿಂದ ‘ ಆಂಶಿಕ ಮುಕ್ತ ಪ್ರಜಾಪ್ರಭುತ್ವ’ ಸ್ಥಾನಕ್ಕೆ ಇಳಿಸಿದೆ. ಮಾನವ ಸ್ವಾತಂತ್ರ್ಯ ಸೂಚ್ಯಂಕ ವು ಭಾರತದ ಸ್ಥಾನವನ್ನು 94 ರಿಂದ 111 ಸ್ಥಾನಕ್ಕೆ ಇಳಿಸಿದೆ .ಟ್ರಾನ್ಸಪೆರೆನ್ಸಿ ಅಂತರಾಷ್ಟ್ರೀಯದ ಭ್ರಷ್ಟಾಚಾರ ವ್ಯವಸ್ಥೆ ಸೂಚ್ಯಂಕ ದಲ್ಲಿ ಭಾರತ ಆರು  ಸ್ಥಾನಗಳಷ್ಟು  ಜಾರಿದೆ.

ಭಾರತೀಯ ಶಿಕ್ಷಣ: ಹರಕು ಮುರುಕು ಸ್ಥಿತಿ

ಯೂನಿಸೆಫ್‌, ಆಕ್ಸ್‌ಫಾಮ್ ಹಾಗೂ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯಗಳ ಹಲವಾರು ಅಧ್ಯಯನ ಗಳು ಸಂಶೋಧನಾ ಸಂಸ್ಥೆಗಳು ಸೇರಿದಂತೆ ಪ್ರಾಥಮಿಕ ಹಂತದಿಂದ ಹಿಡಿದು ವಿಶ್ವವಿದ್ಯಾಲಯಗಳ ತನಕದ ಭಾರತೀಯ ಶಿಕ್ಷಣದ ಭಯಾನಕ ಸ್ಥಿತಿಯನ್ನು ಅನಾವರಣಗೊಳಿಸಿವೆ.

ಈ ಆಧ್ಯಯನಗಳು ಕೊರೋನಾ ವೈರಸ್ ಮಹಾಸೋಂಕು ಹಾಗೂ ತದನಂತರ ದ 2020 ರ ಲಾಕ್ ಡೌನ್ ಭಾರತದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ದಾಖಲಾಗಿದ್ದ 24.7 ಕೋಟಿ ಮಕ್ಕಳ ಮೇಲೆ ಈಗಾಗಲೇ ದುಷ್ಪರಿಣಾಮ ಬೀರಿರುವುದನ್ನು ತೋರಿದೆ (UNICEF). ಪ್ರಾಥಮಿಕ ಆರೋಗ್ಯ ಹಾಗೂ ಡಿಜಿಟಲ್ ಶಿಕ್ಷಣ ದೊರಕುವಿಕೆ ಮಾಪನದಲ್ಲಿ ಈಗಾಗಲೇ ಇದ್ದ ಅಸಮಾನತೆ ಮಟ್ಟವು, ಮಹಾಸೋಂಕಿನಿಂದಾಗಿ ತೀವ್ರವಾಗಿ ಹೆಚ್ಚಳವಾಗಿದೆ. ಸರ್ಕಾರದ ಅಂಕಿಅಂಶಗಳೇ 60 ಲಕ್ಷ ಮಕ್ಕಳು ಶಾಲೆಯಿಂದ ಹೊರಗಿರುವುದನ್ನು ಮತ್ತು ಕಾಲುಭಾಗದಷ್ಟು ಕುಟುಂಬಗಳು (24 ಶೇಕಡಾ) ಮಾತ್ರ ಇಂಟರ್ನೆಟ್ ಸೌಲಭ್ಯ ಹೊಂದಿವೆ ಎಂಬುದನ್ನು ತಿಳಿಸುತ್ತಿವೆ. ಸಹಜವಾಗಿ ಈ ದೊರಕುವಿಕೆಯು ಭಾರೀ ಪ್ರಮಾಣದ ಗ್ರಾಮೀಣ-ನಗರ ಹಾಗೂ ಲಿಂಗ ವಿಭಜನೆಯನ್ನು ಒಳಗೊಂಡಿದ್ದು, ಪರಿಶಿಷ್ಟ ಜಾತಿ/ಪಂಗಡ ಹಾಗೂ ಅಲ್ಪಸಂಖ್ಯಾತ ವಿಭಾಗಗಳ  ಮತ್ತಷ್ಟು ಜರ್ಝರಿತ ಚಿತ್ರಣದ ಕುರಿತು ಮಾತಾನಾಡುವಂತೆಯೇ ಇಲ್ಲ.

ಕೇಂದ್ರ ಹಾಗೂ ಹಲವು ರಾಜ್ಯ ಸರ್ಕಾರಗಳು ಆನ್ ಲೈನ್ ಶಿಕ್ಷಣ ಒಂದೇ ಸದ್ಯದ ಏಕಮಾತ್ರ ಪರಿಹಾರ ಎಂದು ಪರಿಗಣಿಸಿ ನಡೆಸಿದ ಆರಂಭಿಕ ಪ್ರಯತ್ನ ಗಳ ಹೊರತಾಗಿಯೂ ಆನ್ ಲೈನ್ ಶಿಕ್ಷಣದ ಫಲಿತವನ್ನು ಶಿಕ್ಷಕರು ಹಾಗೂ ಪೋಷಕರ ನಡುವೆ ನಡೆಸಿದ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಅಧ್ಯಯನವು ಸಮಗ್ರವಾಗಿ ಅನಾವರಣಗೊಳಿಸಿದೆ.  ಶೇಕಡಾ 80 ರಷ್ಟು ಮಂದಿ ಆನ್‌ಲೈನ್ ಪಾಠದಲ್ಲಿ ಭಾವನಾತ್ಮಕ ಸಂಪರ್ಕ ಸಾಧ್ಯವೇ ಇಲ್ಲ ಎಂದರೆ ಶೇಕಡಾ 90 ರಷ್ಟು ಮಂದಿ ಅರ್ಥಪೂರ್ಣ ಮೌಲ್ಯ ಮಾಪನಕ್ಕೆ ಅವಕಾಶವೇ ಇಲ್ಲ ಎಂದು ಹೇಳಿರುವುದನ್ನು ಸಮೀಕ್ಷೆ ಸಾದರಪಡಿಸಿದೆ. ಜೊತೆಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಇಲ್ಲದ್ದರಿಂದಾಗಿ ಮಕ್ಕಳ ಪೋಷಣೆ ಮೇಲೆ ಉಂಟಾಗಿರುವ ಪರಿಣಾಮದ ಕರುಣಾಜನಕ ಸ್ಥಿತಿಯನ್ನು ಸಹ ಎತ್ತಿ ತೋರಿದೆ. ಈ ಪರಿಸ್ಥಿತಿಯು ಮಕ್ಕಳ ಸಾಗಾಣಿಕೆ, ಬಾಲಕಾರ್ಮಿಕ, ಸಣ್ಣ ಪುಟ್ಟ ಅಪರಾಧಗಳು ಮುಂತಾದುವುಗಳಲ್ಲಿ ಗಮನಾರ್ಹವಾದ ಏರಿಕೆಯಂತಹ ಅಸಂಖ್ಯಾತ ಸಮಸ್ಯೆಗಳನ್ನು ಉಂಟುಮಾಡಿದೆ.

ಈ ಅವಧಿಯಲ್ಲಿ ಕೇಂದ್ರ ಸರ್ಕಾರವು ಒಬಿಸಿ ವರ್ಗಗಳಿಗೆ  ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ, ಅದರಲ್ಲೂ ವಿಶೇಷವಾಗಿ ಮೆಡಿಕಲ್ ಶಿಕ್ಷಣ ಸಂಸ್ಥೆಗಳ ಪ್ರವೇಶಾತಿ ಯಲ್ಲಿ, ಮೀಸಲಾತಿ ಪ್ರಕ್ರಿಯೆ ಯಿಂದ ವಂಚಿಸುವ ಪ್ರಯತ್ನಗಳನ್ನು ನಡೆಸಿದೆ.

ಉನ್ನತ ಶಿಕ್ಷಣದಲ್ಲೂ ಸಹ, ಹಾಸ್ಟೆಲ್ ಹಾಗೂ ಇನ್ನಿತರ ಸೌಕರ್ಯಗಳು ಮುಚ್ಚಿದ್ದರಿಂದ ದೊಡ್ಡ ಸಮಸ್ಯೆಗಳು ಉದ್ಬವಿಸಿವೆ. ವಿದ್ಯಾರ್ಥಿ ವೇತನ ಪಾವತಿ, ಉತ್ತೀರ್ಣಕ್ಕೆ ವಿದ್ಯಾರ್ಥಿಗಳ ಮೌಲ್ಯಮಾಪನ ಹಾಗೂ ಪ್ರವೇಶವು ಸಹ ದೊಡ್ಡ ಸಮಸ್ಯೆಯಾಗಿ ಪರಿಣಿಮಿಸಿದ್ದು ವಿದ್ಯಾರ್ಥಿಗಳ ಹಾಗೂ ಪೋಷಕರ ಆತಂಕವನ್ನು ನಿವಾರಿಸುವಂತಹ ಸೂಕ್ಷ್ಮತೆಯಾಗಲಿ ಹಾಗೂ ವಿವೇಚನೆಯಾಗಲಿ ಸ್ವಲ್ಪವೂ ಇರಲಿಲ್ಲ. ಒಟ್ಟಾರೆಯಾಗಿ ನಮ್ಮ ಮಾನವ ಸಂಪನ್ಮೂಲ ಸರಿ ಸುಮಾರು ಸಂಪೂರ್ಣವಾಗಿ ಸವೆಯಲ್ಪಟ್ಟಿತ್ತು ಅಂದರೆ ನಮ್ಮ ಪ್ರಜಾಸತ್ತಾತ್ಮಕ ಪ್ರಯೋಜನವನ್ನು ವ್ಯರ್ಥಗೊಳಿಸಲಾಗಿದೆ.  ಈ ಇದೇ ಅವಧಿಯಲ್ಲಿನ ನಿರುದ್ಯೋಗದ  ತಡೆಯಿಲ್ಲದೆ ಬೆಳವಣಿಗೆಯಿಂದಾಗಿ ನಮ್ಮ ಯುವಜನತೆ ತೀವ್ರವಾದ ಬಾಧೆಗೆ ಒಳಗಾಯಿತು.  ಅದ್ದರಿಂದಲೇ ಉಚಿತ ಡಬಲ್ ಡೋಸ್ ಲಸಿಕೆ ಮೂಲಕ ಎಲ್ಲಾ ಸಿಬ್ಬಂದಿ, ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಗೆ ಸಂಪೂರ್ಣ ರಕ್ಷಣೆ ಒದಗಿಸಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಬಿಸುವುದು ಈ ತಕ್ಷಣದ ದಾರಿಯಾಗಿದೆ.

ಒಬಿಸಿ ಮೀಸಲಾತಿ

ಒಬಿಸಿ ಮೀಸಲಾತಿ ಗೆ ಸಂಬಂಧಿಸಿ ಮೋದಿ ಸರ್ಕಾರದ ಭಂಡ ಹಾಗೂ ಪಕ್ಷಪಾತ ಧೋರಣೆಯನ್ನು, ಮೀಸಲಾತಿಗಾಗಿ ಒಬಿಸಿ ಗಳನ್ನು ಗುರುತಿಸುವ ಹಕ್ಕುಗಳನ್ನು ರಾಜ್ಯಗಳಿಂದ ಕಿತ್ತುಕೊಂಡ ರೀತಿಯಲ್ಲಿ ಕಾಣಬಹುದು. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಂವಿಧಾನಾತ್ಮಕ ಮನ್ನಣೆ  ಒದಗಿಸಲು ಮೋದಿ ಸರ್ಕಾರವು ಸಂವಿಧಾನ ತಿದ್ದುಪಡಿ (102ನೇ) ಯನ್ನು ತಂದಿತು. ಈ ತಿದ್ದುಪಡಿ ಮೂಲಕ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಎಂದು ವರ್ಗಗಳನ್ನು ನೋಟಿಪೈ ಮಾಡುವ ಅಧಿಕಾರ ರಾಷ್ಟ್ರ ಪತಿಗಳ ವ್ಯಾಪ್ತಿಗೆ ಬಂತು. ಆ ಸಂದರ್ಭದಲ್ಲೇ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಸದಸ್ಯರು ಮೀಸಲಾತಿ ಉದ್ದೇಶಕ್ಕಾಗಿ ಒಬಿಸಿ ಗಳನ್ನು ಗುರುತಿಸುವ ರಾಜ್ಯಗಳ ಹಕ್ಕುಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಅಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲಿಯ ತನಕ ಕೇಂದ್ರ ಪಟ್ಟಿ ಗೆ ಸಂಬಂಧಿಸಿ ಕೇಂದ್ರ ಸರ್ಕಾರ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಒಬಿಸಿಗಳನ್ನು ಗುರುತಿಸಿಕೊಂಡರೆ ರಾಜ್ಯ ಪಟ್ಟಿಗೆ ಸಂಬಂಧಿಸಿದ ಉದ್ಯೋಗಗಳಿಗೆ ರಾಜ್ಯ ಹಿಂದುಳಿದ ವರ್ಗಗಳ ಕಮಿಶನ್ ಮೂಲಕ ಒಬಿಸಿಗಳನ್ನು ಗುರುತಿಸಿಕೊಳ್ಳಲಾಗುತ್ತಿತ್ತು. ಈ ತಿದ್ದುಪಡಿ ಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದು ಈ ವರ್ಷದ ಮೇ ನಲ್ಲಿ ಈ ತಿದ್ದುಪಡಿ ಯು ರಾಷ್ಟ್ರಪತಿಗೆ ಮಾತ್ರ ಅಧಿಕಾರ ನೀಡಿದೆ ಎಂದು ವ್ಯಾಖ್ಯಾನಿಸಿತು ಅಂದರೆ ಒಬಿಸಿ ಯಾರು ಎಂಬುದನ್ನು  ನೋಟಿಪೈ ಮಾಡುವ ಅಧಿಕಾರ ಕೇಂದ್ರ ಸರ್ಕಾರದ್ದು . ಈ ತಿದ್ದುಪಡಿಯಿಂದ ರಾಜ್ಯಗಳು ಈ ಅಧಿಕಾರ ಕಳೆದುಕೊಂಡಿವೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಹೇಳಿತ್ತು.

ತಮ್ಮ ರಾಜ್ಯಗಳಲ್ಲಿ ಒಬಿಸಿಗಳು ಯಾರು ಎಂಬುದನ್ನು ನಿರ್ದರಿಸುವ ರಾಜ್ಯಗಳ ಹಕ್ಕಿನ ಮೇಲೆ ಇದು ಒಂದು ಗಂಭೀರ ಆಕ್ರಮಣ ವಾಗಿ ಪರಿಣಮಿಸಿತು. ಈ ತೊಂದರೆಯನ್ನು ಸರಿಪಡಿಸುವ ಏಕಮಾತ್ರ ದಾರಿಯೆಂದರೆ ಸಂವಿಧಾನವನ್ನು ಮತ್ತ ತಿದ್ದುಪಡಿ ಮಾಡುವುದು. ಅಂತಿಮವಾಗಿ ಮಳೆಗಾಲದ ಅಧಿವೇಶನದ ಕೊನೆಯಲ್ಲಿ ಸರ್ಕಾರವು  ರಾಜ್ಯಗಳ ಹಕ್ಕನ್ನು ಮರು ಸ್ಥಾಪಿಸುವ ಸಂವಿಧಾನ ತಿದ್ದುಪಡಿ ಯನ್ನು ತಂದಿತು.

ಒತ್ತಡ ಹೇರಿದ್ದರಿಂದಾಗಿ ಇತ್ತೀಚೆಗೆ ಸ್ನಾತಕ ಹಾಗೂ ಸ್ನಾತಕೋತ್ತರ ಮೆಡಿಕಲ್ ಸೀಟುಗಳ ಅಖಿಲ ಭಾರತ ಕೋಟಾ ದಲ್ಲಿ ಶೇಕಡಾ 27ರಷ್ಟು ಒಬಿಸಿ ಮೀಸಲಾತಿ ಯನ್ನು ಪ್ರಕಟಿಸಿತು. ಅಖಿಲ ಭಾರತ ಕೋಟಾದಲ್ಲಿ ಒಬಿಸಿ ಮೀಸಲಾತಿಯನ್ನು ಜಾರಿ ಮಾಡಲು ಮೋದಿ ಸರ್ಕಾರ ನಿರಾಕರಿಸಿತ್ತು. ಮದ್ರಾಸ್ ಹೈ ಕೋರ್ಟ್ ಆದೇಶ ಹಾಗೂ ಈ ಸಂಬಂದ ನ್ಯಾಯಾಂಗ ನಿಂದನೆ ನೋಟಿಸ್ಸಿನ ಒತ್ತಡದಿಂದಾಗಿಯೇ  ಮೀಸಲಾತಿ ಘೋಷಣೆಯಾಯಿತು.

