ಒಂದು ಬಲಿಷ್ಠ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟುವುದನ್ನು ಬಲಪಡಿಸುವ ನಮ್ಮ ಸಂಕಲ್ಪವನ್ನು ದ್ವಿಗುಣಗೊಳಿಸೋಣ!

(23ನೇ ಮಹಾಧಿವೇಶನದ ಕರಡು ರಾಜಕೀಯ ವರದಿಯ ಆಯ್ದ ಅಂಶಗಳು)

22ನೇ ಮಹಾಧಿವೇಶನದ ನಂತರದ ಅವಧಿಯು ಬಿಜೆಪಿಯ ಮತ್ತಷ್ಟು ಕ್ರೋಡೀಕರಣವನ್ನು ಕಂಡಿದೆ, ಅದು ಸರ್ಕಾರದಲ್ಲಿದ್ದು ಫ್ಯಾಸಿಸ್ಟ್ ತೆರನ ಆರ್‌ಎಸ್‌ಎಸ್‌ನ ಹಿಂದುತ್ವ ಅಜೆಂಡಾವನ್ನು ಆಕ್ರಮಣಕಾರಿಯಾಗಿ ಅನುಸರಿಸುತ್ತಿದೆ. ಕೋಮುವಾದಿ-ಕಾರ್ಪೊರೇಟ್ ಸಂಬಂಧವನ್ನು ಬಲಪಡಿಸುವ, ರಾಷ್ಟ್ರೀಯ ಸ್ವತ್ತುಗಳ ಲೂಟಿಯ, ಬಂಟ ಬಂಡವಾಳಶಾಹಿಯನ್ನು ಉತ್ತೇಜಿಸುವ, ರಾಜಕೀಯ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುವುದು ಮತ್ತು ಪೂರ್ಣ ಪ್ರಮಾಣದ ನಿರಂಕುಶಾಧಿಕಾರವನ್ನು ಹೇರುವ ಉನ್ಮತ್ತ ನವ-ಉದಾರವಾದಿ ಸುಧಾರಣೆಗಳನ್ನು ಅನುಸರಿಸುವ ಮೂಲಕ ಇದು ಬಹುಮುಖೀ ದಾಳಿಯನ್ನು ನಡೆಸಿದೆ.

23rd Congress LOGOಒಂದು ಕೋಮುವಾದಿ ರಾಷ್ಟ್ರೀಯವಾದಿ ಅಬ್ಬರದ ಕಥನವನ್ನು ಕಟ್ಟುವ ಮೂಲಕ ಹೆಚ್ಚು ಸ್ಥಾನಗಳು ಮತ್ತು ಹೆಚ್ಚಿನ ಶೇಕಡಾವಾರು ಮತಗಳೊಂದಿಗೆ 2019 ರ ಚುನಾವಣೆಗಳ ನಂತರ ಬಿಜೆಪಿ ಮರಳಿ ಸರ್ಕಾರವನ್ನು ರಚಿಸಿತು. ಅಂದಿನಿಂದ, ಉನ್ಮತ್ತ ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುತ್ತ ಮತ್ತು ನಮ್ಮ ಜಾತ್ಯತೀತ ಪ್ರಜಾಸತ್ತಾತ್ಮಕ ಸಂವಿಧಾನದ ಅಡಿಪಾಯವನ್ನು ದುರ್ಬಲಗೊಳಿಸುತ್ತ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಸರ್ಜಿಸುವುದನ್ನುಮತ್ತು ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ರದ್ದುಗೊಳಿಸುವುದನ್ನು ಪ್ರಾರಂಭಿಸಿತು; ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಯನ್ನು ತಂದಿತು; ಅಯೋಧ್ಯೆಯಲ್ಲಿ ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸಿತು ಮತ್ತು ಕರಾಳ ನಿವಾರಣಾ ಸ್ಥಾನಬದ್ದತೆಯ ಕಾನೂನುಗಳ ಸಂಪೂರ್ಣ ದುರುಪಯೋಗದ ಮೂಲಕ ಜನರ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲೆ ನಿರ್ದಯವಾಗಿ ದಾಳಿ ನಡೆಸಿದೆ. ಭಾರತೀಯ ಸಾಂವಿಧಾನಿಕ ಗಣರಾಜ್ಯದ ಚಾರಿತ್ರ್ಯವನ್ನು ಬದಲಾಯಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ.

ಈ ಅವಧಿಯಲ್ಲಿ ದುಡಿಯುವ ಜನರ ವಿವಿಧ ವಿಭಾಗಗಳಿಂದ ಮೋದಿ ಸರ್ಕಾರದ ನೀತಿಗಳಿಗೆ ಪ್ರತಿರೋಧ ಹೆಚ್ಚುತ್ತಿರುವುದು ಕಂಡಿತು. ಕಾರ್ಮಿಕ ವರ್ಗವು ಸಾರ್ವತ್ರಿಕ ಮತ್ತು ವಲಯವಾರು ಮುಷ್ಕರಗಳ ಮೂಲಕ ಹೊಸ ಕಾರ್ಮಿಕ ಸಂಹಿತೆಗಳು ಮತ್ತು ಖಾಸಗೀಕರಣದ ಧಾವಂತದ ವಿರುದ್ಧ ಪ್ರತಿಭಟಿಸಿತು. ಸಿಎಎ-ವಿರೋಧಿ ಚಳುವಳಿಯು ಸಂವಿಧಾನ ಮತ್ತು ಪೌರತ್ವವನ್ನು ಬುಡಮೇಲು ಮಾಡುವುದರ ವಿರುದ್ಧ  ಒಂದು  ಸಾಮೂಹಿಕ ಪ್ರತಿಭಟನೆಯಾಗಿ ಬೆಳೆದುಬಂತು. ರೈತರ ಅತಿದೊಡ್ಡ ಮತ್ತು ಸುದೀರ್ಘ ಹೋರಾಟವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದರೊಂದಿಗೆ ಐತಿಹಾಸಿಕ ವಿಜಯದಲ್ಲಿ ಕೊನೆಗೊಂಡಿತು.

ಈ ನಾಲ್ಕು ವರ್ಷಗಳಲ್ಲಿ, ಬಿಜೆಪಿ ಸರ್ಕಾರವು ಅಮೆರಿಕ ಸಂಯುಕ್ತ ಸಂಸ್ಥಾನಗಳ ಸಾಮರಿಕ, ರಾಜಕೀಯ ಮತ್ತು ಭದ್ರತಾ ತಂತ್ರಗಳಿಗೆ ಸಂಪೂರ್ಣವಾಗಿ ಶರಣಾಯಿತು, ಅಮೆರಿಕನ್ ಸಾಮ್ರಾಜ್ಯಶಾಹಿಯ ದೃಢ ಅಡಿಯಾಳು ಮಿತ್ರನಾಗಿ ಹೊರಹೊಮ್ಮಿದೆ. ಇದು ನಮ್ಮ ನೆರೆಹೊರೆಯವರೊಂದಿಗಿನ ಸಂಬಂಧ ಮತ್ತು ಭಾರತದ ಅಂತರಾಷ್ಟ್ರೀಯ ಪ್ರತಿಷ್ಠೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿದೆ. ಇಂದು ಭಾರತದ ಪರಿಸ್ಥಿತಿಯ ಮೇಲೆ ನೇರವಾದ ಪ್ರಭಾವ ಬೀರುವ ಮಹತ್ವದ ಜಾಗತಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದು ಸಂಭವಿಸುತ್ತಿದೆ.

