ಅಡುಗೆ ಅನಿಲ ಬೆಲೆಗಳಲ್ಲಿ ಮತ್ತೊಮ್ಮೆ ಏರಿಕೆ: ಈ ಕ್ರೂರ ಏರಿಕೆಯನ್ನು ವಾಪಾಸು ಪಡೆಯಬೇಕು -ಸಿಪಿಐ(ಎಂ) ಪೊಲಿಟ್‌ ಬ್ಯುರೊ

ಗೃಹಬಳಕೆಯ ಅಡುಗೆ ಅನಿಲ(ಎಲ್‌ಪಿಜಿ) ಸಿಲಿಂಡರ್‌ನ ಬೆಲೆಯನ್ನು ಇಂದಿನಿಂದ ಮತ್ತೊಮ್ಮೆ 50 ರೂ. ಹೆಚ್ಚಿಸಿರುವುದು ಒಂದು ಕ್ರೂರ ಏರಿಕೆ  ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍  ಬ್ಯುರೊ ಬಲವಾಗಿ ಖಂಡಿಸಿದೆ. ಎಲ್ಲಾ ಆಹಾರ ಮತ್ತು ಅಗತ್ಯ ವಸ್ತುಗಳ ಬೆಲೆಗಳು ನಿರಂತರವಾಗಿ ಏರುತ್ತಿರುವಾಗ ಈ ಏರಿಕೆ ಜನರಿಗೆ ಮತ್ತಷ್ಟು ಹೊರೆಯಾಗುತ್ತದೆ ಎಂದು ಅದು ಹೇಳಿದೆ.

ಈ ಹೆಚ್ಚಳದಿಂದ, ಹೆಚ್ಚಿನ ಜನರು ಸಬ್ಸಿಡಿ ಹೊಂದಿರುವ ಅಡುಗೆ ಅನಿಲ ಸಿಲಿಂಡರ್‌ ಗಳನ್ನು ಬಳಸುವುದನ್ನು ಬಿಟ್ಟುಬಿಡುತ್ತಾರೆ. ಏಕೆಂದರೆ ಅವರಿಗೆ ಅದನ್ನು ಖರೀದಿಸಿಲು ಸಾಧ್ಯವಾಗುವುದಿಲ್ಲ. ಈಗಾಗಲೇ, ಉಜ್ವಲ ಯೋಜನೆಯಡಿಯಲ್ಲಿ ಶೇಕಡಾ 10 ಕ್ಕಿಂತ ಹೆಚ್ಚು ಜನರು ಕಳೆದ ವರ್ಷದಲ್ಲಿ ಯಾವುದೇ ರೀಫಿಲ್ ಸಿಲಿಂಡರ್‌ಗಳನ್ನು ತೆಗೆದುಕೊಂಡಿಲ್ಲ. ಸುಮಾರು 12 ಶೇ. ಜನರು ಕೇವಲ 1 ರೀಫಿಲ್ ತೆಗೆದುಕೊಂಡರು. ವರ್ಷಕ್ಕೆ 12 ಸಿಲಿಂಡರುಗಳನ್ನು ಪಡೆಯಬಹುದಾಗಿದ್ದರೂ ಮತ್ತು ಸರಾಸರಿಯಾಗಿ ಕನಿಷ್ಟ  7ಕ್ಕಿಂತ ಹೆಚ್ಚು ಸಿಲಿಂಡರುಗಳ ಅಗತ್ಯವಿದ್ದರೂ, ಒಟ್ಟು 56.5ಶೇ.ದಷ್ಟು ಜನರು ಕೇವಲ 4 ಅಥವಾ ಕಡಿಮೆ ರಿಫೀಲ್‍ಗಳನ್ನು ತೆಗೆದುಕೊಂಡಿದ್ದಾರೆ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಈ ವರ್ಷ ಎರಡನೇ ಬಾರಿಗೆ ಹೆಚ್ಚಿಸಲಾಗಿದೆ. ಇದರೊಂದಿಗೆ ರೂ. 350.50 ಹೆಚ್ಚಳವಾಗಿ ಸಿಲಿಂಡರ್ ಗೆ ಖರ್ಚು ಬೆಲೆ ದಿಲ್ಲಿಯಲ್ಲಿ 1769ರೂ. ಬದಲಿಗೆ.  2119.5 ರೂ. ಆಗುತ್ತದೆ. ಇದು ಖಂಡಿತವಾಗಿಯೂ ಎಲ್ಲಾ ಸಂಸ್ಕರಿತ ಆಹಾರ ಉತ್ಪನ್ನಗಳ ಲಾಗುವಾಡು ವೆಚ್ಚವನ್ನು ಹೆಚ್ಚಿಸುವುದರಿಂದ ಮತ್ತಷ್ಟು ಬೆಲೆ ಏರಿಕೆಗೆ ಕಾರಣವಾಗುತ್ತದೆ.

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಬಡತನ ಮತ್ತು ಹಣದುಬ್ಬರದ ಹಿನ್ನೆಲೆಯಲ್ಲಿ ಈ ಕ್ರೂರ ಏರಿಕೆಗಳು ಬಂದಿವೆ. ಈ ಏರಿಕೆಗಳನ್ನು ಕೂಡಲೇ ಹಿಂಪಡೆಯಬೇಕೆಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಆಗ್ರಹಿಸಿದೆ.

Leave a Reply

Your email address will not be published. Required fields are marked *