ಮುಸ್ಲಿಮರ ಮೇಲೆ ಹೊಸ ಮಟ್ಟದ ಧಾಳಿಗಳು

ಪ್ರಕಾಶ್ ಕಾರಟ್

Prakash Karat
ಪ್ರಕಾಶ್ ಕಾರಟ್

ರಾಜ್ಯ ಸರ್ಕಾರಗಳ ಕುಮ್ಮಕ್ಕಿನಿಂದಲೇ ಈ ಘಟನೆಗಳು ನಡೆದಿದೆಯೆನ್ನುವುದಕ್ಕೆ ಮಧ್ಯ ಪ್ರದೇಶದ ಖರ್ಗೋನ್‌ನಲ್ಲಿ ಮುಸ್ಲಿಮರ ಅಂಗಡಿ ಹಾಗೂ ಮನೆಗಳನ್ನು ರಾಜ್ಯದ ಗೃಹ ಸಚಿವರ ನಿರ್ದೇಶನದ ಮೇರೆಗೆ ಬುಲ್ಡೋಜರ್ ಬಳಸಿ ನೆಲಸಮ ಮಾಡಿದ್ದು ಸಾಕ್ಷಿಯಾಗಿದೆ. ಆದಿತ್ಯನಾಥ ಸರ್ಕಾರದ ಕುಖ್ಯಾತ ಬುಲ್ಡೋಜರ್ ನೀತಿಯನ್ನು ಇದೀಗ ಬಿಜೆಪಿ ಆಡಳಿತದ ಇತರ ರಾಜ್ಯಗಳಲ್ಲೂ ಬಳಕೆಗೆ ತರಲಾಗುತ್ತಿದೆ. ಉತ್ತರಾಖಂಡದ ಭಗವಾನ್‌ಪುರದಲ್ಲಿ ಒಂದು ಬುಲ್ಡೋಜರ್ ನಿಲ್ಲಿಸಲಾಗಿದ್ದು ಪೊಲೀಸರಿಗೆ ಬೇಕಾಗಿರುವ ಮುಸ್ಲಿಮರು ಶರಣಾಗದಿದ್ದರೆ ಅವರ ಮನೆಗಳನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಪೊಲೀಸರು ಕೇಂದ್ರ ಸರ್ಕಾರದ ಅಧೀನದಲ್ಲಿರುವ ದೆಹಲಿಯ ಜಹಾಂಗಿರ್‌ಪುರಿಗೆ ಬುಲ್ಡೋಜರ್‌ಗಳನ್ನು ರವಾನಿಸಲಾಗಿದೆ. ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ ಎರಡು ಗಂಟೆ ಕಾಲ ಅಂಗಡಿಗಳು ಹಾಗೂ ಮನೆಗಳನ್ನು ನಾಶ ಮಾಡುವುದನ್ನು ಮುಂದುವರಿಸಲಾಯಿತು.

ಮುಸ್ಲಿಮರ ಮೇಲೆ ಹಿಂದೂತ್ವ ಶಕ್ತಿಗಳು ನಡೆಸುತ್ತಿರುವ ದಾಳಿಗಳು ಏಪ್ರಿಲ್‌ನಲ್ಲಿ ತೀವ್ರ ಹೆಚ್ಚಳವಾಗಿದೆ. ಏಪ್ರಿಲ್ 2ರಂದು ಆರಂಭವಾಗುವ ನವರಾತ್ರಿ ಹಬ್ಬದಿಂದ ಹಿಡಿದು ಏಪ್ರಿಲ್ 10ರ ರಾಮ ನವಮಿ ವರೆಗೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದಂಥ ಆರ್‌ಎಸ್‌ಎಸ್ ಸಂಘಟನೆಗಳು ಹಿಂದೂ ಹೊಸ ವರ್ಷವಾದ ಏಪ್ರಿಲ್ 2 ಮತ್ತು ಏಪ್ರಿಲ್ 10ರ ರಾಮನವಮಿ ಮೆರವಣಿಗೆಯನ್ನು ಯೋಜಿತವಾಗಿ ಹಾಗೂ ಸಂಘಟಿತವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿ ದಾಳಿ ಮಾಡಲು ಬಳಸಿಕೊಂಡವು.

Photo 24 04 2022A

ದೇಶದೆಲ್ಲೆಡೆ ಅವುಗಳ ಕಾರ್ಯವಿಧಾನ ಒಂದೇ ರೀತಿಯಾಗಿತ್ತು. ಶಸ್ತ್ರಾಸ್ತ್ರಗಳೊಂದಿಗೆ ಮೆರವಣಿಗೆ ನಡೆಸಿದರು ಹಾಗೂ ಮುಸ್ಲಿಂ ಪ್ರದೇಶಗಳಿಂದ ಹಾದು ಹೋಗುತ್ತಿರುವಾಗ ಮಸೀದಿಗಳ ಮುಂದೆ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದರು. ಇದರಿಂದಾಗಿ ಘರ್ಷಣೆಗಳು ಉಂಟಾದವು. ಅವುಗಳು ಮುಸ್ಲಿಮರ ಅಂಗಡಿಗಳು ಹಾಗೂ ಮನೆಗಳ ಮೇಲೆ ದಾಳಿ ಮಾಡಲು ಹಾಗೂ ದೊಂಬಿ ಎಬ್ಬಿಸಲು ಸೂಚನೆಗಳಾಗಿದ್ದವು.

ಇವುಗಳು ಹಠಾತ್ ಕೋಮು ಗಲಭೆ ಅಥವಾ ಸಂಘರ್ಷಗಳಲ್ಲ ಎನ್ನುವುದಕ್ಕೆ ಏಪ್ರಿಲ್ 10 ರಂದು ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್, ಬಂಗಾಳ, ಮಹಾರಾಷ್ಟ್ರ ಮತ್ತು ಗೋವಾ -ಹೀಗೆ ಆರು ರಾಜ್ಯಗಳಲ್ಲಿ ರಾಮನವಮಿ ಮೆರವಣಿಗೆಗಳ ಸಂದರ್ಭ ಸುಮಾರು ಒಂದು ಡಜನ್ ಸ್ಥಳಗಳಲ್ಲಿ ಹಿಂಸಾಚಾರ ನಡೆದಿದ್ದೇ ಸಾಕ್ಷಿಯಾಗಿದೆ. ಅದಕ್ಕೂ ಮುನ್ನ ಏಪ್ರಿಲ್ 2ರಂದು ರಾಜಸ್ಥಾನದ ಕರೌಳಿಯಲ್ಲಿ ಹಿಂದೂ ಹೊಸ ವರ್ಷಾಚರಣೆಯ ಬೈಕ್ ರ‍್ಯಾಲಿ ನಡೆದ ಪರಿಣಾಮವಾಗಿ ಮುಸ್ಲಿಂ ಪ್ರದೇಶದಲ್ಲಿ ಮೊದಲ ದಾಳಿ ನಡೆದಿತ್ತು.

ಈ ಎಲ್ಲ ಪ್ರದೇಶಗಳಲ್ಲಿ ದಾಳಿಗಳಲ್ಲಿ ಸಂತ್ರಸ್ತರಾದ ಬಹುತೇಕರು ಬಡ ಮುಸ್ಲಿಮರಾಗಿದ್ದು ಅವರ ಮನೆಗಳು ಮತ್ತು ಅಂಗಡಿಗಳನ್ನು ಲೂಟಿ ಮಾಡಲಾಗಿದೆ ಅಥವಾ ನಾಶ ಮಾಡಲಾಗಿದೆ. ಬಿಜೆಪಿ ಆಡಳಿತದ ಈ ರಾಜ್ಯಗಳಲ್ಲಿ ದಾಳಿಗಳನ್ನು ತಡೆಯಲು ಪ್ರಯತ್ನಿಸದ ಪೊಲೀಸರು, ನಂತರ ಸಂತ್ರಸ್ತ ಮುಸ್ಲಿಮರನ್ನೇ ಹಾಗೂ ದಾಳಿಗಳನ್ನು ಪ್ರತಿರೋಧಿಸಲು ಪ್ರಯತ್ನಿಸಿದ ಜನರನ್ನೇ ಬಂಧಿಸಿದ್ದಾರೆ.