ರಾಜಕೀಯ ನಿಲುವು

1) ಬಿಜೆಪಿ ಸರ್ಕಾರದ ಸುಮಾರು ಎಂಟು ವರ್ಷಗಳ ಕೋಮುವಾದಿ ಕಾರ್ಪೊರೇಟ್ ನಂಟುಗಳ ಕ್ರೋಡೀಕರಣ ಸರ್ವಾಧಿಕಾರಶಾಹಿ ದಾಳಿಗಳನ್ನು ನಡೆಸುತ್ತಿದೆ. 2019 ರಲ್ಲಿ ಸರ್ಕಾರಕ್ಕೆ ಮರಳಿದ ನಂತರ ಇದು ಫ್ಯಾಸಿಸ್ಟ್ ತೆರನ ಆರೆಸ್ಸೆಸ್‍ ನ ಹಿಂದೂ ರಾಷ್ಟ್ರದ ಕಾರ್ಯಸೂಚಿಯನ್ನು ಆಕ್ರಮಣಕಾರಿಯಾಗಿ ಮುಂದೊತ್ತುತ್ತಿದೆ. ಇದರೊಂದಿಗೇ ಅಷ್ಟೇ ಆಕ್ರಮಣಕಾರಿಯಾದ ನವ-ಉದಾರವಾದಿ ನೀತಿಗಳು ಮತ್ತು ಹೆಚ್ಚೆಚ್ಚು ಸರ್ವಾಧಿಕಾರಶಾಹೀ ಆಳ್ವಿಕೆ ನಡೆಸುತ್ತಿದೆ. ಆರ್‌ಎಸ್‌ಎಸ್ ಮುಂದೊತ್ತುತ್ತಿರುವ ಹಿಂದುತ್ವ ರಾಷ್ಟ್ರದ ಅಜೆಂಡಾವು ಸಾಂವಿಧಾನಿಕ ಚೌಕಟ್ಟನ್ನು ಮಾರಕ  ರೀತಿಯಲ್ಲಿ ಕೊರೆದು ಹಾಕುತ್ತಿದೆನಾಶಪಡಿಸುತ್ತಿದೆ ಮತ್ತು ಭಾರತೀಯ ಗಣತಂತ್ರದ  ಜಾತ್ಯತೀತ ಪ್ರಜಾಸತ್ತಾತ್ಮಕ ಚಾರಿತ್ರ್ಯವನ್ನು ಧ್ವಂಸಮಾಡುತ್ತಿದೆ.

2) ಹೀಗಾಗಿ,  ಬಿಜೆಪಿಯನ್ನು ಪ್ರತ್ಯೇಕಿಸುವುದು ಮತ್ತು ಸೋಲಿಸುವುದೇ ಮುಖ್ಯ ಕಾರ್ಯಭಾರ. ಇದಕ್ಕೆ ಜನರನ್ನು ಒಂದು ಬಲಿಷ್ಟ ಸಮರಧೀರ ವಿಧಾನದಲ್ಲಿ ವರ್ಗ ಮತ್ತು ಸಾಮೂಹಿಕ ಹೋರಾಟಗಳಲ್ಲಿ ಸಜ್ಜುಗೊಳಿಸಲು ಸಿಪಿಐ(ಎಂ) ಮತ್ತು ಎಡ ಶಕ್ತಿಗಳ ಸ್ವತಂತ್ರ ಶಕ್ತಿಯ ಬೆಳವಣಿಗೆಯು ಅಗತ್ಯವಿದೆ.

3) ಹಿಂದುತ್ವದ ಅಜೆಂಡಾ ಮತ್ತು ಕೋಮುವಾದಿ ಶಕ್ತಿಗಳ ಚಟುವಟಿಕೆಗಳ ವಿರುದ್ಧ ಹೋರಾಟಕ್ಕೆ ನೇತೃತ್ವ ಕೊಡಲು ಕೂಡ ಪಕ್ಷ ಮತ್ತು ಎಡ ಶಕ್ತಿಗಳನ್ನು ಬಲಪಡಿಸುವ ಅಗತ್ಯವಿದೆ. ಹಿಂದುತ್ವ ಕೋಮುವಾದದ ವಿರುದ್ಧವಿರುವ  ಜಾತ್ಯತೀತ ಶಕ್ತಿಗಳನ್ನು ವಿಶಾಲ ನೆಲೆಯಲ್ಲಿ ಸಜ್ಜುಗೊಳಿಸಲು ಪಕ್ಷವು ಕೆಲಸ ಮಾಡಬೇಕು.

