ಮತ್ತೊಂದು ರೈಲುಅಪಘಾತ: ಹೊಣೆ ಹೊರದ ಸರಕಾರ

ಸಿಪಿಐ(ಎಂ) ಪೊಲಿಟ್‍ಬ್ಯುರೊ ಖೇದ

ಜನವರಿ 21ರಂದು ಇನ್ನೊಂದು ರೈಲು ಅಪಘಾತ 39 ಮಂದಿಯ ಬಲಿ ತೆಗೆದುಕೊಂಡಿದೆ, 54 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಜಗ್ದಲ್‍ಪುರ-ಭುವನೇಶ್ವರ ಹಿರಾಖಂಡ್ ಎಕ್ಸ್‍ಪ್ರೆಸ್ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ. ಅದರ ಒಂಬತ್ತು ಬೋಗಿಗಳು ಹಳಿ ತಪ್ಪಿವೆ ಎಂದು ವರದಿಯಾಗಿದೆ. ಕಳೆದ ಎರಡು ತಿಂಗಳಲ್ಲಿ ಇದು ಮೂರನೇ ರೈಲು ಅಪಘಾತ.

ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ಅಪಘಾತದ ಬಗ್ಗೆ ಆಘಾತ ಮತ್ತು ಆಳವಾದ ದುಃಖವನ್ನು ವ್ಯಕ್ತಪಡಿಸಿದೆ. ಈ ಅಪಘಾತದಲ್ಲಿ ಭೀಕರ ನಷ್ಟ ಅನುಭವಿಸಿರುವ ಕುಟುಂಬಗಳಿಗೆ ಅದು ಹಾರ್ದಿಕ ಸಹಾನುಭೂತಿ ವ್ಯಕ್ತಪಡಿಸಿದೆ.

ಇಂತಹ ರೈಲು ಅಪಘಾತಗಳು ಮತ್ತೆ-ಮತ್ತೆ ಸಂಭವಿಸುತ್ತಿವೆ. ಹಲವಾರು ಭರವಸೆಗಳನ್ನು ಕೊಟ್ಟರೂ ರೈಲ್ವೆ ಮಂತ್ರಾಲಯ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುತ್ತಿರುವವರಿಗೆ ಸಾಮಾನ್ಯ ಸುರಕ್ಷಿತತೆಯನ್ನು ಕೊಡುವಲ್ಲಿಯೂ ವಿಫಲವಾಗಿದೆ ಎಂದು ಹೇಳಿರುವ ಸಿಪಿಐ(ಎಂ) ಮೊನ್ನೆ ನವಂಬರ್‍ನಲ್ಲಿ ಕಾನ್ಪುರದ ಬಳಿ ನಡೆದ ಅಪಘಾತದಲ್ಲಿ 146 ಜನರ ಸಾವುಂಟಾದ ನಂತರವಾದರೂ ರೈಲ್ವೆ ಮಂತ್ರಾಲಯ ಸುರಕ್ಷಿತತೆಯ ಮಟ್ಟವನ್ನು ಹೆಚ್ಚಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು.

ರೈಲ್ವೆ ಮಂತ್ರಿಗಳೂ ಸೇರಿದಂತೆ ಸರಕಾರದ ಅತ್ಯುನ್ನತ ಮಟ್ಟಗಳಲ್ಲಿ ಇಂತಹ ಶೋಚನೀಯ ಪರಿಸ್ಥಿತಿಯ ಬಗ್ಗೆ ಯಾರನ್ನೂ ಹೊಣೆ ಮಾಡಲಾಗುತ್ತಿಲ್ಲ ಎಂಬುದು ದುರದೃಷ್ಟಕರ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖೇದ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *