ರಾಜ್ಯವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ಪ್ರತಿಭಟನೆಗೆ ಸಿಪಿಐಎಂ ಕರೆ

 ರಾಜ್ಯವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಮತ್ತು ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಸೆ- 20 ರಂದು ಪ್ರತಿಭಟನೆ ನಡೆಸಲು ಸಿಪಿಐಎಂ ಕರೆ ನೀಡಿದೆ. 

ಈ ಕುರಿತು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಪತ್ರಿಕಾ ಹೇಳಿಕೆ ನೀಡಿದ್ದು, ಕರ್ನಾಟಕ ರಾಜ್ಯವನ್ನು ಮುಂಗಾರು ತಡವಾಗಿ ಪ್ರವೇಶಿಸಿದ್ದರಿಂದ ಮತ್ತು ತಡವಾಗಿಯಾದರೂ ಮುಂಗಾರು ಸುರಿದರೂ ರಾಜ್ಯದ ಹಲವೆಡೆ ಸುಮಾರು 25 ಲಕ್ಷ ಎಕರೆ ಪ್ರದೇಶದಲ್ಲಿ ಭಿತ್ತನೆಯು ನಡೆಯಲಿಲ್ಲವೆಂದು ಸರಕಾರದ ಅಂಕಿ ಅಂಶಗಳು ಹೇಳುತ್ತಿವೆ. ಇದೀಗ ಬಿತ್ತನೆಯಾದ 150 ಲಕ್ಷ ಎಕರೆಯಷ್ಠು ಪ್ರದೇಶದ ಬೆಳೆಯು ಮಳೆಯ ಅಥವಾ ನೀರಿನ ಅಭಾವದಿಂದ ಇಳುವರಿ ಕುಸಿತದ ಹಾಗೂ ಬೆಳೆ ನಾಶದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹಲವೆಡೆ ರೈತರು ಮೊದಲು ಬಿತ್ತಿದ ಬೆಳೆಗೆ ಸಕಾಲಿಕ ಮಳೆ ದೊರೆಯದುದರಿಂದ ನಂತರದ ಮಳೆಗೆ ಮರು ಬಿತ್ತನೆಗೂ ಕ್ರಮವಹಿಸಿ ಆ ಬೆಳೆಯು ಇದೀಗ ಗ್ಯಾರಂಟಿ ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.

ಮಳೆಯ ಅಭಾವ ಬೋರ್ ವೆಲ್ ಗಳು ಬತ್ತುವಂತೆ ಮಾಡುತ್ತಿದೆ. ವಿದ್ಯುತ್ ಕಣ್ಣ ಮುಚ್ಚಾಲೆಯು ಇದರೊಂದಿಗೆ ರೈತರನ್ನು ಬಾದಿಸುತ್ತಿದೆ. ಮುನ್ಸೂಚನೆಯಂತೆ ಮುಂಬರುವ ದಿನಗಳಲ್ಲಿಯೂ ಮಳೆಯ ಖಾತರಿ ಇಲ್ಲವಾಗಿದೆ. ಅದಾಗಲೇ ನೂರಾರು ಗ್ರಾಮಗಳು ಕುಡಿಯುವ ನೀರಿನ ಅಭವ ವನ್ನು ಎದುರಿಸುತ್ತಿವೆ. ಕೂಲಿಕಾರರು ಹಾಗೂ ಬಡರೈತರು ಕೂಲಿ ಕೆಲಸ ಹುಡುಕಿಕೊಂಡು ಗುಳೆ ಅಥವಾ ವಲಸೆಯ ಕಡೆ ಮುಖ ಮಾಡುತ್ತಿದ್ದಾರೆ. ಅಂಕಿ ಅಂಶಗಳಂತೆ ರಾಜ್ಯದ ನಗರ ತಾಲೂಕುಗಳನ್ನು ಬಿಟ್ಟರೇ, ಉಳಿದ ಎಲ್ಲ ತಾಲೂಕುಗಳು ಮತ್ತು ಕಾವೇರಿ ಜಲಾನಯದ ನೀರಾವರಿ ಇರುವ ತಾಲೂಕುಗಳು, ನದಿಗಳು ಬತ್ತಿ ಹೋದುದರಿಂದಾಗಿ, ರಾಜ್ಯದಾದ್ಯಂತ ನದಿಗಳ ಇಕ್ಕೆಲಗಳ ನೀರಾವರಿ ಪಂಪ್ ಸೆಟ್ ರೈತರಿರುವ ಪ್ರದೇಶಗಳು ಸೇರಿ ಬರದ ಬಾಧೆಯನ್ನು ಅನುಭವಿಸುತ್ತಿವೆ ಎಂದರು.

