ಕೇರಳದಲ್ಲಿ ಆರೆಸ್ಸೆಸ್‍ನ ಹಿಂಸಾಚಾರ ರಾಜಕೀಯ ಬೇಗನೇ ಬಯಲಾಗುತ್ತದೆ

ಕೇರಳದಲ್ಲಿ ಆರೆಸ್ಸೆಸ್‍ನ ಕೊಲೆಯಾಟ ಇನ್ನೊಂದು ಬಲಿಯನ್ನು ಪಡೆದಿದೆ. ಅಕ್ಟೋಬರ್ 10ರಂದು ಕಣ್ಣೂರು ಜಿಲ್ಲೆಯ ಪಡುವಿಳೈ ಸ್ಥಳೀಯ ಸಮಿತಿಯ ಸದಸ್ಯ ಕೆ.ಮೋಹನನ್ ಅವರನ್ನು ಶಶ್ತ್ರಸಜ್ಜಿತ ಆರೆಸ್ಸೆಸ್ ಗೂಂಡಾಗಳ ಪಡೆ ಕೊಚ್ಚಿ ಹಾಕಿ ಸಾಯಿಸಿದೆ. ಅವರು ಕೆಲಸ ಮಾಡುತ್ತಿದ್ದ ಸೇಂದಿ ಅಂಗಡಿಗೆ ನುಗ್ಗಿ ಈ ಕುಕೃತ್ಯ ಎಸಗಲಾಗಿದೆ. ಇದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ. ಮೋಹನನ್ ಶರೀರದಲ್ಲಿ 30-40 ಗಾಯಗಳಿದ್ದವು. ಇದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿನಿಧಿಸುವ ಧರ್ಮದಂ ಕ್ಷೇತ್ರದಲ್ಲ್ಲಿ ನಡೆದಿರುವ ಸಿಪಿಐ(ಎಂ) ಕಾರ್ಯಕರ್ತರ ಎರಡನೇ ಕೊಲೆ. ಇದಕ್ಕೆ ಮೊದಲು ಚುನಾವಣಾ ಫಲಿತಾಂಶಗಳು ಪ್ರಕಟವಾದಾಗ ಸಿಪಿಐ(ಎಂ)ನ ವಿಜಯ ಮೆರವಣಿಗೆಯ ಮೇಲೆ ಆರೆಸ್ಸೆಸ್ ಗೂಂಡಾಗಳು ನಡೆಸಿದ ದಾಳಿಯಲ್ಲಿ ರವೀಂದ್ತನಾಥ್ ಎಂಬ ಸಿಪಿಐ(ಎಂ) ಕಾರ್ಯಕರ್ತ ಬಲಿಯಾಗಿದ್ದರು.

ಇತ್ತ ದಿಲ್ಲಿಯಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿ ಕಚೇರಿಗೆ ಕೆಲವು ಬಿಜೆಪಿ ಮಂದಿ ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ದಾಳಿ ನಡೆಯುತ್ತಿದೆ ಎಂದು ಬೊಬ್ಬೆ ಹಾಕುತ್ತ ಮೆರವಣಿಗೆ ಬಂದಿದ್ದರು ಎಂಬುದನ್ನು ನೆನಪಸಿಕೊಳ್ಳುತ್ತ ಸಿಪಿಐ(ಎಂ) ಪೊಲಿಟ್‍ಬ್ಯುರೊ  ನಿಜಸಂಗತಿಯೆಂದರೆ ಆರೆಸ್ಸೆಸ್‍ನ ಮತ್ತು ಅದರ ಅಂಗ ಸಂಘಟನೆಗಳ ಮಾರಣಾಂತಿಕ ದಾಳಿಗಳಿಗೆ ಬಲಿಯಾಗುತ್ತಿರುವವರು ಸಿಪಿಐ(ಎಂ) ಮತ್ತು ಎಲ್‍ಡಿಎಫ್‍ನ ಇತರ ಅಂಗಗಳ ಕಾರ್ಯಕರ್ತರು ಎಂದು ಹೇಳಿದೆ. ಇದು ಹೊಸದೇನಲ್ಲ. ಎಲ್‍ಡಿಎಫ್ ಅಧಿಕಾರಕ್ಕೆ ಬಂದಾಗಲೆಲ್ಲ ಅವರು ಇದನ್ನೇ ಮಾಡಿದ್ದಾರೆ

