ಕಿಸಾನ್‍ ಲಾಂಗ್‍ ಮಾರ್ಚ್: ಮಹಾರಾಷ್ಟ್ರ ರೈತರಿಗೆ ಅಭಿನಂದನೆ

“ಮಹಾರಾಷ್ಟ್ರ ಸರಕಾರ ಈಗ ಮಾತಿನಂತೆ ನಡೆಯಬೇಕಾಗಿದೆ”

ಮಹಾರಾಷ್ಟ್ರದ ರೈತರು ಅರಣ್ಯ ಹಕ್ಕುಗಳ ಜಾರಿ, ಫಲದಾಯಕ ಬೆಲೆಗಳು , ಪೆನ್ಶನ್, ಸಾಲಗ್ರಸ್ತ ರೈತರ ಸಾಲ ಮನ್ನಾ ಮುಂತಾದ ತಮ್ಮ ಬೇಡಿಕೆಗಳಿಗಾಗಿ ನಡೆಸಿದ ಹೋರಾಟದಲ್ಲಿ ಗಳಿಸಿದ ಯಶಸ್ಸಿಗೆ ಅವರನ್ನು ಮಾರ್ಚ್‍ 16 ಮತ್ತು 17ರಂದು ಸಭೆ ಸೇರಿದ್ದ ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿನಂದಿಸಿದೆ.

ಅಖಿಲ ಭಾರತ ಕಿಸಾನ್‍ ಸಭಾದ ನೇತರತ್ವದಲ್ಲಿ ಮಾರದಚ್‍ 6ರಂದು ನಾಶಿಕ್‍ನಲ್ಲಿ ಆರಂಭವಾಗಿ ಮುಂಭೈಯಲ್ಲಿ ಮಾರ್ಚ್‍ 12ರಂದು ಮುಕ್ತಾಯಗೊಂಡ ಕಿಸಾನ್‍ ಲಾಂಗ್‍ ಮಾರ್ಚ್ ಬಹುದೊಡ್ಡ ಗೆಲುವು ಸಾಧಿಸಿದೆ. 25,000 ರೈತರೊಂದಿಗೆ ಆರಂಭವಾದ   ಈ ಲಾಂಗ್‍ ಮಾರ್ಚ್ ಆರುದಿನಗಳ ನಂತರ ಮುಣಬೈ ತಲುಪುವಾಗ 50,000ಕ್ಕೇರಿತ್ತು ಎಂದು ಪೊಲಿಟ್‍ಬ್ಯುರೊ ಪ್ರಶಂಸಿಸಿದೆ.

ಅದು ಮಹಾರಾಷ್ಟ್ರ ಸರಕಾರ ರೈತರ ಬೇಡಿಕೆಗಳನ್ನು ಒಪ್ಪುವ ಲಿಖಿತ  ಆಶ್ವಾಸನೆಯನ್ನು ಕೊಡುವಂತೆ ಮಾಡಿದೆ. ಇದು ದೇಶವ್ಯಾಪಿ ಪ್ರಭಾವ ಬೀರಿದೆ. ಈಗ ಮಹಾರಾಷ್ಟ್ರ ಸರಕಾರ ತಾನಿತ್ತ ಶ್ವಾಸನೆಗಳನ್ನು ಸಮಯಬದ್ಧ ರೀತಿಯಲ್ಲಿ ಈಡೇರಿಸಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಈ ಲಾಂಗ್‍ ಮಾರ್ಚ್ ಗೆ  ಮಹಾರಾಷ್ಟ್ರದ ಎಲ್ಲ ಜನವಿಭಾಗಗಳಿಂದ  ಮತ್ತು ರಾಜಕೀಯ ಹಾಗೂ ಸಾಮಾಜಿಕ ದೋಲನಗಳಿಂದ ವ್ಯಾಪಕ ಬೆಂಬಲ ದೊರೆತಿರುವುದನ್ನು ಪೊಲಿಟ್‍ಬ್ಯುರೊ ಪ್ರಶಂಸಿಸಿದೆ

ತ್ರಿಪುರಾ ಚುನಾವಣೆಗಳಲ್ಲಿ ಅನಿರೀಕ್ಷಿತ ಫಲಿತಾಂಶ

ಇತ್ತೀಚೆಗೆ ಮುಗಿದಿರುವ ತ್ರಿಪುರಾ ವಿಧಾನಸಭಾ ಚುನಾವಣೆಗಳ ಬಗ್ಗೆ ಒಂದು ಆರಂಭಿಕ ವರದಿಯನ್ನು ಪೊಲಿಟ್‍ಬ್ಯುರೊ ಆಲಿಸಿತು. ಈ ಫಲಿತಾಂಶಗಳು ಅನಿರೀಕ್ಷಿತವಾಗಿದ್ದವು. ಏಕೆಂದರೆ ಎಡರಂಗ ಸರಕಾರ ತನ್ನ ಅಧಿಕಾರಾವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಮತ್ತು ಶಾಂತಿ ಹಾಗೂ  ಅನ್ಯೋನ್ಯತೆಯ ವಾತಾವರಣವನ್ನು ಬಲಪಡಿಸುವಲ್ಲಿ ತನ್ನ ಕೈಲಾದ್ದನ್ನೆಲ್ಲ ಮಾಡಿದೆ. ಆದರೆ ಸೀಮಿತ ಸಂಪನ್ಮೂಲಗಳಿಂದಾಗಿ  ಎಡರಂಗಕ್ಕೆ ಜನಗಳಲ್ಲಿ ಹೆಚ್ಚುತ್ತಿರುವ ನಿರೀಕ್ಷೆಗಳನ್ನು ಈಡೇರಿಸಲಾಗಿಲ್ಲ. ಐಪಿಎಫ್‍ಟಿ ಈ ಚುನಾವಣೆಯಲ್ಲಿ ವಿಜಯ ಪ್ರತ್ಯೇಕ ತ್ವಿಪ್ರಲ್ಯಾಂಡ್ ಬುಡಕಟ್ಟು ರಾಜ್ಯದ ರಚನೆಗೆ ದಾರಿ ಮಾಡಿಕೊಡುತ್ತದೆ ಎಂದು ಪ್ರಚಾರ ಮಾಡಿತ್ತು. ಬಿಜೆಪಿ- ಐಪಿಎಫ್‍ಟಿ ಕೂಟಕ್ಕೆ ಇದನ್ನು ಸರಕಾರವನ್ನು ಬದಲಿಸಿ ಎಂಬ ತಮ್ಮ ಘೋಷಣೆಯೊಂದಿಗೆ ಕುಶಲತೆಯಿಂದ ಬಳಸಲು ಸಾಧ್ಯವಾಯಿತು ಎಂದು ಪೊಲಿಟ್‍ಬ್ಯುರೊ ವಿಶ್ಲೇಷಿಸಿದೆ.

ಇದಷ್ಟೇ ಅಲ್ಲ, ಬಿಜೆಪಿ ಅಪಾರ ಪ್ರಮಾಣದಲ್ಲಿ ಹಣವನ್ನು ಸುರಿದಿದೆ ಮತ್ತು ಚುನಾವಣೆಗಳ ಮೇಲೆ ಪ್ರಭಾವ ಬೀರಲು ಬೇರೆ ಸಂಪನ್ಮೂಲಗಳನ್ನೂ ಬಳಸಿಕೊಂಡಿದೆ. ಅಂತಿಮವಾಗಿ,  ಹಿಂದೆ ಕಾಂಗ್ರೆಸ್‍ ಗಳಿಸಿದ್ದ ಸುಮ಻ರಾಗಿ ಎಲ್ಲ ಮತಗಳನ್ನೂ ತನ್ನದಾಗಿಸಿಕೊಂಡು ಎಲ್ಲ ಡ-ವಿರೋಧಿ ಮತಗಳನ್ನು ಕ್ರೋಡೀಕರಿಸಲು ಬಿಜೆಪಿಗೆ ಸಾಧ್ಯವಾಗಿರುವುದೇ ಎಡರಂಗಕ್ಕೆ ಹಿನ್ನಡೆಯಾಗುವಂತೆ ಮಾಡಿದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.
ಆದರೂ ಎಡರಂಗಕ್ಕೆ 45% ಮತಗಳು ಸಿಕ್ಕಿವೆ, ಬಿಜೆಪಿ-ಐಪಿಎಫ್‍ಟಿ ಪಡೆದಿರುವುದು 50.5ಶೇ. ಎಂದೂ ಅದು ಗಮನಿಸಿದೆ.

