ಕಾರ್ಪೊರೇಟ್ ಸುಸ್ತಿದಾರರಿಗೆ ಕ್ಷಮಾದಾನ ಇದು ಕೆಟ್ಟ ಚಮ್‌ಚಾ ಬಂಡವಾಳಶಾಹಿ

ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಮರು ಬಂಡವಾಳೀಕರಣ ಎಂದರೆ ಕಾರ್ಪೊರೇಟ್ ಸುಸ್ತಿದಾರರಿಗೆ ಕ್ಷಮಾದಾನ ಇದು ಅತ್ಯಂತ ಕೆಟ್ಟ ಚಮ್‌ಚಾ ಬಂಡವಾಳಶಾಹಿಸಿಪಿಐ(ಎಂ) ಪೊಲಿಟ್‌ಬ್ಯುರೊ

ಸರಕಾರ ತಕ್ಷಣವೇ ತಮ್ಮಸಾಲಗಳನ್ನು ಹಿಂದಿರುಗಿಸದೆ ಬಾಕಿ ಮಾಡುತ್ತಿರುವ ಕಾರ್ಪೊರೇಟ್‌ಗಳ ಆಸ್ತಿಗಳನ್ನುಮುಟ್ಟುಗೋಲು ಹಾಕಿ ಕೊಳ್ಳಬೇಕು, ಕಾರ್ಪೊರೇಟ್ ಲೂಟಿಯನ್ನು ರಕ್ಷಿಸಲು ಜನತೆ ಹಣ ತೆರಬೇಕು ಎಂದು ಕೇಳಲು ಸಾಧ್ಯವಿಲ್ಲ ಎಂದು ಎಂದುಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಕೇಂದ್ರಸರಕಾರ ಸಾರ್ವಜನಿಕ ವಲಯದ ಬ್ಯಾಂಕುಗಳ ಮರುಬಂಡವಾಳೀಕರಣಕ್ಕೆ 2.11 ಲಕ್ಷ ಕೋಟಿ ರೂ.ಗಳಒಂದು ಭಾರೀ ದೊಡ್ಡ ಮೊತ್ತವನ್ನು ಕೊಡಲು ನಿರ್ಧರಿಸಿದೆ. ಬ್ಯಾಂಕುಗಳ ‘ಕಾರ್ಯ ನಿರ್ವಹಿಸದಆಸ್ತಿ’ಗಳ ಹೊರೆ  ಬೃಹದಾಕಾರ ಪಡೆದಿರುವ ಸಮಯದಲ್ಲಿ ಈ ನಿರ್ಧಾರ ಬಂದಿದೆ. ಬ್ಯಾಂಕುಗಳಿಂದ ಪಡೆದ ದೊಡ್ಡ ಮೊತ್ತದ ಸಾಲಗಳನ್ನು ಹಿಂದಿರುಗಿಸದ ದೊಡ್ಡಕಾರ್ಪೊರೇಟ್‌ಗಳಿಂದ ಅವನ್ನು ವಸೂಲು ಮಾಡುವ ಬದಲು ಈ ದೊಡ್ಡ ಸುಸ್ತಿದಾರರಿಗೆ ಸರಕಾರಕ್ಷಮಾದಾನ ಮಾಡಿದಂತಾಗಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.ಅಂರ‍್ರಾಷ್ಟ್ರೀಯ ಸಾಲ ಶ್ರೇಯಾಂಕವನ್ನು ಗುರುತಿಸುವ ಸಂಸ್ಥೆ ಕ್ರಿಸಿಲ್ ಪ್ರಕಾರಬ್ಯಾಂಕುಗಳಿಗೆ ಬರಬೇಕಾಗಿರುವ ಸಾಲಬಾಕಿ ಮತ್ತು ಬಡ್ಡಿಯ ಮೊತ್ತ 11.5 ಲಕ್ಷ ಕೋಟಿರೂ.ಗಳಷ್ಟಿದೆ.

ಈ ಬಿಜೆಪಿ ಸರಕಾರ ಕಳೆದ ಈ ಮೂರು ವರ್ಷಗಳಲ್ಲಿ ಸುಮಾರು 2 ಲಕ್ಷಕೋಟಿ ರೂ.ಗಳಷ್ಟು ಸಾಲಗಳನ್ನು ಲೆಕ್ಕದಿಂದ ತೆಗೆದಿದೆ. ಈಗ ಕಾರ್ಪೊರೇಟ್‌ಗಳಿಗೆ ಮಹಾರಿಯಾಯ್ತಿಯನ್ನು ಕೊಡಮಾಡಲು ಈ ರೀತಿ ಮರುಬಂಡವಾಳೀಕರಣಕ್ಕೆ ಸಾರ್ವಜನಿಕ ನಿಧಿಯನ್ನು ಅದು ಬಳಸುತ್ತಿದೆ.

ಅಂದರೆ  ಕಾರ್ಪೊರೇಟ್‌ಗಳು ಲೂಟಿ ಹೊಡೆದ ಬ್ಯಾಂಕುಗಳನ್ನು ಭಾರತೀಯಜನತೆಯ ಹಣದಿಂದ ಬಚಾವ್ ಮಾಡಿದಂತಾಗಿದೆ ಎಂದಿರುವ ಸಿಪಿಐ(ಎಂ) ಇದಕ್ಕಿಂತ ಕೆಟ್ಟ ಚಮ್‌ಚಾಬಂಡವಾಳಶಾಹಿ ಸಾಧ್ಯವೇ ಎಂದು ಖಾರವಾಗಿ ಪ್ರಶ್ನಿಸಿದೆ. ಕೃಷಿ ಸಂಕಟದಿಂದಾಗಿ ಆತ್ಮಹತ್ಯೆಮಾಡಿಕೊಳ್ಳುತ್ತಿರುವ ರೈತರಿಗೆ ಸಾಲಮನ್ನಾöವನ್ನು ನಿರಾಕರಿಸುತ್ತಿರುವಾಗಲೇ ಕೋಟ್ಯಂತರಭಾರತೀಯರು ಠೇವಣಿಯಿಟ್ಟ ಹಣದಿಂದ ಪಡೆದ ಸಾಲವನ್ನು ಹಿಂದಿರುಗಿಸದೆ ಓಡಿಹೋಗುತ್ತಿರುವಕಾರ್ಪೊರೇಟ್ ಮಂದಿಗಳಿಗೆ ಪ್ರೊತ್ಸಾಹ ನೀಡಲಾಗುತ್ತಿದೆ ಎಂದು ಅದು ಹೇಳಿದೆ.

ಈಮರುಬಂಡವಾಳೀಕರಣಕ್ಕೆ ಹಣಕಾಸು ಮಂತ್ರಿಗಳು ಕೊಟ್ಟಿರುವ ತರ್ಕವೆಂದರೆ,  ಈ ರೀತಿಬ್ಯಾಂಕುಗಳ ಮರುಬಂಡವಾಳೀಕರಣ ನಡೆದರೆ ಅವು ಕಾರ್ಪೊರೇಟ್‌ಗಳಿಗೆ  ಇನ್ನಷ್ಟು ಸಾಲಗಳನ್ನುಕೊಡಲು ಅವಕಾಶವಾಗುತ್ತದೆ, ಇದರಿಂದ ಉದ್ಯೊಗಾವಕಾಶಗಳು ಮತ್ತು ಆರ್ಥಿಕದ ಬೆಳವಣಿಗೆ ನಡೆಯುತ್ತದೆ ಎಂಬುದು.  ಆದರೆ ಇದೊಂದು ದೋಷಪೂರಿತ ತರ್ಕ ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ.