4) ನವ-ಉದಾರವಾದಿ ನೀತಿಗಳ ಆಕ್ರಮಣಕಾರಿ ಅನುಸರಣೆಯ ವಿರುದ್ಧ, ನಮ್ಮ ರಾಷ್ಟ್ರೀಯ ಆಸ್ತಿಗಳ ಸಂಪೂರ್ಣ ಲೂಟಿಯ ವಿರುದ್ಧ, ಸಾರ್ವಜನಿಕ ವಲಯ, ಸಾರ್ವಜನಿಕ ಸೇವೆಗಳು ಮತ್ತು ಖನಿಜ ಸಂಪನ್ಮೂಲಗಳ ದೊಡ್ಡ ಪ್ರಮಾಣದ ಖಾಸಗೀಕರಣದ ವಿರುದ್ಧ ವ್ಯಾಪಕ ನೆಲೆಯಲ್ಲಿ  ಜನರನ್ನು ಸಜ್ಜುಗೊಳಿಸಲು ಪಕ್ಷವು ಮುಂಚೂಣಿಯಲ್ಲಿರಬೇಕು.ಇತ್ತೀಚಿನ ರೈತ ಹೋರಾಟದಂತಹ ವರ್ಗ ಮತ್ತು ಸಾಮೂಹಿಕ ಹೋರಾಟಗಳನ್ನು ತೀವ್ರಗೊಳಿಸುವ ಮೂಲಕವಷ್ಟೇ ಕಾರ್ಪೊರೇಟ್-ಕೋಮುವಾದಿ ಆಳ್ವಿಕೆಯ ವಿರುದ್ಧ ಜನರನ್ನು ಮತ್ತು ಮತ್ತು ಜಾತ್ಯತೀತವಾಗಿರುವ ವಿರೋಧ ಶಕ್ತಿಗಳನ್ನು ಸಾಧ್ಯವಾದಷ್ಟು ವಿಶಾಲ ನೆಲೆಯಲ್ಲಿ ಅಣಿನೆರೆಸಲು ಸಾಧ್ಯ.

5) ಹಿಂದುತ್ವ-ಕಾರ್ಪೊರೇಟ್ ಆಳ್ವಿಕೆಯ ವಿರುದ್ಧದ ಹೋರಾಟದ ಯಶಸ್ಸಿಗೆ ಹಿಂದುತ್ವ ಕೋಮುವಾದಿ ಶಕ್ತಿಗಳ ವಿರುದ್ಧ ಮತ್ತು ನವ-ಉದಾರವಾದಿ ನೀತಿಗಳ ವಿರುದ್ಧ ಏಕಕಾಲದಲ್ಲಿ ಹೋರಾಟ ನಡೆಸಬೇಕಾದ ಅಗತ್ಯವಿದೆ.

6) ಪಕ್ಷವು ಸಂಸತ್ತಿನಲ್ಲಿ ಜಾತ್ಯತೀತ ಪ್ರತಿಪಕ್ಷಗಳೊಂದಿಗೆ ಪರಸ್ಪರ ಸಹಮತಿಯ ವಿಷಯಗಳಲ್ಲಿ ಸಹಕರಿಸುತ್ತದೆ. ಸಂಸತ್ತಿನ ಹೊರಗೆ ಪಕ್ಷವು ಕೋಮುವಾದಿ ಕಾರ್ಯಸೂಚಿಯ ವಿರುದ್ಧ ಎಲ್ಲಾ ಜಾತ್ಯತೀತ ಶಕ್ತಿಗಳ ವಿಶಾಲ ಅಣಿನೆರಿಕೆಗೆ ಕೆಲಸ ಮಾಡುತ್ತದೆ. ಪಕ್ಷ ಮತ್ತು ಎಡಪಂಥೀಯರು ಸ್ವತಂತ್ರವಾಗಿ ಮತ್ತು ಇತರ ಪ್ರಜಾಸತ್ತಾತ್ಮಕ ಶಕ್ತಿಗಳೊಂದಿಗೆ ಒಟ್ಟಾಗಿ, ಜನಗಳ ಪ್ರಶ‍್ನೆಗಳ ಆಧಾರದ ಮೇಲೆ, ನವ-ಉದಾರವಾದದ ಪ್ರಹಾರಗಳು, ಪ್ರಜಾಪ್ರಭುತ್ವದ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ಸರ್ವಾಧಿಕಾಶಾಹೀ ದಾಳಿಗಳು ಮತ್ತು  ಕರಾಳಕಾನೂನುಗಳನ್ನು  ಬಳಸಿ ಭಿನ್ನಾಭಿಪ್ರಾಯಗಳ ನಿಗ್ರಹದ ವಿರುದ್ಧ ಹೋರಾಡುತ್ತಾರೆ.