ಮತದಾನದ ನಂತರ ಬಿಜೆಪಿ ರಾಜ್ಯದಲ್ಲಿ ನಡೆಸಿರುವ ಹಿಂಸಾಚಾರವನ್ನು ಪೊಲಿಟ್‍ಬ್ಯುರೊ ಬಲವಾಗಿ ಖಮಡಿಸಿದೆ. ಪಕ್ಷದದ 750ಕ್ಕೂ ಹೆಚ್ಚು ಕೆಚೇರಿಗಳ ಮೇಲ ದಾಳಿನಡೆದಿದೆ, ಅವುಗಳಲ್ಲಿ ಹೆಚ್ಚಿನವುಗಳನ್ನು ಸುಟ್ಟು ಹಾಕಲಾಗಿದೆ. 742 ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಮೇಲೆ ವೈಯಕ್ತಿಕ ಹಲ್ಲೆಗಳು ನಡೆದಿವೆ, 1829 ಮನೆಗಳ ಮೇಲೆ ದಾಳಿ ಮಾಡಿ ಲೂಟಿ ಮಾಡಲಾಗಿದೆ ಮತ್ತು 217 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಪಕ್ಷದ ಸದಸ್ಯರು ಮತ್ತು ಬೆಂಬಲಿಗೆ 442 ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ, 35 ರಬ್ಬರ್ ಪ್ಲಾಂಟೇಶನ್‍ಗಳ ಮೇಲೆ ದಾಳಿ ನಡೆದಿದೆ, ಮತ್ತು 230 ಮಂದಿಯಿಂದ ಹಣ ಕಿತ್ತುಕೊಳ್ಲಲಾಗಿದೆ ಎಂದಿರುವ ಪೊಲಿಟ್‍ಬ್ಯರೊ ಆರೆಸ್ಸೆಸ್‍/ಬಿಜೆಪಿಯಿಂದ ತಹ ದಾಳಿಗಳನ್ನು ಎದುರಿಸುತ್ತಿರುವ ತ್ರಿಪುರಾ ಸಂಗಾತಿಗಳೊಂದಿಗೆ ಸೌಹಾರ್ದ ವ್ಯಕ್ತಪಡಿಸಲು ಸಮಸ್ತ ಪಕ್ಷದ ಘಟಕಗಳು ಮತ್ತು ಕಾರ್ಯಕರ್ತರು ಎದ್ದು ನಿಲ್ಲಬೇಕು ಎಂದು ಕರೆ ನೀಡಿದೆ.