ಎಲ್‍ಡಿಎಫ್ ಸರಕಾರದ ಈ ಬಾರಿಯ ಅಲ್ಪಾವಧಿಯಲ್ಲೇ ಆರು ಸಿಪಿಐ(ಎಂ) ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ, ಸುಮಾರು 300 ಸದಸ್ಯರು ಗಾಯಗೊಂಡಿದ್ದಾರೆ. ಪಕ್ಷದ 35 ಕಚೇರಿಗಳ ಮೇಲೆ ದಾಳಿ ನಡೆದಿದೆ. ಪಕ್ಷದ ಕಾರ್ಯಕರ್ತರ 80 ಮನೆಗಳ ಮೇಲೂ ದಾಳಿ ನಡೆದಿದೆ. ಇಂತಹ ಯೋಜಿತವಾದ ಸತತ ದಾಳಿಗಳ ಪ್ರಮಾಣವೇ ಬಿಜೆಪಿಯ ವಂಚನೆಯನ್ನು ಬಯಲಿಗೆಳೆಯುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಒಂದು ಸುಳ್ಳನ್ನು ನೂರಾರು ಬಾರಿ ಹೇಳಿ ಅದೇ ಸತ್ಯ ಎನ್ನುವ ಹಿಟ್ಲರನ ಬಂಟ ಗೋಬೆಲ್ಸ್‍ನ ತಂತ್ರಗಳನ್ನು ಬಿಜೆಪಿ/ ಆರೆಸ್ಸೆಸ್ ಸದಾ ಬಳಸಿಕೊಂಡು ಬಂದಿದೆ. ತಾನೇ ಕೇರಳದಲ್ಲೆಲ್ಲ ದಾಳಿಗಳನ್ನು ನಡೆಸುತ್ತಿದ್ದರೂ ತಾನೇ ಹಿಂಸಾಚಾರದ ಬಲಿಪಶು ಎಂದು ಬಿಂಭಿಸಲು ಅದು ಪ್ರಯತ್ನಿಸುತ್ತ ಬಂದಿದೆ. ಈ ಮೋಸವನ್ನು ಬಯಲಿಗೆಳೆಯಲಾಗುವುದು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಆರೆಸ್ಸೆಸ್/ಬಿಜೆಪಿಯ ಕೋಮುವಾದಿ ರಾಜಕೀಯವನ್ನು ಮತ್ತು ಭಯೋತ್ಪಾದನೆ ಮತ್ತು ಹಿಂಸಾಚಾರದ ತಂತ್ರಗಳನ್ನು ಕೇರಳದ ಜನತೆ ತಿರಸ್ಕರಿಸಿದ್ದಾರೆ ಎಂಬುದನ್ನು ವಿಧಾನಸಭಾ ಚುನಾವಣಾ ಫಲಿತಾಂಶಗಳು ಸ್ಪಷ್ಟವಾಗಿ ತೋರಿಸಿಕೊಟ್ಟಿವೆ. ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಕೇರಳದಲ್ಲೂ ಭಾರೀ ಪ್ರಯೋಜನ ಸಿಗುತ್ತದೆ ಎಂಬ ಅವರ ನಿರೀಕ್ಷೆಗಳು ಈಡೇರಿಲ್ಲ. ಅಲ್ಲದೆÀ ಸಮಾಜವನ್ನು ಕೋಮುಗ್ರಸ್ತಗೊಳಿಸುವ ಅವರ ಪ್ರಯತ್ನಗಳಿಗೆ ಸಿಪಿಐ(ಎಂ) ಮತ್ತು ಎಲ್‍ಡಿಎಫ್‍ನಿಂದ ಕಡು ಪ್ರತಿರೋಧವನ್ನು ಅದು ಎದುರಿಸಬೇಕಾಗಿದೆ. ಆದ್ದರಿಂದ ಅದು ಇಂತಹ ಹಿಂಸಾತ್ಮಕ ದಾಳಿಗಳಿಗೆ ಇಳಿದಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಕೇರಳದ ಜನತೆ ಮತ್ತು ಸಮಸ್ತ ದೇಶದ ಜನತೆ ಬಿಜೆಪಿಯ ಇಂತಹ ದುಷ್ಟ ರಾಜಕೀಯವನ್ನು ಸೋಲಿಸಲು ಕಂಕಣ ಬದ್ಧರಾಗಿದ್ದಾರೆ ಎಂದು ಹೇಳಿದೆ.

Leave a Reply

Your email address will not be published. Required fields are marked *