7) ಪಕ್ಷವು ವರ್ಗ ಮತ್ತು ಸಾಮೂಹಿಕ ಸಂಘಟನೆಗಳ ಐಕ್ಯ ಕಾರ್ಯಾಚರಣೆಗಳಿಗಾಗಿ ಜಂಟಿ ವೇದಿಕೆಗಳನ್ನು ಬೆಂಬಲಿಸುತ್ತದೆ. ಕಾರ್ಮಿಕ-ರೈತ-ಕೃಷಿ ಕಾರ್ಮಿಕರ ಐಕ್ಯ ಕಾರ್ಯಾಚರಣೆಗಳನ್ನು ಬಲಪಡಿಸುವ ಎಲ್ಲಾ ಕ್ರಮಗಳನ್ನು ಪಕ್ಷ ಬೆಂಬಲಿಸುತ್ತದೆ.

8) ಪಕ್ಷದ ಸ್ವತಂತ್ರ ಶಕ್ತಿಯನ್ನು ಅಭಿವೃದ್ಧಿಪಡಿಸುವುದಕ್ಕೆ, ಜತೆಗೆ ಎಡಪಕ್ಷಗಳ ಏಕತೆಯನ್ನು ಬಲಪಡಿಸುವ ಪ್ರಯತ್ನಗಳಿಗೆ ಆದ್ಯತೆ ನೀಡಬೇಕು. ಐಕ್ಯ ಎಡ ಪ್ರಚಾರ-ಪ್ರಕ್ಷೋಭೆಗಳು ಮತ್ತು ಹೋರಾಟಗಳು ಬೂರ್ಜ್ವಾ ಭೂಮಾಲೀಕ ಆಳುವ ವರ್ಗಗಳ ನೀತಿಗಳಿಗೆ ಪರ್ಯಾಯವಾದ ನೀತಿಗಳನ್ನು ಎತ್ತಿ ತೋರಿಸಬೇಕು.

9) ಸಾಮೂಹಿಕ ಸಂಘಟನೆಗಳು ಮತ್ತು ಸಾಮಾಜಿಕ ಚಳುವಳಿಗಳು ಸೇರಿದಂತೆ ಎಲ್ಲಾ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒಟ್ಟುಗೂಡಿಸಲು ಪಕ್ಷವು ನಿರಂತರ ರೀತಿಯಲ್ಲಿ ಕೆಲಸ ಮಾಡಬೇಕು. ಎಡ ಮತ್ತು ಪ್ರಜಾಸತ್ತಾತ್ಮಕ ವೇದಿಕೆಯು ಎಡ ಮತ್ತು ಪ್ರಜಾಸತ್ತಾತ್ಮಕ ಕಾರ್ಯಕ್ರಮಗಳನ್ನು ಪರ್ಯಾಯ ನೀತೀಗಳಾಗಿ ಎತ್ತಿ ತೋರಿಸುವ ಜಂಟಿ ಹೋರಾಟಗಳು ಮತ್ತು ಚಳುವಳಿಗಳನ್ನು ನಡೆಸಬೇಕು.

10) ಚುನಾವಣೆಗಳು ನಡೆಯುವ ಸಮಯದಲ್ಲಿ, ಮೇಲೆ ಹೇಳಿದ ರಾಜಕೀಯ ಮಾರ್ಗವನ್ನು ಆಧರಿಸಿ ಬಿಜೆಪಿ-ವಿರೋಧಿ ಮತಗಳನ್ನು ಗರಿಷ್ಟ ಪ್ರಮಾಣದಲ್ಲಿ ಕ್ರೋಡೀಕರಿಸಲು ಸೂಕ್ತ ಚುನಾವಣಾ ಕಾರ್ಯತಂತ್ರಗಳನ್ನು ಅಂಗೀಕರಿಸಲಾಗುವುದು.

ಪ್ರಸ್ತುತ ಸನ್ನಿವೇಶದಲ್ಲಿ  ಕಾರ್ಯಭಾರಗಳು

i) ಪಕ್ಷವು ತನ್ನ ಸ್ವತಂತ್ರ ಪಾತ್ರವನ್ನು ಬಲಪಡಿಸಲು ಆದ್ಯತೆ ನೀಡಬೇಕು, ನಿರಂತರ ವರ್ಗ ಮತ್ತು ಸಾಮೂಹಿಕ ಹೋರಾಟಗಳ ಮೂಲಕ ತನ್ನ ಪ್ರಭಾವ ಮತ್ತು ರಾಜಕೀಯ ಮಧ್ಯಪ್ರವೇಶದ ಸಾಮರ್ಥ್ಯಗಳನ್ನು ವಿಸ್ತರಿಸಬೇಕು. ಜನರ ಸಮಸ್ಯೆಗಳ ಮೇಲೆ ಸ್ಥಳೀಯ ಹೋರಾಟಗಳನ್ನು ಬಲಪಡಿಸಲು, ಅವುಗಳ ಸರಿಯಾದ ಅನುಸರಣೆಗೆ  ವಿಶೇಷ ಗಮನ ನೀಡಬೇಕು.