ಒಂದು ಸಕಾರಾತ್ಮಕ .ಬೆಳವಣಿಗೆ -ಉಪಚುನಾವಣೆಗಳ ಫಲಿತಾಂಶ

ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಲೋಕಸಭೆಗೆ ನಡೆದ  ಚುನಾವಣೆಗಳಲ್ಲಿ ಬಿಜೆಪಿಯ ಸಮಗ್ರ ಸೋಲು ಒಂದು ಸಕಾರಾತ್ಮಕ ಬೆಳವಣಿಗೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ವರ್ಣಿಸಿದೆ. ಎಡಪಕ್ಷಗಳು ಉತ್ತರಪ್ರದೇಶದ ಗೋರಖ್‍ಪು ಮತ್ತು ಫುಲ್‍ಪುರದಲ್ಲಿ ಸಮಾಜವಾದಿ ಪಕ್ಷದ ಅಭ್ಯಥಿಗಳಿಗೆ ಮತ್ತು ಬಿಹಾರದ ಅರರಿಯಾದಲ್ಲಿ ಆರ್‍ ಜೆಡಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದವು. ಜಹಾನಾಬಾದ್‍ನಲ್ಲಿ ಸಿಪಿಐ(ಎಂಎಲ್‍)ಗೆ ಸಿಪಿಐ(ಎಂ) ಬೆಂಬಲ ನೀಡಿತ್ತು.

ಅವಿಶ್ವಾಸ ಗೊತ್ತುವಳಿಗೆ ಬೆಂಬಲ-ಬಿಜೆಪಿ ಇಬ್ಬಂದಿತನಕ್ಕೆ ಖಂಡನೆ

ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ನೀಡಿದ ಶ್ವಾಸನೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ವೈಎಸ್‍ಆರ್ ಕಾಂಗ್ರೆಸ್‍ ಮತ್ತು ಟಿಡಿಪಿ ಲೋಕಸಭೆಯಲ್ಲಿ ತಂದಿರುವ ಅವಿಶ್ವಾಸ ಗೊತ್ತುವಳಿಗೆ ಸಿಪಿಐ(ಎಂ) ಪೂಣ್ ಬೆಂಬಲ ವ್ಯಕ್ತಪಡಿಸಿದೆ. ಈ ವಿಷಯದಲ್ಲಿ ಸರಕಾರದ ವಿಶ್ವಾಸದ್ರೋಹವನನ್ಉ ಒಪಪ್ಲು ಸಾಧ್ಯವಿಲ್ಲ ದಿರುವ ಪೊಲಿಟ್‍ಬ್ಯುರೊ ಈ ಗೊತ್ತುವಳಿಯ ಮೇಲಿನ ಚಚೆಯಲ್ಲಿ ಸರಕಾರದ ಸರ್ವತೋಮುಖ ವಿಫಲತೆ ಮತ್ತು ಸಂಸದೀಯ ಜವಾಬುದಾರಿಕೆಯನ್ನು ತಪ್ಪಿಸಿಕೊಳ್ಳುವುದನ್ನು ಎತ್ತಿ ತೋರಿಸಲಾಗುವುದು ಎಂದಿದೆ.

ಈ ಗೊತ್ತುವಳಿಯನ್ನು ಬೆಂಬಲಿಸಿ ಲೋಕಸಭಾ ಸದಸ್ಯರಲ್ಲಿ 10%ಕ್ಕಿಂತ ಹೆಚ್ಚು ಮಂದಿ ಎದ್ದು ನಿಂತರೂ ಸದನ ವ್ಯವಸ್ಥಿತವಾಗಿಲ್ಲ ಎನ್ನುತ್ತ ಸದನದ ಅಧ್ಯಕ್ಷರು ಅಧಿವೇಶನವನ್ನು ಮುಂದೂಡಿದ್ದಾರೆ. ಇದೇ ಲೋಕಸಭೆ ಭಾರತದ ಕ್ರೋಡೀಕೃತ ನಿಧಿಯಿಂದ ಸುಮಾರು 10ಲಕ್ಷ ಕೋಟಿ ರೂ.ಗಳನ್ನು ತೆಗೆಯಲು ಅನುಮತಿ ನೀಡುವ ಹಣಕಾಸು ಮಸೂದೆಯನ್ನು ಗದ್ದಲಗಳ ನಡುವೆಯೇ ಪಾಸು ಮಾಡಿತ್ತು. ಸಂಸತ್ತಿನ ವ್ಯವಹಾರಗಳನ್ನು ನಡೆಸುವಲ್ಲಿ ಬಿಜೆಪಿಯ ಈ ಇಬ್ಬಗೆ ನೀತಿ ಮತ್ತು ಅದರ ಪ್ರಜಾಪ್ರಭುತ್ವ-ವಿರೋಧಿ ಸ್ವರೂಪ ಅತ್ಯಂತ ಖಂಡನೀಯ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಉನ್ನತ ಶಿಕ್ಷಣದ ಮೇಲೆ ದಾಳಿಗಳು ಮುಂದುವರೆಯುತ್ತಿವೆ

