ಗೋರಖ್‌ಪುರ-63 ಮಕ್ಕಳ ಸಾವು: ಸರಕಾರ ಮತ್ತು ಅಧಿಕಾರಿಗಳ ಘೋರ ನಿರ್ಲಕ್ಷ್ಯ

ಉತ್ತರಪ್ರದೇಶ ಸರಕಾರದ ಘೋರ ನಿರ್ಲಕ್ಷ್ಯದಿಂದಾಗಿ, ಆಮ್ಲಜನಕ ಪೂರೈಕೆಯ ಕೊರತೆಯಾಗಿ 63 ಮಕ್ಕಳ ಸಾವು ಉಂಟಾಗಿದೆ, ಇದು ಅಕ್ಷಮ್ಯ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಖಂಡಿಸಿದೆ.

ಉತ್ತರ ಪ್ರದೇಶ ಸರಕಾರ ಮತ್ತು ಮುಖ್ಯಮಂತ್ರಿಗಳು ಈ ಸಾವುಗಳು ಆಮ್ಲಜನಕದ  ಕೊರತೆಯಿಂದಾಗಿ ಆದದ್ದಲ್ಲ, ಕೆಟ್ಟ ನೈರ್ಮಲ್ಯ ಸ್ಥಿತಿ-ಗತಿ ಮತ್ತು ನಗರ ಪರಿಸ್ಥಿತಿಯಿಂದಾಗಿ ಆಗಿದೆ ಎಂಬಿತ್ಯಾದಿ ತರ್ಕಗಳನ್ನು ಕೊಡುತ್ತಿವೆ. ಇವನ್ನು ಒಪ್ಪಲು ಸಾಧ್ಯವಿಲ್ಲ. ಆಮ್ಲಜನಕ ಕೊರತೆಯ ಎಚ್ಚರಿಕೆಗಳನ್ನು ಇತ್ತೀಚೆಗೆ ಕೆಲವು ವರ್ಷಗಳಿಂದ ಕೊಡಲಾಗುತ್ತಿದೆ. ಇದರ ಪೂರೈಕೆಗೆ ಹಣ ಪಾವತಿ ಮಾಡದೆ ಬಾಕಿ ಇಟ್ಟುಕೊಂಡಿರುವುದು ಮುಖ್ಯ ಕಾರಣವೆಂದು ಕಾಣುತ್ತಿದೆ.

ಈ ಸಾವಿಗೆ ನೈರ್ಮಲ್ಯದ ಸ್ಥಿತಿ-ಗತಿಗಳನ್ನು ದೂಷಿಸಿರುವುದು ಪ್ರಧಾನಮಂತ್ರಿಗಳ ಮತ್ತು ಬಿಜೆಪಿಯ ಸ್ವಚ್ಛ ಬಾರತ ಪ್ರಚಾರದ ಅಬ್ಬರದ ನಿಜ ಹೂರಣದ ಬಗ್ಗೆ ಸಾಕಷ್ಟು ಹೇಳುತ್ತದೆ. ಅಲ್ಲದೆ, ಉತ್ತರಪ್ರದೇಶದ ಮುಖ್ಯಮಂತ್ರಿಗಳೇ ಕಳೆದ 20 ವರ್ಷಗಳಿಂದ ಲೋಕಸಭೆಯಲ್ಲಿ ಗೋರಖ್‌ಪುರವನ್ನು ಪ್ರತಿನಿಧಿಸಿದ್ದಾರೆ. ಆದ್ದರಿಂದ ಇಲ್ಲಿ ನೈರ್ಮಲ್ಯದ ಕೊರತೆಗೆ ಅವರ ಕಾಣಿಕೆಯನ್ನು ನಿರ್ಲಕ್ಷಿಸುವಂತಿಲ್ಲ.

ಈ ಸಾವುಗಳಿಗೆ ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರಕಾರದಿಂದ ಹಿಡಿದು ಯಾರೆಲ್ಲ ಕಾರಣರು ಎಂಬುದನ್ನು ಕಂಡು ಹಿಡಿಯಲು ಒಂದು ಉನ್ನತ ಮಟ್ಟದ ನ್ಯಾಯಾಂಗ ತನಿಖೆಯನ್ನು ನಡೆಸಬೇಕು, ಅದನ್ನನುಸರಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ.

Microsoft Word - 13-08-2017 Gorakhpura on CPIM PB

ಮಾನವ ಜೀವಗಳ ಬಗ್ಗೆ ಘೋರ ನಿರ್ಲಕ್ಷ್ಯ, ಬದಲಿಗೆ ವಿಭಜನಕಾರಿ ಪ್ರಶ್ನೆಗಳ ಮೇಲೆ ತೀವ್ರ ಗಮನ

ಹೌದು, ಉತ್ತರ ಪ್ರದೇಶ ಸರಕಾರ ಹೇಳುವಂತೆ ಈ ಮಕ್ಕಳನ್ನು ಸಾಯಿಸಿದ್ದು ಆಮ್ಲಜನಕ ಕೊರತೆಯಲ್ಲ,  ಮಾನವ ಜೀವದ ಬಗ್ಗೆ ಘೋರ ನಿರ್ಲಕ್ಷ್ಯ ತೋರಿ ವಿಭಜನಕಾರಿ ವಿಷಯಗಳ ಮೇಲೆ ತೀವ್ರ ಗಮನ ನೀಡಿರುವುದು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ 63 ಮಕ್ಕಳ ಸಾವಿನ ಬಗ್ಗೆ ಟಿಪ್ಪಣಿ ಮಾಡುತ್ರ ಹೇಳಿದ್ದಾರೆ.

1998 ರಿಂದ ಇಲ್ಲಿಯ ಎಂಪಿಯಾಗಿದ್ದವರು ಯಾರು? ಪ್ರಸಕ್ತ ಮುಖ್ಯಮಂತ್ರಿ ಯಾರು? ಅದೇ ಮನುಷ್ಯ. ಆದಿತ್ಯನಾಥ-ಒಬ್ಬ ಎಂಪಿಯಾಗಿದ್ದರೂ ಆತನನ್ನು ಕೆಲವರು ಮುಖ್ಯಮಂತ್ರಿಯಾಗಿ ಆರಿಸಿದರು. ಆದ್ದರಿಂದ ಹೊಣೆ ಆದಿತ್ಯನಾಥರ ಬುಡದಲ್ಲೇ ನಿಲ್ಲುವುದಿಲ್ಲ.

ಹಿಂದು ಯುವ ವಾಹಿನಿಯನ್ನು “ಬೆಳೆಸಿದ” ದಾಖಲೆಯಿದ್ದರೂ ಆತನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಹೆಕ್ಕಿದವರೂ ಉತ್ತರ ಕೊಡಬೇಕಾಗುತ್ತದೆ, ಸತ್ತ ಮಕ್ಕಳ ಬಗ್ಗ ಆಡಂಬರದ ಮಾತುಗಳು ಮತ್ತು ಮೊಸಳೆ ಕಣ್ಣೀರನ್ನುಎಷ್ಟೇಸುರಿಸಿದರೂ ಉತ್ತರಪ್ರದೇಶ ಉರಿಯುತ್ತಿರಲು ಆತನನ್ನು ಆರಿಸಿ ತೆಗೆದವರ ಅಪರಾಧ ಅಳಿಸಿ ಹೋಗಲಾರದು ಎಂದುಯೆಚುರಿ ಹೇಳಿದ್ದಾರೆ.

ಮೊದಲು ಮಕ್ಕಳನ್ನು ಕೊಲ್ಲುತ್ತೀರಾ, ನಂತರ ಅವರ ಬಡ ತಂದೆ-ತಾಯಂದಿರ ಮೇಲೆ ಪೋಲಿಸನ್ನು ಹರಿಯ ಬಿಡುತ್ತೀರಾ, ನಂತರ ನಿಮ್ಮ ಸರಕಾರದಿಂದ ಸುಳ್ಳುಗಳ ಸರಮಾಲೆ, ಇದು ಆಳ್ವಿಕೆಯ ಬಿಜೆಪಿ ಶೈಲಿ ಎಂದು ಅವರು ವ್ಯಂಗ್ಯ ವಾಡಿದ್ದಾರೆ.

Leave a Reply

Your email address will not be published. Required fields are marked *