ಸಿಪಿಐಎಂ ಕೇಂದ್ರ ಸಮಿತಿ: ವಿಧಾನಸಭಾ ಚುನಾವಣಾ ವಿಮರ್ಶೆ-ಅಗಸ್ಟ್ 2021

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕೇಂದ್ರ ಸಮಿತಿ

ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು-ಪುದುಚೇರಿ ಹಾಗೂ ಅಸ್ಸಾಂ ವಿಧಾನಸಭಾ ಚುನಾವಣೆಗಳ ವಿಮರ್ಶೆ
(ಆಗಸ್ಟ್ 06-08, 2021ರ ಕೇಂದ್ರ ಸಮಿತಿ ಸಭೆಯಲ್ಲಿ ಅಂಗೀಕೃತ)

ಪುಸ್ತಕ ಆವೃತ್ತಿಯಲ್ಲಿ ಓದಲು ಕ್ಲಿಕ್‌ ಮಾಡಿರಿ…..

ಒಟ್ಟಾರೆ ಫಲಿತಾಂಶಗಳು: ಬಿ.ಜೆ.ಪಿ.ಗೆ ಹಿನ್ನಡೆ

ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ರಾಜ್ಯಗಳಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿ.ಜೆ.ಪಿ ಹಿನ್ನಡೆಯನ್ನು ಕಂಡಿದೆ. ಅಸ್ಸಾಂನಲ್ಲಿ ತನ್ನ ಪ್ರತಿಸ್ಪರ್ಧಿಯಾಗಿದ್ದ ‘ಮಹಾಜೋತ್’ ವಿರುದ್ಧ 0.78% ಮಾತ್ರವೇ ವ್ಯತ್ಯಾಸದೊಂದಿಗೆ ಅಧಿಕಾರ ಉಳಿಸಿಕೊಂಡಿದೆ. ಅಪಾರ ಹಣವನ್ನು ಖರ್ಚು ಮಾಡಿ, ಕೇಂದ್ರ ಸರಕಾರದ ಅಧೀನದಲ್ಲಿರುವ ಸಂಸ್ಥೆಗಳನ್ನು ದುರ್ಬಳಕೆ ಮಾಡುವುದೂ ಸೇರಿದಂತೆ, ಚುನಾವಣಾ ಪ್ರಕ್ರಿಯೆಗಳ ತೀವ್ರ ಅಪಬಳಕೆ, ಕೋಮುಧೃವೀಕರಣವನ್ನು ತೀಕ್ಷ್ಣ ಗೊಳಿಸುವುದು, ವಿರೋಧ ಪಕ್ಷಗಳಿಗೆ ಬೆದರಿಕೆ, ಧಾಳಿ ಹೀಗೆ ಮಾಡಬಾರದ ಎಲ್ಲವನ್ನೂ ಮಾಡಿದ ನಂತರವೂ ಅವರು ನಿರೀಕ್ಷಿಸಿದಂತೆ ಜನರ ಬೆಂಬಲ ಪಡೆಯಲು ಕೇರಳ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಬಿ.ಜೆ.ಪಿ. ಮತ್ತು ಅದರ ಮಿತ್ರ ಪಕ್ಷಗಳು ಯಶಸ್ವಿಯಾಗಲಿಲ್ಲ. ಅಷ್ಟೇ ಅಲ್ಲ, ನಿರ್ಣಯಾತ್ಮಕ ಸೋಲನ್ನು ಅನುಭವಿಸಿದೆ ಕೂಡಾ.

ಈ ಫಲಿತಾಂಶವು, ಜನರ ಚಳುವಳಿಗಳನ್ನು ಬೆಳೆಸಲು, ಬಿ.ಜೆ.ಪಿ.ಯಿಂದ ತೀವ್ರ ಧಾಳಿಗೆ ಒಳಪಟ್ಟಿರುವ ದೇಶದ ಸಂವಿಧಾನದ ಮೂಲಕ ಅಂಗೀಕರಿಸಲ್ಪಟ್ಟ ಗಣತಂತ್ರ ಭಾರತದ ಪ್ರಜಾಪ್ರಭುತ್ವ ಗುಣ ಲಕ್ಷಣಗಳನ್ನು, ಜಾತ್ಯಾತೀತ ಮೌಲ್ಯಗಳನ್ನು ಉಳಿಸಲು ಹೋರಾಟಗಳನ್ನು ಹೆಚ್ಚಿಸಲು ಅವಕಾಶಗಳನ್ನು ಸೃಷ್ಟಿಸಿದೆ. ಸಾಂಕ್ರಾಮಿಕದಿಂದಾಗಿ ಜೀವ ಮತ್ತು ಜೀವನೋಪಾಯಗಳ ದಾರಿಗಳನ್ನೇ ಕಳೆದುಕೊಂಡ ಜನರ ಜೀವನ ಮಟ್ಟ ಸುಧಾರಿಸಲು ಜನ ಚಳುವಳಿಗಳನ್ನು ಕಟ್ಟುವ ಮತ್ತು ಬೆಳೆಸುವ ಅವಕಾಶವನ್ನೂ ಸೃಷ್ಟಿಸಿದೆ.

…… ಮುಂದೆ ಓದಿ

Leave a Reply

Your email address will not be published. Required fields are marked *