ಶಾಂತಿ ಕಾಪಾಡಲು ಜನತೆಗೆ ಮನವಿ

ಇಬ್ಬರು ತಪ್ಪಿತಸ್ಥರ ವಿರುದ್ಧ ದೃಢ ಕ್ರಮ ಕೈಗೊಳ್ಳಬೇಕುಸಿಪಿಐ(ಎಂ) ಪೊಲಿಟ್ಬ್ಯುರೊ

ಪ್ರವಾದಿ ಮುಹಮ್ಮದ್ ವಿರುದ್ಧ ಇಬ್ಬರು ಬಿಜೆಪಿ ವಕ್ತಾರರು ಮಾಡಿದ ಆಕ್ಷೇಪಾರ್ಹ ಹೇಳಿಕೆಗಳ ವಿರುದ್ಧ ಪ್ರತಿಭಟನೆಗಳ ಸಂದರ್ಭದಲ್ಲಿ ರಾಂಚಿ, ಹೌರಾ ಮತ್ತು ಇತರ ಕೆಲವು ಸ್ಥಳಗಳಲ್ಲಿ ನಡೆದ ಹಿಂಸಾಚಾರದ ಘಟನೆಗಳ ಬಗ್ಗೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯೂರೋ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ.

ಇಂತಹ ಪ್ರಚೋದನಕಾರಿ ಮತ್ತು ಅವಮಾನಕರ ಟೀಕೆಗಳ ವಿರುದ್ಧದ ಕೋಪವು ಸಮರ್ಥನೀಯವಾಗಿದ್ದರೂ, ಯಾವುದೇ ಹಿಂಸಾತ್ಮಕ ಪ್ರತಿಭಟನೆಯನ್ನು ಕೋಮು ಶಕ್ತಿಗಳು ತಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳುತ್ತವೆ ಮತ್ತು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಸಮಾಧಾನ ಮತ್ತು ಶಾಂತಿ ಕಾಪಾಡಬೇಕು ಎಂದು ಅದು ಜನತೆಗೆ ಮನವಿ ಮಾಡಿಕೊಂಡಿದೆ.

ದುರದೃಷ್ಟವಶಾತ್, ದೆಹಲಿ ಪೊಲೀಸರು ಇಬ್ಬರು ಮಾಜಿ ವಕ್ತಾರರನ್ನು ಮಾತ್ರವಲ್ಲದೆ ಪ್ರಕರಣಕ್ಕೆ ಯಾವುದೇ ರೀತಿಯಲ್ಲಿ ಸಂಬಂಧವಿರದ ಒಬ್ಬ ಪತ್ರಕರ್ತರು ಸೇರಿದಂತೆ ಇತರ 30 ಮಂದಿಯನ್ನೂ ಹೆಸರಿಸಿ ಎರಡು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಇದು ಇಬ್ಬರು ಮಾಜಿ ವಕ್ತಾರರು ಎಸಗಿದ ತಪ್ಪಿನ ಘನತೆಯನ್ನು ತಗ್ಗಿಸುವುದಕ್ಕಾಗಿ ಮಾಡಿರುವ ಒಂದು ದಿಕ್ಕು ತಪ್ಪಿಸುವ ನಡೆಯಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ, ಇಬ್ಬರು ಮಾಜಿ ವಕ್ತಾರರ ವಿರುದ್ಧ ಕಾನೂನಿನ ಅಡಿಯಲ್ಲಿ ನಿರ್ದಿಷ್ಟ ಅಪರಾಧಕ್ಕಾಗಿ ಪ್ರತ್ಯೇಕವಾಗಿ ಕಾನೂನಿನಡಿಯಲ್ಲಿ ದೃಢ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *