ಹೆಸರಿಸಲಾಗದ ಆ ಒಬ್ಬ…

ಪ್ರಕಾಶ್ ಕಾರಟ್‌

Prakash Karatಸದನದ ಕಲಾಪಕ್ಕೆ ಅಡ್ಡಿಪಡಿಸಲು ಮತ್ತು ಅದಾನಿ-ಹಿಂಡನ್‌ಬರ್ಗ್ ವಿವಾದದ ಬಗ್ಗೆ ಚರ್ಚೆಯನ್ನು ತಡೆಹಿಡಿಯುವುದಕ್ಕೆ ಒಂದು ನೆಪವಷ್ಟೇ ಎನ್ನುವುದು ಸುಸ್ಪಷ್ಟವಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ, ಬಜೆಟ್ ಅಧಿವೇಶನದ ಮೊದಲ ಗಂಟೆಯ ಅವಧಿಯಲ್ಲಿ, ಅದಾನಿ ಗ್ರೂಪ್ ಬಗೆಗಿನ ಹಿಂಡನ್‌ಬರ್ಗ್ ಎಕ್ಸ್‌ ಪೋಶರ್‌ ಕುರಿತು ಚರ್ಚೆ ನಡೆಸುವಂತೆ ಹಾಗೂ ಅದರ ತನಿಖೆಗೆ ಜಂಟಿ ಸದನ ಸಮಿತಿಯನ್ನು ರಚಿಸುವಂತೆ ಪ್ರತಿಪಕ್ಷಗಳು ಸತತವಾಗಿ ಆಗ್ರಹಿಸಿದ್ದವು.

ಸಂಸದೀಯ ಕಲಾಪಗಳು ಏಳು ದಿನ ಅಸ್ತವ್ಯಸ್ತಗೊಂಡ ನಂತರ ಸರ್ಕಾರ ಇದೀಗ ಅನುದಾನ ಬೇಡಿಕೆಗಳಿಗೆ ಗಿಲೆಟನಿಂಗ್ ಪ್ರಯೋಗಿಸಿ ಹಾಗೂ ಹಣಕಾಸು ಮಸೂದೆಯನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸುವ ಮೂಲಕ ಬಜೆಟ್ ಅಧಿವೇಶನದ ಎರಡನೇ ಭಾಗವನ್ನು ಮೊಟಕುಗೊಳಿಸಲು ಹೊರಟಿದೆ.

ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದಾಗ ಭಾರತದಲ್ಲಿನ ಪ್ರಜಾಪ್ರಭುತ್ವದ ಪರಿಸ್ಥಿತಿ ಬಗ್ಗೆ ಮಾಡಿದ ಕೆಲವು ಟಿಪ್ಪಣಿಗಳ ಬಗ್ಗೆ ಕ್ಷಮೆ ಕೋರಬೇಕೆಂದು ಒತ್ತಾಯಿಸಿ ಆಳುವ ಪಕ್ಷದವರು ಮಾರ್ಚ್ 13ರಿಂದಲೇ ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪಗಳನ್ನು ತಡೆಹಿಡಿದಿರುವುದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನುವುದು ಈ ವಿದ್ಯಮಾನದ ವೈಶಿಷ್ಟ್ಯವಾಗಿದೆ.

