ಸ್ಪುಟ್ನಿಕ್ ಉಡಾವಣೆ

ಅಕ್ಟೋಬರ್ 4, 1957

ಈ ದಿನದಂದು ಜಗತ್ತಿನ ಮೊದಲ ಉಪಗ್ರಹವನ್ನು ಆಗಿನ ಸೋವಿಯೆಟ್ ಒಕ್ಕೂಟ ಬಾಹ್ಯಾಕಾಶಕ್ಕೆ ಹಾರಿ ಬಿಟ್ಟು ವೈಜ್ಞಾನಿಕ-ತಾಂತ್ರಿಕ ಕ್ರಾಂತಿಯ ಹೊಸ ಯುಗವೊಂದನ್ನು ಆರಂಭಿಸಿತು. ಸ್ಪುಟ್ನಿಕ್ ಎಂದು ಕರೆಯಲಾದ 23 ಇಂಚು ವ್ಯಾಸವಿದ್ದ ಗೋಳಾಕಾರದ ಉಪಗ್ರಹವನ್ನು ಈಗ ಕಝಾಕಿಸ್ತಾನದಲ್ಲಿರುವ ಬೈಕಾನೋರ್ ಉಡಾವಣಾ ಕೇಂದ್ರದಿಂದ ಹಾರಿ ಬಿಡಲಾಯಿತು.

ಅದು ಭೂಮಿ ಸುತ್ತ ಸೆಕೇಂಡಿಗೆ 8100 ಮೀಟರ್ ವೇಗದಲ್ಲಿ 96.2 ನಿಮಿಷಗಳಲ್ಲಿ ಭೂಮಿ ಸುತ್ತ ಒಂದು ಸುತ್ತು ಮುಗಿಸುತ್ತಿತ್ತು. ಅದು ರೇಡಿಯೋ ಸಂವಹನವನ್ನು ಹೊಂದಿದ್ದು 3 ತಿಂಗಳುಗಳ ಕಾಲ ಭೂಮಿ ಸುತ್ತ ತಿರುಗಿ ವಿಜ್ಞಾನಿಗಳಿಗೆ ಭೂಮಿಯ ವಾತಾವರಣದ ಬಗ್ಗೆ ಬಾಹ್ಯಾಕಾಶದ ಬಗ್ಗೆ ಹಲವು ಸಂಶೋಧನೆಗಳಲ್ಲಿ ಸಹಾಯಕವಾಯಿತು.

ಸೋವಿಯೆಟ್ ಒಕ್ಕೂಟದ ಈ ವೈಜ್ಞಾನಿಕ ಪ್ರಗತಿ ಜಗತ್ತನ್ನೇ ದಂಗು ಬಡಿಸಿತ್ತು. ಅಮೆರಿಕದಲ್ಲಂತೂ ಒಂದು ಬಿಕ್ಕಟ್ಟನ್ನೇ ಉಂಟು ಮಾಡಿತು. ಇದು ಬಾಹ್ಯಾಕಾಶ ವಿಜ್ಞಾನದಲ್ಲಿ ಸ್ಪರ್ಧೆ ಆರಂಭಿಸಿ ಅಮೆರಿಕದ ಮತ್ತು ಇಡೀ ಜಗತ್ತಿನ ವಿಜ್ಞಾನದ ಪ್ರಗತಿಗೆ ಕುಮ್ಮಕ್ಕು ಕೊಟ್ಟಿತು. ಸೋವಿಯೆಟ್ ಒಕ್ಕೂಟದ ವೈಜ್ಞಾನಿಕ ಪ್ರಗತಿಗೆ ಬೆದರಿದ ಅಮೆರಿಕ ‘ಶೀತ ಸಮರ’ ಆರಂಭಿಸಿತು. ಇದು ಅಮೆರಿಕ ಮತ್ತು ಸೋವಿಯೆಟ್ ಒಕ್ಕೂಟಗಳ ನಡುವೆ ದಶಕಗಳ ಕಾಲ ವೈಜ್ಞಾನಿಕ, ಮಿಲಿಟರಿ, ರಾಜಕೀಯ ಪೈಪೋಟಿ ಉಂಟು ಮಾಡಿತು.

Leave a Reply

Your email address will not be published. Required fields are marked *