ii) ನವ-ಉದಾರವಾದಿ ನೀತಿಗಳಿಂದ ತೀವ್ರತರವಾದ ಆರ್ಥಿಕ ಶೋಷಣೆಗೆ ಒಳಗಾದ ಎಲ್ಲಾ ವಿಭಾಗಗಳ ಜನರನ್ನು ಜೀವನೋಪಾಯದ ಸಮಸ್ಯೆಗಳ ಹೋರಾಟಗಳಲ್ಲಿ ಒಟ್ಟಾಗಿ ಅಣಿನೆರೆಸಸಬೇಕು. ಬೆಳೆದು ಬರುವ ಎಲ್ಲಾ ಸ್ವಯಂಪ್ರೇರಿತ ಹೋರಾಟಗಳಲ್ಲಿ ಪಕ್ಷವು ಅವುಗಳನ್ನು ಬಲಪಡಿಸುವ ಸಲುವಾಗಿ ಸಕ್ರಿಯವಾಗಿ ಮಧ್ಯಪ್ರವೇಶಿಸಬೇಕು ಮತ್ತು ಸೇರಿಕೊಳ್ಳಬೇಕು.

iii) ಹಿಂದುತ್ವ ಕೋಮುವಾದದ ವಿರುದ್ಧದ ಹೋರಾಟದಲ್ಲಿ ಪಕ್ಷವು ಮುಂಚೂಣಿಯಲ್ಲಿರಬೇಕು. ಈ ಹೋರಾಟ ಬಹು ಸ್ತರಗಳಲ್ಲಿ ನಿರಂತರ ನಡೆಯಬೇಕಿದೆ. ಹಿಂದುತ್ವ ಶಕ್ತಿಗಳ ಚಟುವಟಿಕೆಗಳನ್ನು ಎದುರಿಸಲು ಸಂಬಂಧಪಟ್ಟ ನಾಗರಿಕರು, ಸಂಘಟನೆಗಳು ಮತ್ತು ಸಾಮಾಜಿಕ ಚಳುವಳಿಗಳು ಸೇರಿದಂತೆ ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳ ವಿಶಾಲವಾದ ಏಕತೆಯನ್ನು ಬೆಸೆಯಬೇಕು.

iv) ಪಕ್ಷವು ಸರ್ವಾಧಿಕಾರಶಾಹೀ ಕ್ರಮಗಳನ್ನು ವಿರೋಧಿಸಲು ಮುಂದಾಳತ್ವ ವಹಿಸಬೇಕು ಮತ್ತು ಹಿಂದುತ್ವ ಕೋಮುವಾದದ ಚಟುವಟಿಕೆಗಳ ವಿರುದ್ಧ ಮತ್ತು ಸಾಂವಿಧಾನಿಕ ವ್ಯವಸ್ಥೆಯ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಸತ್ವವನ್ನು ನಾಶಪಡಿಸುವುದರ ವಿರುದ್ಧ, ಮಾನವ ಹಕ್ಕುಗಳು, ಪ್ರಜಾಸತ್ತಾತ್ಮಕ ಹಕ್ಕುಗಳು, ನಾಗರಿಕ ಸ್ವಾತಂತ್ರ್ಯಗಳು, ಕಲಾತ್ಮಕ ಸ್ವಾತಂತ್ರ್ಯ ಮತ್ತು ಶೈಕ್ಷಣಿಕ ಸ್ವಾಯತ್ತತೆಯ ರಕ್ಷಣೆಯಲ್ಲಿ ಜಂಟಿ ಹೋರಾಟಗಳನ್ನು ಬೆಸೆಯಲು ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳ ಸಹಕಾರವನ್ನು ಪಡೆಯಬೇಕು.

v) ಪಕ್ಷವು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟಗಳನ್ನು ಮುನ್ನಡೆಸುವ ಪ್ರಯತ್ನಗಳನ್ನು ಬಲಪಡಿಸಬೇಕು ಮತ್ತು ಮಹಿಳೆಯರು, ದಲಿತರು ಹಾಗೂ ಆದಿವಾಸಿಗಳ ಮೇಲಿನ ಸಾಮಾಜಿಕ ದಮನದ ವಿರುದ್ಧದ ಪ್ರಶ್ನೆಗಳನ್ನು ಎತ್ತಿಕೊಳ್ಳಬೇಕು.

vi) ಹಿಂದುತ್ವ ಕೋಮುವಾದದ ಆಕ್ರಮಣಕಾರಿ ದಾಳಿಗಳ ವಿರುದ್ಧ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಭದ್ರತೆಯನ್ನು ರಕ್ಷಿಸಬೇಕು.

vii) ಪಕ್ಷವು ಕಂದಾಚಾರಗಳು, ಮೂಢನಂಬಿಕೆ, ಅತಾರ್ಕಿಕತೆ ಮತ್ತು ಕುರುಡು ವಿಶ್ವಾಸಗಳ ಬೆಳವಣಿಗೆಯ ವಿರುದ್ಧ ಸೈದ್ಧಾಂತಿಕ/ಸಾಮಾಜಿಕ ಹೋರಾಟಗಳನ್ನು ಬಲಪಡಿಸಬೇಕು. ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಮತ್ತು ವಿವೇಚನಾಹೀನತೆ ಮತ್ತು ಅವಿವೇಕದ ವಿರುದ್ಧ ವಿವೇಚನೆ  ಮತ್ತು ವಿವೇಕದ ಸಾರ್ವಜನಿಕ ಮಂಥನವನ್ನು ಬಲಪಡಿಸುವ ಅಭಿಯಾನಗಳಲ್ಲಿ ಪಕ್ಷವು ಮುಂಚೂಣಿಯಲ್ಲಿರಬೇಕು. ವೈಜ್ಞಾನಿಕ ಮನೋಭಾವದ ರಕ್ಷಣೆಯಲ್ಲಿ ಮತ್ತು ಪುನರುಜ್ಜೀವನವಾದದ ವಿರುದ್ಧ ವಿಶಾಲ ಅಣಿನೆರಿಕೆಯನ್ನು ಬೆಸೆಯಬೇಕು.

viii) ಪಕ್ಷವು ನಮ್ಮ ರಾಷ್ಟ್ರೀಯ ಮತ್ತು ಆರ್ಥಿಕ ಸಾರ್ವಭೌಮತ್ವದ ರಕ್ಷಣೆಯಲ್ಲಿ ಭಾರತೀಯ ಜನತೆಯ ನಡುವೆ ಸಾಮ್ರಾಜ್ಯಶಾಹಿ ವಿರೋಧಿ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು. ಸಮಾಜವಾದವೇ ಬಂಡವಾಳಶಾಹಿಗೆ ನಿಜವಾದ ಏಕೈಕ ಪರ್ಯಾಯ ಎಂಬುದನ್ನು ಎತ್ತಿ ತೋರಿಸುವ ಅಭಿಯಾನಗಳನ್ನು ಬಲಪಡಿಸಬೇಕು.

ix) ಅಮೆರಿಕಾದ ಸಾಮ್ರಾಜ್ಯಶಾಹಿಗೆ ಮೋದಿ ಸರ್ಕಾರದ ಶರಣಾಗತಿಯ ವಿರುದ್ಧ ಪಕ್ಷವು ಜನಾಭಿಪ್ರಾಯವನ್ನು ಅಣಿನೆರೆಸಬೇಕು. ಭಾರತದ ಸ್ವತಂತ್ರ ವಿದೇಶಾಂಗ ನೀತಿಯ ಮರುಸ್ಥಾಪನೆಗಾಗಿ ಹೋರಾಟಗಳನ್ನು ಕೈಗೊಳ್ಳಬೇಕು.

x) ಪಕ್ಷವು ಕೇರಳದಲ್ಲಿ ಎಲ್‌ಡಿಎಫ್ ಸರ್ಕಾರದ ರಕ್ಷಣೆಯನ್ನು ಮತ್ತು ಪಕ್ಷದ ವಿರುದ್ಧ ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿ ನಡೆಸಿರುವ  ಫ್ಯಾಸಿಸ್ಟ್ ತೆರನ ದಾಳಿಗಳ ವಿರುದ್ಧ ಹೋರಾಟವನ್ನು  ಕೈಗೆತ್ತಿಕೊಳ್ಳಬೇಕು.

ತೀರ್ಮಾನಗಳು

ಈ ಕಾರ್ಯಭಾರಗಳನ್ನು ಈಡೇರಿಸಲು ದೇಶಾದ್ಯಂತ ಒಂದು ಪ್ರಬಲ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟುವುದು ಅತ್ಯಗತ್ಯ. ಮಾರ್ಕ್ಸ್‌ವಾದ ಮತ್ತು ಲೆನಿನ್‍ ವಾದದ ಆಧಾರದ ಮೇಲೆ ಒಂದು ಬಲವಾದ ಪಕ್ಷವನ್ನು ಸಾಮೂಹಿಕ ನೆಲೆಯಲ್ಲಿ ಕಟ್ಟುವುದು ಕೋಲ್ಕತ್ತಾ ಸಂಘಟನಾ ಪ್ಲೀನಮ್‌ ತೆಗೆದುಕೊಂಡ ನಿರ್ಧಾರಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಮೂಲಕ ಮಾತ್ರವೇ ಸಾಧ್ಯ. ಇದು ವಿಶೇಷವಾಗಿ ಈ ಕೆಳಗಿನವುಗಳ ಮೇಲೆ ಗಮನ ಕೇಂದ್ರೀಕರಿಸಬೇಕು:

1) ಜನತೆಯೊಂದಿಗೆ ಬಲವಾದ ಬಂಧಗಳನ್ನು ಸ್ಥಾಪಿಸಲು ಒಂದು ಸಮೂಹ ನಿಲುವಿನ ಕ್ರಾಂತಿಕಾರಿ ಪಕ್ಷವನ್ನು ಬಲಪಡಿಸುವುದು.

2) ಜನತೆಯ ನಡುವೆ ಪಕ್ಷದ ವ್ಯಾಪ್ತಿಯನ್ನು ಮತ್ತು ಪ್ರಭಾವವನ್ನು ವಿಸ್ತಾರಗೊಳಿಸುವುದು ಮತ್ತು ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಅಣಿನೆರೆಸುವುದು.

3) ಕೋಲ್ಕತ್ತಾ ಪ್ಲೀನಮ್ ನಿರ್ದೇಶನದಂತೆ ಗುಣಮಟ್ಟದ ಸದಸ್ಯತ್ವದೊಂದಿಗೆ ಪಕ್ಷದ ಸಂಘಟನೆಯನ್ನು ಬಲಪಡಿಸುವುದು.

4) ಯುವಕರು ಹಾಗೂ ಮಹಿಳೆಯರನ್ನು ಪಕ್ಷದತ್ತ ಸೆಳೆಯುವ ಪ್ರಯತ್ನಗಳ ಮೇಲೆ ಗಮನ ಕೇಂದ್ರೀಕರಿಸುವುದು.

5) ಎಲ್ಲಾ ಪರಕೀಯ ಸಿದ್ಧಾಂತಗಳ ವಿರುದ್ಧ ಸೈದ್ಧಾಂತಿಕ ಹೋರಾಟಗಳನ್ನು ಬಲಪಡಿಸುವುದು.

ಒಂದು ಬಲಿಷ್ಠ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟುವುದನ್ನು  ಬಲಪಡಿಸುವ ನಮ್ಮ ಸಂಕಲ್ಪವನ್ನು ದ್ವಿಗುಣಗೊಳಿಸೋಣ!

ಸಮೂಹ ನಿಲುವಿನ ಕ್ರಾಂತಿಕಾರಿ ಪಕ್ಷದ ಕಡೆಗೆ ಮುನ್ನಡೆಯೋಣ!

ಅಖಿಲ ಭಾರತ ಸಾಮೂಹಿಕ ನೆಲೆಯೊಂದಿಗೆ ಬಲಿಷ್ಠ ಸಿಪಿಐ(ಎಂ) ಕಡೆಗೆ ಮುನ್ನಡೆಯೋಣ!

Leave a Reply

Your email address will not be published. Required fields are marked *