ಪೆಗಾಸಸ್ ಗೂಢಾಚಾರ ತಂತ್ರಾಂಶ ಉಪಯೋಗಿಸಿ ಬಿಜೆಪಿ ಸರ್ಕಾರದ ಕಣ್ಗಾವಲು

ಸೈಬರ್ ಕಣ್ಗಾವಲಿನಲ್ಲಿ ಜಾಗತಿಕ ದೈತ್ಯನಾಗಿರುವ ಇಸ್ರೇಲಿ ಸಂಸ್ಥೆ ಎನ್.ಎಸ್.ಒ.ದಿಂದ ಪೆಗಾಸಸ್ ಸ್ಪೈವೇರ್(ಗೂಢಾಚಾರ ತಂತ್ರಾಂಶ) ಅನ್ನು ಭಾರತ ಸರ್ಕಾರ ಖರೀದಿಸಿರುವ ತುಂಬಾ ಅಪಾಯಕಾರಿ ಮಾಹಿತಿ ಹೊರ ಬಂತು.  ತಾನು ‘ಮಾನ್ಯತೆ ಪಡೆದ ಸರ್ಕಾರಗಳ’ ಜೊತೆ ಮಾತ್ರ ವ್ಯವಹರಿಸಿರುವುದಾಗಿ ಎನ್‌ಎಸ್‌ಒ ನಿರ್ದಿಷ್ಟವಾಗಿ ಸ್ಪಷ್ಟಪಡಿಸಿದೆ. ದೊಡ್ಡ ಸಂಖ್ಯೆಯ ಜನ  ಮಾನವ ಹಕ್ಕುಗಳ ಕಾರ್ಯಕರ್ತರನ್ನು ಗುರಿಪಡಿಸಿ ಕಣ್ಗಾವಲಿಗೆ ಅವರ ಸ್ಮಾರ್ಟ್ ಪೋನ್ ಗಳನ್ನು ಹ್ಯಾಕಿಂಗ್ ಮಾಡಲಾಗಿದೆ ಎಂಬುದನ್ನು ಈ ತನಿಖೆ ಅನಾವರಣಗೊಳಿಸಿದೆ. ಜಾಗತಿಕವಾಗಿ 50 ಸಾವಿರ ಕ್ಕೂ ಹೆಚ್ಚು ಪ್ರಕರಣಗಳು ತನ್ನ ನಾಗರಿಕರ ಮೇಲೆ ಕಣ್ಗಾವಲು ಇರಿಸಿರುವ ದೇಶಗಳೆಂದು ತಿಳಿದಿರುವ ಹಾಗೂ ಎನ್.ಎಸ್.ಒ ತನ್ನ ಗ್ರಾಹಕರೆಂದು ಒಪ್ಪಿಕೊಂಡಿರುವ ದೇಶಗಳಲ್ಲೇ ಕಂಡು ಬಂದಿದೆ.  ಹೀಗೆ ತಿಳಿಸಲಾದ ರುವಾಂಡ, ಮೊರೊಕ್ಕೊ, ಸೌದಿ ಅರೇಬಿಯಾ, ಯುಎಇ, ಮೆಕ್ಸಿಕೊ ಇತ್ಯಾದಿ ದೇಶಗಳ ಪಟ್ಟಿಯಲ್ಲೇ ಭಾರತವನ್ನು ಹೆಸರಿಸಲಾಗಿದೆ.

“ಭಾರತದಲ್ಲಿ ನೂರಾರು ಪತ್ರಕರ್ತರ, ಸಾಮಾಜಿಕ ಕಾರ್ಯಕರ್ತರ, ವಿರೋಧ ಪಕ್ಷಗಳ ರಾಜಕಾರಣಿಗಳ, ಸರ್ಕಾರಿ ಅಧಿಕಾರಿಗಳ ಹಾಗೂ ಉದ್ಯಮ ನಿರ್ವಾಹಕ ಅಧಿಕಾರಿಗಳ ಪೋನ್ ಗಳು ಈ ಪಟ್ಟಿಯಲ್ಲಿರುವ ಸೇರಿದ್ದು ಇವರೆಲ್ಲರೂ ಗೂಢಚರ್ಯೆಗೆ ಒಳಗಾದ ಪಟ್ಟಿಯಲ್ಲಿದ್ದಾರೆ” ಎಂದು ವರದಿ ಹೇಳುತ್ತದೆ. ಈ ಗೂಢಚಾರ ತಂತ್ರಾಂಶ(ಸಾಫ್ಟ್‌ವೇರ್) ಪೆಗಾಸಸ್ ಕಣ್ಗಾವಲಿಗೆ ಒಳಗಾದವರೆಂದು ಭಾರತೀಯ ಮಾಧ್ಯಮಗಳಲ್ಲೇ ಕಡೇ ಪಕ್ಷ 40 ಪತ್ರಕರ್ತರ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ.

ಮೋದಿ ಸರ್ಕಾರದ ಪ್ರತಿಕ್ರಿಯೆಯಲ್ಲಿ ‘ಎನ್.ಎಸ್.ಒ. ಸೇವೆ ಪಡೆದಿಲ್ಲ’ ಎಂದು ಸ್ಪಷ್ಟವಾಗಿ ನಿರಾಕರಿಸಿಲ್ಲ.  ‘ಯಾವುದೇ ‘ ಅನಧಿಕೃತ ಕಣ್ಗಾವಲು ನಡೆಸಿಲ್ಲ’ ಎಂದು ಮಾತ್ರ ಸಮರ್ಥಿಸಿಕೊಳ್ಳುತ್ತಿದೆ.

ಈ ಅನಾವರಣಗಳಿಂದಾಗಿ, ಸರ್ಕಾರವು ತನ್ನ ಸ್ವಂತ ನಾಗರಿಕರ ವಿರುದ್ಧ ಇಂತಹ ಕಣ್ಗಾವಲು ನಡೆಸಲು ಎನ್.ಎಸ್.ಒ ಜೊತೆ ವ್ಯವಹರಿಸಿದೆ ಎಂಬುದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರವು ಎನ್.ಎಸ್.ಒ. ಜೊತೆಗಿನ ವ್ಯವಹಾರದ ಸ್ವರೂಪ ಏನು , ಷರತ್ತುಗಳೇನು ಹಾಗೂ ಸಾರ್ವಜನಿಕ ಹಣವನ್ನು ಎಷ್ಟು ಪಾವತಿಸಲಾಗಿದೆ ಎಂಬ ವಿಷಯಗಳಲ್ಲಿ ಕೇಂದ್ರ ಸರ್ಕಾರ ತಾನು ತಪ್ಪಿತಸ್ಥನಲ್ಲ ಎಂಬುದನ್ನು ಸಾಬೀತು ಮಾಡಬೇಕಿದೆ.

ಮಾನವ ಹಕ್ಕುಗಳ ಕಾರ್ಯಕರ್ತರ  ಸ್ಮಾರ್ಟ್ ಪೋನ್ ಗಳು ಹಾಗೂ ಕಂಪ್ಯೂಟರ್ ಗಳು ಹ್ಯಾಕಿಂಗ್ ಗೆ ಒಳಗಾಗಿದ್ದ ಈ ಮೊದಲಿನ ಪ್ರಕರಣಗಳು ಬಯಲಾಗಿದೆ. ಅಂತರಾಷ್ಟ್ರೀಯ ಏಜೆನ್ಸಿಗಳ ವಿದಿ ವಿಜ್ಞಾನ ಪರೀಕ್ಷೆಯಲ್ಲಿ ಗೊತ್ತಾದಂತೆ  ಬಂಧಿಖಾನೆಗೆ ತಳ್ಳಲ್ಪಟ್ಟಿರುವ ಭೀಮಾ ಕೊರೆಗಾಂವ್  ಕೇಸಿನ ಇಬ್ಬರು ಆರೋಪಿಗಳ ಉಪಕರಣಗಳಿಗೆ  ಫೈಲುಗಳನ್ನು ಡಿಜಿಟಲ್ ರೂಪದಲ್ಲಿ ಸೇರ್ಪಡೆ ಮಾಡಲಾಗಿತ್ತು.  ನಂತರ ಅವರನ್ನು ಕರಾಳ ಕಾನೂನಿನ ಅಡಿಯಲ್ಲಿ ಬಂಧಿಸಲು ಇದನ್ನು ಬಳಸಿಕೊಳ್ಳಲಾಗಿತ್ತು.

ರಾಜಕೀಯ ನಾಯಕರಿಂದ ಹಿಡಿದು, ಪತ್ರಕರ್ತರು, ನ್ಯಾಯಾಂಗದ ಅಧಿಕಾರಿಗಳು,ಮಾಜಿ ಸಿಬಿಐ ಮುಖ್ಯಸ್ಥರು, ಮಾಜಿ ಚುನಾವಣಾ ಆಯುಕ್ತರು ಇತ್ಯಾದಿಗಳ ತನಕ ಭಾರತೀಯ ನಾಗರಿಕರ ಮೇಲೆ ಕಣ್ಗಾವಲು ಇಡಲು ಪೆಗಾಸಸಸ್ ಸೈಬರ್ ಸಾಫ್ಟ್‌ವೇರ್ ಬಳಸಿರುವ ಸಂಬಂದ ಬಿಜೆಪಿ ಕೇಂದ್ರ ಸರ್ಕಾರ ಉತ್ತರಿಸಬೇಕು ಹಾಗೂ ತಪ್ಪಿತಸ್ಥ ಅಲ್ಲ ಎಂದು ಸಾಬೀತು ಪಡಿಸಬೇಕು . ಇದೊಂದು ಅನಿಷ್ಟ. ಈ ಆಕ್ರಮಣವು  ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆ ಮಾತ್ರವೇ ಅಲ್ಲದೇ ಪ್ರಜಾಪ್ರಭುತ್ವ ವನ್ನು ಸಂರಕ್ಷಿಸುವ ಸಲುವಾಗಿ ಸಮತೋಲನ ಕಾಯ್ದುಕೊಳ್ಳುವ ಪ್ರಮುಖ ಸಂಸ್ಥೆಗಳು ಹಾಗೂ ಇವುಗಳು‌ ನಿರ್ವಹಿಸುವ  ಸಂವಿಧಾನಿಕ ಕರ್ತವ್ಯಗಳ ಮೇಲಿನ ದಾಳಿಯೂ ಆಗಿದೆ.ಈ ಸ್ಪೈವೇರ್ ಬಳಕೆಯು ಪ್ರಜಾಪ್ರಭುತ್ವ ಹಾಗೂ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಿರ್ನಾಮಗೊಳಿಸುವುದಕ್ಕೆ ಸರಿಸಮನಾದ್ದಾಗಿದೆ.

ಈ ವಿಷಯ ಕುರಿತು ಸತ್ಯ ತಿಳಿಸಲು ಹಾಗೂ ತಪ್ಪಿತಸ್ಥರನ್ನು ಶಿಕ್ಷಿಸಲು‌ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ಈ ತಕ್ಷಣವೇ ಉನ್ನತ ಮಟ್ಟದ ನ್ಯಾಯಾಂಗ ವಿಚಾರಣೆ‌ ನಡೆಸಬೇಕಿದೆ.

ರಪೇಲ್ ಹಗರಣ:

36 ರಪೇಲ್ ಜೆಟ್ ವಿಮಾನಗಳ ಖರೀದಿಯಲ್ಲಿ ‘ಮಧ್ಯವರ್ತಿ’ಗೆ ಹತ್ತು ಲಕ್ಷ  ಯೂರೋಗಳನ್ನು ಪಾವತಿಸಲಾಗಿದೆ ಎಂಬ ಪ್ರೆಂಚ್ ಮಾಧ್ಯಮ ಪೊರ್ಟಲ್ ನ ವರದಿಯು ಮತ್ತೊಮ್ಮೆ ರಪೇಲ್ ವ್ಯವಹಾರದಲ್ಲಿನ ಲಂಚ ಮತ್ತು ಇನ್ನಿತರ ಕಾನೂನು ಬಾಹಿರ ಪಾವತಿಗಳ ಕುರಿತ ಪ್ರಶ್ನೆಗಳಿಗೆ ಕಾರಣವಾಗಿದೆ. ಈ ವರದಿಯು ಡೆಸಲ್ಟ್ ಕಂಪನಿಯ 2017 ರ ಲೆಕ್ಕಪತ್ರ ವಿಶ್ಲೇಷಣೆಯನ್ನು ಆಧರಿಸಿದೆ.

ತರುವಾಯ, ಮೋದಿ ಸರ್ಕಾರದ ಜೊತೆ 2016 ರಲ್ಲಿ ಮಾಡಿಕೊಂಡಿದ್ದ ರಪೇಲ್ ಯುದ್ಧ ವಿಮಾನ ಬಹುಕೋಟಿ ಡಾಲರ್ ಗಳ ವ್ಯವಹಾರದ ಕುರಿತು ಪ್ರೆಂಚ್ ನ್ಯಾಯಾಧೀಶರ ಮೂಲಕ ತನಿಖೆಗೆ ಪ್ರೆಂಚ್ ಸಾರ್ವಜನಿಕ ಪ್ರಾಸಿಕ್ಯೂಸನ್ (PNF) ಆದೇಶಿಸಿತು. PNF ನ ಹಣಕಾಸು ಶಾಖೆಯ ನಿರ್ಧಾರದ ಮೂಲಕ ಜೂನ್ 14 ರಂದು ಎರಡು ಸರಕಾರಗಳ ನಡುವಿನ ಒಪ್ಪಂದದ ಕುರಿತು ನ್ಯಾಯಾಂಗ ತನಿಖೆ ಅಧಿಕೃತವಾಗಿ ಪ್ರಾರಂಭವಾಯಿತು. ಪ್ರೆಂಚ್ ತನಿಖಾ ವೆಬ್ ಸೈಟ್ ಬಹಿರಂಗಪಡಿಸಿರುವ ಅಧಿಕೃತ ದಾಖಲೆಗಳು, ರಪೇಲ್ ತಯಾರಿಕಾ ಡಸಲ್ಟ್ ಎವಿಯೇಷನ್ ಹಾಗೂ ಅನಿಲ್ ಅಂಬಾನಿ ಯ ರಿಲಯನ್ಸ್ ಗ್ರೂಪ್ ನಡುವೆ ಒಪ್ಪಂದವು ಮಾರ್ಚ್ 26, 2015 ರಂದು ಏರ್ಪಟ್ಟಿರುವುದನ್ನು ತೋರಿಸಿದೆ. ಅಂದರೆ ಪ್ರಧಾನ ಮಂತ್ರಿ ಮೋದಿ ರವರು HAL ಅನ್ನು ಹೊರಗಿಟ್ಟು  ಹೊಸ ಒಪ್ಪಂದ ಘೋಷಿಸಿದ 15 ದಿನಗಳ ಮೊದಲೇ ಈ ಒಪ್ಪಂದ ಏರ್ಪಟ್ಟಿದೆ!

ಪ್ರಧಾನ ಮಂತ್ರಿ ಮೋದಿರವರು ಈ ಹಿಂದಿನ ಖರೀದಿ ಒಪ್ಪಂದ ಕ್ಕೆ ಬೆನ್ನು ತೋರಿದ್ದರ ಹಿಂದೆ ಭಾರೀ ಭ್ರಷ್ಟಾಚಾರ ಹಾಗೂ ಕಪ್ಪು ಹಣವನ್ನು ಬಿಳಿ ಮಾಡುವ ಸಂಚು ಅಡಗಿದೆ ಎಂದು ಪಕ್ಷ ವ್ಯಕ್ತಪಡಿಸಿದ್ದ ಆತಂಕವನ್ನು ಇದು ಪುನರ್ ಖಾತರಿಪಡಿಸಿದೆ.

ರಪೇಲ್ ವ್ಯವಹಾರದ ತನಿಖೆ ಕುರಿತ ಮೋದಿ ಸರ್ಕಾರದ ಹಠಮಾರಿ ನಿರಾಕರಣೆಯು ಈ ವಿಷಯದಲ್ಲಿ ಏನನ್ನೋ ಮುಚ್ಚಿಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಹಾಗಾಗಿಯೇ ಕಾನೂನು ಬಾಹಿರ ಪಾವತಿಗಳ ಕುರಿತು ಸಿ ಎಜಿ ಲೆಕ್ಕ ಪರಿಶೋಧನೆ ವರದಿ ಗಮನಹರಿಸಿಲ್ಲ.

ಹಿಂದಿನ ಒಪ್ಪಂದ ರದ್ದುಗೊಳಿಸಿ ದುಬಾರಿ ವೆಚ್ಚಕ್ಕೆ 36 ವಿಮಾನಗಳನ್ನು ಖರೀದಿಸುವ ಹೊಸ ಒಪ್ಪಂದದ ಇಡೀ ವ್ಯವಹಾರವನ್ನೇ ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕಾಗಿದೆ.

ಅಸ್ಸಾಂ-ಮೀಜೋರಾಂ ಸಂಘರ್ಷ :

ಎನ್.ಡಿ.ಎ ಸರ್ಕಾರಗಳೇ ಇರುವ ಎರಡು ನೆರೆ ರಾಜ್ಯಗಳಾದ ಅಸ್ಸಾಂ ಹಾಗೂ ಮೀಜೋರಾಂ ಗಳು ಸಶಸ್ತ್ರ ಘರ್ಷಣೆ ಹಾಗೂ ಸಂಘರ್ಷ ದಲ್ಲಿ ತೊಡಗಿರುವುದು ಹಿಂದೆಂದೂ ಕಂಡಿರದ ಆತಂಕಕಾರಿ ವಿದ್ಯಮಾನವಾಗಿದೆ. ಇದು ಕೇಂದ್ರ ಸರ್ಕಾರ ಹಾಗೂ ಗೃಹ ಮಂತ್ರಾಲಯದ ಸಂಪೂರ್ಣ ವೈಪಲ್ಯ ದುರಂತ ಅಂದರೆ ಕೇಂದ್ರ ಗೃಹ ಮಂತ್ರಿಗಳು ತಾನು ಕರೆದಿದ್ದ ಈಶಾನ್ಯ ರಾಜ್ಯಗಳ ಹಾಗೂ ಈ ಅಧಿಕಾರಿಗಳ ಸಭೆಗೆ ಹಾಜರಾಗಿದ್ದ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿರುವಂತಹದ್ದು. ಎರಡೂ ರಾಜ್ಯ ಸರ್ಕಾರಗಳ ಜೊತೆ ಕೇಂದ್ರ ಸರ್ಕಾರ ಮಾತಾಡಿದ್ದರಿಂದ ಉದ್ವಿಗ್ನತೆ ಕಡಿಮೆಯಾಗಿರುವಂತೆ ಕಾಣುತ್ತಿದ್ದರೂ, ಆಳದಲ್ಲಿ ಉದ್ವಿಗ್ನತೆ ಇನ್ನೂ ಇದೆ. ಈಶಾನ್ಯ ಪ್ರದೇಶದ ಶಾಂತಿ ಹಾಗೂ ನೆಮ್ಮದಿ ಖಾತ್ರಿಪಡಿಸಲು ಪರಿಣಾಮಕಾರಿ ಪ್ರಯತ್ನಗಳನ್ನು ನಡೆಸಬೇಕಿದೆ.

ಬೆಳೆಯುತ್ತಿರುವ ಹೋರಾಟಗಳು:

ಕಾರ್ಮಿಕ ಸಂಘಟನೆಗಳ, ರೈತ ಹಾಗೂ ಕೃಷಿ ಕೂಲಿಕಾರರ ಸಂಘಟನೆಗಳ ಐಕ್ಯತೆ ಬೆಳೆಯುತ್ತಿದೆ: ರೈತರ ಹೋರಾಟಗಳಿಗೆ ಬೆಂಬಲ ಹಾಗೂ ಸೌಹಾರ್ಧತೆಯನ್ನು ಅಣಿ ನೆರೆಸುವ ಹಾಗೂ ಕಾರ್ಮಿಕ, ರೈತ ,ಕೂಲಿಕಾರ ವಿಭಾಗಗಳ ಸಾಮಾನ್ಯ ಬೇಡಿಕೆಗಳ ಮೇಲೆ ನಡೆದ ಜಂಟಿ ಚಳುವಳಿಗಳಲ್ಲಿ ಕಾರ್ಮಿಕ ಸಂಘಗಳ, ರೈತ ಹಾಗೂ ಕೃಷಿ ಕೂಲಿಕಾರರ ಸಂಘಟನೆಗಳ ಐಕ್ಯತೆ ಬಲಗೊಂಡಿರುವುದು ಈ ಅವಧಿಯ ಮುಖ್ಯಾಂಶವಾಗಿದೆ.

ತಮ್ಮ ಹಕ್ಕುಗಳ ರಕ್ಷಣೆ ಮತ್ತು ದೇಶದ ಸಾರ್ವಭೌಮತ್ವ ಹಾಗೂ ರಾಷ್ಟ್ರೀಯ ಆಸ್ತಿಗಳನ್ನು ಸಂರಕ್ಷಿಸಲು ನಮ್ಮ ದೇಶದ ಮೂಲಭೂತ ದುಡಿಯುವ ಜನರ ಐಕ್ಯತೆ ಬಲಗೊಳ್ಳುತ್ತಿರುವುದು ಒಂದು ಐತಿಹಾಸಿಕ ಹೆಜ್ಜೆಯಾಗಿದೆ.ಈ ಪ್ರಕ್ರಿಯೆಯನ್ನು ಮತ್ತಷ್ಟು ಬಲಗೊಳಿಸಿ ಕ್ರೋಢೀಕರಿಸಿಕೊಳ್ಳಬೇಕಿದೆ.

ಐತಿಹಾಸಿಕ ರೈತ ಹೋರಾಟ: ಕೃಷಿ ಕಾನೂನುಗಳ ರದ್ದತಿ , C2+50% ಕನಿಷ್ಠ ಬೆಂಬಲ ಬೆಲೆ ಗೆ ಶಾಸನದ ರಕ್ಷಣೆ ಗೆ ಆಗ್ರಹಿಸಿ ಕಳೆದ ಎಂಟು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ರೈತರ ಹೋರಾಟ ಮುಂದುವರೆದಿದೆ. ಸಿಂಗು, ಟಿಕ್ರಿ, ಗಾಝಿಪುರ್ ,ಶಹಜಾನ್ ಪುರ್, ಪಲ್ವಾಲ್ ಮತ್ತು ಮೆವತ್ ನಂತಹ ಗಡಿಗಳಲ್ಲಿ ಸಹಸ್ರಾರು ರೈತರು ರಾಜಧಾನಿಗೆ ಮುತ್ತಿಗೆ ಹಾಕಿ ಕುಳಿತಿದ್ದಾರೆ. ಹರ್ಯಾಣ ದ ಬಿಜೆಪಿ-ಜೆಜೆಪಿ ರಾಜ್ಯ ಸರ್ಕಾರದ ಹಾಗೂ ಬಿಜೆಪಿ ಕೇಂದ್ರ ಸರ್ಕಾರದಿಂದ ಸಹ ತೀವ್ರ ದಮನ ಎದುರಿಸಿ ರೈತರ ಹೋರಾಟ ಆರಂಭಗೊಂಡಿತ್ತು. ಹಲವು ತಿಂಗಳಿಂದ ತಡೆಯಿಲ್ಲದೆ ಹರ್ಯಾಣದಲ್ಲಿ ಬಿಜೆಪಿ-ಜೆಜೆಪಿ ಮಂತ್ರಿಗಳಿಗೆ, ಎಂಪಿ, ಎಂಎಲ್‌ಎಗಳಿಗೆ ಹಾಗೂ ನಾಯಕರುಗಳಿಗೆ ಮತ್ತು ಪಂಜಾಬಿನಲ್ಲಿ ಬಿಜೆಪಿ ನಾಯಕರುಗಳಿಗೆ ಸಾಮಾಜಿಕ ಬಹಿಷ್ಕಾರ ಮುಂದುವರೆದಿದೆ.

ಗಣರಾಜ್ಯೋತ್ಸವ ದ ದಿನದಂದು ಲಕ್ಷಾಂತರ ರೈತರು ನಡೆಸಿದ ಶಾಂತಿಯುತ ಒಂದು ಲಕ್ಷ ಟ್ರಾಕ್ಟರ್ ಗಳ ಅಗಾಧ ರ್ಯಾಲಿಗೆ ಬಿಜೆಪಿ ಸರ್ಕಾರದ ಹಿಡಿಯಷ್ಟು ಗಲಭೆಕೋರ ಏಜೆಂಟರುಗಳು ತೊಡಕುಂಟು ಮಾಡಿದರು. ನಂತರದ ದಿನಗಳಲ್ಲಿ ದೆಹಲಿ ಗಡಿಗಳಲ್ಲಿನ  ರೈತರು ತಮ್ಮ ಮೇಲೆ ನಡೆಸಿದ ದಮನವನ್ನು ಸಮರ್ಥವಾಗಿ ಎದುರಿಸಿದರು. ರಸ್ತೆ ತಡೆಗಳು ,ರೈಲು ತಡೆಗಳು ಹಾಗೂ ಮಹಾ ಪಂಚಾಯತ್ ಗಳನ್ನು ಕೂಡ ಸಂಘಟಿಸಲಾಯಿತು. ಮಾರ್ಚ್ 26 ರಂದು ಭಾರತ್ ಬಂದ್ ಕೂಡ ಆಚರಿಸಲಾಯಿತು. ಜುಲೈ 22 ರಿಂದ ಕಿಸಾನ್ ಸಂಸದ್ ಅನ್ನು ಜಂತರ್ ಮಂತರ್ ನಲ್ಲಿ ಸಂಘಟಿಸುವ ಮೂಲಕ ಪ್ರತಿಭಟಿಸಲಾಗುತ್ತಿದೆ. ಇದು ಈಗಿನ ಸಂಸತ್ ಅಧಿವೇಶನ ಮುಕ್ತಾಯವಾಗುವ ಆಗಸ್ಟ್ 13 ರ ತನಕ ಮುಂದುವರೆಯಲಿದೆ.