ಉನ್ನತ ಶಿಕ್ಷಣ ಸಂಸ್ಥಗಳ ಮೇಲೆ, ಅದರಲ್ಲೂ ಕೇಂದ್ರೀಯ ವಿಶ್ವವಿದ್ಯಾಲಯಗಳ ಮೇಲೆ ದಾಳಿ ಮಾಡುವ ಧೋರಣೆಯನ್ನು ಅನುಸರಿಸುವುದನ್ನು ಬಿಜೆಪಿ ಸರಕಾರ ಮುಂದುವರೆಸಿದೆ. ಇಂತಹ ದಾಳಿಗಳು ಭಾರತೀಯ ಇತಿಹಾಸದ ಬದಲಿಗೆ ಭಾರತೀಯ ಪುರಾಣಗಳನ್ನು ಅಧ್ಯಯನ ಮಾಡುವ, ಭಾರತೀಯ ತತ್ವಶಾಸ್ತ್ರದ ಸ್ಥಾನದಲ್ಲಿ ಭಾರತೀಯ ಧರ್ಮಶಾಸ್ತ್ರವನ್ನು ಅಧ್ಯಯನ ಮಾಡುವಂತೆ ಪ್ರಯತ್ನಿಸುವ  ಸರಕಾರದ ಒಟ್ಟಾರೆ ತತ್ವದ ಭಾಗವಾಗಿದೆ.

ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಮೇಲೆ ಕಡ್ಡಾಯ ಹಾಜರಾತಿಯನ್ನು ಹೇರುವುದು ಮುಂತಾದ ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ದಾಳಿಗಳನ್ನು ಮತ್ತು ಅವರ ಚಟುವಟಿಕೆಗಳ ಮೇಲೆ ತೀವ್ರ ನಿರ್ಬಂಧ ಹೇರುವ ಪ್ರಜಾಪ್ರಭುತ್ವ-ವಿರೋಧಿ ದಾಳಿಗಳನ್ನು ಜವಹರ್‍ ಲಾಲ್‍ ವಿಶ್ವವಿದ್ಯಾಲಯದ ಆರೆಸ್ಸೆಸ್‍-ಪರ ಉಪಕುಲಪತಿಗಳು ಮಾಡುತ್ತಿದ್ದಾರೆ. ವಿವಿ ಆಡಳಿತ ಕೆಲವು ಡೀನ್‍ಗಳನ್ನು ಮತ್ತು ವಿಭಾಗ  ಮುಖ್ಯಸ್ಥರನ್ನು ತೆಗೆದು ಹಾಕಿದೆ. ಆರೆಸ್ಸೆಸ್‍ ನ ವಿದ್ಯಾರ್ಥಿ ವಿಭಾಗವಾದ ಎಬಿವಿಪಿ ಜವಹರಲಾಲ್‍ ವಿಶ್ವವಿದ್ಯಾಲಯದ ವಿದ್ಯಾರ್ಥಿಆಂದೋಲನದ ವಿರುದ್ಧ ದಾಳಿಗಳ ಮುಂಚೂಣಿಯಲ್ಲಿದ್ದರೆ, ಅಲ್ಲಿನ ಪ್ರಗತಿಶೀಲ ಬೋಧಕ ಸಮುದಾಯದ ಜಾಗಗಳಲ್ಲಿ ಹಿಂದುತ್ವ ತತ್ವವನ್ನು ಪ್ರಚಾರ ಮಾಡುವವರನ್ನು ನೇಮಿಸಲಾಗುತ್ತಿದೆ .

