ಬೆಲೆ ಏರಿಕೆ ವಿರುದ್ಧ ಸಿಪಿಐ(ಎಂ) ನಿಂದ ರಾಜ್ಯಾದ್ಯಂತ ಪ್ರತಿಭಟನೆ

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಔಷಧ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ರಾಷ್ಟ್ರಾದ್ಯಂತ ಪ್ರತಿಭಟನೆ ಮಾಡುವಂತೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷವು ಕರೆ ನೀಡಿದ ಮೇರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಏಪ್ರಿಲ್ 4 ರಂದು ಪ್ರತಿಭಟನೆ ನಡೆಯಿತು.

ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ನಡೆದ ಪ್ರತಿಭಟನೆಯನ್ನುದ್ದೇಶಿಸಿ ತಾಲೂಕು ಸಮಿತಿ ಕಾರ್ಯದರ್ಶಿ ಶಿವಕುಮಾರ್, ಸಮಿತಿ ಸದಸ್ಯ ಶೇಖರ ಲಾಯಿಲ ಮಾತನಾಡಿದರು.

Udupi

ಬ್ರಹ್ಮಾವರದ ಆಕಾಶವಾಣಿ ಬಳಿ ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಮುಖಂಡರಾದ ಕೆ. ಶಂಕರ್, ಎಚ್. ನರಸಿಂಹ ಮಾತನಾಡಿದರು.

ಬೆಂಗಳೂರು ಪೂರ್ವ ವಲಯ ಸಮಿತಿ ಕೆ.ಆರ್ ಪುರಂ ಬಿಬಿಎಂಪಿ ಕಚೇರಿಯ ಮುಂಭಾಗ, ಏಪ್ರಿಲ್ 07 ರಂದು ಪೆಟ್ರೋಲ್, ಡೀಸೆಲ್, ಎಲ್.ಪಿ.ಜಿ. ಮತ್ತು ಅಗತ್ಯ ವಸ್ತುಗಳ ವಿಪರೀತ ಬೆಲೆ ಏರಿಕೆಯ ವಿರುದ್ದ ಪ್ರತಿಭಟನೆ ನಡೆಸಿತು.

WhatsApp Image 2022-04-07 at 9.59.58 PM

ಪ್ರತಿಭಟನೆಯನ್ನು ಉದ್ದೇಶಿಸಿ, ಸಿಪಿಐ(ಎಂ) ಪಕ್ಷದ ಬೆಂಗಳೂರು ಪೂರ್ವ ವಲಯ ಕಾರ್ಯದರ್ಶಿ ಕಾಮ್ರೇಡ್ ಎನ್. ನಾಗರಾಜ ರವರು ಮಾತನಾಡುತ್ತಾ, ಕೇಂದ್ರ ಸರ್ಕಾರದ ಜನ ವಿರೋಧಿ ಕ್ರಮಗಳನ್ನು ಉಗ್ರವಾಗಿ ಖಂಡಿಸಿದರು. ಕೂಡಲೇ ಹೆಚ್ಚಿಸಿರುವ ಪೆಟ್ರೋಲ್, ಡೀಸೆಲ್ ಹಾಗೂ ಅಡಿಗೆ ಅನಿಲ ಸಿಲಿಂಡರ್ ಬೆಲೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಕೇರಳದ ಕಣ್ಣೂರು ಜಿಲ್ಲೆನಲ್ಲಿ ನಡೆಯುತ್ತಿರುವ ಪಕ್ಷದ ಅಖಿಲ ಭಾರತ ಮಹಾಧಿವೇಶನದಲ್ಲಿ ಇದರ ಕುರಿತು ನಿರ್ಣಯವನ್ನು ತೆಗೆದುಕೊಳ್ಖಲಾಗಿದೆ. ಸಿಪಿಐ(ಎಂ) ದೇಶಾದ್ಯಂತ ಬೆಲೆ ಏರಿಕೆಯ ವಿರುದ್ದ ದೊಡ್ಡ ಆಂದೋಲನವನ್ನು ನಡೆಸಲು ಕರೆ ನೀಡಿದೆ. ಇದರ ಭಾಗವಾಗಿ, ಪ್ರತಿಭಟನೆ ನಡೆಸಲಾಯಿತು ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ, ಪಕ್ಷದ ಜಿಲ್ಲಾ ಮುಂಖಡರಾದ ಗೌರಮ್ಮ ಹಾಗೂ ವಲಯ ಸಮಿತಿ ನಾಯಕರಾದ ಕಾಮ್ರೇಡ್ ಬಿ ಎನ್ ಶ್ರೀನಿವಾಸ್, ಕಾಮ್ರೇಡ್‌ ಶರಣಪ್ಪ, ಕಾಮ್ರೇಡ್‌ ಸಿ ರಮೇಶ್, ಕಾಮ್ರೇಡ್‌ ಮಂಗಳ ಹಾಗೂ ಕಾಮ್ರೇಡ್‌ ನಂಜೇಗೌಡ  ಮಾತನಾಡಿದರು.

Dharwada

Leave a Reply

Your email address will not be published. Required fields are marked *