ಕಾರ್ಮಿಕ  ವರ್ಗದ ಹೋರಾಟಗಳು

ಅಖಿಲ ಭಾರತ ಮಟ್ಟದಲ್ಲಿ ಹಾಗೂ ಹಲವು ಉದ್ಯಮಗಳ ಕ್ಷೇತ್ರಗಳ ಮಟ್ಟದಲ್ಲಿ ಕೂಡ ದೊಡ್ಡ ಹೋರಾಟಗಳು ನಡೆಯುತ್ತಿವೆ. ವೇತನ ಒಪ್ಪಂದಕ್ಕೆ ಆಗ್ರಹಿಸಿ ಉಕ್ಕು ಕಾರ್ಮಿಕರು ಜಂಟಿ ಮುಷ್ಕರವನ್ನು ನಡೆಸಿದ್ದಾರೆ.  ಖಾಸಗೀಕರಣದ ವಿರುದ್ಧ ವಿಶಾಖಪಟ್ಟಣ ಉಕ್ಕು ಘಟಕದ ಕಾರ್ಮಿಕರ ಹೋರಾಟ ನಡೆಯುತ್ತಿದೆ. ಅಂಗನವಾಡಿ ಹಾಗೂ ಆಶಾ ಕಾರ್ಮಿಕರು ವೇತನ ಹೆಚ್ಛಳದ ಬೇಡಿಕೆಗಳು ಹಾಗೂ ಕೋವಿಡ್ ಕರ್ತವ್ಯಕ್ಕೆ ಸಂಬಂಧಿಸಿದ  ಬೇಡಿಕೆಗಳನ್ನು ಇಟ್ಟುಕೊಂಡು ಈ ಅವಧಿಯಲ್ಲಿ ಹೋರಾಟ ನಡೆಸಿದ್ದಾರೆ.  ವಾಣಿಜ್ಯ ಗಣಿಗಾರಿಕೆ ವಿರುದ್ಧ ಕಲ್ಲಿದ್ದಲು ಕಾರ್ಮಿಕರು ಪ್ರಚಾರಾಂದೋಲನ ನಡೆಸಿದ್ದಾರೆ. ಖಾಸಗೀಕರಣ ಮಾಡುವ ಉದ್ದೇಶದ ಸಾಮಾನ್ಯ ವಿಮೆ ವ್ಯವಹಾರ (ರಾಷ್ಟ್ರೀಕರಣ) ಮಸೂದೆ 2021 ಅನ್ನು ವಿರೋಧಿಸಿ ಆಗಸ್ಟ್ 4, 2021 ರಂದು ಬಹುತೇಕ ಸಂಪೂರ್ಣ ಮುಷ್ಕರ ನಡೆದಿದ್ದು ಸುಮಾರು 66 ಸಾವಿರ ಸಾರ್ವಜನಿಕ ಸಾಮಾನ್ಯ ವಿಮೆ ನೌಕರರು ಹಾಗೂ ಅಧಿಕಾರಿಗಳು ಈ ಸಂಪೂರ್ಣ ಮುಷ್ಕರದಲ್ಲಿ  ಭಾಗವಹಿಸಿದ್ದಾರೆ. ವಿದ್ಯುತ್ ಶಕ್ತಿ ವಿತರಣಾ ಜಾಲವನ್ನು ಖಾಸಗೀಕರಿಸುವ ಉದ್ದೇಶದ ವಿದ್ಯುತ್ ಶಕ್ತಿ ತಿದ್ದುಪಡಿ ಮಸೂದೆ 2021 ಅನ್ನು ವಿರೋಧಿಸಿ ಆಗಸ್ಟ್ 10 ರಂದು ವಿದ್ಯುತ್ ನೌಕರರು ಹಾಗೂ ಅಧಿಕಾರಿಗಳು ಮುಷ್ಕರ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ.

ಉದ್ಯೋಗಕ್ಕಾಗಿ ಯುವಜನತೆ

ರೈಲ್ವೆ ಖಾಲಿ ಹುದ್ದೆಗಳ ರದ್ದತಿ ವಿರುದ್ಧ ದೇಶದಾದ್ಯಂತ ಯುವಜನರು ಪ್ರತಿಭಟನೆಗಳನ್ನು ಸಂಘಟಿಸಿದ್ದಾರೆ. ವಿಶೇಷವಾಗಿ ಪಶ್ಚಿಮ ಬಂಗಾಳ, ಕೇರಳ, ತ್ರಿಪುರಾ, ತಮಿಳುನಾಡು, ಒರಿಸ್ಸಾ ,ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂದ್ರಪ್ರದೇಶ ಸೇರಿದಂತೆ ದೇಶದಾದ್ಯಂತ ಯುವಜನ ಸಂಘಟನೆಗಳ ಕಾರ್ಯಕರ್ತರು  ಕೋವಿಡ್ ಪರಿಸ್ಥಿತಿ ಯ ಪರಿಹಾರ ಕಾರ್ಯಾಚರಣೆಯಲ್ಲಿ ಅಪಾರವಾಗಿ ತೊಡಗಿಕೊಂಡಿದ್ದರು.

ಈ ಅವಧಿಯಲ್ಲಿ ಉದ್ಯೋಗ ಅವಕಾಶ ಹಾಗೂ ಗುಣಮಟ್ಟದ ಉದ್ಯೋಗ ಎರಡರ ಲಭ್ಯತೆಯೂ ಬಹಳ ಮುಖ್ಯವಾದ ವಿಷಯವಾಗಿತ್ತು. ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರಲ್ಲೂ ಚಳುವಳಿ ಸಂಘಟಿಸಲು ಘಟಕಗಳನ್ನು ರಚಿಸಲಾಗಿದೆ. ಹಲವಾರು ರಾಜ್ಯಗಳ ಇಂತಹ ಸ್ಥಳೀಯ ಹೋರಾಟಗಳ ಬೆಳವಣಿಗೆ ಮೇಲೆ ಕೋವಿಡ್ ಎರಡನೇ ಅಲೆ ತಡೆ ನೀಡಿದೆ. ಅದಾಗ್ಯೂ ಕೋವಿಡ್ ಪರಿಸ್ಥಿತಿ ಕರಗಿದ ನಂತರ ಈ ಪ್ರಕ್ರಿಯೆ ಯನ್ನು ಪುನಾರಾಂಬಿಸಬೇಕು.

ಸಾರ್ವಜನಿಕ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು

 ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ಅಖಿಲ ಭಾರತ ವೇದಿಕೆ ಅಡಿಯಲ್ಲಿ ವಿವಿಧ ಜಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಮನೋಭಾವದ ವಿದ್ಯಾರ್ಥಿ ಸಂಘಟನೆಗಳು ಒಗ್ಗೂಡಿ ಮಿಶ್ರಿತ ವಿಧಾನ ಶಿಕ್ಷಣ ದ ಯುಜಿಸಿ ಪ್ರಸ್ತಾಪ ವಿರೋಧಿಸಿ ರಾಷ್ಟ್ರಪತಿಗಳಿಗೆ ಇ-ಮೇಲ್ ಪ್ರಚಾರಾಂದೋಲನ ನಡೆಸಿವೆ. ಹೊಸ ಶಿಕ್ಷಣ ನೀತಿ 2020ರ ವಿರುದ್ಧ, ಶಿಕ್ಷಣ ಸಂಸ್ಥೆಗಳನ್ನು ತೆರೆಯುವಂತೆ ಒತ್ತಾಯಿಸುವ ಜಾಗೃತಿ ಆಂದೋಲನವನ್ನು ವಿದ್ಯಾರ್ಥಿಗಳು ಮುಂದುವರೆಸಿದ್ದಾರೆ. ನಿರಂತರ ಪ್ರತಿಭಟನೆಗಳ ಕಾರಣದಿಂದ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಉಲ್ಲಂಘನೆಯ ವಿಷಯಗಳಲ್ಲಿ ಮಧ್ಯಪ್ರವೇಶ ಮಾಡಲು  ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಕುರಿತ ಸಂಸತ್ ಸ್ಥಾಯಿ ಸಮಿತಿ ನಿರ್ಧರಿಸಿದೆ.

ಉಚಿತ ಸಾರ್ವತ್ರಿಕ ಲಸಿಕೆ ಹಾಕುವಂತೆ ಒತ್ತಾಯಿಸಿ ವಿದ್ಯಾರ್ಥಿ ಸಂಘಟನೆ ಸುಪ್ರೀಂ ಕೋರ್ಟ್ ಕದ ತಟ್ಟಿದೆ.ಈ ಅರ್ಜಿ ಹಾಗೂ ಇದೇ ರೀತಿಯ ಇತರೆ ಅರ್ಜಿಗಳನ್ನು ಪರಿಗಣಿಸಿ ಲಸಿಕೆ ಧೋರಣೆಯನ್ನು ಪುನರ್ ಪರಿಶೀಲಿಸುವಂತೆ ಸರ್ಕಾರಕ್ಕೆ  ಕೋರ್ಟ್ ಆದೇಶಿಸಿದ ತರುವಾಯ ಕೇಂದ್ರದ ಸರ್ಕಾರ ಹೊಸ ಅಂಶಿಕ ಉಚಿತ ಲಸಿಕೆ ನೀತಿಯನ್ನು ಪ್ರಕಟಿಸಿತು.

ಹಸಿವಿನ ವಿರುದ್ಧ ಮಹಿಳೆ

ಸರ್ಕಾರ ವಿತರಿಸುವ ಉಚಿತ ಆಹಾರ ಧಾನ್ಯಗಳು ಸಮರ್ಪಕವಾಗಿ ವಿತರಣೆ ಆಗುತ್ತಿಲ್ಲ. ಒಂದಲ್ಲ ಒಂದು ನೆಪ ಹೇಳಿ ದೊಡ್ಡ ಸಂಖ್ಯೆಯ ಫಲಾನುಭವಿಗಳಿಗೆ ವಂಚಿಸಲಾಗುತ್ತಿದೆ. ಆಹಾರ ವಿತರಣೆಯಲ್ಲಿ ಇರುವ  ಭ್ರಷ್ಟಾಚಾರ ವಿರೋಧಿಸಿ ಮಹಿಳೆಯರು ರೇಷನ್ ಅಂಗಡಿ ಮುಂದೆ ಪಿಕೆಟಿಂಗ್ ನಡೆಸಿದ್ದಾರೆ. ಇದರಿಂದಾಗಿ ಆಢಳಿತವು  ಆಹಾರ ಧಾನ್ಯಗಳನ್ನು ಒದಗಿಸುವ ಕೆಲವು ಕ್ರಮಗಳನ್ನು ಕೈಗೊಳ್ಳುವಂತಾಗಿದೆ.