ಯುಜಿಸಿ ಒಂದು ನ್ಯಾಯಾಂಗ ನಿರ್ದೇಶನಕ್ಕೆ ಬದ್ಧವಾಗುವ ಹೆಸರಿನಲ್ಲಿ ವಿಶ್ವವಿದ್ಯಾಲಯಗಳ ವಿವಿಧ ಹುದ್ದೆಗಳ ನೇಮಕಾತಿಯ ಮೀಸಲಾತಿ ರೋಸ್ಟರ್‍ ಗಳಲ್ಲಿ ಬದಲಾವಣೆಗಳನ್ನು ಮಾಡುವ ನಿರ್ದೇಶನಗಳನ್ನು ನೀಡಿದೆ. ಇದು ಮೀಸಲಾತಿ ನೇಮಕಗಳನ್ನು ನಿಧಾನಗೊಳಿಸುತ್ತದೆ ಮತ್ತು ಈಗ ನಡೆದಿರುವ ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸುತ್ತದೆ. ದಿಲ್ಲಿ ವಿಶ್ವವಿದ್ಯಾಲಯವನ್ನು ಇದು ತಟ್ಟುತ್ತದೆ. ಸರಕಾರ  ಆ ನ್ಯಾಯಾಂಗ ನಿರ್ದೇಶನದ ಮೇಲೆ ಮರು ವಿಮರ್ಶೆಯ ಅರ್ಜಿ ಹಾಕುವುದಾಗಿ ಒಪ್ಪಿತ್ತು. ಆದರೆ ಅದನ್ನು ಇನ್ನೂ ಮಾಡಿಲ್ಲ.  ಯುಜಿಸಿ ನಿರ್ದೇಶನವನ್ನು  ಸದ್ಯ ಅಮಾನತಿನಲ್ಲಿಟ್ಟು ಆಮೂಲಕ  ದಿಲ್ಲಿಯಲ್ಲಿ ಮೀಸಲಾತಿ ಹುದ್ದೆಗಳ ಭರ್ತಿ ವಿಳಂಬಗೊಳ್ಳದಂತೆ ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಮಹಾಧಿವೇಶನದ ರಾಜಕೀಯ-ಸಂಘಟನಾತ್ಮಕ ಕರಡು ವರದಿ

ಹೈದರಾಬಾದಿನಲ್ಲಿ ಎಪ್ರಿಲ್‍ 18ರಿಂದ 22 ರವರೆಗೆ ನಡೆಯಲಿರುವ ಸಿಪಿಐ(ಎಂ)ನ 22ನೇ ಮಹಾಧಿವೇಶನದಲ್ಲಿ ಮಂಡಿಸುವ ಕರಡು ರಾಜಕೀಯ-ಸಂಘಟನಾತ್ಮಕ ವರದಿಯನ್ನು ಪೊಲಿಟ್‍ಬ್ಯುರೊ ಚರ್ಚಿಸಿತು. ಅದನ್ನು ಈಗ ಮಾರ್ಚ್ 28ರಿಂದ 30 ರ ವರೆಗೆ ನಡೆಯಲಿರುವ ಕೇಂದ್ರ ಸಮಿತಿಯ ಸಭೆಯ ಮುಂದೆ ಇಡಲಾಗುವುದು, ಮತ್ತು ಅದನ್ನು ಅಂಗೀಕರಿಸಿದ ಮೇಲೆ ಮಹಾಧಿವೇಶನದ ಮುಂದೆ ಮಂಡಿಸಲಾಗುವುದು.

Leave a Reply

Your email address will not be published. Required fields are marked *