ಇದು ಸದನದ ಕಲಾಪಕ್ಕೆ ಅಡ್ಡಿಪಡಿಸಲು ಮತ್ತು ಅದಾನಿ-ಹಿಂಡನ್‌ಬರ್ಗ್ ವಿವಾದದ ಬಗ್ಗೆ ಚರ್ಚೆಯನ್ನು ತಡೆಹಿಡಿಯುವುದಕ್ಕೆ ಒಂದು ನೆಪವಷ್ಟೇ ಎನ್ನುವುದು ಸುಸ್ಪಷ್ಟವಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ, ಬಜೆಟ್ ಅಧಿವೇಶನದ ಮೊದಲ ಗಂಟೆಯ ಅವಧಿಯಲ್ಲಿ, ಅದಾನಿ ಗ್ರೂಪ್ ಬಗೆಗಿನ ಹಿಂಡನ್‌ಬರ್ಗ್ ಎಕ್ಸ್‌ ಪೋಶರ್ ಕುರಿತು ಚರ್ಚೆ ನಡೆಸುವಂತೆ ಹಾಗೂ ಅದರ ತನಿಖೆಗೆ ಜಂಟಿ ಸದನ ಸಮಿತಿಯನ್ನು ರಚಿಸುವಂತೆ ಪ್ರತಿಪಕ್ಷಗಳು ಸತತವಾಗಿ ಆಗ್ರಹಿಸಿದ್ದವು. ಆವಾಗಿನಿಂದಲೂ ಹಲವು ಶೆಲ್ ಕಂಪನಿಗಳಲ್ಲಿ ಹಾಗೂ ಅಂಬುಜಾ ಸಿಮೆಂಟ್-ಎಸಿಸಿ ಕಂಪನಿಗಳಲ್ಲಿ ಗೌತಮ್ ಅದಾನಿಯ ಸೋದರ ವಿನೋದ್ ಅದಾನಿಯ ಪಾತ್ರದ ಬಗ್ಗೆ ಹೆಚ್ಚೆಚ್ಚು ವಿಚಾರಗಳು ಬೆಳಕಿಗೆ ಬರತೊಡಗಿದವು. ಎಲಾರಾ ಎಂಬ ಒಂದು ವಿದೇಶಿ ಕಂಪನಿಯ ಬಗ್ಗೆ ಸ್ಫೋಟಕ ವಿಚಾರ ಬಹಿರಂಗವಾಗಿದ್ದು ಕೂಡ ಆಗಲೇ. ಈ ಕಂಪನಿ ಅದಾನಿ ಸಮೂಹದಲ್ಲಿ ಒಂದು ಪ್ರಮುಖ ಹೂಡಿಕೆದಾರ ಕಂಪನಿಯಾಗಿದ್ದು, ರಕ್ಷಣೆಗೆ ಸಂಬಂಧಿಸಿದ ಒಂದು ಕಂಪನಿಯಲ್ಲಿ ಅದಾನಿ ಜೊತೆ ಸಹ-ಮಾಲಿಕ ಕೂಡ ಆಗಿರುವ ವಿಚಾರ ತಿಳಿದು ಬಂದಿದೆ. ಈ ಎಲ್ಲ ವಿಚಾರಗಳಲ್ಲಿ ಹೆಚ್ಚಿನ ವಿವರಣೆ ಬೇಕಾಗಿದೆ ಹಾಗೂ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕಾಗಿದೆ.

