ಮೀನುಗಾರರು ಮತ್ತು ಮೀನು ಕಾರ್ಮಿಕರು ಎದುರಿಸುವ ಸಮಸ್ಯೆಗಳು ಹಾಗೂ ಪರಿಹಾರದ ಕುರಿತು ನಿರ್ಣಯ

ಮೀನುಗಾರರು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಮಂದಿ ಇದ್ದಾರೆ. ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರು ಮೀನು ಕೈಗಾರಿಕೆಯಲ್ಲಿ ಇದ್ದಾರೆ. ಸುಮಾರು 2 ವರ್ಷದಿಂದ ಸರಿಯಾಗಿ ಕೆಲಸವು ಇಲ್ಲ ಹಾಗೂ ಆದಾಯ ಇಲ್ಲದೇ ಬಹಳ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮೀನು ಕಾರ್ಮಿಕರಿಗೆ ಕೋವಿಡ್-19ರಿಂದಾಗಿ ಕೆಲಸವಿಲ್ಲದೆ ಹಾಗೂ ಆದಾಯವಿಲ್ಲದೆ ಜನರು ಕಂಗಾಲಾಗಿದ್ದಾರೆ. ಪರಿಹಾರಕ್ಕಾಗಿ ಸರಕಾರವನ್ನು ಒತ್ತಾಯಿಸಿದಾಗ 3 ಸಾವಿರ ರೂಪಾಯಿ ಕೆಲವರಿಗೆ ಸಹಕಾರಿ ಸಂಘದ ಸದಸ್ಯರಾದವರಿಗೆ ಸಿಕ್ಕಿರುತ್ತದೆ. ಹೆಚ್ಚಿನವರಿಗೆ ಪರಿಹಾರ ಸಿಗದೇ ಸಂಕಷ್ಟಕ್ಕೆ ಒಳಗಾದರು.

ಮೀನುಗಾರರಿಗೆ ಸರಕಾರದಿಂದ ಬಲೆ, ನೂಲು ಹಾಗೂ ಇತರ ಸೌಲಭ್ಯಗಳನ್ನು ಕಡಿಮೆ ಬೆಲೆಯಲ್ಲಿ ಸಿಗುವಂತಾಗಬೇಕು. ರೇಷನ್ ನೀಡುವಾಗ ಹೆಚ್ಚು ಆಹಾರ ಹಾಗೂ ಇತರ ಜೀವನಾವಶ್ಯಕ ವಸ್ತುಗಳನ್ನು ಕೇರಳ ಸರಕಾರ ನೀಡಿದಂತೆ ಕೊಡಬೇಕು. ಮೀನು ಹಿಡಿದಾಗ ಅದರ ಶೇಖರಣೆ ಮತ್ತು ವಿತರಣೆಗೆ ಅನುಕೂಲವಾಗುವಂತೆ ವ್ಯಾಪಾರಸ್ಥರಿಗೆ ಅದರಲ್ಲೂ ಮಹಿಳೆಯರಿಗೆ ವಾಹನ ಹಾಗೂ ಇತರ ಸೌಲಭ್ಯಗಳನ್ನು ನೀಡಬೇಕು. ಮುಖ್ಯ ಕೇಂದ್ರಗಳಲ್ಲಿ ಮಾರ್ಕೇಟು ಹಾಗೂ ಮಾರಾಟದ ವ್ಯವಸ್ಥೆಗೆ ಶೆಡ್‌ಗಳನ್ನು ನಿರ್ಮಾಣ ಮಾಡಬೇಕು.

ಕೊರೊನಾ, ಮಳೆ ಮತ್ತು ಪ್ರವಾಹದಿಂದಾಗಿ ಮೀನುಗಾರರು, ಮೀನು ಕಾರ್ಮಿಕರು ಹಾಗೂ ಇತರ ದುಡಿಯುವ ವಿಭಾಗದವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಹಕಾರಿ ವ್ಯವಸ್ಥೆ ಬಲಪಡಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸರಕಾರವನ್ನು ಒತ್ತಾಯಿಸುವುದು ತೀರಾ ಅವಶ್ಯವಿದೆ. ಸಂಘಟನೆ ಮತ್ತು ಜಂಟಿ ಪ್ರತಿಭಟನೆಗಳನ್ನು ರೂಪಿಸಲು ಮುಂದಾಗಬೇಕಾಗಿದೆ. ಪ್ರಚಾರ ಮತ್ತು ಸಂಪರ್ಕವನ್ನು ಹೆಚ್ಚೆಚ್ಚು ಮಾಡಬೇಕಾಗಿದೆ ಎಂದು ಗಂಗಾವತಿಯಲ್ಲಿ 2022ರ ಜನವರಿ 2 ರಿಂದ 4ರವರೆಗೆ ನಡೆದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ 23ನೇ ಸಮ್ಮೇಳನವು ನಿರ್ಣಯವನ್ನು ಅಂಗೀಕರಿಸಿದೆ.

Leave a Reply

Your email address will not be published. Required fields are marked *