ಕೋವಿಡ್ ನ ಎರಡನೇ ಅಲೆಯ ಈ ಅವಧಿಯಲ್ಲಿ ಮಹಿಳಾ ತಂಡಗಳು ದೇಶದಾದ್ಯಂತ ಗ್ರಾಮಗಳಲ್ಲಿ ಹಾಗೂ ಬಸ್ತಿ/ ಮೊಹಲ್ಲಾಗಳಲ್ಲಿ ಆಹಾರ ಧಾನ್ಯಗಳು ಮತ್ತಿತರೆ ಅಗತ್ಯ ವಸ್ತುಗಳನ್ನು ಹಂಚಿದ್ದಾರೆ. ಮಹಿಳಾ ಕಾರ್ಯಕರ್ತೆಯರು ಸ್ಥಳೀಯವಾಗಿ ಅಡುಗೆ ಮನೆಗಳನ್ನು ನಡೆಸಿದ್ದಲ್ಲದೇ ಹಸಿವಿನಿಂದ ಬಳಲುತ್ತಿರುವ ಕುಟುಂಬಗಳಿಗೆ  ಊಟವನ್ನು ಬಡಿಸಿದ್ದಾರೆ.

:ಆಹಾರ ಗೋದಾಮುಗಳ ಘೇರಾವು, ರೇಷನ್ ಕಾರ್ಡ್ ಗಳಿಗಾಗಿ ಹೋರಾಟ, ವಿಧವೆ ಹಾಗೂ ವೃದ್ಧಾಪ್ಯ ಪಿಂಚಣಿ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯ, ಆನ್ ಲೈನ್ ಶಿಕ್ಷಣ ಸಮಯದಲ್ಲಿ ಮಕ್ಕಳು ಎದುರಿಸುವ ಸಮಸ್ಯೆಗಳು , ಹೆಚ್ಚು ಶುಲ್ಕಕ್ಕೆ ಒತ್ತಾಯಿಸುವ ಶಾಲೆಗಳ ವಿರುದ್ಧದ ಹೋರಾಟ, ಮನೆಗೆಲಸದ ಕಾರ್ಮಿಕರಿಗೆ ಪರಿಹಾರ ಚಟುವಟಿಕೆ ಗಳು,  ಹಿಂಸೆಗೀಡಾದ  ಪ್ರಕರಣಗಳಿಗೆ ನೆರವು ಮುಂತಾದ ವುಗಳಲ್ಲಿ ಮಹಿಳಾ ಸಂಘಟನೆಗಳು ಮಧ್ಯಪ್ರವೇಶಿಸಿವೆ.

ರಾಜಕೀಯ ಪರಿಸ್ಥಿತಿ

ಏಪ್ರಿಲ್-ಮೇ ನಲ್ಲಿ ನಡೆದ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಬಿಜೆಪಿ ಹಾಗೂ ಅದರ ಮೈತ್ರಿಕೂಟಕ್ಕೆ ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕೇರಳದಲ್ಲಿ ಅಧಿಕಾರ ಸಿಗಲಿಲ್ಲ. ಅಸ್ಸಾಂನಲ್ಲಿ ಮಾತ್ರ ಸಣ್ಣ ಪ್ರಮಾಣದ ಅಂತರದೊಂದಿಗೆ ಅಧಿಕಾರಕ್ಕೆ ಮರಳಲು ಸಾಧ್ಯವಾಗಿದೆ.

ಇತ್ತೀಚಿನ ಅವಧಿಯಲ್ಲಿ  ಉತ್ತರಾಖಾಂಡ್ ಹಾಗೂ ಕರ್ನಾಟಕದಲ್ಲಿ ಬಿಜೆಪಿಯು ತನ್ನ ಪಕ್ಷದೊಳಗೆ  ಹಾಗೂ ಸರ್ಕಾರದಲ್ಲಿ ಸಮಸ್ಯೆಗಳನ್ನು ಎದುರಿಸಿದೆ. ಉತ್ತರಖಂಡ್ ನಲ್ಲಿ ಎರಡು ತಿಂಗಳ ಕಾಲಾವಧಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನು ಬದಲಾಯಿಸಬೇಕಾಗಿ ಬಂತು. ಕರ್ನಾಟಕದಲ್ಲಿ ಯಡಿಯೂರಪ್ಪ ರವರನ್ನು ಕೆಳಗಿಳಿಸಿ ಹೊಸ ಮುಖ್ಯಮಂತ್ರಿ ಬೊಮ್ಮಾಯಿ ರವರನ್ನು ಪ್ರತಿಷ್ಠಾಪಿಸಲಾಗಿದೆ.

ಕೋವಿಡ್ ನ ಎರಡನೇ ಅಲೆಯನ್ನು ತಪ್ಪಾಗಿ ನಿರ್ವಹಿಸಿದ್ದರಿಂದಾಗಿ ಕೇಂದ್ರದ ಬಿಜೆಪಿ ಸರ್ಕಾರವು ತನ್ನ ಮದ್ಯಮ ವರ್ಗ ಬೆಂಬಲಿಗರ ವಿಭಾಗದಲ್ಲೇ ಬೆಳೆಯುತ್ತಿರುವ ಅತೃಪ್ತಿ ಯನ್ನು ಎದುರಿಸುತ್ತಿದೆ.  ಉತ್ತರ ಪ್ರದೇಶದಲ್ಲಿ ಅದಿತ್ಯನಾಥ ಸರ್ಕಾರ ಎರಡನೇ ಅಲೆಯನ್ನು ಅತ್ಯಂತ ಅದಕ್ಷವಾಗಿ ನಿರ್ವಹಿಸಿದ್ದರಿಂದಾಗಿ ಗಂಗಾ ನದಿಯಲ್ಲಿ ತೇಲಿ ಹೋದ ಶವಗಳ ಚಿತ್ರ ಅಂತರಾಷ್ಟ್ರೀಯ ಸುದ್ದಿಯಾಗಿತ್ತು.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಏಳು ತಿಂಗಳಷ್ಟೇ ಇರುವಾಗ ಬಿಜೆಪಿ ಸರ್ಕಾರವು ಜನರ ಗಮನವನ್ನು ಬೇರೆಡೆ ಸೆಳೆಯಲು ಕೋಮುವಾದಿ ಕಾರ್ಯಸೂಚಿಯನ್ನು ಅನುಸರಿಸುವಲ್ಲಿ ನಿರತವಾಗಿದೆ. ಕೋಮುವಾದಿ ದೃಢೀಕರಣವನ್ನು ತೀವ್ರಗೊಳಿಸುವ ಸಲುವಾಗಿ ಜನಸಂಖ್ಯಾ ನೀತಿ, ಲವ್ ಜಿಹಾದ್ ಕಾನೂನು ಇತ್ಯಾದಿಗಳನ್ನು ಜಾರಿ ಮಾಡುತ್ತಿದೆ.

ಅದಾಗ್ಯೂ ಈ ಅವಧಿಯಲ್ಲಿ ರೈತ ಹೋರಾಟಗಳು ಹಾಗೂ ಕಾರ್ಮಿಕ ಹೋರಾಟಗಳು ಬಲಿಷ್ಠ ಗೊಂಡಿವೆ. ಸಂಸತ್ ನಲ್ಲಿ ಸರ್ಕಾರ ಎದುರಿಸಲು ವಿರೋಧ ಪಕ್ಷಗಳಲ್ಲಿ ಹೆಚ್ಚಿನ ಒಗ್ಗಟ್ಟು ಕಂಡು ಬಂದಿದೆ.

ಅದ್ದರಿಂದಲೇ ಮೋದಿ ಸರ್ಕಾರದ ಹಿಂದುತ್ವ- ನವ ಉದಾರವಾದಿ ಅಜೆಂಡಾವನ್ನು ಒಗ್ಗೂಡಿ ಸೋಲಿಸಲು ವಿಶಾಲವಾದ ಐಕ್ಯ ಹೋರಾಟಗಳನ್ನು ಕಟ್ಟಬೇಕು ಹಾಗೂ ಎಲ್ಲಾ ಜಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಅಣಿ ನೆರಸಬೇಕಾಗಿದೆ.

ಕೇಂದ್ರ ಸಮಿತಿ ಒತ್ತಾಯಗಳು

ಈ ಕೆಳಗಿನ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಬೇಕೆಂದು ಕೇಂದ್ರ ಸಮಿತಿಯು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತದೆ.