ಹಾಗೆ ಮಾಡುವ ಬದಲು, ಸಂಸತ್ ಅಧಿವೇಶನದ ಮೊದಲ ದಿನವೇ ರಾಹುಲ್ ಗಾಂಧಿ ವಿರುದ್ಧ ದಾಳಿಮಾಡಿ ಅವರ ಕ್ಷಮೆ ಕೋರುವಂತೆ ಆಗ್ರಹಿಸುವಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವ ವಹಿಸಿದ್ದರು. ಎಲಾರಾದಂಥ ಒಂದು ಕಂಪನಿಯು ಭಾರತದಲ್ಲಿನ ರಕ್ಷಣಾ ಸಂಸ್ಥೆಯೊಂದರಲ್ಲಿ ಅದಾನಿಯ ಪಾಲುದಾರ ಹೇಗಾಯಿತು ಎಂಬ ಮಹತ್ವದ ಪ್ರಶ್ನೆಗೆ ಉತ್ತರ ನೀಡುವುದನ್ನು ತಪ್ಪಿಸಿಕೊಳ್ಳುವ ತಂತ್ರಗಾರಿಕೆ ಇದಾಗಿರಬಹುದೇ? ರಾಹುಲ್ ಗಾಂಧಿ ವಿಚಾರಕ್ಕೆ ಬರುವುದಾದರೆ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಮತ್ತು ಮೋದಿ ಸರಕಾರವು ಅದರ ಕತ್ತು ಹಿಸುಕುತ್ತಿದೆ ಎಂಬ ಅವರ ಟೀಕೆಯನ್ನು ಹೆಚ್ಚು ಕಡಿಮೆ ಎಲ್ಲಾ ಪ್ರತಿಪಕ್ಷ ನಾಯಕರು ಪ್ರತಿಧ್ವನಿಸುತ್ತಿದ್ದಾರೆ. ವಿದೇಶಿ ನೆಲದಲ್ಲಿ ಅಂಥ ಟೀಕೆಯನ್ನು ಮಾಡಿದ್ದಕ್ಕಾಗಿ ಅವರು ದೇಶಪ್ರೇಮಿಯಲ್ಲ ಎಂಬ ಆರೋಪ ಅಪ್ಪಟ ಬೋಗಸ್ ಆಗಿದೆ. ಯಾಕೆಂದರೆ ಯಾರಾದರೂ ಒಂದು ಸರಕಾರದ ಮೇಲೆ ದಾಳಿಮಾಡುವುದು ತಮ್ಮ ದೇಶದ ಮೇಲೆ ದಾಳಿ ಮಾಡುವುದಕ್ಕೆ ಸಮನಾಗುವುದಿಲ್ಲ. ಕೇಂಬ್ರಿಜ್ ಭಾಷಣದಲ್ಲಿ ಮುಗ್ಧವಾಗಿ ಅಮೆರಿಕನ್ ಪ್ರಜಾಪ್ರಭುತ್ವವನ್ನು ಮೆಚ್ಚಿಕೊಂಡಿದ್ದನ್ನು ಸಹಿತ ಬ್ರಿಟನ್‌ನಲ್ಲಿ ರಾಹುಲ್ ಗಾಂಧಿ ಹೇಳಿದ್ದೆಲ್ಲವನ್ನೂ ಎಲ್ಲರೂ ಒಪ್ಪಬೇಕೆಂದೇನಿಲ್ಲ. ಆದರೆ ಸರಕಾರದ ಸರ್ವಾಧಿಕಾರವನ್ನು ಟೀಕಿಸುವ ಹಕ್ಕು ಯಾರಿಂದಲೂ ಕಿತ್ತುಕೊಳ್ಳಲಾಗದ ಹಕ್ಕಾಗಿದೆ. ಅಂಥ ಟೀಕೆಯನ್ನು ದೇಶದಲ್ಲೇ ಮಾಡಲಿ ವಿದೇಶದಲ್ಲೇ ಮಾಡಲಿ ಅದರಲ್ಲಿ ಯಾವುದೇ ವ್ಯತ್ಯಾಸವಾಗದು.

download

ಅದಾನಿ ವಿಚಾರದಲ್ಲಿ ಬಿಜೆಪಿ ಧೋರಣೆ ನಿಜಕ್ಕೂ ಬೆರಗುಗೊಳಿಸುವಂಥದ್ದು. ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯ ವೇಳೆ ಪ್ರಶ್ನೆಗಳ ಮಹಾಪೂರ ಎದುರಾದಾಗ ಪ್ರಧಾನಿ ಮೋದಿಯೇ ಇದಕ್ಕೆ ಶ್ರೀಕಾರ ಹಾಕಿದ್ದರು. ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆಗೆ ಉತ್ತರ ನೀಡಿದ ಮೋದಿ ಒಂದೇ ಒಂದು ಬಾರಿಯಾದರೂ ಅದಾನಿ ಹೆಸರನ್ನು ಉಚ್ಚರಿಸಲಿಲ್ಲ. ಇದು ಹ್ಯಾರಿ ಪಾಟರ್ ಕಾದಂಬರಿಯ ಒಂದು ಪಾತ್ರ ದುಷ್ಟ ಲಾರ್ಡ್ ವೋಲ್ಡ್‌ ಮಾರ್ಟ್‌ ನನ್ನು ನೆನಪಿಸುತ್ತದೆ. ಆತ ಎಷ್ಟು ಅಪಾಯಕಾರಿ ಹಾಗೂ ಬಲಶಾಲಿಯೆಂದರೆ ಅವನ ಹೆಸರನ್ನು ಯಾರೂ ಉಚ್ಚರಿಸುವಂತಿರಲಿಲ್ಲ. ಬಹಳಷ್ಟು ಜನರು ಆತನನ್ನು ʻಹೆಸರಿಸಲಾರದ ಆತʼ ಎಂದೇ ಸಂಬೋಧಿಸಲು ಬಯಸುತ್ತಿದ್ದರು. ಮೋದಿ ಮತ್ತು ಅದಾನಿಯ ನಡುವಿನ ಮೈತ್ರಿಯನ್ನು ಬಯಲಿಗೆಳೆಯುವುದು ಒತ್ತಟ್ಟಿಗಿರಲಿ, ನರೇಂದ್ರ ಮೋದಿ ಮತ್ತು ಬಿಜೆಪಿಗೆ ಗೌತಮ್ ಅದಾನಿಯು ಹೆಸರಿಸಬಾರದ ಒಬ್ಬ ವ್ಯಕ್ತಿಯಾಗಿದ್ದಾನೆ.

ಸಂಸತ್ತಿನಲ್ಲಿ ಈಗ ಬಳಸಲಾಗುತ್ತಿರುವ ತಂತ್ರವನ್ನು ಗಮನಿಸಿದರೆ ಮೋದಿ ಸರಕಾರ ಮತ್ತು ಬಿಜೆಪಿಯು ಅದಾನಿ ಸಮೂಹವನ್ನು ಸಂಸದೀಯ ಪರಿಶೀಲನೆಗೆ ಒಳಪಡಿಸುವುದನ್ನು ತಡೆಯಲು ಯಾವ ಮಟ್ಟಕ್ಕಾದರೂ ಹೋಗಲು ಸಿದ್ಧ ಎನ್ನುವುದನ್ನು ತೋರಿಸುತ್ತದೆ. ಈ ಎಲ್ಲಾ ವರ್ಷಗಳಲ್ಲಿ ನಿಯಂತ್ರಣ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಮೋದಿ ಸರಕಾರ ಈಗ ಅದಾನಿ ಸಾಮ್ರಾಜ್ಯ ಮತ್ತು ಅದು ಬೆಳೆದು ಬಂದ ಬಗೆಯ ಕುರಿತು ಪ್ರಶ್ನೆಗಳನ್ನು ಎತ್ತುವುದನ್ನು ಮಟ್ಟ ಹಾಕಲು ಸಂಸತ್ತಿನ ಕತ್ತನ್ನೂ ಹಿಸುಕುತ್ತಿದೆ. ಮೋದಿ ಸರಕಾರವು ಅದಾನಿ ಮತ್ತು ಕಂಪನಿ ಮಾಡಿದ ಕಾನೂನು ಮತ್ತು ನಿಯಮಾವಳಿಗಳ ಉಲ್ಲಂಘನೆಯನ್ನು ಮುಚ್ಚಿ ಹಾಕಲು ಸಮಯಾವಕಾಶ ಮಾಡಿಕೊಡುತ್ತಿರುವಂತೆ ಕಾಣುತ್ತಿದೆ. ಕೆಟ್ಟ ಉದ್ದೇಶಗಳಿಗೆ ಬಳಸಿದ ಸಾಲಗಳನ್ನು ಕೈಬಿಡಲು ಹಾಗೂ ಹಿಂಡನ್‌ಬರ್ಗ್ ಎಕ್ಸ್‌ ಪೋಸ್‌ ನಿಂದ ಆದ ನಷ್ಟವನ್ನು ಸರಿದೂಗಿಸಿಕೊಂಡು ಸಾವರಿಸಿಕೊಳ್ಳಲು ಕಾಲಾವಕಾಶ ನೀಡುತ್ತಿದೆ. ಅದಾನಿಯನ್ನು ರಕ್ಷಿಸಲು ಸಂಸತ್ತನ್ನು ನಿಷ್ಕ್ರಿಯಗೊಳಿಸುವುದು ಅದಕ್ಕೆ ತೆರಬೇಕಾದ ಸಣ್ಣ ಬೆಲೆಯಾಗಿದೆ. ಸಂಸತ್ತನ್ನು ಅವಮಾನಿಸುವುದು ಮತ್ತು ಅದನ್ನು ಅಪ್ರಸ್ತುತಗೊಳಿಸುವ ಪ್ರಕ್ರಿಯೆಯು ಅದಾನಿ ವಿಚಾರವನ್ನು ನಿರ್ವಹಿಸಿದ ಆಳುವ ಪಕ್ಷದ ರೀತಿಯಿಂದ ಇನ್ನಷ್ಟು ತ್ವರಿತಗೊಂಡಿದೆ.

ಅನು: ವಿಶ್ವ

Leave a Reply

Your email address will not be published. Required fields are marked *