ಈ ಬರವು ಮುಂದೆ ವ್ಯಾಪಕವಾಗಿ ಸಾಲಬಾಧಿತ ರೈತರ ತೀವ್ರ ಪ್ರಮಾಣದ ಆತ್ಮಹತ್ಯೆಗಳಿಗೂ ಕಾರಣವಾಗಬಹುದಾಗಿದೆ. ಕೃಷಿರಂಗ ಬರಕ್ಕೆ ತುತ್ತಾದಲ್ಲಿ ಮುಂದೆ ಆಹಾರಧಾನ್ಯದ ಬೆಲೆಗಳು ಮತ್ತಷ್ಠು ಗಗನ ಮುಖಿಯಾಗುವ ಎಲ್ಲ ಸಂಭವಗಳಿವೆ. ಇವುಪಟ್ಟಣ ಹಾಗೂ ನಗರದ ಜನತೆಯನ್ನು ಬಾದೆಗೀಡು ಮಾಡಲಿವೆ. ಆದ್ದರಿಂದಇಡೀ ರಾಜ್ಯವೇ ಬರ ಪೀಡಿತವಾಗಿ ಬದಲಾಗುತ್ತಿರುವುದರಿಂದ ರಾಜ್ಯವನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಸಿಪಿಐಎಂ ಮನವಿ ಮಾಡುತ್ತದೆ. ಅದೇ ರೀತಿ, ಒಕ್ಕೂಟ ಸರಕಾರದ ಮೇಲೆ ಹೆಚ್ಚಿನ ಒತ್ತಡ ಹೇರಿ ನೆರವು ಪಡೆಯಲು ಮತ್ರು ರಾಜ್ಯ ಸರಕಾರವು ಬರಪರಿಹಾರಕ್ಕೆ ಕ್ರಮ ವಹಿಸ ಬೇಕಾಗಿದೆ ಎಂದು ಹೇಳಿದ್ದಾರೆ.

ಈ ಕೆಳಕಂಡ ಹಕ್ಕೊತ್ತಾಯಗಳಿಗಾಗಿ ರಾಜ್ಯದಾದ್ಯಂತ ರಾಜ್ಯದ ಜನತೆ ಎಲ್ಲಾ ತಾಲೂಕುಗಳಲ್ಲಿ ಸೆ-20 ರಂದು ಪ್ರತಿಭಟನೆ ನಡೆಸಲು ಮತ್ತು ಸಿಪಿಐಎಂ ನಡೆಸುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತದೆ ಎಂದರು. ಬರಗಾಲ 

ಹಕ್ಕೊತ್ತಾಯಗಳು: 

  • ಬರ ಪೀಡಿತ ಕೂಲಿಕಾರರು, ಬಡ ರೈತರು ಗುಳೆ ಹೋಗದಂತೆ ತಡೆಯಲು ಉದ್ಯೋಗ ಖಾತ್ರಿ ಕೆಲಸವನ್ನು ಪ್ರತಿ ಕುಟುಂಬಕ್ಕೆ 150 ದಿನಗಳ ಕಾಲ ಕಡ್ಡಾಯವಾಗಿ ದೊರೆಯುವಂತೆ ಅಗತ್ಯ ಕ್ರಮವಹಿಸಬೇಕು.
  • ಬೆಳೆ ನಷ್ಠಕ್ಕೆ ಬೆಳೆ ವಿಮೆ ದೊರಕುವಂತೆ ವ್ಯವಸ್ಥೆ ಮಾಡಬೇಕು.
  • ಬಡ ರೈತರ ಹಾಗೂ ಕೂಲಿಕಾರರ ಮತ್ತು ಸ್ತ್ರೀಶಕ್ತಿ ಸಂಘಗಳ ಮಹಿಳೆಯರ ಎಲ್ಲ ಸಾಲ ಮನ್ನಾ ಮಾಡಬೇಕು. ಶ್ರೀಮಂತ ರೈತರ ಸಾಲ ದೀರ್ಘಾವಧಿ ಸಾಲವಾಗಿ ಪರಿವರ್ತಿಸಬೇಕು ಮತ್ತು ಬಡ್ಡಿ ಮನ್ನಾ ಮಾಡಬೇಕು.
  • ಬೆಳೆ ನಷ್ಠ ಪರಿಹಾರವಾರವನ್ನು ಒದಗಿಸಬೇಕು. ಮುಂದಿನ ಸಾಲಿಗೆ ಉಚಿತ ಬೀಜ, ಗೊಬ್ಬರ, ಕೀಟ ನಾಶಕಗಳನ್ನು ಒದಗಿಸಬೇಕು. ಬಿತ್ತನೆಯ ಹಾಗೂ ಕೊಯ್ಲು ಕೆಲಸಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ತರಬೇಕು.
  • ಬರಗಾಲದ ಕಾರಣದಿಂದ ಬರ ಬಾಧಿತರ ಶೈಕ್ಷಣಿಕ ಶುಲ್ಕಗಳನ್ನು ಮನ್ನಾ ಮಾಡಬೇಕು.
  • ಆಹಾರ ಧಾನ್ಯಗಳ ಕೃತಕ ಅಭಾವ ಸೃಷ್ಠಿಸಿ ಕಾಳ ಸಂತೆಯಲ್ಲಿ ಗ್ರಾಹಕರನ್ನು ಸುಲಿಗೆಗೊಳಪಡಿಸುವ ಕಾಳ ಸಮನತೆ ಕೋರರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

Leave a Reply

Your email address will not be published. Required fields are marked *