  1. ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯ ವನ್ನು ಗರಿಷ್ಠ ಪ್ರಮಾಣಕ್ಕೆ ಎತ್ತರಿಸಿ, ಉತ್ಪಾದನೆಯನ್ನು ಹೆಚ್ಚಿಸಬೇಕು, ಜಾಗತಿಕವಾಗಿ ಲಸಿಕೆ ಖರೀದಿಸಿ ಉಚಿತ ಸಾರ್ವತ್ರಿಕ ಸಾಮೂಹಿಕ ಲಸಿಕೀಕರಣವನ್ನು ವೇಗಗೊಳಿಸಬೇಕು, ಕೋವಿಡ್ ನಿಂದಾದ ಸಾವಿಗೆ ಸಮರ್ಪಕ ಪರಿಹಾರ ಒದಗಿಸಬೇಕು; ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ವಿಶಾಲವಾಗಿ ವಿಸ್ತರಿಸಬೇಕು.
  1. ಆದಾಯ ತೆರಿಗೆ ಪಾವತಿ ವಲಯದ ಹೊರಗಿರುವ ಎಲ್ಲಾ ಕುಟುಂಬಗಳಿಗೆ ಮಾಸಿಕ 7500 ರೂಗಳ ನಗದು ವರ್ಗಾವಣೆ ನೆರವು ಜಾರಿ ಮಾಡಬೇಕು.
  1. ದಿನನಿತ್ಯ ಉಪಯೋಗಿಸುವ ಎಲ್ಲಾ ಅಗತ್ಯ ವಸ್ತುಗಳು ಒಳಗೊಂಡ ಉಚಿತ ಆಹಾರ ಕಿಟ್‌ಗಳನ್ನು ವಿತರಿಸಬೇಕು.
  1. ಎಲ್ಲಾ ಪೆಟ್ರೋಲಿಯಂ ಉತ್ಪನ್ನ ಗಳ ಮೇಲೆ ಹೆಚ್ಚಿಸಿದ ಕೇಂದ್ರ ಅಬಕಾರಿ ತೆರಿಗೆಗಳು ಮತ್ತು ಇತರ ಸರ್ ಚಾರ್ಜ್ ಗಳನ್ನು ಹಿಂಪಡೆದು ಏರುತ್ತಿರುವ ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ಒಳಪಡಿಸಬೇಕು.
  1. ಕೃಷಿ ಕಾನೂನುಗಳನ್ನು ರದ್ದುಪಡಿಸಿ C2+50% ಆಧಾರದ ಕನಿಷ್ಠ ಬೆಂಬಲ ಬೆಲೆಯಲ್ಲಿ ಮಾರುವ ಹಕ್ಕಿಗೆ ಶಾಸನ ತರಬೇಕು.
  1. ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ ವನ್ನು ನಿಲ್ಲಿಸಬೇಕು ಹಾಗೂ ಖಾಸಗೀಕರಣ ನೀತಿಯ ಬದಲು ಸಾರ್ವಜನಿಕ ಕ್ಷೇತ್ರವನ್ನು ಬಲಿಷ್ಠ ಗೊಳಿಸಬೇಕು.
  1. ಕಾರ್ಮಿಕ ಸಂಹಿತೆಗಳನ್ನು ರದ್ದು ಪಡಿಸಬೇಕು: ಮುಷ್ಕರ ಗಳನ್ನು ಹಾಗೂ ವೇತನ ಚೌಕಾಸಿ ನಡೆಸುವ ದುಡಿಯುವ ಜನರ ಹಕ್ಕುಗಳನ್ನು ಪುನರ್ ಸ್ಥಾಪಿಸಬೇಕು.
  1. ಸಣ್ಣ, ಮಧ್ಯಮ ಪ್ರಮಾಣದ ಉದ್ದಿಮೆಗಳ ಪುನರುಜ್ಜೀವನ ಕ್ಕಾಗಿ ಉತ್ತೇಜನ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು‌, ಸಾಲ ಒದಗಿಸುವುದಲ್ಲ.
  2. ಮನರೇಗಾ .ಕಾಯ್ದೆಯನ್ನು ವಿಶಾಲವಾಗಿ ವಿಸ್ತರಿಸಿ ವೇತನವನ್ನು ಕನಿಷ್ಠ  ದುಪ್ಪಟ್ಟು ಗೊಳಿಸಿ ವಾರ್ಷಿಕ ಎರಡು ನೂರು ದಿನಗಳ ಉದ್ಯೋಗ ಒದಗಿಸಬೇಕು.
  1. ಇದೇ ರೀತಿಯಲ್ಲಿ ನಗರ ಉದ್ಯೋಗ ಖಾತರಿ ಕಾಯ್ದೆ ಜಾರಿಗೆ ತರಬೇಕು.
  1. ಉದ್ಯೋಗ ಸೃಷ್ಟಿಯಾಗಿ ಅಂತರಿಕ ಬೇಡಿಕೆಗೆ ಚೈತನ್ಯ ಉಂಟಾಗಲು ನಮ್ಮ ಆರ್ಥಿಕ ಹಾಗೂ ಸಾಮಾಜಿಕ ಮೂಲಭೂತ ಸೌಕರ್ಯಗಳ ಮೇಲೆ ಸಾರ್ವಜನಿಕ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಬೇಕು; ಸರ್ಕಾರಿ ಉದ್ಯೋಗಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.
  1. ಆದಷ್ಟೂ ಬೇಗ ಶಿಕ್ಷಣ ಸಂಸ್ಥೆಗಳು ತೆರೆಯುವಂತಾಗಲೂ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿ ಗಳಿಗೆ ಅದ್ಯತೆ ಮೇಲೆ ಲಸಿಕೆ ನೀಡಬೇಕು.
  1. ಪೆಗಾಸಸಸ್ ಮಿಲಿಟರಿ ಸ್ಪೈವೇರ್ ಬಳಸಿ ಜನರ ಮೇಲೆ ಕಣ್ಗಾವಲು ನಡೆಸಿರುವ ಕುರಿತು ಸುಪ್ರೀಂ ಕೋರ್ಟ್ ಉಸ್ತುವಾರಿ ಯಲ್ಲಿ ನ್ಯಾಯಾಂಗ ತನಿಖೆ ಈ ಕೂಡಲೇ ಆಗಬೇಕು.
  1. ಹಿಂದಿನ ಒಪ್ಪಂದ ರದ್ದುಪಡಿಸಿರುವುದು ಹಾಗೂ ಅತಿ ಹೆಚ್ಚು ಹಣ ಕೊಟ್ಟು ಹೊಸ ಖರೀದಿ ಒಪ್ಪಂದ ಮಾಡಿಕೊಂಡಿರುವುದನ್ನು ಒಳಗೊಂಡ ರಪೇಲ್ ಹಗರಣ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು.
  1. ಭೀಮಾ ಕೊರೆಗಾಂವ್ ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳ ಪ್ರಕರಣಗಳಲ್ಲಿ ಕರಾಳ ಯುಎಪಿಎ ಅಡಿಯಲ್ಲಿ ಬಂಧಿತರಾದವರು ಸೇರಿದಂತೆ, ಎಲ್ಲಾ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡಬೇಕು. ಜನತೆಯ ಪ್ರಜಾಪ್ರಭುತ್ವ ಹಕ್ಕುಗಳಿಗೆ  ಹಾಗೂ ನಾಗರಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ದೇಶದ್ರೋಹ/ರಾಷ್ಟ್ರೀಯ ಭದ್ರತಾ ಕಾಯ್ದೆ ಯಂತಹ ಇತರ ಕರಾಳ ಕಾನೂನುಗಳ ಬಳಕೆ ನಿಲ್ಲಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ದ ಮೂಲಭೂತ ಹಕ್ಕನ್ನು ಚಲಾಯಿಸಿದ ಕಾರಣಕ್ಕಾಗಿ ಬಂಧನಕ್ಕೆ ಒಳಪಟ್ಟಿರುವ ಎಲ್ಲಾ ಮಾಧ್ಯಮ ವ್ಯಕ್ತಿಗಳನ್ನು ಬಿಡುಗಡೆ ಮಾಡಬೇಕು. ಜಮ್ಮು ಮತ್ತು ಕಾಶ್ಮೀರ ದ ಎಲ್ಲಾ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡಬೇಕು.

ಕೇಂದ್ರ ಸಮಿತಿ ಕರೆ

ಈ ಮೇಲಿನ ಬೇಡಿಕೆಗಳ ಆಧಾರದಲ್ಲಿ ಕೋವಿಡ್ ಮಹಾಸೋಂಕಿನ ಸ್ಥಳೀಯ ಪರಿಸ್ಥಿತಿ ಮತ್ತು ಲಾಕ್‌ಡೌನ್ ಅನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸಮಿತಿಗಳು ಹಾಗೂ ಕೆಳಗಿನ ಘಟಕಗಳು ಸೆಪ್ಟೆಂಬರ್ ತಿಂಗಳಲ್ಲಿ ದೇಶದಾದ್ಯಂತ ಪ್ರತಿಭಟನೆ ಹಾಗೂ ಹೋರಾಟಗಳನ್ನು ಸಂಘಟಿಸಲು ಕರೆ ನೀಡಿದೆ. ರಾಜ್ಯ ಸಮಿತಿಗಳು ಪ್ರತಿಭಟನಾ ಮಾಸಾಚರಣೆ ಸಂಬಂದದ ವಿವರಗಳನ್ನು ನಿರ್ಧರಿಸಲಿವೆ.

ಈ ಮೇಲಿನ ಬೇಡಿಕೆಗಳ ಆಧಾರದ ಪ್ರತಿಭಟನೆಗಳಲ್ಲಿ ಜೊತೆ ಸೇರುವ ಎಲ್ಲರನ್ನೂ ಒಳಗೊಳ್ಳಲು ಪ್ರಯತ್ನ ನಡೆಸಬೇಕು.

Leave a Reply

Your email address will not be published. Required fields are marked *