download

ಒಂದು ವಾರದ ನಂತರ, ಏಪ್ರಿಲ್ 16ರಂದು ಹನುಮಾನ್ ಜಯಂತಿ ಮೆರವಣಿಗೆಗಳ ವೇಳೆ ನಾಲ್ಕು ರಾಜ್ಯಗಳಲ್ಲಿ ಮುಸ್ಲಿಮರ ಮೇಲೆ ಇನ್ನೊಂದು ಸುತ್ತಿನ ಆಕ್ರಮಣಗಳು ನಡೆದಿವೆ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಹೊಲಗುಂದ ಗ್ರಾಮ, ಉತ್ತರ ಪ್ರದೇಶದ ರೂರ್ಕಿಯ ಭಗವಾನ್‌ಪುರ ಮತ್ತು ದೆಹಲಿಯ ಜಹಾಂಗಿರ್‌ಪುರಿಯಲ್ಲಿ ಇದೇ ವಿಧಾನದ ಘಟನೆಗಳು ನಡೆದಿವೆ.

ಸರ್ಕಾರಗಳ ಕುಮ್ಮಕ್ಕು

ರಾಜ್ಯ ಸರ್ಕಾರಗಳ ಕುಮ್ಮಕ್ಕಿನಿಂದಲೇ ಈ ಘಟನೆಗಳು ನಡೆದಿದೆಯೆನ್ನುವುದಕ್ಕೆ ಮಧ್ಯ ಪ್ರದೇಶದ ಖರ್ಗೋನ್‌ನಲ್ಲಿ ಮುಸ್ಲಿಮರ ಅಂಗಡಿ ಹಾಗೂ ಮನೆಗಳನ್ನು ರಾಜ್ಯದ ಗೃಹ ಸಚಿವರ ನಿರ್ದೇಶನದ ಮೇರೆಗೆ ಬುಲ್ಡೋಜರ್ ಬಳಸಿ ನೆಲಸಮ ಮಾಡಿದ್ದು ಸಾಕ್ಷಿಯಾಗಿದೆ. ಆದಿತ್ಯನಾಥ ಸರ್ಕಾರದ ಕುಖ್ಯಾತ ಬುಲ್ಡೋಜರ್ ನೀತಿಯನ್ನು ಇದೀಗ ಬಿಜೆಪಿ ಆಡಳಿತದ ಇತರ ರಾಜ್ಯಗಳಲ್ಲೂ ಬಳಕೆಗೆ ತರಲಾಗುತ್ತಿದೆ. ಉತ್ತರಾಖಂಡದ ಭಗವಾನ್‌ಪುರದಲ್ಲಿ ಒಂದು ಬುಲ್ಡೋಜರ್ ನಿಲ್ಲಿಸಲಾಗಿದ್ದು ಪೊಲೀಸರಿಗೆ ಬೇಕಾಗಿರುವ ಮುಸ್ಲಿಮರು ಶರಣಾಗದಿದ್ದರೆ ಅವರ ಮನೆಗಳನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಪೊಲೀಸರು ಕೇಂದ್ರ ಸರ್ಕಾರದ ಅಧೀನದಲ್ಲಿರುವ ದೆಹಲಿಯ ಜಹಾಂಗಿರ್‌ಪುರಿಗೆ ಬುಲ್ಡೋಜರ್‌ಗಳನ್ನು ರವಾನಿಸಲಾಗಿದೆ. ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ ಎರಡು ಗಂಟೆ ಕಾಲ ಅಂಗಡಿಗಳು ಹಾಗೂ ಮನೆಗಳನ್ನು ನಾಶ ಮಾಡುವುದನ್ನು ಮುಂದುವರಿಸಲಾಯಿತು.

ಕಳೆದ ಮೂರು ವಾರಗಳಿಂದ ದೇಶದಾದ್ಯಂತ ನಡೆಯುತ್ತಿರುವ ಇಂಥ ಘಟನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಅಗತ್ಯ. ಇವುಗಳು ಕೆಲವು ಧಾರ್ಮಿಕ ಚಟುವಟಿಕೆಗಳ ಸಂದರ್ಭ ಅಥವಾ ಗುಂಪುಗಳ ಘರ್ಷಣೆಯಿಂದ ಸಂಭವಿಸುವಂಥ ಹಠಾತ್ತನೆ ನಡೆಯುವ ಕೋಮು ಗಲಭೆಗಳು ಅಥವಾ ಸಾಂಪ್ರದಾಯಿಕ ಘರ್ಷನೆಗಳಲ್ಲ. ಇದು ಮುಸ್ಲಿಮ್-ವಿರೋಧಿ ಪ್ರಚಾರವನ್ನು ಹೊಸ ಮಟ್ಟಕ್ಕೆ ಒಯ್ಯುವ ಪೂರ್ವ-ಯೋಜಿತ ಸಂಚಾಗಿದೆ. ಸ್ಥಳೀಯ ಮಟ್ಟದಲ್ಲಿ ಈ ರೀತಿಯ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸುವ ಅಪಾಯವಿದೆ. ನಿರುದ್ಯೋಗಿಗಳ ಬೃಹತ್ ಪಡೆ ಹಾಗೂ ಆರ್ಥಿಕ ಸಂಕಷ್ಟ ಸಮಾಜದ ಬಹುದೊಡ್ಡ ವಿಭಾಗಗಳನ್ನು ಬಾಧಿಸುತ್ತಿರುವಾಗ ಹಿಂದೂತ್ವ ಸಂಘಟನೆಗಳು ಜನರನ್ನು ವಿಚ್ಛಿದ್ರಕಾರಿ ಹಾಗೂ ವಿನಾಶಕಾರಿ ಉದ್ದೇಶಗಳಿಗೆ ಬಳಸುತ್ತಿವೆ.

JCB1

ಧಾರ್ಮಿಕ ಮೆರವಣಿಗೆ ಹೆಸರಿನಲ್ಲಿ ಶಸ್ತ್ರಾಸ್ತ್ರಗಳನ್ನು ಝಳಪಿಸುವುದು ಹಾಗೂ ಮುಸ್ಲಿಮರ ವಿರುದ್ಧ ನಿಂದನಾತ್ಮಕ ಘೋಷಣೆಗಳನ್ನು ಕೂಗುವುದು, ಮಸೀದಿಗಳ ಹೊರಗೆ ಪ್ರಚೋದನಾತ್ಮಕ ಚಟುವಟಿಕೆ ನಡೆಸುವುದು, ಅವುಗಳನ್ನು ಅಪವಿತ್ರಗೊಳಿಸುವ ಬೆದರಿಕೆ ಹಾಕುವುದು ಹಾಗೂ ಹಿಂಸಾತ್ಮಕ ಬೈಗುಳ ಇವೆಲ್ಲವೂ ಮುಸ್ಲಿಮರನ್ನು ಬಗ್ಗುಬಡಿದು ಅವಮಾನಗೊಳಿಸುವ ಉದ್ದೇಶ ಹೊಂದಿವೆ. ಇದು ಹಿಂದೂ ಆಕ್ರಮಣಶೀಲತೆ ಹಾಗೂ ಮೇಲುಗೈ ಸ್ಥಿತಿಯ ಪ್ರದರ್ಶನವಾಗಿದೆ. ಅವುಗಳಿಗೆ ಯಾವುದೇ ರೀತಿಯ ಪ್ರತಿರೋಧ ವ್ಯಕ್ತಪಡಿಸಿದರೆ ಅಥವಾ ಪ್ರತಿ-ಕಾರ್ಯಾಚರಣೆ ನಡೆಸಿದರೆ ತಕ್ಷಣವೇ ಪೊಲೀಸರು ಹಾಗೂ ಪ್ರಭುತ್ವ ಯಂತ್ರ ಹಾಜರಾಗುತ್ತವೆ. ರಾಷ್ಟ್ರೀಯ ಭದ್ರತಾ ಕಾನೂನು (ಎನ್‌ಎಸ್‌ಎ) ಅನ್ವಯ ಬಂಧಿಸುವುದು ಮತ್ತು ಮುಸ್ಲಿಮರ ಮನೆಗಳು ಹಾಗೂ ಅಂಗಡಿಗಳನ್ನು ನೆಲಸಮ ಮಾಡುವ ಕೆಲಸ ನಡೆಯುತ್ತದೆ. ಕಾನೂನಿನ ಯಾವುದೇ ಬೆಂಬಲವಿಲ್ಲದೆ ಈ ರೀತಿ ಮಾಡಲಾಗುತ್ತಿದ್ದು ಶಿಕ್ಷೆಯ ಯಾವುದೇ ಭಯವಿಲ್ಲದೆ ಮುಸ್ಲಿಮರ ವಿರುದ್ಧ ಪ್ರಭುತ್ವವು ಏನು ಬೇಕಾದರೂ ಮಾಡಬಹುದು ಎಂಬ ಸಂದೇಶವನ್ನು ಅದು ರವಾನಿಸುತ್ತದೆ.

ಫ್ಯಾಸಿಸ್ಟ್ ಪರಿಭಾಷೆ

ಮುಸ್ಲಿಂ ತೀವ್ರವಾದಿಗಳೇ ಹಿಂಸಾಚಾರಕ್ಕೆ ಕಾರಣ ಎಂದು ಆರ್‌ಎಸ್‌ಎಸ್ ಹೇಳುತ್ತದೆ. `ಭಾರತದಲ್ಲಿ ಹಿಂದೂಗಳ ಹೊಸ ವರ್ಷವಾದ ವರ್ಷ ಪ್ರತಿಪಾದ ಮತ್ತು ರಾಮ ನವಮಿಯಂದು ಇಸ್ಲಾಮ್‌ವಾದಿಗಳು ರಂಪಾಟ ನಡೆಸಿದ್ದಾರೆ’ ಎಂದು ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್ ಬರೆದಿದೆ. ಇದೊಂದು `ಯೋಜಿತ ಜಿಹಾದ್’ ಎಂದೂ ಅದು ಹೇಳಿದೆ. ಈ ರೀತಿಯಾಗಿ, ಆಕ್ರಮಣಕಾರರೇ ಸಂತ್ರಸ್ತರು ಎನ್ನುವ ರೀತಿಯಲ್ಲಿ ವಿಶಿಷ್ಟ ಫ್ಯಾಸಿಸ್ಟಿಕ್ ಪರಿಭಾಷೆಯಲ್ಲಿ ಬಿಂಬಿಸಲಾಗುತ್ತಿದೆ.

ನಮ್ಮನ್ನು ಕಾಡುವ ಪ್ರಾಣಿಯ ಸ್ವರೂಪ ಏನೆಂಬುದು ಸ್ಪಷ್ಟವಾಗಿದೆ. ದುಷ್ಟ ತಂತ್ರಗಳ ಮೂಲಕ ಸಮಾಜದ ಮೇಲೆ ಹಾಗೂ ಅಲ್ಪಸಂಖ್ಯಾತರ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ಹಾಗೂ ತನ್ನ ಅಧಿಪತ್ಯ ಸ್ಥಾಪಿಸುವ ಹಿಂದೂತ್ವವೇ ಅದೆಂಬುದು ನಮಗೆ ಸ್ಪಷ್ಟವಿದೆ. ಭಾರತವು ಆರ್‌ಎಸ್‌ಎಸ್‌ನ ಫ್ಯಾಸಿಸ್ಟ್ ಸಿದ್ಧಾಂತದ ಆಡೊಂಬೊಲವಾಗಬಾರದೆಂದು ಬಯಸುವ ಎಲ್ಲ ಶಕ್ತಿಗಳು ಈ ಅಪಾಯದ ವಿರುದ್ಧ ದೃಢವಾಗಿ ಹೋರಾಡಬೇಕು. ಹಿಂದೂತ್ವ ಸರ್ವಾಧಿಕಾರದ ವಿರುದ್ಧ ರಾಜಿರಹಿತವಾಗಿ ಹೋರಾಡುತ್ತಿರುವ ಎಡ ಶಕ್ತಿಗಳು ಈ ವಿಚಾರದಲ್ಲಿ ನೇತೃತ್ವ ವಹಿಸಬೇಕು.

ಅನು: ವಿಶ್ವ

Leave a Reply

Your email address will not be published. Required fields are marked *