ಪೆಗಾಸಸ್ ಬಗ್ಗೆ ಸರ್ಕಾರ ಈಗ ಖಚಿತ ಉತ್ತರ ಕೊಡಬೇಕಾಗಿದೆ

ಯಾವುದೇ ಮೂರ್ತ ಸ್ಪಂದನೆ ನೀಡಲು ರಾಷ್ಟ್ರೀಯ ಭದ್ರತೆಯ ಮರೆಯಲ್ಲಿ ನಿರಾಕರಿಸಲಾಗದು ಎಂದು ನ್ಯಾಯಾಲಯವು ಗಮನಿಸಿರುವುದರಿಂದ, ಪೆಗಾಸಸ್ ತಂತ್ರಾಂಶ ಬಳಕೆಯ ಬಗ್ಗೆ ಒಂದು ಖಚಿತ ಉತ್ತರವನ್ನು ನೀಡಲು ಸರ್ಕಾರವು ಬಾಧ್ಯವಾಗಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ಪ್ರಭುತ್ವದ ಯಾವುದಾದರೂ ಸಂಸ್ಥೆ ಪೆಗಾಸಸ್ ಗೂಢಚರ್ಯೆ ತಂತ್ರಾಂಶವನ್ನು ಬಳಸಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಒಂದು ಖಚಿತವಾದ ಉತ್ತರವನ್ನು ನೀಡಲು ಸರ್ಕಾರ ನಿರಾಕರಿಸಿತ್ತು. ಈ ತಪ್ಪಿಸಿಕೊಳ್ಳುವ ನಿಲುವಿನ ಮೂಲಕವೇ ಈ ವಿಷಯದಲ್ಲಿ ಅದು ತನ್ನ ಶಾಮೀಲನ್ನು ಒಪ್ಪಿಕೊಂಡಂತಾಗಿತ್ತು. ಇದೇ ಹಟಮಾರಿತನದಿಂದಾಗಿಯೇ ಸಂಸತ್ತಿನ ಸಂಪೂರ್ಣ ಮುಂಗಾರು ಅಧಿವೇಶನ ಸ್ಥಗಿತಗೊಳ್ಳುವಂತಾಗಿದ್ದು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ನೆನಪಿಸಿದೆ.

ಸುಪ್ರೀಂ ಕೋರ್ಟ್ ಈ ವಿಷಯದ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನ ಒಬ್ಬ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸುವಲ್ಲಿ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಸಮಿತಿಯು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಸಂಬಂಧಪಟ್ಟ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಬೇಕು. ಈ ಗೂಢಚರ್ಯೆ ತಂತ್ರಾಂಶ  ಅಂತರಾಷ್ಟ್ರೀಯ ಹರಹನ್ನೂ ಹೊಂದಿರುವುದರಿಂದಾಗಿ ವಿದೇಶಿ ತಜ್ಞರನ್ನು ಕೂಡ ಸಾಕ್ಷ್ಯ ನೀಡಲು ಆಹ್ವಾನಿಸಬೇಕು ಎಂದು ಸೂಚಿಸಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸಮಿತಿಯು ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದೆ.

Leave a Reply

Your email address will not be published. Required fields are marked *