ತ್ರಿಪುರ ವಿಧಾನಸಭೆ ಚುನಾವಣೆ: ಆಳುವ ಪಕ್ಷದಿಂದ ಭಯ ಹುಟ್ಟುಹಾಕುವ ಪ್ರಯತ್ನ – ಅಗತ್ಯ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸಿಪಿಐ(ಎಂ)ಆಗ್ರಹ

ತ್ರಿಪುರಾದಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರಲ್ಲಿ ಹಿಂಸಾಚಾರದ ಆತಂಕ ಉಂಟಾಗಿದೆ. ಇತ್ತೀಚೆಗೆ ತ್ರಿಪುರಾಕ್ಕೆ ಹೆಚ್ಚಿನ ಸಂಖ್ಯೆಯ ಮೋಟರ್‌ ಸೈಕಲ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂಬ ಅಂಶದಿಂದಲೂ ಇಂತಹ ಭಯಗಳು ಉದ್ಭವಿಸುತ್ತವೆ. ಈ ಮೋಟಾರ್‌ ಸೈಕಲ್‌ಗಳನ್ನು ಸವಾರಿ ಮಾಡುವ ಗ್ಯಾಂಗ್‌ಗಳು, ವಿರೋಧ ಪಕ್ಷಗಳಿಗೆ ಸೇರಿದ ಮತದಾರರಲ್ಲಿ ಆಡಳಿತಾರೂಢ ಬಿಜೆಪಿಯಿಂದ ಭಯಭೀತಗೊಳಿಸಲು ಮತ್ತು ಭಯವನ್ನು ಹುಟ್ಟುಹಾಕಲು ಪ್ರಯತ್ನಿಸುತ್ತವೆ. ಮತದಾರರ ಮೇಲೆ ಪ್ರಭಾವ ಬೀರಲು ಬೆದರಿಕೆಯ ಇತರ ವಿಧಾನಗಳನ್ನು ಸಹ ಬಳಸಲಾಗುತ್ತಿದೆ.

ಈ ಅಂಶವನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಪೊಲಿಟ್ ಬ್ಯೂರೋ ಸದಸ್ಯ ನೀಲೋತ್ಪಲ್ ಬಸು ಮತ್ತು ಕೇಂದ್ರ ಕಾರ್ಯದರ್ಶಿ ಮಂಡಳಿ ಸದಸ್ಯ ಮುರಳೀಧರನ್ ಅವರನ್ನೊಳಗೊಂಡ ಮೂವರು ಸದಸ್ಯರ ನಿಯೋಗ ಇಂದು(ಫೆಬ್ರವರಿ 13) ಪೂರ್ಣ ಚುನಾವಣಾ ಆಯೋಗವನ್ನು ಭೇಟಿ ಮಾಡಿ ತಿಳಿಸಿತು.

ಈ ಪರಿಸ್ಥಿತಿಯಲ್ಲಿ, ಪ್ರಮುಖ ರಸ್ತೆಗಳಲ್ಲಿ ಮಾತ್ರವಲ್ಲದೆ ಒಳ ಪ್ರದೇಶಗಳಲ್ಲೂ  ಸಹ ಧ್ವಜ ಮೆರವಣಿಗೆಗಳನ್ನು ಒಳಗೊಂಡಂತೆ, ಅದಕ್ಕೇ ಸೀಮಿತವಾಗಿರದೆ ವಿಶ್ವಾಸ ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವನ್ನು ಚುನಾವಣಾ ಆಯೋಗ ಮನಗಾಣುವಂತೆ ತಿಳಿಸಲಾಯಿತು ಎಂದಿರುವ  ಸಿಪಿಐ(ಎಂ), ಶಾಂತಿಯುತ ಮತ್ತು ಅನುಕೂಲಕರ ವಾತಾವರಣದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯುವುದನ್ನು ಖಚಿತಪಡಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಚುನಾವಣಾ ಆಯೋಗವು ನಿಯೋಗಕ್ಕೆ ಭರವಸೆ ನೀಡಿದೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *