ರಾಷ್ಟ್ರಪತಿ ಚುನಾವಣೆ ಕುರಿತ ಪ್ರತಿಪಕ್ಷಗಳ ಸಭೆಯಲ್ಲಿ ಸಿಪಿಐ(ಎಂ)ನ್ನು ಎಳಮಾರಂ ಕರೀಂ ಪ್ರತಿನಿಧಿಸುತ್ತಾರೆ

ಮುಂಬರುವ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಚರ್ಚಿಸಲು  ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಜೂನ್‍ 15 ರಂದು ಏರ್ಪಡಿಸಿರುವ ಪ್ರತಿಪಕ್ಷಗಳ ಮುಖಂಡರ ಸಭೆಯಲ್ಲಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪರವಾಗಿ ರಾಜ್ಯಸಭೆಯಲ್ಲಿ ಪಕ್ಷದ ಗುಂಪಿನ ನಾಯಕರಾದ ಎಳಮಾರಮ್ ಕರೀಂ ಪ್ರತಿನಿಧಿಸುತ್ತಾರೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಮುಖ್ಯಮಂತ್ರಿಗಳಿಗೆ ಬರೆದಿರುವ  ಪತ್ರದಲ್ಲಿ ತಿಳಿಸಿದ್ದಾರೆ.

ಪರಸ್ಪರ ಸಮಾಲೋಚನೆ ನಡೆಸಲು ಮತ್ತು ಇಂತಹ ಸಭೆಗೆ ಪಕ್ಷದ ಮುಖಂಡರು ಹಾಜರಾಗಲು ಸಾಧ್ಯವಾಗುವಂತೆ ತಾವು ಅದಕ್ಕೆ ಮೊದಲು ಒಪ್ಪಿಕೊಂಡ  ಕಾರ್ಯಕ್ರಮಗಳನ್ನು ಮರುಹೊಂದಿಸಲು ಸಾಕಷ್ಟು ಸಮಯ ಕೊಟ್ಟಿದ್ದರೆ ಪಕ್ಷದ ನಾಯಕರನ್ನು ಇದನ್ನು ಇನ್ನೂ ಉತ್ತಮವಾಗಿ ಸಾಧಿಸಬಹುದಿತ್ತು. ದುರದೃಷ್ಟವಶಾತ್,ಹಾಗಾಗಿಲ್ಲ. ಆದರೂ ಭಾರತೀಯ ಸಂವಿಧಾನ ಮತ್ತು ಭಾರತೀಯ ಗಣರಾಜ್ಯದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪವನ್ನು ರಕ್ಷಿಸಲು ಎಲ್ಲಾ ಜಾತ್ಯತೀತ ಶಕ್ತಿಗಳನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅಣಿನೆರಿಕೆಯನ್ನು ಬಲಪಡಿಸುವ ಅಗತ್ಯವನ್ನು ಸತತವಾಗಿ ಪ್ರತಿಪಾದಿಸಿಕೊಂಡು ಬಂದಿರುವ ಸಿಪಿಐ(ಎಂ) ಇದಕ್ಕೆ ಅನುಗುಣವಾಗಿ, ಇದರಲ್ಲಿ ಭಾಗವಹಿಸುತ್ತಿದೆ ಎಂದು ಯೆಚುರಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಪತ್ರದ ಪೂರ್ಣಪಾಟ  ಹೀಗಿದೆ:

ಜೂನ್‍ 14, 2022

ಮಾನ್ಯ ಮುಖ್ಯಮಂತ್ರಿಗಳೇ,

ಭಾರತದ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಮುಂಬರುವ ಚುನಾವಣೆಯ ಕುರಿತು ಚರ್ಚಿಸಲು ನವದೆಹಲಿಯ ಕಾನ್ಸ್ಟಿಟ್ಯೂಶನ್ ಕ್ಲಬ್‌ನಲ್ಲಿ ಜೂನ್ 15, 2022 ರಂದು ಮಧ್ಯಾಹ್ನ 3.00 ಗಂಟೆಗೆ ವಿರೋಧ ಪಕ್ಷಗಳ ಸಭೆಯ ಕುರಿತು ನನಗೆ ತಿಳಿಸುವ ನಿಮ್ಮ ಜೂನ್ 11, 2022 ರ ದಿನಾಂಕದ ಪತ್ರ ನಾನು ಪಡೆದಿದ್ದೇನೆ.

