ರೈತರ ಐಕ್ಯ ಆಂದೋಲನಕ್ಕೆ ಐತಿಹಾಸಿಕ ವಿಜಯ -ಸಿಪಿಐ(ಎಂ) ಪೊಲಿಟ್‍ ಬ್ಯುರೊ ಅಭಿನಂದನೆ

ಸಂಯುಕ್ತ ಕಿಸಾನ್ ಮೋರ್ಚಾ ( ಎಸ್‍.ಕೆ.ಎಂ.), ವಿವಿಧ ರೈತ ಮತ್ತು ಕೃಷಿ ಕಾರ್ಮಿಕರ ಸಂಘಟನೆಗಳು ಮತ್ತು ರೈತರು ಐತಿಹಾಸಿಕ ವಿಜಯವನ್ನು ಪಡೆದಿದ್ದಾರೆ ಎಂದು ಅವರನ್ನು  ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ ಅಭಿನಂದಿಸಿದೆ. ರೈತರ ಈ ಹೋರಾಟದಿಂದಾಗಿ ಮೋದಿ ಸರಕಾರ ಕಾರ್ಪೊರೇಟ್ ನಿಯಂತ್ರಣಕ್ಕೆ ಮತ್ತು ಕೃಷಿ ವಲಯವನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶ ಕಲ್ಪಿಸುವ   ಮೂರು ಕರಾಳ ಕಾನೂನುಗಳನ್ನು ರದ್ದುಗೊಳಿಸಲೇ ಬೇಕಾಗಿ  ಬಂದಿದೆ. ಈ ರೈತರ ಹೋರಾಟಕ್ಕೆ ಬೆಂಬಲ ನೀಡಿದ ಕಾರ್ಮಿಕ ಸಂಘಟನೆಗಳು ಮತ್ತು ಇತರ ಪ್ರಜಾಪ್ರಭುತ್ವ ವಿಭಾಗಗಳು  ದೃಢವಾದ ಸೌಹಾರ್ದ ನೀಡಿದ್ದಾರೆಂದು  ಅವರನ್ನು ಪೊಲಿಟ್‍ ಬ್ಯುರೊ ಶ್ಲಾಘಿಸಿದೆ.

ಪ್ರಸ್ತುತ ಸರ್ಕಾರದ ಅಡಿಯಲ್ಲಿ ಜನರ ಜೀವನೋಪಾಯ ಮತ್ತು ಹಕ್ಕುಗಳ ಮೇಲಿನ ಒಟ್ಟಾರೆ ಪ್ರಹಾರವನ್ನು ಪ್ರತಿರೋಧಿಸುವಲ್ಲಿ ಐಕ್ಯತೆ ಮತ್ತು ಚೈತನ್ಯಶೀಲತೆ ಏನನ್ನು ಸಾಧಿಸಬಹುದು ಎಂಬುದಕ್ಕೆ ಈ ಚಳುವಳಿ ಒಂದು ಉಜ್ವಲ ಉದಾಹರಣೆಯಾಗಿದೆ. ಐಕ್ಯ ಹೋರಾಟಗಳು ಜಾತಿ-ಸಮುದಾಯಗಳ ವ್ಯತ್ಯಾಸಗಳನ್ನೂ ಮೀರಿ ನಿಂತು ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ಮತ್ತು ಹಲ್ಲೆಗಳನ್ನು ಹಿಮ್ಮೆಟ್ಟಿಸುವಲ್ಲಿ ಜಯಶಾಲಿಯಾಗುತ್ತವೆ  ಎಂಬುದನ್ನು ಈ ಗೆಲುವು ತೋರಿಸುತ್ತದೆ ೆಂದು ಸಿಪಿಐ(ಎಂ) ಹೇಳಿದೆ.

ಡಿಸೆಂಬರ್ 11ರಿಂದ ದೆಹಲಿಯ ಗೇಟ್‌ಗಳಲ್ಲಿ ನಿರ್ಬಂಧಗಳನ್ನು ಸದ್ಯಕ್ಕೆ ತೆಗೆಯುವ ಕ್ರಿಯೆ ಆರಂಭವಾಗಿದ್ದು ದೇಶದಾದ್ಯಂತ ಈ ಸಂದರ್ಭದಲ್ಲಿ ನಡೆಯುತ್ತಿರುವ ವಿಜಯೋತ್ಸವಗಳಲ್ಲಿ ಪಾಲ್ಗೊಳ್ಳಬೇಕು ಎಂದು  ಪಕ್ಷದ ಎಲ್ಲ ಘಟಕಗಳು ಮತ್ತು ಇತರ ಪ್ರಗತಿಪರ ವಿಭಾಗಗಳಿಗೆಪೊಲಿಟ್‍ ಬ್ಯುರೊ  ಮನವಿ ಮಾಡಿದೆ. ಕೃಷಿ ಬಿಕ್ಕಟ್ಟನ್ನು ಪರಿಹರಿಸಲು ದೇಶಾದ್ಯಂತ ಎಲ್ಲಾ ಬೆಳೆಗಳಿಗೆ ಮತ್ತು ಎಲ್ಲಾ ರೈತರಿಗೆ ಖಾತರಿಪಡಿಸುವ ಕನಿಷ್ಟ ಬೆಂಬಲ ಬೆಲೆಯನ್ನು ಖಾತ್ರಿ ಪಡಿಸಬೇಕೆಂಬ ನ್ಯಾಯಸಮ್ಮತವಾದ ಆಗ್ರಹವನ್ನು ಈಡೇರಿಸಿಕೊಳ್ಳುವ ಮತ್ತು ಕೃಷಿ ಬಿಕ್ಕಟ್ಟನ್ನು ಎದುರಿಸಲು ಇತರ ಬಾಕಿ ಉಳಿದಿರುವ ಪ್ರಶ್ನೆಗಳನ್ನು  ಪರಿಹರಿಸುವ ಎಸ್‍.ಕೆ.ಎಂ.ನ ಪ್ರಯತ್ನಗಳಿಗೆ ಸೌಹಾರ್ದವನ್ನು ಸಿಪಿಐ(ಎಂ) ವ್ಯಕ್ತಪಡಿಸಿದೆ.

ಈ ಸುದೀರ್ಘ ಹೋರಾಟದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ 700 ಕ್ಕೂ ಹೆಚ್ಚು ಜನರಿಗೆ ನಮನಗಳನ್ನು ಸಲ್ಲಿಸಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ . ಹುತಾತ್ಮರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಕರೆ ನೀಡಿದೆ ಮತ್ತು  ಯಾವುದೇ ವಿಳಂಬ ಮಾಡದೆ ಹೋರಾಟಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಅದು ಆಗ್ರಹಿಸಿದೆ.

Leave a Reply

Your email address will not be published. Required fields are marked *