ಏಕೆಂದರೆ ಹೂಡಿಕೆ ಹೆಚ್ಚುವುದರಿಂದ ತಂತಾನೇ  ಉದ್ಯೋಗಾವಕಾಶಗಳೇನೂ ಹೆಚ್ಚುವುದಿಲ್ಲ, ಬೆಳವಣಿಗೆ ದರಗಳೂ ಏರುವುದಿಲ್ಲ. ಇದು ಸಾಧ್ಯವಾಗಬೇಕಾದರೆ ಈಹೂಡಿಕೆಗಳಿಂದ ಆದ ಉತ್ಪಾದನೆಗಳ ಮಾರಾಟ ನಡೆಯಬೇಕು. ವ್ಯಾಪಾರ ಸಂಕುಚನಗೊಳ್ಳುತ್ತಿರುವ ಜಗತ್ತಿನಲ್ಲಿ ಭಾರತದ ರಫ್ತು ಇಪ್ಪತ್ತು ವರ್ಷಗಳಲ್ಲಿ ಕಾಣದ ಮಟ್ಟಕ್ಕೆ ಕುಸಿದಿವೆ.ನೋಟುರದ್ಧತಿ ಮತ್ತು ಜಿಎಸ್‌ಟಿಯಿಂದಾಗಿ ಭಾರತೀಯ ಜನತೆಯ ಕೊಳ್ಳುವ ಶಕ್ತಿ ಗಮನಾರ್ಹವಾಗಿ ಕ್ಷೀಣಗೊಂಡಿದೆ, ಅದರಿಂದಾಗಿ ಆಂತರಿಕ ಬೇಡಿಕೆಗಳು ತೀವ್ರ ಪ್ರಮಾಣದಲ್ಲಿಕುಸಿಯುತ್ತಿವೆ. ಇಂತಹ ಸನ್ನಿವೇಶದಲ್ಲಿ ಹಣಕಾಸು ಮಂತ್ರಿಗಳ ತರ್ಕ ಖಂಡಿತಾ ಈಡೇರುವಂತದ್ದಲ್ಲ ಎಂದು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಜನಗಳನ್ನುಆರ್ಥಿಕವಾಗಿ ಸಬಲೀಕರಿಸದೆ, ಅವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸದೆ ಬೆಳವಣಿಗೆಯಾಗಲೀಸಂಕಟಗ್ರಸ್ತ ಜನಗಳಿಗೆ ಪರಿಹಾರವಾಗಲೀ ಸಾಧ್ಯವಿಲ್ಲ. ಇದು ದೊಡ್ಡ ಪ್ರಮಾಣದ ಸಾರ್ವಜನಿಕಹೂಡಿಕೆಗಳ ಮೂಲಕ ನಮ್ಮ ಬಹಳ ಅಗತ್ಯವಾಗಿರುವ ಮೂಲರಚನೆಗಳನ್ನು ಕಟ್ಟುವ ಮೂಲಕ ಮತ್ತು ನಮ್ಮಯುವಜನರಿಗೆ ಬೃಹತ್ ಪ್ರಮಾಣದಲ್ಲಿ ಉದ್ಯೊÃಗಾವಕಾಶಗಳನ್ನು ಕಲ್ಪಿಸುವ ಮೂಲಕ ಮಾತ್ರವೇ ಸಾಧ್ಯ.

ಆದರೆ ಈ ಸರಕಾರ ಅಂರ‍್ರಾಷ್ಟ್ರೀಯ ಹಣಕಾಸು ಬಂಡವಾಳದ ಆಣತಿಯನನ್ನುಸರಿಸಿವಿದೇಶಿ ಮತ್ತು ಭಾರತೀಯ ಕಾರ್ಪೊರೇಟ್‌ಗಳನ್ನಷ್ಟೆ ಪ್ರೋತ್ಸಾಹಿಸುವ ನವ-ಉದಾರವಾದಿ ಧೋರಣೆಗಳನ್ನು ಅನುಸರಿಸಿ ನಮ್ಮ ಬಹುಪಾಲು ಜನಗಳ ಮೇಲೆ ಮತ್ತಷ್ಟು ಹೊರೆಗಳನ್ನು ಹೇರುವ ಮಾರ್ಗವನ್ನೆ ಹಿಡಿದಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ,ಸರಕಾರ ತಕ್ಷಣವೇ ತಮ್ಮಸಾಲಗಳನ್ನು ಹಿಂದಿರುಗಿಸದೆ ಬಾಕಿ ಮಾಡುತ್ತಿರುವ ಕಾರ್ಪೊರೇಟ್‌ಗಳ ಆಸ್ತಿಗಳನ್ನುಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದೆ. ಕಾರ್ಪೊರೇಟ್ ಲೂಟಿಯನ್ನು ರಕ್ಷಿಸಲು ಜನತೆ ಹಣ ತೆರಬೇಕು ಎಂದು ಕೇಳಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

Leave a Reply

Your email address will not be published. Required fields are marked *