ವಿರೋಧ ಪಕ್ಷಗಳ ಇಂತಹ ಸಭೆಗಳು ಯಾವಾಗಲೂ ಸೇರಲು ಬಯಸುವವರ ಗರಿಷ್ಠ ಭಾಗವಹಿಸುವಿಕೆ ಇರುವಂತೆ ಮಾಡಲು ಒಂದು ಪೂರ್ವಭಾವಿ ಪರಸ್ಪರ ಸಮಾಲೋಚನೆಯ ವಿಧಾನವನ್ನು ಅನುಸರಿಸುತ್ತವೆ. ಆದರೆ, ಈ ಸಂದರ್ಭದಲ್ಲಿ, ದಿನಾಂಕ, ಸಮಯ, ಸ್ಥಳ ಮತ್ತು ಕಾರ್ಯಸೂಚಿಯನ್ನು ತಿಳಿಸುವ ಒಂದು ಏಕಪಕ್ಷೀಯ ಪತ್ರವನ್ನು ನಾವು ಪಡೆದಿದ್ದೇವೆ.

ನಿಮ್ಮ ಪತ್ರವು “ಪ್ರತಿಪಕ್ಷದ ಧ್ವನಿಗಳ ಒಂದು ಫಲಪ್ರದ ಸಂಗಮವು ಈ ಸಮಯದ ಅಗತ್ಯವಾಗಿದೆ” ಎಂದು ಉಲ್ಲೇಖಿಸುತ್ತದೆ. ಪರಸ್ಪರ ಸಮಾಲೋಚನೆ ನಡೆಸಲು ಮತ್ತು ಇಂತಹ ಸಭೆಗೆ ಪಕ್ಷದ ಮುಖಂಡರು ಹಾಜರಾಗಲು ಸಾಧ್ಯವಾಗುವಂತೆ ತಾವು ಅದಕ್ಕೆ ಮೊದಲು ಒಪ್ಪಿಕೊಂಡ  ಕಾರ್ಯಕ್ರಮಗಳನ್ನು ಮರುಹೊಂದಿಸಲು ಸಾಕಷ್ಟು ಸಮಯ ಕೊಟ್ಟಿದ್ದರೆ ಇದನ್ನು ಇನ್ನೂ ಉತ್ತಮವಾಗಿ ಸಾಧಿಸಬಹುದಿತ್ತು. ದುರದೃಷ್ಟವಶಾತ್, ನಿಮ್ಮ ಪತ್ರದ ಸ್ವೀಕೃತಿ ಮತ್ತು ಸಭೆಯ ದಿನಾಂಕದ ನಡುವೆ ಕೇವಲ ಮೂರು ದಿನಗಳು ಇದ್ದವು.

ಭಾರತೀಯ ಸಂವಿಧಾನ ಮತ್ತು ಭಾರತೀಯ ಗಣರಾಜ್ಯದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪವನ್ನು ರಕ್ಷಿಸಲು ಎಲ್ಲಾ ಜಾತ್ಯತೀತ ಶಕ್ತಿಗಳನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅಣಿನೆರಿಕೆಯನ್ನು ಬಲಪಡಿಸುವ ಅಗತ್ಯವನ್ನು ಸಿಪಿಐ(ಎಂ) ಸತತವಾಗಿ ಪ್ರತಿಪಾದಿಸಿಕೊಂಡು ಬಂದಿದೆ. ಇದಕ್ಕೆ ಅನುಗುಣವಾಗಿ, ಮುಂಬರುವ ಭಾರತದ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಚರ್ಚಿಸಲು ಮತ್ತು ರಾಷ್ಟ್ರಪತಿಗಳು ಭಾರತೀಯ ಸಂವಿಧಾನದ ಸಂರಕ್ಷಕರಾಗಿದ್ದಾರೆ ಎಂಬ ಅಂಶವನ್ನು ಪರಿಗಣಿಸಿ, ಈ ಸಭೆಯಲ್ಲಿ ಸಿಪಿಐ(ಎಂ) ಅನ್ನು ರಾಜ್ಯಸಭೆಯಲ್ಲಿ ನಮ್ಮ ಗುಂಪಿನ ನಾಯಕರಾದ ಶ್ರೀ ಎಳಮಾರಮ್ ಕರೀಂ ಪ್ರನಿಧಿಸುತ್ತಾರೆ.

ನಿಮ್ಮ ವಿಶ್ವಾಸಿ

(ಸೀತಾರಾಂ ಯೆಚುರಿ)

Leave a Reply

Your email address will not be published. Required fields are marked *