ಕಾನೂನು ಪರಿಮಿತಿ ಉಲ್ಲಂಘಿಸಿರುವ ರೂಪನ್‍ವಾಲ್ ಆಯೋಗ ವರದಿ ತಿರಸ್ಕರಿಸಿ

ಹೈದರಾಬಾದ್ ವಿವಿ ಉಪಕುಲಪತಿಯನ್ನು ಬಚಾವ್ ಮಾಡುವ, ವೆಮುಲ ತಾಯಿಯ ಹೆಸರು ಕೆಡಿಸುವ ಪ್ರಯತ್ನ ಕಾನೂನು ಪರಿಮಿತಿಯನ್ನು ಉಲ್ಲಂಘಿಸಿರುವ ರೂಪನ್‍ವಾಲ್ ಆಯೋಗದ ವರದಿಯನ್ನು ತಿರಸ್ಕರಿಸಬೇಕೆಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿಕೆ ನೀಡಿದೆ.

ಕೇಂದ್ರ ಮಾನವ ಸಂಪನ್ಮೂಲ ಮಂತ್ರಾಲಯ ಹೈದರಾಬಾದ್ ಕೇಂದ್ರೀಯ ವಿಶ್ವವ್ವಿದ್ಯಾಲಯದಲ್ಲಿ ರೋಹಿತ್ ವೆಮುಲ ಆತ್ಮಹತ್ಯೆಗೆ ಕಾರಣವಾದ ಬೆಳವಣಿಗೆಗಳ ಬಗ್ಗೆ ತನಿಖೆ ಮಾಡಲೆಂದು ನೇಮಿಸಿದ ರೂಪನ್‍ವಾಲ್ ಆಯೋಗ ತನ್ನ ವರದಿ ಸಲ್ಲಿಸಿದ್ದು ವೆಮುಲ ಆತ್ಮಹತ್ಯೆ ‘ವೈಯಕ್ತಿಕ’ ಕಾರಣಗಳಿಂದ ಆಗಿದೆ, ವಿವಿಯ ಉಪಕುಲಪತಿಗಳು ಮತ್ತು ಮಾನವ ಸಂ¥ನ್ಮೂಲ ಮಂತ್ರಿಗಳ ವರ್ತನೆ ಇದಕ್ಕೆ ಕಾರಣವಲ್ಲ ಎಂದು ಹೇಳಿದೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ವಿದ್ಯಾರ್ಥಿಗಳಿಗೆ, ಅದರಲ್ಲೂ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾನಸಿಕ  ಸಲಹೆ ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಪರಿಹಾರ ಸೂಚಿಸಿದೆ!

ಗಮನಾರ್ಹ ಸಂಗತಿಯೆಂದರೆ ಈ ಆಯೋಗ ತನಗೆ ವಹಿಸಿದ ಕೆಲಸದ ಮೇರೆಗಳನ್ನು ದಾಟಿ ರೋಹಿತ್ ವೆಮುಲಾ ತಾಯಿಯ ಜಾತಿ ಸ್ಥಾನಮಾನದ ಬಗ್ಗೆ ಪ್ರಶ್ನೆ ಎತ್ತಿದೆ. ಅವರು ಪರಿಶಿಷ್ಟ ಜಾತಿಯಾದ ‘ಮಾಲಾ’ ಸಮುದಾಯಕ್ಕೆ ಸೇರಿದವರು ಎಂಬ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲ, ಕೇವಲ ತನ್ನ ಮಗನಿಗೆ ಜಾತಿ ಸರ್ಟಿಫಿಕೆಟ್ ಪಡೆಯಲಿಕ್ಕಾಗಿ ತಾನು ಮಾಲಾ ಜಾತಿಗೆ ಸೇರಿದವಳು ಎಂದು ಹೇಳಿಕೆ ನೀಡಿರಬಹುದು ಎಂದು ಹೇಳಿದೆ. ಇದು ಈ ಆಯೋಗದ ತನಿಖೆಯ ವ್ಯಾಪ್ತಿಯನ್ನು ಮೀರಿದ ವಿಚಾರ ಎನ್ನುವುದನ್ನು ಮಾನವ ಸಂಪನ್ಮೂಲ ಮಂತ್ರಾಲಯವೂ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.

ಈ ರೀತಿ ಕಾನೂನಿನ ಪರಿಮಿತಿಗಳನ್ನು ಉಲ್ಲಂಘಿಸಿರುವ ತನ್ನ ವ್ಯಾಪ್ತಿಯನ್ನು ಮೀರಿ ಹೋಗಿರುವ ಈ ರೂಪನ್‍ವಾಲ್ ಆಯೋಗದ ವರದಿಯನ್ನು ತಿರಸ್ಕರಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.

ಪರಿಶಿಷ್ಟ ಜಾತಿಗಳ ಮೇಲೆ ಅತ್ಯಾಚಾರ ತಡೆ ಕಾನೂನಿನ ಅಡಿಯಲ್ಲಿ ಉಪಕುಲಪತಿಯ ಮೇಲೆ ಕೇಸು ದಾಖಲಿಸದಂತೆ ಮಾಡುವ ಪ್ರಯತ್ನ ಇದು ಎಂದು ಬಲವಾಗಿ ಖಂಡಿಸಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಶ್ರೀಮತಿ ವೆಮುಲಾ ಅವರ ಬಗ್ಗೆ ಈ ಆಯೋಗ ಮಾಡಿರುವ ಆಪಾದನೆ ಹೆಸರಗೆಡಿಸುವ ಕ್ರಿಮಿನಲ್ ಪ್ರಯತ್ನವಾಗುತ್ತದೆ ಎಂದು ಹೇಳುತ್ತ ಈ ವರದಿಯನ್ನು ತಕ್ಷಣವೇ ವಜಾ ಮಾಡಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *